ಸಿನಿಮಾ ಶೂಟಿಂಗ್ ಸ್ಪಾಟ್ ಗಳಲ್ಲಿ ಕ್ಯಾರವನ್ ಎನ್ನುವ ಪದವನ್ನು ಹೆಚ್ಚು ಕೇಳುತ್ತೇವೆ. ಹೀಗಂದರೆ ಏನು ಎನ್ನುವುದು ಬಹುತೇಕರಿಗೆ ಗೊತ್ತಿದೆ, ಕೆಲವರಿಗೆ ಹೊಸದೆನಿಸಬಹುದು. ಕ್ಯಾರವನ್ ಎನ್ನುವುದು ಒಂದು ಮನೆಯ ಬೆಡ್ರೂಮ್ ರೀತಿ ಅನುಭವ ಕೊಡುವ ಎಲ್ಲ ರೀತಿಯ ಅನುಕೂಲವನ್ನು ಹೊಂದಿರುವ ವಾಹನವಾಗಿದೆ. ಕ್ಯಾರವನ್ ಒಳಗೆ ಎಂಟ್ರಿ ಕೊಟ್ಟರೆ ಅದು ವಾಹನ ಎಂದು ಅನಿಸುವುದಿಲ್ಲ ಮನೆಯ ರೀತಿ ಎಲ್ಲ ವ್ಯವಸ್ಥೆಯು ಕೂಡ ಅಲ್ಲಿರುತ್ತದೆ.
ಸಾಮಾನ್ಯವಾಗಿ ಸಿನಿಮಾ ಹೀರೋಗಳು, ಹೀರೋಯಿನ್ ಗಳು ಪ್ರೊಡ್ಯೂಸರ್, ಡೈರೆಕ್ಟರ್ ಇವರೆಲ್ಲರೂ ಕ್ಯಾರವನ್ ಗಳನ್ನು ಬಳಸುತ್ತಾರೆ. ಇದರಲ್ಲಿ ನಟ ಅಜಯ್ ರಾವ್ ಹಾಗೂ ದೇವರಾಜ್ ಅವರು ಬಳಸುವ ಕ್ಯಾರವನ್ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಹಲವಾರು ಸ್ಟಾರ್ ಹೀರೋಗಳು ಸ್ವಂತವಾದ ಕ್ಯಾರವನ್ ಹೊಂದಿರುತ್ತದೆ ಅದನ್ನು ತಮ್ಮಿಷ್ಟದಂತೆ ಡಿಸೈನ್ ಮಾಡಿಸಿಕೊಂಡಿರುತ್ತಾರೆ.
ಒಂದೇ ಒಂದು ಕ್ಯಾರವನ್ ಅಲ್ಲದೇ ಎರಡು ಮೂರು ಹೊಂದಿರುವವರ ಸಂಖ್ಯೆಯು ಇದೆ ಮತ್ತು ಈ ಕ್ಯಾರಾವನ್ ಕೂಡ ಒಂದು ಬಿಸಿನೆಸ್ ಆಗಿದೆ. ಕಾರ್ ಗಳನ್ನು ಬಾಡಿಗೆ ಕೊಡುವಂತೆ ಕ್ಯಾರವನ್ ಕೂಡ ಬಾಡಿಗೆಗೆ ಕೊಡುತ್ತಾರೆ. ನಟ ಶಿವರಾಜ್ ಕುಮಾರ್ ಅವರ ಕಾರ್ ಡ್ರೈವರ್ ಆಗಿರುವ ಗೋವಿಂದ್ ಎನ್ನುವವರು ಕೂಡ ಈ ರೀತಿ ಕ್ಯಾರಲವನ್ ಗಳನ್ನು ಬಾಡಿಗೆಗೆ ಕೊಡುವ ಬಿಸಿನೆಸ್ ಹೊಂದಿದ್ದಾರೆ.
ಅವರ ಕ್ಯಾರವನ್ ನ್ನು ನಟ ಅಜಯ್ ಕೃಷ್ಣ ಹಾಗೂ ದೇವರಾಜ್ ಅವರು ಹೊಂದಿದಂತೆ ಅನೇಕ ಸೆಲೆಬ್ರೆಟಿಗಳು ಬಳಸುತ್ತಾರೆ. ಬಳಸಿದವರೆಲ್ಲರೂ ಕೂಡ ಮನೆಯಲ್ಲಿ ಇದ್ದ ರೀತಿ ಅನುಭವ ಕೊಟ್ಟಿದ್ದು ಎಂದು ಅವಾರ್ಡ್ ಕೊಟ್ಟು ಹೋಗುತ್ತಾರೆ ಹಾಗಾದರೆ ಈ ಸ್ಪೆಷಲ್ ಕ್ಯಾರವನ್ ನಲ್ಲಿ ಏನೆಲ್ಲಾ ಇರುತ್ತದೆ ಗೊತ್ತಾ?
ಗೋವಿಂದ್ ಅವರ ಕ್ಯಾರವನ್ ಗಳಲ್ಲಿ ರೆಸ್ಟ್ ಮಾಡಲು ಸೋಫಾ ಟಿವಿ ದೊಡ್ಡ ದೊಡ್ಡ ಮಿರರ್ ಗಳು ಮೇಕಪ್ ಮ್ಯಾನ್ ಗಳ ಕುಳಿತುಕೊಳ್ಳುವುದಕ್ಕೆ ಚೇರ್ಗಳ ವ್ಯವಸ್ಥೆ ವಾಷ್ ರೂಮ್ ಶವರ್ ಎಸಿ ಓವನ್ ಇತ್ಯಾದಿ ವ್ಯವಸ್ಥೆ ಇದೆ. ಇದರಲ್ಲಿ ಒಂದೇ ಕ್ಯಾರವನ್ ನ್ನು ಡಿವೈಡ್ ಮಾಡಿಕೊಂಡು ಡಬಲ್ ಮಾಡಿಕೊಳ್ಳುವ ಅನುಕೂಲ ಕೂಡ ಇದೆ. ಮಧ್ಯದಲ್ಲಿರುವ ಡೋರ್ ನ್ನು ಲಾಕ್ ಮಾಡಿಕೊಂಡು ಓನರ್ ತೆಗೆದುಕೊಂಡು ಹೋಗುತ್ತಾರೆ ಮತ್ತು ಅವರೇ ಬಂದು ತೆಗೆಯುವವರೆಗೂ ಅದು ಹಾಗೆ ಇರುತ್ತದೆ.
ಹಾಗಾಗಿ ಬಜೆಟ್ ಕಡಿಮೆ ಇರುವವರು ಕೂಡ ಇದನ್ನು ಬಾಡಿಗೆಗೆ ಪಡೆಯಬಹುದು. ಟಿವಿ, ವಾಶ್ ರೂಂ ಸಮೇತ ಎಲ್ಲದಕ್ಕೂ ಕೂಡ ಪ್ರತ್ಯೇಕವಾಗಿ ಎರಡು ಕಡೆಗೂ ವ್ಯವಸ್ಥೆ ಇರುತ್ತದೆ. ಪೂರ್ತಿ ಒಬ್ಬರಿಗೆ ಬೇಕು ಎಂದರೆ ಅದಕ್ಕೂ ಕೂಡ ವ್ಯವಸ್ಥೆ ಇದೆ ಹೊರಗಿನಿಂದ ಒಂದು ಡೋರ್ ಕ್ಲೋಸ್ ಮಾಡಿ ಮಧ್ಯದ ದೂರ ಓಪನ್ ಮಾಡಿ ಬಿಡುತ್ತಾರೆ ಆಗ ಪೂರ್ತಿ ದೊಡ್ಡದಾದ ಒಂದೇ ಬೆಡ್ರೂಮ್ ರೀತಿ ಕಾಣುತ್ತದೆ.
ನಡೆದಾಡುವ ಫೈವ್ ಸ್ಟಾರ್ ಹೋಟೆಲ್ ಎನ್ನಬಹುದು ಅಷ್ಟು ಗ್ರಾಂಡ್ ಆಗಿ ಇದನ್ನು ಅಷ್ಟೇ ಕಷ್ಟಪಟ್ಟು ಮೈನ್ಟೈನ್ ಮಾಡುತ್ತಾರೆ. ದಿನದಲ್ಲಿ ಮೂರು ಬಾರಿ ಇದನ್ನು ಕ್ಲೀನ್ ಮಾಡಿಸುತ್ತಾರೆ. ಪ್ರತಿದಿನವೂ ಕೂಡ ಪಿಲ್ಲೋ ಕವರ್, ಬೆಡ್ ಕವರ್ ಇತ್ಯಾದಿಗಳನ್ನು ತೆಗೆದು ಹೊಸದು ಹಾಕುತ್ತಾರೆ. ಹೀಗಾಗಿ ಒಂದು ಬಾರಿ ಈ ಕ್ಯಾರವನ್ ಬಳಸಿದವರು ಮತ್ತೆ ಇವರನ್ನೇ ಬಾಡಿಗೆಗೆ ಕೇಳುವುದು ಹೆಚ್ಚು ಎನ್ನುವ ಉದಾಹರಣೆಯನ್ನು ಕೂಡ ಓನರ್ ಕೊಡುತ್ತಾರೆ.
ಹೊರಗಿಂದ ನೋಡುವವರಿಗೆ ಮಾತ್ರ ಕ್ಯಾರವನ್ ಒಳಗೆ ಇರುವವರಿಗೆ ಹೊರಗೆ ಬರುವವರೆಗೂ ಕೂಡ ತಾವೊಂದು ವೆಹಿಕಲ್ ನಲ್ಲಿ ಇದ್ದಾರೆ ಎನ್ನುವುದೇ ಗೊತ್ತಾಗುವುದಿಲ್ಲ, ಅಷ್ಟು ಚೆನ್ನಾಗಿ ಇದೆ. ಈ ಕ್ಯಾರವನ್ ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.