ಕನ್ನಡ ಚಿತ್ರರಂಗದ ಶ್ರೇಷ್ಠನಟ, ವರನಟ, ಮೇರು ಕಲಾವಿದ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಕನ್ನಡ ಸಿನಿಮಾದಲ್ಲಿ ಮಾತ್ರ ಅಭಿನಯಿಸಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟ ಎಂದು ಹೇಳಬಹುದು. ಇವರ ಅಭಿನಯಕ್ಕೆ ಇವರೇ ಸಾಟಿ. ಪೌರಾಣಿಕ ಪಾತ್ರವಿರಲಿ, ಸಾಮಾಜಿಕ ಚಿತ್ರವೇ ಇರಲಿ, ಐತಿಹಾಸಿಕ ಸಿನಿಮಾ ಆಗಲಿ ಅಣ್ಣಾವ್ರು ಹಾಕುತ್ತಿದ್ದ ಆ ವೇಶ ಮತ್ತು ಅವರು ತಮ್ಮ ಕಂಚಿನ ಕಂಠದಿಂದ ಹೊರಡಿಸುತ್ತಿದ್ದ ಅಚ್ಚ ಕನ್ನಡದ ಪದಗಳು ನೋಡುಗರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುತ್ತಿತ್ತು.
ಈ ರೀತಿ ತಮ್ಮ ಅಭಿನಯದ ಮೋಡಿ ಇಂದಲೇ ಜನಮನ್ನಣೆ ಗಿಟ್ಟಿಸಿಕೊಂಡ ಅಣ್ಣಾವ್ರು ಅಭಿಮಾನಿಗಳನ್ನೇ ದೇವರು ಎಂದು ಕರೆದು ಧನ್ಯರಾದರು. ಅಣ್ಣಾವ್ರ ರೀತಿಯೇ ಅವರ ಕುಟುಂಬದ ಇನ್ನಿತರ ಸದಸ್ಯರು ಕೂಡ ಸಿನಿಮಾ ಇಂಡಸ್ಟ್ರಿಯನ್ನೇ ಬದುಕನ್ನಾಗಿಸಿಕೊಂಡರು. ಅವರ ಸಾಲಿಗೆ ಅವರ ಮೂರು ಜನ ಗಂಡು ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಪುನೀತ್ ಅವರು ಕೂಡ ಸೇರಿದರು. ಮೂರು ಜನರು ಕೂಡ ಕನ್ನಡದ ಸ್ಟಾರ್ ಹೀರೋಗಳಾಗಿದ್ದವರು, ಮಧ್ಯದಲ್ಲಿ ರಾಘಣ್ಣ ಹೀರೋ ಬದಲು ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ.
ಉಳಿದಂತೆ ಶಿವಣ್ಣ ಈಗಲೂ ಸಹ ಹೀರೊ ಆಗಿಯೇ ಬೇಡಿಕೆ ಇರುವ ನಟ ಎನ್ನುವುದು ಅವರ ಎನರ್ಜಿ ಎಂತಹದ್ದು ಎನ್ನುವುದನ್ನು ಸಾಬೀತು ಪಡಿಸುತ್ತದೆ. ಜೊತೆಗೆ ಪುನೀತ್ ಅವರು ಅಭಿನಯದ ವಿಷಯದಲ್ಲಾಗಲಿ, ಹೃದಯ ಶ್ರೀಮಂತಿಕೆ ವಿಷಯದಲ್ಲಿ ಆಗಲಿ ಪದಗಳಿಗೆ ನಿಲುಕದ ಗುಣದವರು. ಆಡುವ ವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತ ಇವರು. ಅಣ್ಣಾವ್ರು ಆದ ಬಳಿಕ ಪುನೀತ್ ಅವರು ಸಹ ಅಣ್ಣಾವ್ರನ್ನೇ ಹೋಲುವಂತೆ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಯಾಕೆಂದರೆ ಪುನೀತ್ ಅವರು ಸಿನಿಮಾಗಳಿಗೆ ಹಾಡುಗಳನ್ನು ಸಹ ಆಡುತ್ತಿದ್ದರು.
ಇವರ ಧ್ವನಿಯು ಕೂಡ ಬಹಳ ಬೇಡಿಕೆಯಲ್ಲಿ ಇತ್ತು. ಆದ್ದರಿಂದ ಎಲ್ಲರೂ ಅಣ್ಣಾವ್ರು ಆದಮೇಲೆ ಪುನೀತವರನ್ನೇ ಆ ಸ್ಥಾನದಲ್ಲಿ ನೋಡುತ್ತಿದ್ದರು. ಆದರೆ ದು’ರಾ’ದೃ’ಷ್ಟ’ವಷಾತ್ ಕನ್ನಡ ಚಿತ್ರರಂಗ ಇಂತಹ ಪ್ರತಿಭೆಯನ್ನು ಕಳೆದುಕೊಂಡು ಬಡವಾಗಿದೆ. ಅಭಿಮಾನಿಗಳು ಕೂಡ ತನ್ನ ನೆಚ್ಚಿನ ನಟನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಜೊತೆಗೆ ದೊಡ್ಮನೆಯ ಮತ್ತೊಂದು ಕುಡಿಯಲ್ಲಿ ಪುನೀತ್ ರಾಜಕುಮಾರ್ ಹಾಗೂ ರಾಜಣ್ಣ ಅವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ಅದೇನೆಂದರೆ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗನಾಗಿರುವ ಯುವರಾಜ್ ಕುಮಾರ್ ಅವರು ನೋಡುವುದಕ್ಕೆ ಪುನೀತ್ ರಾಜಕುಮಾರ್ ಹಾಗೂ ಡಾ. ರಾಜಕುಮಾರ್ ಅವರನ್ನು ಹೋಲುತ್ತಾರೆ.
ಕೆಲವೊಮ್ಮೆ ಇವರು ಪುನೀತ್ ರಾಜಕುಮಾರ್ ಅವರಂತೆಯೂ ಕಾಣುತ್ತಾರೆ. ಈಗಾಗಲೇ ಇವರ ಅನೇಕ ಫೋಟೋಗಳು ವೈರಲ್ ಆಗಿದ್ದು ಆ ಫೋಟೋಗಳನ್ನು ಅಣ್ಣಾವ್ರು ಮತ್ತು ಅಪ್ಪು ಫೋಟೋ ಜೊತೆ ಹೋಲಿಕೆ ಮಾಡಿ ತಾಳೆ ಹಾಕಿ ನೋಡಲಾಗಿದೆ. ಅತಿ ಹೆಚ್ಚಿನ ಜನರು ಪುನೀತ್ ಆದ ಬಳಿಕ ಆ ಸ್ಥಾನವನ್ನು ತುಂಬಿಸಬಲ್ಲ ನಟ ಇವರೆಂದು ಹೇಳುತ್ತಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಈಗ ಯುವರಾಜನ ಅಭಿಮಾನಿಗಳಾಗಿ ಬದಲಾಗಿದ್ದಾರೆ. ಸದ್ಯದಲ್ಲೇ ಯುವ ರಾಜಕುಮಾರ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಬಜೆಟ್ಟಿನ ಸಿನಿಮಾದೊಂದಿಗೆ ಲಾಂಚ್ ಆಗುತ್ತಿದ್ದು ಈಗಾಗಲೇ ಸಣ್ಣದೊಂದು ಟೀಸರ್ ಮೂಲಕವೇ ಜನರನ್ನು ನಿಬ್ಬೆರಗಾಗಿಸಿದ್ದಾರೆ. ಯುವ ರಣಧೀರ ಕಂಠೀರವ ಎನ್ನುವ ಸಿನಿಮಾದ ಸಣ್ಣ ಐದು ನಿಮಿಷಗಳ ಟೀಸರ್ ಬಿಡುಗಡೆ ಆಗಿತ್ತು.
ಅದರಲ್ಲಿ ಐತಿಹಾಸಿಕ ಪಾತ್ರದಲ್ಲಿ ಅಬ್ಬರಿಸಿದ್ದ ಯುವರಾಜ್ ಕುಮಾರ್ ಅವರ ಟ್ಯಾಲೆಂಟ್ ನೋಡಿ ಈ ಬಗ್ಗೆ ಸಂದರ್ಶನ ಒಂದರಲ್ಲಿ ಶಿವಣ್ಣ ಅವರನ್ನು ಈ ಬಗಕ ಪ್ರಶ್ನಿಸಲಾಗಿದೆ. ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿರುವ ಯುವರಾಜ್ ಕುಮಾರ್ ಅವರಿಗೆ ನಿಮ್ಮ ಸಲಹೆ ಏನು ಎಂದು ಕೇಳಿದಾಗ ಶಿವಣ್ಣ ಅವರು ಅಣ್ಣಾವ್ರ ಮಕ್ಕಳಾಗಿ ನಮಗೆ ಅವರಂತೆ ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು, ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ನ್ಯಾಯ ಕೊಡಲು ಸಾಧ್ಯವಾಗಲಿಲ್ಲ. ಆದರೆ ಯುವರಾಜ್ ಕುಮಾರ್ ಈಗ ಆ ಸ್ಥಾನವನ್ನು ತುಂಬುತ್ತಿದ್ದಾನೆ ಎನ್ನುವುದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.
ಇದರ ಜೊತೆಗೆ ಪ್ರತಿಯೊಬ್ಬ ಹೀರೋ ಕೂಡ ತನ್ನ ಶ್ರಮ ಹಾಗೂ ಟ್ಯಾಲೆಂಟ್ ಇಂದ ಹೊರಬರಬೇಕು. ಸಲಹೆಯಾಗಿ ನಾವು ಏನನ್ನೇ ಆಚೆಯಿಂದ ತುಂಬಿದ,ರು ಅವರು ಅವರಿಗೆ ಏನಿದೆ ಅಥವಾ ಅವರಿಗೆ ಏನು ಗೊತ್ತು ಅದನ್ನಷ್ಟೇ ಅವರು ಮಾಡಲು ಸಾಧ್ಯ. ಈ ವಿಷಯದಲ್ಲಿ ನನ್ನ ಸಲಹೆ ಕೊಡುವಂತಹದ್ದು ಏನು ಇಲ್ಲ. ಒಂದೊಳ್ಳೆ ಸಿನಿಮಾ ಮೂಲಕ ನಿಮ್ಮೆಲ್ಲರಿಗೂ ಆತನ ನಟನಾ ಚಾತುರ್ಯವನ್ನು ತೋರಿಸಲಿದ್ದಾನೆ, ಅವನಿಗೆ ಶುಭವಾಗಲಿ. ಅವನಂತೇ ಇಂಡಸ್ಟ್ರಿಗೆ ಬರುವ ಎಲ್ಲಾ ಕಲಾವಿದರಿಗೂ ಟ್ಯಾಲೆಂಟ್ ಗೆ ತಕ್ಕ ಸ್ಥಾನ ದೊರೆಯಲಿ ಎಂದು ಹೇಳಿ ಮತ್ತೊಮ್ಮೆ ದೊಡ್ಡಮನೆ ದೊಡ್ಡ ಗುಣವನ್ನು ತೋರಿದ್ದಾರೆ.