Tuesday, October 3, 2023
Home cinema news ದರ್ಶನ್ ಗೆ "ಬಾಕ್ಸ್ ಆಫೀಸ್ ಸುಲ್ತಾನ" ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

ದರ್ಶನ್ ಗೆ “ಬಾಕ್ಸ್ ಆಫೀಸ್ ಸುಲ್ತಾನ” ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ.?

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಗೆ ತಕ್ಕ ಹಾಗೆ ತನ್ನ ಬದುಕನ್ನು ಚಾಲೆಂಜ್ ಮಾಡಿಕೊಂಡು ಬೆಳೆದವರು. ದರ್ಶನ್ ಅವರು ಕನ್ನಡದ ಹಿರಿಯ ಕಲಾವಿದರಾದ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಸಮಾನ ಕಾಲದಲ್ಲಿ ಅವರ ಅನೇಕ ಚಿತ್ರಗಳಲ್ಲಿ ಖಳನಾಯಕ ಕಾಣಿಸಿಕೊಂಡಿದ್ದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ. ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣಕ್ಕೆ ಇವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ, ಜೊತೆಗೆ ಇಂಡಸ್ಟ್ರಿಯಲ್ಲಿ ಇವರ ತಂದೆ ಇದ್ದರು ಎನ್ನುವ ಕಾರಣದಿಂದ ಅವಕಾಶಗಳು ಸಿಕ್ಕಿಲ್ಲ. ದರ್ಶನ್ ಅವರು ತಮ್ಮ ಸ್ವಂತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ.

ದರ್ಶನ್ ಅವರ ತಂದೆ ದರ್ಶನ್ ಅವರು ಇನ್ನು ಓದುತ್ತಿದ್ದಾಗಲೇ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿರುತ್ತಾರೆ. ಓದುವುದರ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇರದ ಇವರು ಪ್ರಾಣಿಪಕ್ಷಿ ಸಾಕುವುದರ ಕಡೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಆ ಸಮಯದಲ್ಲಿ ಇಂಡಸ್ಟ್ರಿಗೆ ಬರಬೇಕು ಎನ್ನುವ ಕಲ್ಪನೆ ಕೂಡ ದರ್ಶನ್ ಅವರಿಗೆ ಇರಲಿಲ್ಲ. ಯಾವಾಗ ಮನೆ ಜವಾಬ್ದಾರಿ ಹೊರೆ ಬೀಳುತ್ತದೆ ಆಗ ಹಸು ಸಾಕಿ ಮನೆಯನ್ನು ನಿಭಾಯಿಸುತ್ತಿರುತ್ತಾರೆ. ತಂದೆ ಸಾ.ವಿ.ನ ದಿನ ಸೇರಿದ ಜನಸಂದಣಿ ನೋಡಿ ಜನರನ್ನು ಸಂಪಾದನೆ ಮಾಡಿದರೆ ಈ ರೀತಿ ಮಾಡಬೇಕು ಎಂದು ಮನ ಬದಲಾಯಿಸಿಕೊಂಡ ಇವರು ತಾವು ಸಹ ಸಿನಿಮಾ ಇಂಡಸ್ಟ್ರಿಗೆ ಹೋಗುವ ನಿರ್ಧಾರ ಮಾಡುತ್ತಾರೆ.

ಜೊತೆಗೆ ಇಲ್ಲಿ ಸ್ಟಾರ್ ಆಗಿ ಮೆರೆಯಲೇಬೇಕು ಎಂದು ಅವರಿಗೆ ಅವರೇ ಚಾಲೆಂಜ್ ಹಾಕಿಕೊಳ್ಳುತ್ತಾರೆ. ನಂತರ ಶಿವಮೊಗ್ಗದ ನಿನಾಸಂ ಅಲ್ಲಿ ಹೋಗಿ ರಂಗ ಶಿಕ್ಷಣ ಪಡೆದು ಇಂಡಸ್ಟ್ರಿಗೆ ಮರಳಿದ ಇವರು ಆರಂಭದ ದಿನಗಳಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬೆಳ್ಳಿತೆರೆಯ ಅವಕಾಶಗಳಿಗಾಗಿ ಹರಸುತ್ತಾ ಸೆಟ್ಗಳಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಾರೆ. ನಂತರ ಹೆಸರಾಂತ ಛಾಯಾಗ್ರಾಹಕ ಗೌರಿಶಂಕರ್ ಅವರ ಬಳಿ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾರೆ.

ಮೆಜೆಸ್ಟಿಕ್ ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಇವರ ಅದೃಷ್ಟದ ದಿಕ್ಕನ್ನೇ ಬದಲಾಯಿಸಿ ಬಿಡುತ್ತದೆ. ಪಿ.ಎನ್ ಸತ್ಯಾ ಅವರ ನಿರ್ದೇಶನದ ಈ ಸಿನಿಮಾಗೆ ದರ್ಶನ್ ಅವರು ಹೀರೋ ಆಗಿ ಸೆಲೆಕ್ಟ್ ಆಗುತ್ತಾರೆ
ಎರಡು ಶೇಡ್ ಇದ್ದ ಈ ಸಿನಿಮಾದಲ್ಲಿ ಹೀರೋ ಮತ್ತು ನೆಗೆಟಿವ್ ಎರಡು ರೋಲ್ ಅನ್ನು ಸಹ ಅದ್ಬುತ ಅಭಿನಯದಿಂದ ನಟಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಆ ಸಿನಿಮಾ ಕೂಡ ಬಾಕ್ಸ್ ಆಫೀಸ್ ಅಲ್ಲಿ ಸಖತ್ ಸೌಂಡ್ ಮಾಡುತ್ತದೆ. ನಂತರ ಬಂದ ಸಿನಿಮಾಗಳು ಅಷ್ಟೊಂದು ಯಶಸ್ಸು ತರುವುದಿಲ್ಲ ಆಗ ನಮ್ಮ ಪ್ರೀತಿಯ ರಾಮು ಚಿತ್ರ ದರ್ಶನ್ ಅವರ ಮತ್ತೊಂದು ಟರ್ನಿಂಗ್ ಪಾಯಿಂಟ್ ಆಗುತ್ತದೆ.

ಈ ಸಿನಿಮಾದಲ್ಲಿ ದರ್ಶನ್ ಅವರ ಕುರುಡನ ಪಾತ್ರ ನೋಡಿ ಕರ್ನಾಟಕವೇ ಆಶ್ಚರ್ಯ ಪಟ್ಟಿರುತ್ತದೆ. ಆನಂತರ ಎಲ್ಲರಿಗೂ ಅರಿವಾಗುತ್ತದೆ ದರ್ಶನ್ ಅವರು ನಟನೆಯಲ್ಲಿ ರಾಕ್ಷಸ ಎಂದು. ಒಂದು ಪಾತ್ರವನ್ನು ಗೆಲ್ಲಿಸುವುದಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಾದರೂ ತೊಡಗಿಸಿಕೊಳ್ಳಲು ತಯಾರಿದ್ದಾರೆ ಎನ್ನುವುದನ್ನು ಅರಿತ ಮಂದಿ ಇವರ ಮೇಲೆ ಇನ್ವೆಸ್ಟ್ ಮಾಡಲು ಶುರು ಮಾಡುತ್ತಾರೆ. ಆನಂತರ ಬಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ ದರ್ಶನ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಅದರಲ್ಲೂ ರಕ್ಷಿತಾ ಅವರ ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ದರ್ಶನ್ ಅವರ ಖ್ಯಾತಿ ಬೇರೆ ಮಟ್ಟಕ್ಕೆ ಬೆಳೆಯುತ್ತದೆ. ಹೀರೋ ಆಗುವ ಹೈಟು, ಜೊತೆಗೆ ಇರುವ ಕಾಮಿಡಿ ಸೆನ್ಸು, ಡೈಲಾಗ್ ಡೆಲಿವರಿ, ಖಡಕ್ ಲುಕ್, ಖದರ್ ಮಾತುಗಳು ದರ್ಶನ್ ಅವರ ಕ್ರೇಜ್ ಹತ್ತಿಸುತ್ತವೆ. ಅದೇ ಕಾರಣಕ್ಕಾಗಿ ಅತಿ ದೊಡ್ಡ ಅಭಿಮಾನಿ ಬಳಗವು ಕೂಡ ದರ್ಶನ್ ಅವರಿಗೆ ಸಿಕ್ಕಿದೆ. ಎಂದು ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಅದು ದರ್ಶನ್ ಅವರು ಮಾತ್ರ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿಗಳು ಎಂದು ಕರೆಯದೇ ಪ್ರೀತಿಯಿಂದ ಸೆಲೆಬ್ರೆಟಿಗಳು ಎಂದು ಕರೆಯುತ್ತಾರೆ.

ಇನ್ನು ದರ್ಶನ್ ಅವರ ಬಗ್ಗೆ ಅಭಿಮಾನಿಗಳಿರುವ ಹುಚ್ಚು ಪ್ರೀತಿಯ ಬಗ್ಗೆ ವಿವರಿಸಲು ಸಾಧ್ಯವೇ ಇಲ್ಲ. ಪ್ರೀತಿಯಿಂದ ಫ್ಯಾನ್ಸ್ ದರ್ಶನ್ ಅವರನ್ನು ದಚ್ಚು, ದಾಸ, ಶಾಸ್ತ್ರಿ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಯಜಮಾನ, ಒಡೆಯ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾನೆ. ಇದೆಲ್ಲದರ ಜೊತೆ ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಬಿರುದು ಕೂಡ ದರ್ಶನ್ ಅವರಿಗೆ ಇದೆ. ಇದನ್ನು ಯಾರು ಕೊಟ್ಟಿದ್ದು ಎಂದು ಅನೇಕರಿಗೆ ಗೊತ್ತಿಲ್ಲ. ಕನ್ನಡದ ಹಿರಿಯ ಪತ್ರಕರ್ತರಾದ “ಪಾರ್ಥ ಸಾರತಿಯವರು” ದರ್ಶನ್ ಅವರ ಆಪ್ತ ವಲಯದಲ್ಲಿ ಒಬ್ಬರು. ಜೊತೆಗೆ ದರ್ಶನ್ ಅವರ ಸಿನಿಮಾ ಮಾಡುತ್ತಿದ್ದ ಕಲೆಕ್ಷನ್ ಅನ್ನು ಹತ್ತಿರದಿಂದ ಕಾಣುತ್ತಿದ್ದ ಇವರು ಅವರ ಸಿನಿಮಾಗಳು ಹೇಗೆ ಗಲ್ಲಾಪೆಟ್ಟಿಗೆ ಲೂಟಿ ಹೊಡೆಯುತ್ತವೆ ಎನ್ನುವುದನ್ನು ನೋಡಿ ಅವರಿಗೆ ಈ ಟೈಟಲ್ ಕೊಟ್ಟಿದ್ದರು. ಇಂದಿಗೂ ಸಹ ದರ್ಶನ್ ಅವರು ಅದೇ ಹೆಸರನ್ನು ಉಳಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ.

- Advertisment -