Thursday, September 28, 2023
Home Entertainment ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ...

ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?

 

ಕಿರುತೆರೆ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ವಂಶಿಕ ಅಂಜನಿ ಕಶ್ಯಪ ಅವರು ಕನ್ನಡದ ಹೆಸರಾಂತ ಕಲಾವಿದ ಮತ್ತು ಬಾಲ ಕಲಾವಿದನಾಗಿ ಕನ್ನಡದಲ್ಲಿ ಹೆಸರು ಮಾಡಿದ್ದ ಮಾಸ್ಟರ್ ಆನಂದ್ ಅವರ ಪುತ್ರಿ. ಮಾಸ್ಟರ್ ಆನಂದ್ ಅವರು ಸಹ ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಮಟ್ಟದಲ್ಲಿ ಅವರ ಮಗಳು ವಂಶಿಕ ಅಪ್ಪನನ್ನು ಮೀರಿಸುವಷ್ಟು ಕಿರುತೆರೆಯಲ್ಲಿ ಹೆಚ್ಚು ಜನರನ್ನು ಮುಟ್ಟಿದ್ದಾಳೆ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಈಕೆಯ ನಟನೆ, ಆಕೆ ಹಾಸ್ಯ ಚಟಾಕಿ ಭಾರಿಸುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಮುದ್ದು ಮುದ್ದಾಗಿ ಮಾತನಾಡುತ್ತಾ ವಿಶೇಷ ಹಾವಭಾವದೊಂದಿಗೆ ಎಲ್ಲರನ್ನು ನಗಿಸುತ್ತಾ ಪಂಚಿಂಗ್ ಡೈಲಾಗ್ ಹೊಡೆಯುವ ಈಕೆ ಸ್ಟೈಲ್ ಗೆ ಎಲ್ಲರೂ ಫಿದಾ ಆಗಿದ್ದಾರೆ.

ವಂಶಿಕ ಅವರು ಮೊದಲಿಗೆ ನಮ್ಮಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋ ಅಲ್ಲಿ ತಾಯಿ ಯಶಸ್ವಿನಿ ಅವರೊಂದಿಗೆ ಕಾಣಿಸಿಕೊಂಡರು. ಈ ರಿಯಾಲಿಟಿ ಶೋ ಅಲ್ಲೇ ಮಾತಿನ ಪಟಾಕಿಯಿಂದ ಎಲ್ಲರ ಗಮನವನ್ನು ಸೆಳೆದುಬಿಟ್ಟರು ಮತ್ತು ಚೆನ್ನಾಗಿ ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೀಸನ್ ನ ವಿನ್ನರ್ ಕೂಡ ಇವರೇ ಆದರು. ಇದೇ ತಂಡ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಏರ್ಪಡಿಸಿತು. ಗಿಚ್ಚ ಗಿಲಿ ಗಿಲಿ ಎನ್ನುವ ಈ ಕಾರ್ಯಕ್ರಮದಲ್ಲಿ ಹತ್ತು ಜನ ಹಾಸ್ಯ ಕಲಾವಿದರೊಂದಿಗೆ, ನಾನ್ ಆಕ್ಟರ್ಗಳನ್ನು ಕರೆತಂದು ಅವರಿಂದ ಹಾಸ್ಯ ಮಾಡಿಸಲಾಗಿತ್ತು ಎಲ್ಲಾ ವಿಭಾಗದಿಂದಲೂ ಒಬ್ಬೊಬ್ಬರನ್ನು ಆರಿಸಿಕೊಂಡಿದ್ದರು.

ವಂಶಿಕ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ವಯಸ್ಕರಾಗಿದ್ದರು ಅವರ ಸ್ಕಿಟ್ ಗಳು ಹೇಗೆ ಇದ್ದರೂ ವಂಶಿಕ ಮಾತ್ರ ಮುಗ್ಧವಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇವರು ಮಾಡಿದ ರತ್ನನ್ ಪ್ರಪಂಚ ಸ್ಕಿಟ್ ಗೆ ತುಂಬಾ ಸದ್ದು ಕೂಡ ಮಾಡಿ ಅನೇಕರ ಮೆಚ್ಚುಗೆಗೆ ಪಾತ್ರ ಆಗಿತ್ತು. ಇಷ್ಟೆಲ್ಲಾ ಇದ್ದರೂ ಕೂಡ ಅನೇಕರು ಕಮೆಂಟ್ಗಳಲ್ಲಿ ನೆಗೆಟಿವ್ ಆಗಿ ಮಾಸ್ಟರ್ ಆನಂದ್ ಅವರನ್ನು ತಿವಿಯುತ್ತಿದ್ದರು. ನಿಮ್ಮ ಮಗಳನ್ನು ಏಕೆ ವಯಸ್ಕರರ ಜೊತೆ ರಿಯಾಲಿಟಿ ಶೋಗೆ ಕಳಿಸುತ್ತಿದ್ದೀರಾ.? ಅದು ಆಕೆ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು ನಿಮಗೆ ದುಡ್ಡೇ ಮುಖ್ಯನಾ ಎಂದು ಚುಚ್ಚು ಮಾತನಾಡಿದ್ದರು. ಇಲ್ಲಿವರೆಗೆ ನೆಗ್ಲೆಟ್ ಮಾಡಿ ಸುಮ್ಮನಿದ್ದ ಮಾಸ್ಟರ್ ಆನಂದ್ ಅವರ ಕೋಪ ಕೆರಳಿದೆ.

ಅದಕ್ಕಾಗಿ ಲೈವ್ ಬಂದು ಅವರು ಈ ಬಾರಿ ಅದಕ್ಕೆಲ್ಲ ಸರಿಯಾಗಿ ತಿರುಗೇಟು ನೀಡಿದ್ದಾರೆ. ಲೈವ್ ಆಗಿ ಬಂದ ಆನಂದ್ ಅವರು ಮೊದಲು ಮಗಳ ಬಗ್ಗೆ ಮಾತನಾಡಿ ನನ್ನ ಮಗಳಿಗೆ ಅಷ್ಟು ಚೆನ್ನಾಗಿ ಆಕ್ಟಿಂಗ್ ಮಾಡಲು ಬರುತ್ತದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ದೇವರ ರೂಪದಲ್ಲಿ ಬಂದ ಪ್ರೇಕ್ಷಕರಿಂದ ಅವಳಿಗೆ ಈ ಸ್ಥಾನ ಸಿಕ್ಕಿರುವುದು. ನಮಗೆ ಗೊತ್ತಿದೆ ಯಾವ ಕಾರ್ಯಕ್ರಮಕ್ಕೆ ಮಕ್ಕಳನ್ನು ಕಳಿಸಬೇಕು ಎಂದು ನಾನು ಅವಳು ಮಾಡುವ ಎಲ್ಲ ಸ್ಕಿಟ್ ಗಳನ್ನು ಗಮನಿಸುತ್ತಿದ್ದೇನೆ. ಅದರಲ್ಲಿ ಅವಳ ಮೇಲೆ ಕೆಟ್ಟ ರೀತಿ ಪರಿಣಾಮ ಇರುವಂತಹ ಯಾವುದೇ ಚಟುವಟಿಕೆ ಇಲ್ಲ. ಈ ನಂಬಿಕೆಯಿಂದಲೇ ನಾವು ಆಕೆಗೆ ಇಷ್ಟವಾದದ್ದು ಮಾಡಲು ಬಿಟ್ಟಿರುವುದು. ಇದರಲ್ಲಿ ಯಾರ ಬಲವಂತವು ಇಲ್ಲ.

ನಾನು ನನ್ನ ಮಗಳು ಉತ್ತಮವಾಗಿ ಮನರಂಜಿಸುತ್ತಿದ್ದಾಳೆ ಎಂದುಕೊಳ್ಳುತ್ತೇನೆ ಅಷ್ಟೇ, ಇದು ದೇವರು ಅವಳಿಗೆ ಕೊಟ್ಟಿರುವ ವರ. ನೆಗೆಟಿವ್ ಆಗಿ ಜನ ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಹಿಂದೆ ನಾನು ಕೂಡ ಬಾಲ ಕಲಾವಿದನಾಗಿ ಅಭಿನಯಿಸಿದಾಗ ದೊಡ್ಡಣ್ಣ ಅವರ ಜೊತೆ ಮಾಡಿದ ಮಡಿಕೆ ಸೀನ್ ಬಗ್ಗೆ ಎಲ್ಲರೂ ಮಾತನಾಡಿದ್ದರು. ರೇಖಾದಾಸ್ ಅವರನ್ನು ನಾನು ಆ ಸೀನಲ್ಲಿ ರೇಗಿಸಿದ್ದು ಎಲ್ಲರಿಗೂ ನೆಗೆಟಿವ್ ಆಗಿ ಕಾಣಿಸುತ್ತಿತ್ತು. ಆಗ ಇವನು ಹಾಳಾಗಿ ಹೋಗುತ್ತಾನೆ ಎಂದು ನನ್ನ ಬಗ್ಗೆ ಮಾತನಾಡಿಕೊಂಡಿದ್ದರು.

ಆದರೆ ನಾನು ಇಂದು ಇರುವ ಪರಿಸ್ಥಿತಿ ನೋಡಿದ್ರೆ ನಿಮಗೆ ನಾನು ಯಾವ ರೀತಿ ಆದರೂ ಹಾಳಾಗಿರುವ ಹಾಗೆ ಕಾಣಿಸುತ್ತಿದ್ದೀನಾ.? ನನ್ನ ಮಗಳು ಕೂಡ ಅದೇ ರೀತಿ ಇದ್ದಾಳೆ. ಇದು ಹಾಸ್ಯದ ಒಂದು ಭಾಗ ಅಷ್ಟೇ ಜೊತೆಗೆ ನನ್ನ ಮಗಳು ಒಳ್ಳೆ ರೀತಿ ಮನರಂಜಿಸುತ್ತಿದ್ದಾಳೆ. ನಿಂದಕರು ಎಲ್ಲಾ ಕಡೆ ಇರುತ್ತಾರೆ ನೆಗೆಟಿವ್ ಆಗಿ ಪ್ರಚಾರ ಮಾಡುವುದು ಅವರ ಅಭ್ಯಾಸ. ಇದಕ್ಕೆಲ್ಲ ಹೆಚ್ಚಾಗಿ ತಲೆಕಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

- Advertisment -