ಎಲ್ಲರಿಗೂ ಎಲ್ಲಾ ಚಿತ್ರದ ಕಥೆಗಳು ಇಷ್ಟ ಆಗುವುದಿಲ್ಲ. ಒಂದು ಚಿತ್ರ ಇಷ್ಟ ಆಗುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಚಿತ್ರದಲ್ಲಿನ ಹಾಡುಗಳು, ಮ್ಯೂಸಿಕ್, ಬಿಜಿಎಂ, ಸ್ಟಂಟ್, ಫೈಟಿಂಗು, ಸಿನಿಮಾ ನಾಯಕ ಮತ್ತು ನಾಯಕಿ ಅಥವಾ ಸಿನಿಮಾದಲ್ಲಿರುವ ಕಥೆ, ಕಥೆಯಲ್ಲಿ ಬರುವ ಪಾತ್ರಗಳು ಇದರಲ್ಲಿ ಯಾವುದಾದರೂ ಒಂದು ಅಂಶ ಇಷ್ಟ ಆದರೂ ಕೂಡ ಜನ ಆ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಇಷ್ಟಪಡುತ್ತಾರೆ ಅದರ ಬಗ್ಗೆಯೇ ಮಾತನಾಡುತ್ತಿರುತ್ತಾರೆ.
ಆದರೆ ಎಲ್ಲರಿಗೂ ಎಲ್ಲ ಸಿನಿಮಾಗಳು ರುಚಿಸುವುದಿಲ್ಲ ಎನ್ನುವುದು ಅಷ್ಟೇ ನಿಜ. ಅವರವರ ಅಭಿರುಚಿಗೆ ತಕ್ಕಂತೆ ಸಿನಿಮಾಗಳ ಬಗ್ಗೆ ಅವರು ಮಾತನಾಡುತ್ತಿರುತ್ತಾರೆ. ಇದರಲ್ಲಿ ಯಾರು ಸಹ ಕಂಡೀಶನ್ ಹಾಕಲು ಸಾಧ್ಯವಿಲ್ಲ. ಆದರೆ ಇಷ್ಟವಾಗದ ಸಿನಿಮಾ ಬಗ್ಗೆ ಮಾತನಾಡುವಾಗ, ಅದರಲ್ಲೂ ತನಗೆ ಇಷ್ಟ ಆಗದಿದ್ದರೂ ಇಡೀ ಜಗತ್ತು ಮೆಚ್ಚಿದ ಸಿನಿಮಾ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕಾದದ್ದು ಮುಖ್ಯ.
ಇಲ್ಲವಾದರೆ ಕ್ಯಾಮರಾ ಎದುರಿಗೆ ಇದೆ, ಮೈಕ್ ಸಿಕ್ಕಿತು ಎಂದು ಇಷ್ಟ ಬಂದ ಹಾಗೇ ದೊಡ್ಡ ಸಿನಿಮಾಗಳ ಬಗ್ಗೆ ಮಾತನಾಡಿದರೆ ಪಬ್ಲಿಕ್ ಅವರಿಗೆ ಸರಿಯಾಗಿ ಚಳಿ ಬಿಡಿಸುವುದರಲ್ಲಿ ಸಂಶಯವೇ ಇಲ್ಲ. ಈಗ ಈ ರೀತಿ ಪ್ಯಾನ್ ಸಿನಿಮಾ ಒಂದರ ಬಗ್ಗೆ ಇಷ್ಟ ಬಂದ ಹಾಗೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ ಪಕ್ಕದ ರಾಜ್ಯದ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಅವರು. ವೆಂಕಟೇಶ್ ಮಹಾ ಎನ್ನುವ ಒಬ್ಬ ಡೈರೆಕ್ಟರ್ ಇದ್ದಾರೆ ಎಂದು ತೆಲುಗು ಇಂಡಸ್ಟ್ರಿಯವರಿಗೆ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ.
ಹಾಗಾಗಿ ತನ್ನ ಹೆಸರನ್ನು ಫೇಮಸ್ ಮಾಡಿಕೊಳ್ಳುವ ಘೀಳಿಗೆ, ಈಗಾಗಲೇ ಹೆಸರು ಮಾಡಿರುವವರ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಮೆಂಟಾಲಿಟಿ ಇತ್ತೀಚಿಗೆ ಜನರಿಗೆ ಶುರುವಾಗಿದೆ. ಅದೇ ಕಾರಣಕ್ಕೋ ಅಥವಾ ಮತ್ಯಾವ ಕಾರಣಕ್ಕೋ ಈಗ ಈ ನಟ ಕನ್ನಡದ ಕೆಜಿಎಫ್ ಟು ಸಿನಿಮಾ ಬಗ್ಗೆ ಮಾತನಾಡಿ ಗ್ರಹಚಾರ ಕೆಡಿಸಿಕೊಂಡಿದ್ದಾನೆ. ಇಲ್ಲಿಯವರೆಗೆ ನಾವು ಸ್ಟಾರ್ ವಾರ್ ಒಂದು ದೊಡ್ಡ ಸಮಸ್ಯೆ ಎಂದುಕೊಂಡಿದ್ದೆವು ಸಹಜವಾಗಿ ಸಿನಿಮಾ ಚೆನ್ನಾಗಿದ್ದರೂ ಕೂಡ ಮತ್ತೊಬ್ಬ ಹೀರೋ ಫ್ಯಾನ್ ಅದನ್ನು ಹೊಟ್ಟೆ ಕಿಚ್ಚಿನಿಂದ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದ ಅಷ್ಟಕ್ಕೆ ಮುಗಿತಿತ್ತು ಎಂದು ಕೊಳ್ಳುತ್ತಿದ್ದೆವು.
ಆದರೆ ಈಗ ಅದು ಇಂಡಸ್ಟ್ರೀ ಇಂಡಸ್ಟ್ರೀ ಮಧ್ಯೆ ಬೆಂಕಿ ಹಚ್ಚುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ಇಲ್ಲಿನ ಪ್ಯಾನ್ ಇಂಡಿಯಾ ಸಿನಿಮಾಗಳು ಅವರ ಭಾಷೆ ಸಿನಿಮಾಗಳನ್ನು ಹಿಂದಕ್ಕಿ ಗೆದ್ದು ಬಿಟ್ಟರೆ ಅದನ್ನು ಸಹಿಸಿಕೊಳ್ಳದ ವರ್ಗ ಅಲ್ಲೂ ಕೂಡ ಶುರುವಾಗಿದೆ, ಅದಕ್ಕೆ ವೆಂಕಟೇಶ್ ಮಹಾ ಎನ್ನುವವರು ಸಾಕ್ಷಿ. ಇತ್ತೀಚಿಗೆ ಸಂದರ್ಶನ ಒಂದರದಲ್ಲಿ ಕೇಳಿದ ಪ್ರಶ್ನೆಗೆ ಆತ ಕೆಜಿಎಫ್ ಟೂ ಸಿನಿಮಾವನ್ನು ಟಾರ್ಗೆಟ್ ಮಾಡಿ ಉತ್ತರ ನೀಡಿದ್ದಾನೆ.
ಆದರೆ ತಾನು ಮಾತಾಡಿದ ಅಷ್ಟು ಹೊತ್ತು ಎಲ್ಲೂ ನೇರವಾಗಿ ಆ ಸಿನಿಮಾ ಹೆಸರನ್ನು ಆತ ಕೆಜಿಫ್ ಎಂದು ಹೇಳಿಲ್ಲ. ಬದಲಾಗಿ ಸಿನಿಮಾದ ಸೀನ್ ಗಳ ಬಗ್ಗೆ ಮಾತನಾಡಿರುವದರಿಂದ ಅದು ಕನ್ನಡದ ಕೆಜಿಎಫ್ ಒನ್ ಮತ್ತು ಕೆಜಿಎಫ್ ಟು ಬಗ್ಗೆ ಮಾತನಾಡಿರುವುದು ಎನ್ನುವುದು ಸ್ಪಷ್ಟವಾಗುತ್ತಿದೆ. ಇಲ್ಲೊಬ್ಬ ಮಹಾತಾಯಿ ಇದ್ದಾಳೆ, ಎಲ್ಲರೂ ತನ್ನ ಮಕ್ಕಳಿಗೆ ಒಳ್ಳೆಯ ಬುದ್ಧಿ ಕಲಿ, ದೊಡ್ಡವನಾದ ಮೇಲೆ ನಾಲ್ಕು ಜನಕ್ಕೆ ಸಹಾಯ ಮಾಡುವ ನಾಲ್ಕು ಜನ ಹೊಗಳುವಂತಹ ಹೀರೋ ಆಗು ಎಂದು ಹೇಳಿಕೊಟ್ಟರೆ, ಈ ತಾಯಿ ತನ್ನ ಮಗನಿಗೆ ಚಿನ್ನ ಸಂಪಾದಿಸು, ದುಡ್ಡು ಸಂಪಾದಿಸು ಎಂದು ಹೇಳಿಕೊಟ್ಟಿದ್ದಾಳೆ ಎಂದು ರಾಕಿ ಬಾಯ್ ತಾಯಿ ಬಗ್ಗೆ ಟ್ರೊಲ್ ಮಾಡಿದ್ದಾನೆ.
ನಂತರ ಆ ಮಹಾ ನಾಯಕ ಕೆಲಸಗಾರರ ಸಹಾಯ ತೆಗೆದು ಕೊಂಡು ಚಿನ್ನ ದುಡ್ಡು ಹೆಸರು ಎಲ್ಲಾ ಪಡೆಯುತ್ತಾನೆ. ಅವರಿಗೆಲ್ಲ ಮನೆ ಕೊಟ್ಟು ಚಿನ್ನ ತೆಗೆದುಕೊಂಡು ಹೋಗಿ ನೀರಿಗೆ ಮುಳುಗಿಸಿ ಬರುತ್ತಾನೆ. ಎಂಥಹ ಹುಚ್ಚ ಇರಬೇಕು, ಆ ಹುಚ್ಚು ನಾಯಿ ಕಥೆಯನ್ನು ಸಿನಿಮಾ ಮಾಡಿದ್ದಾರೆ, ನಾವು ಅದಕ್ಕೆ ಶಿಳ್ಳೆ ಚಪ್ಪಾಳೆ ಬೇರೆ ಹೊಡೆಯುತ್ತೇವೆ. ಎಂದು ರಾಕಿ ಬಾಯ್ ಪಾತ್ರವನ್ನು ಅವಹೇಳನ ಮಾಡಿದ್ದಾನೆ. ಇವನ ಈ ದುರ್ಬುದ್ದಿಗೆ ಈಗ ತೆಲುಗು ಇಂಡಸ್ಟ್ರಿಯವರೇ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಮತ್ತು ಕನ್ನಡಿಗರು ಕೆರಳಿ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.