ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸುಧಾರಾಣಿ ಅವರು ಸೀರಿಯಲ್ ನಲ್ಲಿ ನಟಿಸಲು ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ ಈ ಬಣ್ಣದ ಲೋಕವೇ ಒಂದು ರೀತಿ ವಿಸ್ಮಯ. ಅದರಲ್ಲೂ ನಟ ನಟಿ ಆಗಿ ಮಿಂಚಿದವರಿಗಂತೂ ಯಾವಾಗ ಅವರು ಸಕ್ಸಸ್ ಅಲ್ಲಿ ಇರುತ್ತಾರೆ ಯಾವಾಗ ಅವರ ಬೆಲೆ ಪಾತಾಳಕ್ಕೆ ಕುಸಿಯುತ್ತದೆ ಎಂದು ಊಹಿಸುವುದು ಕಷ್ಟ. ನಾಯಕ ನಟಿಯರ ವಿಚಾರದಲ್ಲಂತೂ ಅವರು ಮೊದಲು ತೆರೆ ಮೇಲೆ ಕಾಣಿಸಿಕೊಂಡಿದ್ದ ನಟ ಇನ್ನೂ ಹೀರೋ ಆಗಿಯೇ ಸಿನಿಮಾಗಳಲ್ಲಿ ಮಿಂಚುತ್ತಿದ್ದರು, ಅದಾಗಲೇ ಅವರು ತಾಯಿ ಪಾತ್ರಕ್ಕೆ ಬಂದು ಬಿಟ್ಟಿರುತ್ತಾರೆ.
ಈ ರೀತಿ ಬಹುಬೇಗ ಬೇಡಿಕೆ ಕಳೆದುಕೊಳ್ಳುವ ನಟಿಮಣಿಯರು ನಂತರ ತಮ್ಮ ಕೆರಿಯರ್ ನ ಸೆಕೆಂಡ್ ಇನ್ನಿಂಗ್ಸ್ ಅನ್ನು ಕಿರುತೆರೆಯಲ್ಲಿ ಶುರು ಮಾಡಿ ಮತ್ತಷ್ಟು ರೋಚಕವನ್ನಾಗಿ ಮಾಡಿಕೊಳ್ಳುತ್ತಾರೆ. ಅಂತಹವನ್ನು ಕಿರುತೆರೆ ಇಂಡಸ್ಟ್ರಿ ಯಾವಾಗಲೂ ಕೈಬೀಸಿ ಕರೆಯತ್ತಲೇ ಇರುತ್ತದೆ. ತೆರೆ ಮೇಲೆ ಸ್ಟಾರ್ ಹೀರೋ ಮತ್ತು ಸ್ಟಾರ್ ಹೀರೋಯಿನ್ ಆಗಿ ಮೆರೆದವರು ಕಿರುತೆರೆ ಲೋಕದಲ್ಲಿ ಧಾರಾವಾಹಿಗಳಿಗೆ ಬಣ್ಣ ಹಚ್ಚುತ್ತಿರುವುದು ಈ ಕಾಲದಲ್ಲಿ ಮಾತ್ರ ಅಲ್ಲ, ದಶಕಗಳ ಹಿಂದೆಯೇ ಭಾರತಿ ವಿಷ್ಣುವರ್ಧನ್, ಕಲ್ಯಾಣ್ ಕುಮಾರ್ ಇಂತಹ ಮೇರು ನಟರು ಕೂಡ ಮನೆತನ ಎನ್ನುವ ಧಾರವಾಹಿಗಾಗಿ ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದಿದ್ದರು.
ಅದೇ ಸಾಲಿನಲ್ಲಿ ಈಗ ಅಭಿಜಿತ್, ಉಮಾಶ್ರೀ, ಸುಧಾರಾಣಿ, ಶ್ರೀನಿವಾಸ್ ಮೂರ್ತಿ, ಶಶಿ ಕುಮಾರ್, ಅನಿರುದ್ಧ್, ಗಿರಿಜಾ ಲೋಕೇಶ್, ವಿಜಯಲಕ್ಷ್ಮಿ ಸಿಂಗ್, ಜೈ ಜಗದೀಶ್ ಇನ್ನು ಮುಂತಾದ ಅನೇಕ ಬೆಳ್ಳಿತೆರೆಯ ಪ್ರತಿಭೆಗಳು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ನಮ್ಮನ್ನು ಮನೋರಂಜಿಸುತ್ತಿದ್ದಾರೆ. ಅದರಲ್ಲೂ ಜೀ ಕನ್ನಡ ವಾಹಿನಿಯೂ ಈ ರೀತಿ ಹಿರಿಯ ಕಲಾವಿದರುಗಳು, ಮತ್ತು ಕನ್ನಡದ ಹೆಸರಾಂತ ಕಲಾವಿದರು ಗಳನ್ನು ಅತಿ ಹೆಚ್ಚು ತನ್ನ ಕಾರ್ಯಕ್ರಮಗಳಲ್ಲಿ ಹಾಕಿಕೊಂಡು ಜನಮನ್ನಣೆ ಗಳಿಸುತ್ತಿದೆ.
ಕಿರುತೆರೆ ಉದ್ಯಮವು ಕೂಡ ಇಂದು ತನ್ನ ಅದ್ದೂರಿ ಧಾರಾವಾಹಿಗಳಿಂದ ಮತ್ತು ಸಾಹಸಮಯವಾದ ರಿಯಾಲಿಟಿ ಶೋಗಳಿಂದ ಜನರಿಗೆ ಬಹಳಷ್ಟು ಹೊಸತನ ತಂದಿದೆ. ಹೀಗಾಗಿ ಧಾರಾವಾಹಿಗಳಲ್ಲೂ ಕೂಡ ಕಥೆಗಳಿಗೆ ಒಪ್ಪುವ ಹಾಗೆ ದೊಡ್ಡ ದೊಡ್ಡ ಕಲಾವಿದರು ಗಳಿಂದ ಆಕ್ಟಿಂಗ್ ಮಾಡಿಸಲು ದುಬಾರಿ ಮೊತ್ತದ ಸಂಭಾವನೆ ತೆತ್ತು ಅವರನ್ನು ಕಿರುತೆರೆಗೆ ತರುತ್ತಿದೆ. ಈ ಸಾಲಿನಲ್ಲಿ ಈಗ ಝೀ ಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ಸುಧಾರಾಣಿ ಅವರನ್ನು ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ.
ಕಳೆದೆರಡು ತಿಂಗಳಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ನನ್ನ ಹಲವು ವಿಷಯಗಳಿಂದ ಜನರಿಗೆ ಬಹಳ ಇಷ್ಟ ಆಗಿದೆ. ತುಳಸಿ ಪಾತ್ರ ಮಾಡುತ್ತಿರುವ ಸುಧಾರಾಣಿ ಅವರ ಕುಟುಂಬ ನಿಭಾಯಿಸಿಕೊಂಡು ಹೋಗುವ ತಾಳ್ಮೆ, ಸಮರ್ಥ್ ಎನ್ನುವ ಮಧ್ಯಮ ವರ್ಗದ ಹುಡುಗ ಸಕ್ಸಸ್ ಪಡೆಯಲು ಮಾಡುತ್ತಿರುವ ಹೋರಾಟ, ಮನೆಯ ಹಿರಿಯರಾಗಿ ತನ್ನ ಮಗು ಹೃದಯ ಹಾಗೂ ಒರಟು ಕೊಂಕು ಮಾತಿನಿಂದ ಎಲ್ಲರಿಗೂ ಮನರಂಜನೆ ನೀಡುತ್ತಿರುವ ತಾತನಾಗಿರುವ ದತ್ತ, ಅತ್ತೆಯಲ್ಲಿ ಅಮ್ಮನನ್ನು ಕಾಣುತ್ತಿರುವ ಸೊಸೆ ಸಿರಿ, ಪೂರ್ವಿಯನ್ನು ಮಗಳಾಗಿ ಕಾಣುತ್ತಿರುವ ಮಾಧವ್ ಸರ್,
ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಪತಿ ಅವಿ, ಕೂಡು ಕುಟುಂಬ ಎಂದರೆ ಹೇಗಿರಬೇಕು ಸಂಸಾರದಲ್ಲಿ ಸಂಬಂಧಗಳು ಎಷ್ಟು ಗಟ್ಟಿಯಾಗಿರಬೇಕು ಅದಕ್ಕೆ ಪ್ರೀತಿ ನಂಬಿಕೆ ಮತ್ತು ಸಹನೆ ಎಷ್ಟು ಮುಖ್ಯ ಎನ್ನುವುದನ್ನು ಈ ಪಾತ್ರಗಳು ಜನರಿಗೆ ಕಲಿಸುತ್ತಿವೆ. ಆದ್ದರಿಂದ ಎಲ್ಲ ಧಾರವಾಹಿಗಳಿಗಿಂತ ಈ ಧಾರವಾಹಿ ಬಹಳ ವಿಶೇಷ ಆಗಿದೆ. ಸದಾ ಅತ್ತೆ ಸೊಸೆಯ ಕಾದಾಟ ಮತ್ತು ಗಂಡ ಹೆಂಡರ ಡಿವರ್ಸ್ ಕಥೆಗಳನ್ನು ನೋಡಿ ಬೇಸತ್ತಿದ್ದ ಜನರಿಗೆ ಮೊದಲ ಬಾರಿಗೆ ಕಿಂಚಿತ್ತು ಮುಜುಗರವಿಲ್ಲದೆ ಮನೆ ಮಂದಿಯೆಲ್ಲಾ ಸೇರಿ ನೋಡಬಹುದಾದ ಒಂದು ಕಾರ್ಯಕ್ರಮ ಸಿಕ್ಕಿದೆ.
ಈ ಕಾರಣಕ್ಕೆ ಸುಧಾರಣೆ ಅವರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದಕ್ಕೆ ಬರೋಬ್ಬರಿ 25,000ಗಳನ್ನು ಒಂದು ದಿನದ ಶೂಟಿಂಗ್ ಆಗಿ ಅವರು ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಕೂಡ. ಸುಧಾರಾಣಿಯವರಿಗೆ ಈ ಮೊದಲು ರಥಸಪ್ತಮಿ ಎನ್ನುವ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಮತ್ತು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೆಲ ದಿನಗಳವರೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.