Rajath
ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಏಳು ವರ್ಷಗಳು ಮುಗಿದಿವೆ. ಈ ನಡುವೆ ಇವರಿಬ್ಬರನ್ನು ಒಟ್ಟು ಮಾಡುವ ಹತ್ತಾರು ಪ್ರಯತ್ನಗಳು ಕೂಡ ನಡೆಯುತ್ತಿದೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗಳ ಕೆಸರೆರಚಾಟದಿಂದ ಅಪಾರ್ಥಗಳು ಕೂಡ ಆಗಿವೆ.
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಕರುನಾಡು ಈ ಇಬ್ಬರು ಕುಚುಕುಗಳು ಮತ್ತೆ ಒಂದಾಗಬೇಕು ತೆರೆ ಮೇಲೆ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ಕಾಣಬೇಕು ಎಂದು ಕಾಯುತ್ತಿದ್ದಾರೆ. ಇದೀಗ ಇದೇ ಪ್ರಯತ್ನದಲ್ಲಿ ಇವರಿಬ್ಬರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಮತ್ತೊಬ್ಬ ಸೆಲೆಬ್ರಿಟಿ ಆಸೆ ಪಟ್ಟಿದ್ದಾರೆ ಮುಂದುವರೆದು ಇವರು ಈ ಬಗ್ಗೆ ಹರಕೆ ಹೊತ್ತಿರುವುದಾಗಿ ಕೂಡ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಖ್ಯಾತಿಯ ರಜತ್ ಯಾರಿಗೆ ಗೊತ್ತಿಲ್ಲ ಹೇಳಿ ರಾಜ ರಾಣಿ ಸೇರಿದಂತೆ ಕೆಲವರು ರಿಯಲ್ ಶೆೋ ಗಳಲ್ಲಿ ಹಾಗೂ ಕನ್ನಡ ಕಿರುತೆರೆ ಧಾರಾವಾಹಿ ಪಾತ್ರಧಾರಿಯಾಗಿ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯವಾಗಿರುವ ರಜತ್ ರವರು ಈ ಬಾರಿ ಸೀಸನ್ 11 ಮೇನ್ ಅಟ್ರಾಕ್ಷನ್ ಆಗಿದ್ದರು.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿದ್ದ ಇವರು ತಮ್ಮ ಲವಲವಿಕೆ, ಮಾತಿನ ಕೌಂಟರ್, ಹಾಡು ಡ್ಯಾನ್ಸ್ ಗಲಾಟೆಗಳ ಮೂಲಕ ಮೂರನೇ ರನ್ನರ್ ಅಪ್ ಆಗಿ ಹೊರಬಿದ್ದರು. ಹೀಗಾಗಿ ಇವರ ನೇರನುಡಿ ಮಾತುಕತೆ, ಕನ್ನಡಿಗರಿಗೆ ಅಚ್ಚು ಮೆಚ್ಚು ಆಗಿದೆ. ಅಲ್ಲದೆ ಸ್ವತಃ ಬಿಗ್ ಬಾಸ್ ಕಂಟೆಸ್ಟೆಂಟ್ ಗಳನ್ನು ತಮ್ಮ ಕುಟುಂಬದಂತೆ ಕಾಣುವ ಸುದೀಪ್ ರಿಗೂ ಕೂಡ ರಜತ್ ರವರು ಬಹಳ ಇಷ್ಟ ಆಗಿದ್ದಾರೆ.
ಇನ್ನು ರಚತ್ ರವರು ಪಕ್ಕ ಡಿ ಬಾಸ್ ಫ್ಯಾನ್ ಏನೇ ಆದರೂ ದರ್ಶನ್ ರವರು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತೆ ಬೌನ್ಸ್ಬ್ಯಾಕ್ ಆಗಿ ವಾಪಸ್ ಬರುತ್ತಾರೆ ಅವರ ಈ ಗುಣವೇ ನನಗೆ ಅಚ್ಚು ಮೆಚ್ಚು ನಾನು ಯಾವಾಗಲೂ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡೇ ಬಂದಿದ್ದಾರೆ. ದರ್ಶನ್ ಅವರ ಆಪ್ತ ವಲಯದ ಕಲಾವಿದರಲ್ಲಿ ರಜತ್ ಕೂಡ ಒಬ್ಬರು ಹೀಗಾಗಿ ಇವರ ರೆಸಾರ್ಟ್ ಓಪನಿಂಗ್ ಕೂಡ ದರ್ಶನ್ ಅವರಿಂದ ನೆರವೇರಿತ್ತು.
ಹೀಗಾಗಿ ಅಭಿಮಾನಿಯಾಗಿ ಆಪ್ತರಾಗಿ ರಜತ್ ಅವರಿಗೆ ದರ್ಶನ್ ಅವರ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೀತಿ ಇದೆ ಮತ್ತು ಈಗ ಬಿಗ್ ಬಾಸ್ ಕಾರ್ಯಕ್ರಮದಿಂದ ಸುದೀಪ್ ಅವರ ಬಗ್ಗೆ ಮೆಚ್ಚುಗೆ ಕೂಡ ಹೆಚ್ಚಾಗಿದೆ ಹೀಗಾಗಿ ತಮ್ಮ ಮನದಾಳದ ಮಾತನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಿಂದ ಆಚೆ ಬಂದ ಮೇಲೆ ಪಾಲ್ಗೊಂಡಿದ್ದ ಸಂದರ್ಶನ ಒಂದರಲ್ಲಿ ಇವರಿಬ್ಬರ ಬಗ್ಗೆ ಪ್ರಶ್ನೆ ಎದುರಾದಾಗ ರಜತ್ ಹೀಗೆ ಹೇಳಿದ್ದಾರೆ. ನಾನು ಅವರಿಬ್ಬರ ಬಗ್ಗೆ ಮಾತನಾಡುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿಲ್ಲ ಆ ರೀತಿ ಬೆಳೆದರು ಕೂಡ ನಾನು ಮಾತನಾಡುವುದಿಲ್ಲ.
ನನಗೆ ಈ ಇಬ್ಬರು ಸ್ಟಾರ್ ಹೀರೋಗಳು ಕೂಡ ಬಹಳ ಇಷ್ಟ ಇವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದು ಇಬ್ಬರು ಒಂದಾಗಬೇಕು ಎಂದು ಆಸೆಪಡುವವರಲ್ಲಿ ನಾನು ಕೂಡ ಒಬ್ಬ ಆ ರೀತಿ ಏನಾದರೂ ಆದರೆ ಅಂದೇ ನಾನು ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬರುತ್ತೇನೆ. ಆ ದೇವರ ದಯೆಯಿಂದ ಆದಷ್ಟು ಬೇಗ ಈ ಕಾರ್ಯ ಆಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.