ಕರ್ನಾಟಕ ಜನರ ನೆಚ್ಚಿನ ಯುವ ರೈತ ವರ್ತೂರು ಸಂತೋಷ್ (Varthuru Santhosh) ರವರು ಬಿಗ್ ಬಾಸ್ (Bigboss contestent arrest) ಮನೆಗೆ ಎಂಟ್ರಿ ಕೊಟ್ಟಾಗ ಇಡೀ ಕರ್ನಾಟಕದ ಒಬ್ಬ ಕರೆಕ್ಟ್ ಕ್ಯಾಂಡಿಡೇಟ್ ಸೆಲೆಕ್ಟ್ ಮಾಡಿದ್ದಾರೆ ಎಂದು ಹೊಗಳಿತ್ತು. ಆದರೆ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾತ್ರೋರಾತ್ರಿ ಪೋಲಿಸರು ಬಿಗ್ ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ರವರನ್ನು ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆ 1972 (WPA) ಉಲ್ಲಂಘನೆಯಡಿ ಅರೆಸ್ಟ್ ಮಾಡಿದ್ದಾರೆ.
ಹುಲಿ ಉಗುರು ಇರುವ ಪೆಂಡೆಂಟ್ (Pendent) ಧರಿಸಿರುವುದೇ ಅಪರಾಧವಾಗಿದ್ದೂ ಇಡೀ ಕರ್ನಾಟಕಕ್ಕೆ ಇದು ಶಾ’ಕ್ ಆಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ವರ್ತೂರು ಸಂತೋಷ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ವಿಷಯ ಎಲ್ಲೆಡೆ ಹಬ್ಬುತ್ತಿದೆ ಮತ್ತು ಸಂತೋಷ್ ಅರೆಸ್ಟ್ ಆಗಿ ಅವರು ಧರಿಸಿರುವುದು ಒರಿಜಿನಲ್ ಹುಲಿ ಉಗುರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದ ಹಿನ್ನಲೆ ಇಂದೇ ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ. ಮತ್ತು ಇದು ನಾನ್ ಬೇಲೇಬಲ್ FIR ಆಗಿದೆ (Non bailable FIR). ಇಷ್ಟಾಗುತ್ತಿದ್ದಂತೆ ಜನರ ಕಣ್ಣು ಮತ್ತ್ಯಾರೆಲ್ಲ ಈ ರೀತಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆ ಎನ್ನುವತ್ತ ಹೋಗಿದೆ.
ಈ ನಿಟ್ಟಿನಲ್ಲಿ ಸೆಲೆಬ್ರಿಟಿ ಹೆಚ್ಚಾಗಿ ನೆನಪಿಗೆ ಬರುತ್ತಾರೆ, ಯಾಕೆಂದರೆ ಅವರ ಅನೇಕ ಫೋಟೋ ಹಾಗೂ ವಿಡಿಯೋಗಳು ಇದಕ್ಕೆ ಸಾಕ್ಷಿ ನೀಡುತ್ತವೆ. ಈ ಹಾದಿಯಲ್ಲಿ ಈಗ ಎಲ್ಲರ ಬೆರಳು ದರ್ಶನ್ (Darshan) ಕಡೆ ತೋರಿಸುತ್ತಿದೆ. ಯಾಕೆಂದರೆ ಡಿ ಬಾಸ್ ಮತ್ತು ಅವರ ಹತ್ತಿರದ ವಲಯದಲ್ಲಿರುವ ಅನೇಕರು ಈ ರೀತಿ ಹುಲಿ ಉಗುರಿನ ಪೆಂಡೆಂಟ್ ಅನ್ನು ಧರಿಸಿದ್ದಾರೆ.
ಅದರಲ್ಲೂ ಅರಣ್ಯ ಇಲಾಖೆಯ ರಾಯಭಾರಿಯಾಗಿ (Forest department ambassador) ದರ್ಶನ್ ಅವರು ಹೀಗೆ ಕಾಣಿಸಿಕೊಂಡಿದ್ದಾರೆ, ಪ್ರಾಣಿ ಪ್ರಿಯರಾಗಿರುವ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಮಿನಿ ಝೂ ಮಾಡಿದ್ದಾರೆ. ಪ್ರಾಣಿಗಳ ಮೇಲೆ ಇಷ್ಟೆಲ್ಲಾ ಪ್ರೀತಿ ಹೊಂದಿರುವ ಇವರು ವನ್ಯಜೀವಿ ಸಂರಕ್ಷಣ ಕಾಯ್ದೆ ಉಲ್ಲಂಘನೆ ಮಾಡಿದ್ದಾರಾ? ಈ ಕಾನೂನಿನ ಬಗ್ಗೆ ಅಂಬಾಸಿಡರ್ ಗೆ ಅರಿವಿಲ್ಲವೇ ಎಂದು ಕೆಲವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ದರ್ಶನ್ ಅವರು ಈ ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ, ಬಹುಶಃ ಅದು ಪ್ಲಾಸ್ಟಿಕ್ ಅಥವಾ ಬೇರೆ ಲೋಹದ್ದಾಗಿರಬೇಕು, ಅಸಲಿ ಹುಲಿ ಉಗುರು ಆಗಿರುವುದಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಆದರೂ ಕೂಡ ಇವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದರೆ ತಾನೆ ಗೊತ್ತಾಗುವುದು, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎನ್ನುವ ಪ್ರಶ್ನೆಗಳು ಕೂಡ ಏಳುತ್ತಿವೆ. ಅಭಿಪ್ರಾಯ ಹೀಗಿರುವಾಗ ದರ್ಶನ್ ಅವರಿಗೂ ಇದು ಮುಳಬಾಗಲಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.
ದರ್ಶನ್ ಮಾತ್ರವಲ್ಲದೇ ರಾಕ್ ಲೈನ್ ವೆಂಕಟೇಶ್ (Producer Rockline Ventakesh) ಅವರು ಕೂಡ ಯಾವಾಗಲೂ ಈ ರೀತಿ ಹುಲಿ ಉಗುರು ಇರುವ ಪೆಂಡೆಂಟ್ ಧರಿಸುತ್ತಾರೆ ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಅವರ ಅನೇಕ ಫೋಟೋಗಳನ್ನು ಕೂಡ ಜನರು ಇವರು ಹುಲಿ ಉಗುರು ಧರಿಸಿದ್ದನ್ನು ಗುರುತಿಸಿದ್ದಾರೆ.
ಹಾಗಾಗಿ ಎಲ್ಲರನ್ನು ಅರೆಸ್ಟ್ ಮಾಡಿ ಎನ್ಕ್ವೇರಿ ಮಾಡಿ ವರ್ತೂರು ಸಂತೋಷ್ ಗೆ ಒಂದು ನ್ಯಾಯ ಉಳಿದವರಿಗೆ ಒಂದು ನ್ಯಾಯ ಆಗಬಾರದು ಮತ್ತು ಸಂತೋಷ್ ಅವರು ಮುಗ್ಧ ಎಂದು ನೋಡಿದರೆ ಗೊತ್ತಾಗುತ್ತದೆ ಎಂದು ಸಂತೋಷ್ ಮನೆಯಿಂದ ಹೊರ ಬಿದ್ದ ಮೇಲೆ ಜನರು ಈ ರೀತಿ ಸೆಲೆಬ್ರಿಟಿಗಳನ್ನು ಉದಾಹರಣೆಸುತ್ತಾ ತಮ್ಮ ಕೋಪವನ್ನು ತೋರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದರಂತೆ ಗಮನ ಹರಿಸುತ್ತಾರೋ ಏನೋ ಕಾದು ನೋಡೋಣ.