Thursday, September 28, 2023
Home cinema news ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

 

ನಾಗರಹಾವು ಜಲೀಲ ಪಾತ್ರದಿಂದ ಸ್ಯಾಂಡಲ್ವುಡ್ ನ ರೆಬೆಲ್ ಸ್ಟಾರ್ ಆಗುವ ತನಕ ನಾಯಕ ನಟ ಅಂಬರೀಶ್ ಅವರ ಸಿನಿಮಾ ಜರ್ನಿಯೇ ಒಂದು ರೋಚಕ. ಅಮರನಾಥ್ ಆಗಿದ್ದ ಇವರು ಪುಟ್ಟಣ್ಣ ಕಣಗಾಲ್ ಅವರ ಕಣ್ಣಿಗೆ ಬಿದ್ದು ಅಂಬರೀಶ್ ಆಗಿ ಬದಲಾಗಿ ಹೋದರು. ನಾಗರಹಾವು ಸಿನಿಮಾದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೊದಲ ಸಿನಿಮಾ ಡೈಲಾಗ್ ಯಿಂದ ಕೊನೆವರೆಗೂ ಕೂಡ ಫೇಮಸ್ ಆಗಿದ್ದರು. ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ ಆ ಡೈಲಾಗ್ ಅಂಬರೀಶ್ ಅವರಿಗೆ ಅನ್ವರ್ಥ ಎನ್ನುವಂತೆ ಹೋಗ್ಗಿಕೊಂಡು ಬಿಟ್ಟಿದೆ.

ಅಂಬರೀಶ್ ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಅದೇ. ನಂತರ ಖಳನಾಯಕನಾಗಿ, ನಾಯಕ ನಟನಾಗಿ ಕೊನೆಗೆ ಪೋಷಕ ಪಾಠದಾರಿಯಾಗಿ ಸಿನಿಮಾ ರಂಗದಲ್ಲಿ ಕಡೆ ದಿನಗಳವರೆಗೂ ಬಣ್ಣ ಹಚ್ಚುತ್ತಿದ್ದರು ಅಂಬರೀಶ್ ಅವರು. ಅಂಬರೀಶ್ ಅವರು ಸಿನಿಮಾ ಹೊರತಾಗಿ ರಾಜಕೀಯದಲ್ಲೂ ಕೂಡ ಬಹಳ ಗುರುಸಿಕೊಂಡಿದ್ದರು. ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿದ್ದ ಇವರು ಕರುನಾಡ ಕರ್ಣ ಎಂದೇ ಹೆಸರಾಗಿದ್ದರು. ಕಷ್ಟ ಎಂದು ಬಂದವರಿಗೆ ಕೊಡುಗೈ ದಾನಿ ಆಗಿದ್ದ ಇವರಿಗೆ ಅಪಾರ ಅಭಿಮಾನಿ ಬಳಗ ಇತ್ತು, ಜೊತೆಗೆ ಅಂಬರೀಶ್ ಅವರು ತಮ್ಮ ನೇರ ನುಡಿಯಿಂದ ಕೂಡ ಬಹಳ ಫೇಮಸ್ ಆಗಿದ್ದರು.

ಮಗುವಿನಂತಹ ಮನಸು, ಒರಟ ಮಾತುಗಳು ಎಲ್ಲರಿಗೂ ಬಹಳ ಇಷ್ಟ ಆಗುತ್ತಿತ್ತು. ಮತ್ತೊಂದು ವಿಷಯದಿಂದ ಇವರು ಆಕರ್ಷಣೆ ಹೊಂದಿದ್ದರು ಅದೇನೆಂದರೆ ಅವರಿಗಿದ್ದ ಅಪಾರ ಸ್ನೇಹಿತರ ಬಳಗ. ಕನ್ನಡ ಸಿನಿಮಾ ಚಿತ್ರರಂಗ ಮಾತವಲ್ಲದೆ ತಮಿಳು ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲೂ ಕೂಡ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದರು ಅಂಬರೀಶ್ ಅವರು. ಈ ರೀತಿ ನಮ್ಮ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಇದ್ದ ಎನ್ನುವುದೇ ಒಂದು ದಂತಕಥೆ ಆ ರೀತಿ ಬದುಕಿ ಹೋಗಿದ್ದಾರೆ ಅಂಬರೀಶ್ ಅವರು.

ಸಿನಿಮಾಗಳಲ್ಲಿ ನಟಿಸಿದ್ದ ಪಾತ್ರಗಳ ಬಗ್ಗೆ ಹೇಳುವುದಾದರೆ ಅವರು ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ. ವಿಷ್ಣುವರ್ಧನ್, ರವಿಚಂದ್ರನ್, ದೇವರಾಜ್, ರಮೇಶ ಅರವಿಂದ್, ಉಪೇಂದ್ರ, ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಹೀಗೆ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಅಂಬರೀಶ್ ಅವರು ಇಂದು ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದರು. ಹಾಗಾದರೆ ಅವರು ಒಂದು ಸಿನಿಮಾಗೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದರು ಎನ್ನುವುದು ಎಲ್ಲರ ಕುತೂಹಲ.

ಅಂಬರೀಶ್ ಅವರು ಆ ಕಾಲದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟರಲ್ಲಿ ಒಬ್ಬರಾಗಿದ್ದರು. ಕೆಲ ಮೂಲಗಳ ಪ್ರಕಾರ ಅಂಬರೀಷ್ ಅವರು ಒಂದು ಸಿನಿಮಾಗೆ ನಟಿಸಲು 20 ರಿಂದ 25 ಲಕ್ಷ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದರಂತೆ. ಇದು ಅವರು ನಾಯಕ ನಟನಾಗಿದ್ದ ಕಾಲ ಅಂದರೆ 80 ಮತ್ತು 90ರ ದಶಕದಲ್ಲಿ. ಇಂದಿನ ದಿನಗಳಿಗೆ ಹೋಲಿಸಿದರೆ ಕಡಿಮೆ ಇರಬಹುದು ಆದರೆ ಆ ಕಾಲದಲ್ಲಿ ಅದು ಬಹುದೊಡ್ಡ ಸಂಭಾವನೆ ಆಗಿತ್ತು. ಮತ್ತೊಂದು ಅಂಬರೀಶ್ ರ ಬಗ್ಗೆ ಶಾ’ಕ್ ನೀಡುವ ಸುದ್ದಿ ಏನೆಂದರೆ ಅವರು ಕೆಲಸ ಸಿನಿಮಾಗಳಿಗೆ ಸಂಭಾವನೆಯನ್ನು ತೆಗೆದುಕೊಳ್ಳದೆ ನಟಿಸಿದ್ದರು ಎನ್ನುವುದು.

ಯಾವುದಾದರೂ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಾಡಲು ಅಂಬರೀಶ್ ಅವರನ್ನು ಕೇಳಿಕೊಂಡರೆ ಅಥವಾ ಯಾವುದಾದರೂ ಸಿನಿಮಾದ ನಿರ್ದೇಶಕ, ನಿರ್ಮಾಪಕ ಅಥವಾ ಮಲ್ಟಿ ಸ್ಟಾರ್ ಸಿನಿಮಾ ಆಗಿದ್ದರೆ ಆ ಸಿನಿಮಾದ ಮತ್ತೊಬ್ಬ ನಾಯಕ ಆಪ್ತನಾಗಿದ್ದರೆ ಆ ಅವಕಾಶ ಸಾಕು ನನಗೆ ಸಂಭಾವನೆ ಬೇಡ ಸಂಭಾವನೆ ಕೊಟ್ಟರೆ ನಾನು ನಟಿಸುವುದಿಲ್ಲ ಎಂದು ತಾಕೀತು ಮಾಡುತ್ತಿದ್ದರಂತೆ. ಇದಕ್ಕೆ ಒಂದು ಉದಾಹರಣೆಯನ್ನು ಭಗವಾನ್ ಅವರು ಕಳೆದ ವರ್ಷ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಒಡಹುಟ್ಟಿದವರು ಸಿನಿಮಾದಲ್ಲಿ ಅಣ್ಣಾವ್ರ ತಮ್ಮನಾಗಿ ನಟಿಸುವುದೇ ನನ್ನ ಭಾಗ್ಯ ಅದಕ್ಕಿಂತಲೂ ಸಂಭಾವನೆ ಬೇಕಾ ಸಂಭಾವನೆ ಕೊಟ್ಟರೆ ನಾನು ಶೂಟಿಂಗ್ ಗೆ ಬರುವುದೇ ಇಲ್ಲ ಎಂದು ಹೇಳಿದರಂತೆ. ಈ ರೀತಿ ಅಂಬರೀಶ್ ಅವರ ವಿಶೇಷ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಸಂಪಾದನೆ ಮಾಡಿದ್ದರು ಮತ್ತೊಮ್ಮೆ ಅವರು ಕರುನಾಡಲ್ಲಿ ಜನ್ಮ ತಾಳಲಿ ಎನ್ನುವುದೇ ಕನ್ನಡಿಗರ ಆಶಯ.

- Advertisment -