ಹ್ಯಾಟ್ರಿಕ್ ಹೀರೋ ಶಿವಣ್ಣ (Hatric hero Shiva rajkumar) ಚಂದನವನದ (Sandalwood) ಒಬ್ಬ ಸ್ಟಾರ್ ನಟ ಮೊದಲ ಸಿನಿಮಾ ಆನಂದ್ (Debut Anamd) ಇಂದ ಹಿಡಿದೂ ವೇದ (Recent release Veda movie) ಚಿತ್ರದವರೆಗೂ ಕೂಡ ಇವರ ಸಿನಿಮಾ ಪಟ್ಟಿಯಲ್ಲಿ ಸೂಪರ್ ಹಿಟ್ ಸ್ಥಾನಕ್ಕೇರಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಆನಂದ್, ಮನಮೆಚ್ಚಿದ ಹುಡುಗಿ, ರಥಸಪ್ತಮಿ, ಜನುಮದ ಜೋಡಿ ಮುಂತಾದ ಪ್ರೇಮ ಕಥೆಗಳಾಗಲಿ ಮುತ್ತಣ್ಣ, ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ಸಿರಿ, ರಿಷಿ ಮುಂತಾದ ಕೌಟುಂಬಿಕ ಚಿತ್ರವೇ ಆಗಲಿ ಜೋಗಿ, ದಿ ವಿಲನ್ ಇಂತಹ ಕಮರ್ಷಿಯಲ್ ಪಿಕ್ಚರ್ಸ್ ಆಗಲಿ ಶಿವಣ್ಣ ಮುಟ್ಟಿದ್ದೆಲ್ಲ ಚಿನ್ನ.
ಯಾವ ಪಾತ್ರಕ್ಕೆ ಹಾಕಿದರು ಅದರಂತೆಯೇ ಕನ್ವರ್ಟ್ ಆಗಿಬಿಡುವ ಶಿವಣ್ಣನ ನಟನ ಕೌಶಲ್ಯಕ್ಕೆ ಅವರು ಇಂದು 125 ಸಿನಿಮಾಗಳನ್ನು ಪೂರೈಸಿರುವುದೇ ಸಾಕ್ಷಿ. ಕಳೆದ ಹಲವು ದಶಕಗಳಿಂದಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಿಯೇ ಉಳಿದಿರುವ ಏಕೈಕ ನಟ ಶಿವರಾಜ್ ಕುಮಾರ್ ಅವರು. 1985 ರಲ್ಲಿ ಬಿಡುಗಡೆ ಆದ ಆನಂದ್ ಸಿನಿಮಾದಿಂದ 2022 ರಲ್ಲಿ ಬಿಡುಗಡೆಯಾದ ವೇದ ಸಿನಿಮಾದ ತನಕ ಹೀರೋ ಆಗಿಯೇ ಇವರು ಮಿಂಚಿದ್ದಾರೆ. ಈಗ ವೇದ ಸಿನಿಮಾ 50 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ (Veda succes meet). ಕನ್ನಡದಲ್ಲಿ ಕಾಂತರಾ ಸಿನಿಮಾದ ನಂತರ ವೇದ ಸಿನಿಮಾ ತನ್ನ 50ನೇ ದಿನದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ.
ಈ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಬೆಳ್ಳಿ ಪದಕವನ್ನು ಸ್ಮರಣಿಕೆಯಾಗಿ ಕೊಡಲಾಗಿದೆ. ನಂತರ ಈ ಚಿತ್ರದ ಯಶಸ್ಸಿನ ಬಗ್ಗೆ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿ ತಮ್ಮ ಈ ಹಿಂದಿನ ಚಿತ್ರಗಳು ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿನ ಜರ್ನಿ ಹಾಗೂ ಮುಂದಿನ ಸಿನಿಮಾಗಳ ಅಪ್ಡೇಟ್ಸ್ ಬಗ್ಗೆ ಕೂಡ ಸುಳಿವು ಕೊಟ್ಟಿದ್ದಾರೆ. ಎಲ್ಲರೂ 125 ಚಿತ್ರ ಆಯ್ತು ಶಿವಣ್ಣ ಇನ್ನೇನು 25 ಚಿತ್ರ ನಟಿಸಿ ಸುಮ್ಮನಾಗುತ್ತಾರೆ ಎಂದೇ ಭಾವಿಸಿದ್ದರು. ಆದರೆ ಶಿವಣ್ಣ ನಾನು ಇನ್ನು 25 ವರ್ಷ ಸಿನಿಮಾ ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ಖುಷಿ ಪಡಿಸಿದ್ದಾರೆ. ಜೊತೆಗೆ ಆನಂದ್ ಚಿತ್ರದಿಂದ ಇಲ್ಲಿಯ ವೇದ ಚಿತ್ರದ ತನಕ ತನ್ನನ್ನು ಪೋಷಿಸಿಕೊಂಡ ಬಂದ ಕನ್ನಡ ಕುಲ ಕೋಟಿಗೆ ಧನ್ಯವಾದ ಹೇಳಿದ್ದಾರೆ.
ಆನಂದ್ ಚಿತ್ರ ನನ್ನ ತಾಯಿಯ ಪ್ರೊಡಕ್ಷನ್ ಆಗಿತ್ತು ಅದು ನನ್ನ ಮೊದಲನೇ ಚಿತ್ರ. ಇಂದು ನನ್ನ ಹೆಂಡತಿ ನಿರ್ಮಾಣದಲ್ಲಿ 125 ಚಿತ್ರ ಆಗುತ್ತಿದೆ ಇವರಿಬ್ಬರೂ ಕೂಡ ನನ್ನ ಎರಡು ಕಣ್ಣುಗಳು. ಇನ್ನು ಸಹ ನನ್ನ ಮೇಲೆ ನಂಬಿಕೆ ಇಟ್ಟು ನಿರ್ಮಾಪಕರುಗಳು ಬರುತ್ತಿದ್ದಾರೆ, ನಿರ್ದೇಶಕರು ನನಗಾಗಿ ಕಥೆಗಳನ್ನು ರೆಡಿ ಮಾಡುತ್ತಿದ್ದಾರೆ ಹಾಗಾಗಿ ನಿಮ್ಮೆಲ್ಲರ ಆರೈಕೆಯಿಂದ ಇನ್ನು ಹಲವು ಕಾಲ ಚಿತ್ರರಂಗದಲ್ಲಿ ಇರುತ್ತೇನೆ ನಾನು ನಿವೃತ್ತಿ ಆಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೇದ ಸಿನಿಮಾದಲ್ಲಿ ನಟಿಸಿರುವ ಮಹಿಳಾ ಪಾತ್ರದಾರಿಗಳಾದ ಗಾನವಿ ಲಕ್ಷ್ಮಣ್, ಅಧಿತಿ ಸಾಗರ್, ಶ್ವೇತ ಚಂಗಪ್ಪ, ಉಮಾಶ್ರೀ ಮುಂತಾದವರ ನಟನಾ ಚಾತುರ್ಯವನ್ನು ಶ್ಲಾಘಿಸಿದ ಶಿವಣ್ಣ ಎಲ್ಲವನ್ನು ನಾನೇ ಮಾಡಿದೆ ಎಂದರೆ ಅದು ತಪ್ಪಾಗುತ್ತದೆ. ಈ ಸಿನಿಮಾದಲ್ಲಿ ಮಹಿಳಾ ಪಾತ್ರಗಳು ಕೂಡ ನನಗಿಂತ ಅದ್ಭುತವಾಗಿ ನಟಿಸಿದ್ದಾರೆ ಅವರಿಂದ ಚಿತ್ರ ಶೈನ್ ಆಗಿದೆ ಎಂದು ಅವರನ್ನು ಹೊಗಳಿದ್ದಾರೆ. ಜೊತೆಗೆ ಆ ದಿನಕ್ಕೆ ಸರಿಯಾಗಿ ಶಿವಣ್ಣ ಇಂಡಸ್ಟ್ರಿಗೆ ಎಂಟ್ರಿ ಆಗಿ 37 ವರ್ಷಗಳ ಆಗಿತ್ತು. ಟ್ವಿಟರ್ ಅಲ್ಲಿ ಇಂದಿಗೆ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 37 ವರ್ಷ ಆಗಿದೆ ಇನ್ನು ಸಹ ಆನಂದ್ ಚಿತ್ರದ ಮೊದಲ ಸೀನ್ ಕಣ್ಣಿಗೆ ಕಟ್ಟಿದ ರೀತಿ ಇದೆ. ಆನಂದ್ ಇಂದ ವೇದವರೆಗೆ ನನಗೆ ಬೆಂಬಲ ನೀಡಿದ ಎಲ್ಲರಿಗೂ ಕೂಡ ಮನಪೂರ್ವಕ ಧನ್ಯವಾದಗಳು ಎಂದು ಟ್ವೀಟ್ (tweet) ಮಾಡಿದ್ದಾರೆ.