Chaithra Vasudevan
ಚೈತ್ರ ವಾಸುದೇವನ್ (Chaithra Vasudevan) ಎಂದ.ತಕ್ಷಣ ನಮ್ಮ ಕಣ್ಣಿಗೆ ಕಟ್ಟುವುದು ಅವರ ಲವಲವಿಕೆ ಮತ್ತು ನಗುಮುಖ.. ಕಳೆದ ಒಂದು ದಶಕದಿಂದ ಕನ್ನಡ ಕಿರುತೆರೆಯಲ್ಲಿ ಬಹಳ ಪರಿಚಿತ ಮುಖವಾಗಿರುವ ಚೈತ್ರ ವಾಸುದೇವನ್ ರವರು ಉದಯ ಮ್ಯೂಸಿಕ್ ನಿಂದ ತಮ್ಮ ಆಂಕರಿಂಗ್ ಜರ್ನಿಲಶುರು ಮಾಡಿ ಈಗ ಕನ್ನಡದ ಎಲ್ಲಾ ಚಾನೆಲ್ ಗಳ ಯಶಸ್ವಿ ರಿಯಾಲಿಟಿ ಶೋನ ಬೇಡಿಕೆಯ ನಿರೂಪಕಿಯಾಗಿದ್ದಾರೆ.
ಅಲ್ಲದೆ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕೂಡ ಕಾರ್ಯಕ್ರಮ ನಿರೂಪಣೆ ಮಾಡಿಕೊಡುವ ಇವರ ನಿರೂಪಣಾ ಶೈಲಿಗೆ ಮಾರುಹೋಗದವರೇ ಇಲ್ಲ. ಹೀಗೆ ಇವೆಂಟ್ ಮಾಡುತ್ತಾ ತಮ್ಮದೇ ಆದ ಇವೆಂಟ್ ಕಂಪನಿಯನ್ನು ಕೂಡ ಹುಟ್ಟು ಹಾಕಿ, ಸೋಶಿಯಲ್ ಮೀಡಿಯಾದಲ್ಲೂ ಕೂಡ ಚಾನೆಲ್ ಗಳನ್ನು ಹೊಂದಿರುವ ಚೈತ್ರ ವಾಸುದೇವನ್ ಅವರು ಬದುಕುತ್ತಿರುವ ರೀತಿ ನಿಜಕ್ಕೂ ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಪೂರ್ತಿ ನೀಡುವಂತದ್ದು.
ಚೈತ್ರ ಅವರೇ ಹೇಳಿಕೊಂಡಂತೆ ಅವರ ಬದುಕನ್ನು ಅವರು ನಿರೀಕ್ಷೆಪಟಿದ್ದಕ್ಕಿಂತ ಹೆಚ್ಚಾಗಿ ಕಟ್ಟಿಕೊಂಡಿದ್ದಾರೆ. ಚಿಕ್ಕದೊಂದು ಟೂ ವೀಲರ್ ಕೊಂಡುಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಇವರು ಇಂದು ಸ್ವಂತ ದುಡಿಮೆಯಿಂದ ದುಬಾರಿ ಬೆಲೆಯ ಕಾರ್ ಕೊಳ್ಳುವಷ್ಟು ಶ್ರೀಮಂತೆಯಾಗಿದ್ದಾರೆ, ತಮ್ಮ ಹೆಸರಿನಲ್ಲಿ ಫ್ಲಾಟ್ ಹಾಗೂ ಮನೆಗಳನ್ನು ಹೊಂದಿದ್ದಾರೆ.
ಹಾಗೆಯೇ ಕೈ ತುಂಬಾ ಕೆಲಸ ತಮ್ಮದೇ ಆದ ಬಿಸಿನೆಸ್ ಗಳು ಎಲ್ಲವನ್ನು ನೆರವೇರಿಸಿಕೊಂಡು ಬದುಕನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೆಣ್ಣು ಮಕ್ಕಳಿಗೆ ರೋಲ್ ಮಾಡಲ್ ಆಗಿರುವ ಇವರ ವೈಯಕ್ತಿಕ ಜೀವನ ಮಾತ್ರ ಚರ್ಚಾ ವಿಷಯ ತಮ್ಮ ಡಿಗ್ರಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ 2017 ರಲ್ಲಿ ಕುಟುಂಬದ ಇಚ್ಛೆ ಪ್ರಕಾರ ಸತ್ಯ ನಾಯ್ಡು ಅವರನ್ನು ವಿವಾಹವಾಗಿದ್ದ ಚೈತಾ ವಾಸುದೇವನ್ ಅವರ ಬದುಕಿನಲ್ಲಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.
ಹಾಗೆ ಬಿಗ್ ಬಾಸ್ ಸೀಸನ್ 7ರ ಕಂಟೆಸ್ಟೆಂಟ್ ಆಗಿದ್ದ ಇವರು ದೊಡ್ಮನೆಯ ಒಂದು ಸಂದರ್ಭದಲ್ಲಿ ನನಗೆ ಮದುವೆ ಆಗಿದೆ ಎಂದು ಹೇಳಿಕೊಳ್ಳುವವರೆಗೆ ಅನೇಕರಿಗೆ ಇವರಿಗೆ ಮದುವೆ ವಿಚಾರವೇ ಗೊತ್ತಿರಲಿಲ್ಲ ಎನ್ನುವುದು ನಿಜ. ಆದರೆ ತಾನು ವೈವಾಹಿಕ ಜೀವನದಲ್ಲಿ ಚೆನ್ನಾಗಿದ್ದೇನೆ ಎನ್ನುವುದನ್ನೇ ತೋರಿಸಿಕೊಂಡು ನಿಭಾಯಿಸಲು ಪ್ರಯತ್ನಪಟ್ಟಿದ್ದ ಚೈತ್ರ ಜನರಿಗೆ ರಿಯಾಲಿಟಿ ತೋರಿಸುವ ಸಂದರ್ಭ ಬಂದೇ ಬಿಟ್ಟಿತು.
ಇದ್ದಕ್ಕಿದ್ದಂತೆ ವಿ’ಚ್ಛೇ’ದ’ನದ ಬಗ್ಗೆ ಘೋಷಣೆ ಮಾಡಿಕೊಂಡ ಅವರು ಆ ಸಂಬಂಧದಿಂದ ಸಾಕಷ್ಟು ಮಾನಸಿಕವಾಗಿ ನೊಂದಿರುವ ಬಗ್ಗೆ ವಿವರಣೆ ಕೂಡ ಕೊಟ್ಟಿದ್ದರು. ಈಗ ಇದೆಲ್ಲ ಮುಗಿದ ವಿಚಾರವಾಗಿದ್ದು, ಹೊಸ ಸಂಗತಿ ಏನೆಂದರೆ ಚೈತ ರ ಮುಂದಿನ ಬದುಕು ಹೇಗೆ ಎಂಬುದು. ಈಗವರು ತಮ್ಮ ಎರಡನೇ ಮದುವೆ ಬಗ್ಗೆ ಕೂಡ ಹೇಳುತ್ತಿದ್ದಾರೆ. ತಮ್ಮ instagram ಖಾತೆಯಲ್ಲಿ ಪ್ಯಾರಿಸ್ ಟ್ರಿಪ್ ಫೋಟೋ ವಿಡಿಯೋ ಹಂಚಿಕೊಳ್ಳುವಾಗ ರಿಂಗ್ ಎಕ್ಸ್ಚೇಂಜ್ ಮಾಡಿಕೊಂಡಿರುವ ಫೋಟೋ ಹಾಕಿ ಹಾರ್ಟ್ ಸಿಂಬಲ್ ತೋರಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ಹುಡುಗ ಯಾರು ಎನ್ನುವುದನ್ನು ಮಾತ್ರ ರಿವೀಲ್ ಮಾಡಿಲ್ಲ. ಬಲವಾದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರವಾಗಿ ಇದೇ ಮಾರ್ಚ್ ತಿಂಗಳಲ್ಲಿ ಅವರ ಮದುವೆ ಕೂಡ ನಡೆಯಲಿದೆಯಂತೆ. ಇನ್ನು ಇವರ ಪೋಸ್ಟ್ ಗೆ ಅಭಿಮಾನಿಗಳು ಭರಪೂರ ವಿಶಸ್ ಹೊಳೆ ಹರಿಸಿದ್ದಾರೆ. ಸೆಲೆಬ್ರಿಟಿಗಳಾದ ದಿವ್ಯ ಉರುಡುಗ, ಕಾವ್ಯ ಶೆಟ್ಟಿ, ಕಾವ್ಯ ಗೌಡ, ಶ್ವೇತ ಚೆಂಗಪ್ಪ ಅವರು ಕೂಡ ಶುಭ ಹಾರೈಸಿದ್ದಾರೆ.