Royal Movie
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು(Darshan) ಕೊ’ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕಾರಣ ಅವರ ಕುಟುಂಬ ಮಾತ್ರವಲ್ಲದೆ ಚಿತ್ರರಂಗದಲ್ಲೂ ಕೂಡ ಒಂದು ರೀತಿಯ . ಮಂಕು ಕವಿದಿತ್ತು. ಇದೀಗ ಬೇಲ್ ಮೇಲೆ ದರ್ಶನ್ ರವರು ಹೊರ ಬಂದಿರುವುದು ಮನೆ ಜನಕ್ಕೆ ಸಮಾಧಾನ ತಂದಿದೆ.
ಅಲ್ಲದೆ ಈ ಬಾರಿ ದರ್ಶನ್ ಕುಟುಂಬದ ಸಂಭ್ರಮ ದುಪ್ಪಟ್ಟು ಆಗಿದೆ ಕಾರಣ ದರ್ಶನ್ ಸಹೋದರ ದಿನಕರ್ ತೂಗುದೀಪ್ ರವರು (Dinakar Thoogudeep) ಬಹು ದಿನಗಳ ನಂತರ ಆಕ್ಷನ್ ಕಟ್ ಹೇಳಿರುವ ರಾಯಲ್ ಸಿನಿಮಾ (Royal) ಕೂಡ ತೆರೆ ಕಂಡಿದೆ. ಜನವರಿ 25ರಂದು ರಿಲೀಸ್ ಆಗಿರುವ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಬುಕ್ ಮೈ ಶೋ ನಲ್ಲಿ ತ್ರಿಬಲ್ ಸ್ಟಾರ್ ರೇಟಿಂಗ್ ಪಡೆದು ಮುನ್ನುಗ್ಗುತ್ತಿದೆ.
ಇದಾಗಿಯೂ ದಿನಕರ್ ಮಾತ್ರ ಬೇ’ಸ’ರ ವ್ಯಕ್ತಪಡಿಸಿದ್ದಾರೆ ದರ್ಶನ್ ಮೇಲಿರುವ ಕೋ’ಪವನ್ನು ಜನರು ನನ್ನ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ ಎನ್ನುವ ಓಪನ್ ಸ್ಟೇಟ್ಮೆಂಟ್ ಕೊಟ್ಟುಬಿಟ್ಟಿದ್ದಾರೆ. ರಾಯಲ್ ಸಿನಿಮಾಕ್ಕೆ ಬಂದಿರುವ ಪ್ರತಿಕ್ರಿಯೆ ಬಗ್ಗೆ ಥಿಯೇಟರ್ ನಲ್ಲಿ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಮೀಡಿಯಾ ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ದಿನಕರ್ ಅವರು ಅದೇ ಫ್ಲೋ ನಲ್ಲಿ ಮಾತನಾಡಿ ಮಾತಿನ ಮಧ್ಯೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
ತುಂಬಾ ಖುಷಿಯಾಗುತ್ತಿದೆ ಜನರು ಫ್ಯಾಮಿಲಿ ಜೊತೆ ಬಂದು ಸಿನಿಮಾ ನೋಡುತ್ತಿದ್ದಾರೆ. ದಿನ ವಿಮರ್ಶೆ ನೋಡುತ್ತಿದ್ದೀನಿ, ಜನರಿಂದ ರಿಪೋರ್ಟ್ ಪಡೆಯುತ್ತಿದ್ದೀನಿ, ಜನರು ಸಿನಿಮಾ ನೋಡಿ ಸೂಪರ್ ಎನ್ನುತ್ತಿದ್ದಾರೆ ಆದರೂ ಬುಕ್ ಮೈ ಶೋನಲ್ಲಿ ಸುಮ್ಮ ಸುಮ್ಮನೆ ಕೆಲವರು ನೆ’ಗೆ’ಟಿ’ವ್ ವಿಮರ್ಶೆ ಹಾಕುತ್ತಿದ್ದಾರೆ, ಸುಮಾರು ಜನ ಒಂದೊಂದೇ ಸಾಲುಗಳನ್ನು ಕೊಡುತ್ತಿದ್ದಾರೆ.
ಬೇಕು ಬೇಕು ಅಂತ ಸೋಲಿಸಲು ತುಂಬಾ ಜನ ಪ್ರಯತ್ನ ಪಡುತ್ತಿದ್ದಾರೆ ಜನರು ಸಪೋರ್ಟ್ ಮಾಡಿದರೆ ಅವರು ಏನೇ ಪ್ರಯತ್ನ ಮಾಡಿದ್ದರೂ ಗೆಲ್ಲಬಹುದು ಅದರ ಜವಾಬ್ದಾರಿ ನಿಮ್ಮದು. ಜನರು ನಮ್ಮನ್ನು ಗೆಲ್ಲಿಸುತ್ತಾರೆ ಅನ್ನೋ ನಂಬಿಕೆ ಇದೆ. ನಮ್ಮ ಸೆಲೆಬ್ರಿಟಿಗಳು ನೀವು ನಮ್ಮನ್ನು ಗೆಲ್ಲಿಸಿ ಕೊಡುತ್ತೀರಿ ಎಂದು ನಂಬಿದ್ದೀನಿ.
ಸಿನಿಮಾ ಫ್ಲಾ’ಫ್ ಮಾಡಲು ತುಂಬಾ ಜನ ಪ್ರಯತ್ನ ಮಾಡುತ್ತಿದ್ದಾರೆ ದರ್ಶನ್ ಮೇಲಿನ ಕೋ’ಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನಿಸುತ್ತದೆ. ಜನರ ಸಪೋರ್ಟ್ ಇದ್ದರೆ ಆನೆ ಬಲ ಇದ್ಹಾಗೆ ಎಂದು ಸಂದರ್ಶನವೊಂದರಲ್ಲಿ ದಿನಕರ್ ಹೇಳಿದ್ದಾರೆ. ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ ಕಿಸ್ ಖ್ಯಾತಿಯ ವಿರಾಟ್ ಹೀರೋ ಆಗಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.
ಅಚ್ಯುತ್ ರಾವ್, ಛಾಯಸಿಂಗ್ ಸೇರಿದಂತೆ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ವಿಶೇಷತೆಗಳಲ್ಲಿ ವಿಶೇಷತೆ ಏನೆಂದರೆ ದಿನಕರ್ ಪುತ್ರ ಸೂರ್ಯ ಬಾಲ ನಟನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ನಾಯಕನ ಬಾಲ್ಯದ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿಮಾ ರಂಗಕ್ಕೆ ಭರ್ಜರಿಎಂಟ್ರಿ ಕೊಟ್ಟಿದ್ದಾರೆ.
ಜೊತೆ ಜೊತೆಯಲಿ, ನವಗ್ರಹ, ಬುಲ್ ಬುಲ್, ಸಾರಥಿ, ಚಕ್ರವರ್ತಿ ಇತ್ಯಾದಿ ಹಿಟ್ ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ದಿನಕರ್ ಡೈರೆಕ್ಷನ್ ಎಂದಿಗೂ ನಿರಾಸೆ ಮೂಡಿಸುವುದಿಲ್ಲ ಹೀಗಾಗಿ ಸಿನಿರಸಿಕರಿಗೆ ತೂಗುದೀಪ ಅವರ ಡೈರೆಕ್ಷನ್ ಎನ್ನುವುದು ಕೂಡ ಸಿನಿಮಾ ಕುರಿತ ಕುತೂಹಲದ ಒಂದು ಅಂಶವಾಗಿದೆ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ನಾವು ಕೂಡ ಹರಸೋಣ.