Tuesday, October 3, 2023
Home cinema news ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್...

ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ ಇನ್ನು ಕೂಡ ಸುದೀಪ್ & ದರ್ಶನ್ ಜೊತೆ ಯಾಕೆ ನಟಿಸಿಲ್ಲ.? ಇದರ ಹಿಂದಿರುವ ಕಾರಣವೇನು ಗೊತ್ತ.!

 

ರಾಧಿಕಾ ಪಂಡಿತ್ ಅವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವಂತಹ ಬ್ಯೂಟಿಫುಲ್ ನಟಿ. ನಂದಗೋಕುಲ, ಕಾದಂಬರಿ, ಸುಮಂಗಲಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಬಣ್ಣ ಹಚ್ಚಿ ಕಿರುತೆರೆಯ ಮೂಲಕವೇ ಕರ್ನಾಟಕದ ಜನತೆಗೆ ಪರಿಚಿತರಾದವರು. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು ಒಂದರ ಹಿಂದೆ ಒಂದರಂತೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಯಶ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ಹೆಗ್ಗಳಿಕೆ ಇವರದ್ದು.

ಕನ್ನಡ ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾದರೂ ರಾಧಿಕಾ ಪಂಡಿತ್ ಅವರು ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರೊಂದಿಗೆ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ಅನೇಕರ ಗೊಂದಲಕ್ಕೆ ಕಾರಣವಾಗಿದೆ. ರಾಧಿಕಾ ಅವರಿಬ್ಬರ ಜೊತೆ ನಟಿಸದಿರಲು ಕಾರಣವೇನು ಎಂಬುದು ಹಲವರ ಪ್ರಶ್ನೆಯಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರು. ಗಲ್ಲಿ ಗಲ್ಲಿಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಕಲಾವಿದರು. ಟಾಪ್ ಟೆನ್ ನಟರ ಪಟ್ಟಿಯಲ್ಲಿ ಇವರ ಹೆಸರು ಕಾಣಸಿಗುತ್ತದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಇವರಿಬ್ಬರು ಹೊಂದಿದ್ದು, ಅವರಿಗೂ ಕೂಡ ರಾಧಿಕಾ ಪಂಡಿತ್ ಅವರೊಂದಿಗೆ ಇವರೇಕೆ ಪರದೆಯ ಮೇಲೆ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಯು ಮೂಡಿದೆಯಂತೆ.

ಒಂದು ಕಾಲದಲ್ಲಿ ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರದ್ದು ಮಾದರಿ ಸ್ನೇಹವಾಗಿತ್ತು. ಅಷ್ಟೇ ಅಲ್ಲದೆ ಅವರಿಬ್ಬರ ಹೆಂಡತಿಯರು ಕೂಡ ಆಪ್ತರಾಗಿದ್ದರು. ಚಿತ್ರರಂಗದ ಅಥವಾ ಬೇರೆ ಯಾವುದೋ ವಿಷಯಕ್ಕಾದರೂ ದರ್ಶನ್ ಮತ್ತು ಸುದೀಪ್ ಅವರು ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ಚಿತ್ರದ ಬಿಡುಗಡೆಯ ಸಭೆ ಸಮಾರಂಭಗಳಲ್ಲಿ, ಬಿಡುವಿನ ಸಮಯದಲ್ಲಿ ಹೀಗೆ ಎಲ್ಲಾ ಕಡೆ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

ಒಂದೇ ಫೋಟೋದಲ್ಲಿ ಇವರಿಬ್ಬರನ್ನು ಕಂಡ ಅಭಿಮಾನಿಗಳು ಖುಷಿ ಪಡುತ್ತಿದ್ದರು. ಯಾರ ದೃಷ್ಟಿ ತಗುಲಿತ್ತೋ? ಏನೋ? ಇವರಿಬ್ಬರೂ ಇತ್ತೀಚಿನ ದಿನಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಡಿ ಬಾಸ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯು ಎಲ್ಲೆಡೆ ಹರಡಿತ್ತು. ಅದನ್ನು ಕೇಳಿದ ಫ್ಯಾನ್ಸ್ ತುಂಬಾ ಸಂತಸಪಟ್ಟಿದ್ದರು. ಆದರೆ ಈವರೆಗೂ ದರ್ಶನ್ ಹಾಗೂ ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.

ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಮಾತು ಚಂದನವನದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಅಭಿಮಾನಿಗಳು ಇವರಿಬ್ಬರು ಮುಂದಿನ ದಿನಗಳಲ್ಲಿ ಒಟ್ಟಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದಾರೆ. ಇವರಿಬ್ಬರನ್ನು ಒಟ್ಟಾಗಿ ಬೆಳ್ಳಿ ಪರದೆಯ ಮೇಲೆ ನೋಡುವ ಆಸೆಯನ್ನು ಸದ್ಯ ಕೈಬಿಟ್ಟಿದ್ದಾರೆ.

ಇದರ ಜೊತೆಯಲ್ಲಿ ರಾಧಿಕಾ ಪಂಡಿತ್ ಅವರು ಇವರೊಂದಿಗೆ ಚಿತ್ರಾನ್ನೇಕೆ ಮಾಡಲಿಲ್ಲ? ಎಂದು ಯೋಚಿಸುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಹಿಂದೆ ರಾಧಿಕಾ ಪಂಡಿತ್ ಅವರು ಒಮ್ಮೆ ಹೇಳಿದ ಮಾತೊಂದು ನೆನಪಾಗುವುದು. ಅದೇನೆಂದರೆ ‘ಅವರಿಬ್ಬರೂ ನಮ್ಮ ಚಂದನವನದ ಸೀನಿಯರ್ ಸ್ಟಾರ್ ನಟರು. ಅವರೊಂದಿಗೆ ನಟಿಸುವಂತಹ ಒಳ್ಳೆಯ ಚಿತ್ರಕಥೆ ಅಥವಾ ಸಿನಿಮಾ ನನ್ನನ್ನು ಹುಡುಕಿಕೊಂಡು ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ.

ಅವರ ಜೊತೆಯಲ್ಲಿ ನಟಿಸುವ ಅವಕಾಶ ದೊರೆತರೆ ನನಗೂ ಹರ್ಷವೇ’ ಎಂದಿದ್ದರು. ಈ ಮಾತನ್ನು ಹೇಳಿ ಕೆಲವು ವರ್ಷಗಳೇ ಕಳೆದಿವೆಯಾದರೂ ಈವರೆಗೂ ಅಂತಹ ಕಥೆ ಅಥವಾ ಸಿನಿಮಾ ಸಿಗಲಿಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಈವರೆಗೂ ರಾಧಿಕಾ ಪಂಡಿತ್ ದಚ್ಚು ಹಾಗೂ ಕಿಚ್ಚ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿಲ್ಲ.

 

 

- Advertisment -