ಪ್ರತಿಯೊಬ್ಬರ ಜೀವನದಲ್ಲಿ ಕ.ಷ್ಟ ಎನ್ನುವುದು ಇದ್ದೇ ಇರುತ್ತದೆ ಯಾವುದೇ ಕ.ಷ್ಟ ಇದ್ದರೂ ಗುರು ರಾಯರ ಸ್ಮರಣೆ ಮಾಡುವುದರಿಂದ ಎಲ್ಲ ಕ.ಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಲ್ಲರಿಗೂ ತಿಳಿದಿರುವ ಹಾಗೆ ಶ್ರೀ ಗುರುರಾಯರನ್ನು ನೆನೆಯಲು ಹಲವಾರು ರೀತಿಯಲ್ಲಿ ಮಂತ್ರಗಳು ಇವೆ. ಅವುಗಳಲ್ಲಿ ಪ್ರಮುಖವಾದ ಮಂತ್ರ ಎಂದರೆ ಶ್ರೀ ಗುರು ರಾಘವೇಂದ್ರ ಗಾಯಿತ್ರಿ ಮಂತ್ರ ಇದು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.
ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಐದು ಬಾರಿ ಒಂಬತ್ತು ಬಾರಿ ಸಮಯವಿದ್ದರೆ 21 ಬಾರಿ 1008 ಬಾರಿ ಜಪಿಸಬಹುದ ರಾಘವೇಂದ್ರರ ಗಾಯತ್ರಿ ಮಂತ್ರ ಪಠಿಸಲು ಕೆಲವೊಂದು ನಿಯಮಗಳು ಇವೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಗಾಯತ್ರಿ ಮಂತ್ರವನ್ನು 48 ದಿನಗಳ ಕಾಲ ತುಂಬಾ ಕಟ್ಟುನಿಟ್ಟಾಗಿ ಪಠಸಬೇಕಾಗುತ್ತದೆ.
ಒಂದು ವೇಳೆ ಸತತವಾಗಿ 48 ದಿನಗಳ ಕಾಲ ಸತತವಾಗಿ ಪಠಿಸಲು ಸಾಧ್ಯವಾಗದೇ ಇದ್ದರೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ ರಾಘವೇಂದ್ರ ಸ್ವಾಮಿಗಳ ಗಾಯತ್ರಿ ಮಂತ್ರವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷದ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ಒಳ್ಳೆಯದು ವಿಶೇಷವಾಗಿ ಶಕ್ತಿ ಇರುವ ದಿನಗಳು ಆಗಿರುವುದರಿಂದ ಈ ದಿನಗಳಲ್ಲಿ ಆರಂಭಿಸಿದರೆ ಬಹಳ ಒಳ್ಳೆಯದಾಗುತ್ತದೆ.
ಪ್ರತಿದಿನ 1008 ಬಾರಿ 48 ದಿನಗಳ ಕಾಲ ಸತತವಾಗಿ ಶ್ರೀ ಗುರುರಾಯರ ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಆಪದ್ಬಾಂಧವ ರಾಘವೇಂದ್ರ ಸ್ವಾಮಿಯು ನಿಮಗೆ ಅನುಗ್ರಹವನ್ನು ನೀಡುತ್ತಾರೆ ರಾಘವೇಂದ್ರ ಸ್ವಾಮಿಯ ಗಾಯತ್ರಿ ಮಂತ್ರ ಹೀಗಿದೆ “ಓಂ ವೆಂಕಟನಾಥಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್, ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್”.
ಈ ಮಂತ್ರವನ್ನು ಯಾರು ಗುರುವಾರದ ದಿನ ಸಂಜೆ ಅಥವಾ ಬೆಳಿಗ್ಗೆ ಕನಿಷ್ಠ ಪಕ್ಷ 21 ಬಾರಿ ಪಠಿಸುತ್ತಾ ಬರುತ್ತಾರೋ ಅವರಿಗೆ ರಾಯರು ಕಷ್ಟಗಳನ್ನು ಪರಿಹರಿಸುತ್ತಾನೆ. ಗಾಯತ್ರಿ ಮಂತ್ರವನ್ನು ಪಠಿಸುವಾಗ ಯಾವುದೇ ರೀತಿಯ ಉಚ್ಚಾರಣೆಯಲ್ಲಿ ದೋ.ಷ ಇರಬಾರದು ಮಂತ್ರ ಪಠಣೆ ಮಾಡುವುದರಿಂದ ನಮಗೆ ಸಿಗುವ ಲಾಭ ಏನು ಎಂದು ನೋಡುವುದಾದರೆ.
ಯಾರೆಲ್ಲ ಈ ಮಂತ್ರವನ್ನು 48 ದಿನಗಳವರೆಗೆ ಪಠಿಸುತ್ತಾರೆ ಅವರ ಕನಸಿನಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ ಎಂದು ಭಕ್ತರು ತಮ್ಮ ಸ್ವ ಅನುಭವವನ್ನು ಹೇಳುತ್ತಾರೆ. ಗುರುರಾಯರ ಭಕ್ತರಿಗೆ ಸ್ವಾಮಿಯ ಶಕ್ತಿ ಅರಿವು ಖಂಡಿತ ಆಗುತ್ತದೆ ಯಾವಾಗ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೋ ಅವರ ಕನಸುಗಳೆಲ್ಲ ಹೀಡೇರುತ್ತದೆ ಎಂಬ ನಂಬಿಕೆ ಕೂಡ ಇದೆ.
ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳನ್ನು ಪೂಜಿಸುವರನ್ನು ಹಾಗು ತನ್ನನ್ನು ನಂಬಿ ಬಂದಂತಹ ಭಕ್ತರಿಗೆ ರಾಯರು ಎಂದಿಗೂ ಸಹ ಕೈ ಬಿಟ್ಟಿಲ್ಲ ಅವರ ಕ.ಷ್ಟಗಳು ಏನೇ ಇದ್ದರೂ ಸಹ ಅದರಿಂದ ನಿವಾರಣೆಯನ್ನು ಮಾಡುತ್ತಾರೆ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ನಮಗೆ ಕ.ಷ್ಟ ಬಂದಾಗ ರಾಯರನ್ನು ಮನಸ್ಸಿನಲ್ಲಿ ಒಮ್ಮೆ ನೆನೆಸಿಕೊಂಡರೆ ಸಾಕು ಕ.ಷ್ಟಗಳು ಮಂಜಿನಂತೆ ಕರೆಗೆ ಹೋಗುತ್ತದೆ. ರಾಯರನ್ನು ಪೂಜಿಸಲು ಯಾವುದೇ ರೀತಿಯ ಕಠಿಣ ನಿಯಮಗಳೇನು ಇಲ್ಲ ಶುದ್ಧ ಮನಸ್ಸಿನಿಂದ ರಾಯರನ್ನು ಪೂಜಿಸಿದರೆ ಸಾಕು. ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನೀವು ಸಹ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದಾರೆ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎಂದು ಕಾಮೆಂಟ್ಸ್ ಮೂಲಕ ತಿಳಿಸಿ.