Thursday, September 28, 2023
Home Entertainment ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

ರಿಷಬ್ ಶೆಟ್ಟಿ ಮಗಳು ರಾಧ್ಯಾ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತ.?

 

ಮಾರ್ಚ್ ನಾಲ್ಕರಂದು ರಿಷಭ್ ಶೆಟ್ಟಿ ಮಗಳಿಗೆ ವರ್ಷ ತುಂಬಿದೆ. ಅದೇ ಸಂತೋಷದಲ್ಲಿ ಕುಟುಂಬವು ಮಗಳ ಫೋಟೋಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಳಿ ಬಣ್ಣದ ಬಟ್ಟೆ ಹಾಗೂ ಸುತ್ತಲೂ ಬಿಳಿ ಬಣ್ಣದ ಸೆಟ್ ನಡುವೆ ರಿಷಬ್ ಶೆಟ್ಟಿ ಮುದ್ದು ಮಗಳು ದೇವಲೋಕದಿಂದ ಇಳಿದ ಕಿನ್ನರಿಯಂತೆ ಕಾಣುತ್ತಿದ್ದರು. ಇದೇ ಸಂಭ್ರಮದಲ್ಲಿ ಮಗಳಿಗೆ ರಾಧ್ಯ ಎಂದು ಪೋಷಕರು ನಾಮಕರಣ ಮಾಡುವುದಾಗಿ ಹೆಸರು ಕೂಡ ಫಿಕ್ಸ್ ಮಾಡಿಕೊಂಡಿರುವುದನ್ನು ಹಂಚಿಕೊಂಡಿದ್ದಾರೆ.

ಮತ್ತೊಮ್ಮೆ ಸ್ಯಾಂಡಲ್ವುಡ್ನ ಎಲ್ಲಾ ಬಾಂಧವರಿಗಾಗಿ ಅದ್ದೂರಿಯಾಗಿ ಬರ್ತಡೇ ಪಾರ್ಟಿಯನ್ನು ಅರೆಂಜ್ ಮಾಡಿ ಎಲ್ಲರನ್ನು ಆಹ್ವಾನಿಸಿದ್ದಾರೆ. ಇವರ ಆಹ್ವಾನಕ್ಕೆ ಓಗೊಟ್ಟ ಕರುನಾಡ ತಾರೆಗಳು ಕಾಂತಾರ ನಾಯಕನ ಮಗಳಿಗೆ ಶುಭ ಹಾರೈಸಲು ಬಂದಿದ್ದಾರೆ. ಬಹಳ ಅದ್ದೂರಿಯಾಗಿ ರಿಷಭ್ ಶೆಟ್ಟಿ ಅವರ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಬಂದಿದ್ದ ಎಲ್ಲಾ ಅತಿಥಿಗಳ ಮಧ್ಯೆ ಡಿ ಬಾಸ್ ಮಿಂಚುತ್ತಿದ್ದರು.

ಕಾರ್ಯಕ್ರಮಕ್ಕೆ ಬಂದ ಕೂಡಲೇ ವೇದಿಕೆ ಹತ್ತಿ ರಿಷಬ್ ಶೆಟ್ಟಿ ಅವರ ಮಗಳನ್ನು ಕೈಗೆ ಎತ್ತುಕೊಂಡು ಮುದ್ದು ಮಾಡಿ ಅವಳಿಗೆ ಆಶೀರ್ವಾದ ಸಹ ಮಾಡಿ ಗಿಫ್ಟ್ ಒಂದನ್ನು ಕೊಟ್ಟು ರಿಷಭ್ ದಂಪತಿಗಳ ಜೊತೆ ಮಾತನಾಡುತ್ತಿದ್ದರು. ದರ್ಶನ್ ಅವರ ಜೊತೆ ದರ್ಶನ್ ಅವರಿಗೆ ಬಹಳ ಆತ್ಮೀಯರಾದ ಜೂನಿಯರ್ ರೆಬಲ್ ಸ್ಟಾರ್ ಎಂದು ಕರೆಸಿಕೊಂಡಿರುವ ಅಭಿಷೇಕ್ ಅಂಬರೀಶ್ ಅವರು ಕೂಡ ಇದ್ದರು ಮತ್ತು ಜಮೀರ್ ಅಹ್ಮದ್ ಅವರ ಪುತ್ರ ಬನಾರಸ್ ನಾಯಕ ಝೈಂದ್ ಖಾನ್ ಕೂಡ ವೇದಿಕೆ ಮೇಲೆ ದರ್ಶನ ಅವರ ಜೊತೆ ಕಾಣಿಸಿಕೊಂಡಿದ್ದು.

ರಿಷಬ್ ಆತ್ಮೀಯ ಗೆಳೆಯ ರಿಷಬ್ ಶೆಟ್ಟಿ ಕೂಡ ಸೇರಿ ಎಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ದರ್ಶನ್ ಮೇಲೆ ಸಾಕಷ್ಟು ಆರೋಪಗಳು ಬರುತ್ತಿತ್ತು. ಅವರು ಇನ್ನೊಬ್ಬ ನಾಯಕನ ಏಳಿಗೆಯನ್ನು ಸಹಿಸುವುದಿಲ್ಲ, ಅವರು ಇಂಡಸ್ಟ್ರಿಯ ಗುಂಪನ್ನು ಸೇರುವುದಿಲ್ಲ, ಅವರದ್ದೇ ಆದ ಸ್ನೇಹ ಬಳಗವಿದೆ.

ಆ ಸರ್ಕಲ್ ಬಿಟ್ಟು ಬೌಂಡರಿಯಿಂದ ಆಚೆ ಬರುವುದಿಲ್ಲ, ಕಾಂತರಾ ಸಿನಿಮಾಗೆ ಅವರು ರಿವ್ಯೂ ಕೊಟ್ಟಿಲ್ಲ ಅವರಿಗೆ ಕಾಂತರಾದ ಸಕ್ಸಸ್ ಮೇಲೆ ಹೊಟ್ಟೆಕಿಚ್ಚು ಆಗಿದೆ ಹೀಗೆ ಸಾಲು ಸಾಲು ಸುಳ್ಳು ಆರೋಪಗಳನ್ನು ದರ್ಶನ್ ಮೇಲೆ ಹೊರಿಸಲಾಗುತ್ತಿತ್ತು. ಆದರೆ ದರ್ಶನ್ ನಿಜಕ್ಕೂ ಒಬ್ಬ ಸಹೃದಯವಂತ, ವೈಯಕ್ತಿಕವಾದ ವಿವಾದಗಳು ಏನೇ ಇದ್ದರೂ ಕಷ್ಟಪಟ್ಟು ಬೆಳೆದ ಇನ್ನೊಬ್ಬರ ಸಕ್ಸಸ್ ಕಂಡು ಉರಿದುಕೊಳ್ಳುವಷ್ಟು ಹೀನ ಮನಸ್ಥಿತಿಯವರಂತೂ ಖಂಡಿತ ಅಲ್ಲ.

ಅವರಿಗೆ ಯಾರು ಪ್ರೀತಿ ಕೊಟ್ಟು ಗೌರವ ಕೊಟ್ಟು ಸ್ನೇಹದಿಂದ ಕಾಣುತ್ತರೋ ಅವರಿಗೆ ದುಪ್ಪಟ್ಟಾಗಿ ಅದನ್ನು ವಾಪಸ್ಸು ಕೊಡುತ್ತಾರೆ ದಚ್ಚು. ತನ್ನ ಅಭಿಮಾನಿಗಳ ಕುಟುಂಬದ ಕಾರ್ಯಕ್ರಮಗಳೇ ಆಗಿರಲಿ ಅಥವಾ ಸಿನಿಮಾದ ಇತರ ತಾರೆಗಳ ನಿಶ್ಚಿತಾರ್ಥ, ಮದುವೆ, ಸೀಮಂತ, ಗೃಹಪ್ರವೇಶ ಅಥವಾ ಹುಟ್ಟು ಹಬ್ಬದ ಕಾರ್ಯಕ್ರಮಗಳೇ ಆಗಿರಲಿ ಅವರ ಆತ್ಮೀಯ ಕರೆಗೆ ಗೌರವ ಕೊಟ್ಟು ಆ ಕಾರ್ಯಕ್ರಮದ ಭಾಗವಾಗುತ್ತಾರೆ ದರ್ಶನ್ ಅವರು.

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರು ರಿಷಭ್ ಶೆಟ್ಟಿ ಅವರ ಮಗಳ ಹುಟ್ಟು ಹಬ್ಬದಲ್ಲಿ ಕಾಣಿಸಿಕೊಂಡಿರುವ ಸುದ್ದಿ ಸೆನ್ಸೇಷನಲ್ ಸುದ್ದಿ ಆಗಿ ಸದ್ದು ಮಾಡುತ್ತಿದೆ. ಕೆಲ ಫೋಟೋಗಳು ಹಾಗೂ ವಿಡಿಯೋಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಕುಳಿತುಕೊಂಡು ಮಾತನಾಡುತ್ತಿರುವುದು, ನಗುನಗುತ ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇಂತಹ ಫೋಟೋ ಹಾಗೂ ವಿಡಿಯೋಗಳನ್ನು ಕಂಡು ದರ್ಶನ್ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಇತ್ತೀಚೆಗೆ ಕೆಸಿಸಿ ಅಲ್ಲಿ ಎಲ್ಲಾ ಸ್ಯಾಂಡಲ್ ವುಡ್ ಕಲಾವಿದರು ಒಂದಾಗಿದ್ದರು ಸಹ ದರ್ಶನ್ ಇಲ್ಲ ಎನ್ನುವ ನೋವು ಅವರನ್ನು ಕಾಡುತ್ತಿತ್ತು. ಇಂಡಸ್ಟ್ರಿಯೇ ಅವರನ್ನು ಮೂಲೆ ಗುಂಪು ಮಾಡುತ್ತಿದ್ದೆ ಎಂದು ನೊಂದುಕೊಳ್ಳುತ್ತಿದ್ದರು. ಆದರೆ ದಾಸ ಕೂಡ ಎಲ್ಲರಲ್ಲಿ ಒಬ್ಬರು ಎನ್ನುವುದಕ್ಕೆ ಈ ವಿಡಿಯೋ, ಫೋಟೋಗಳು ಸಾಕ್ಷಿ ಆಗಿದೆ.

ಆದಷ್ಟು ಬೇಗ ನಮ್ಮ ಇಂಡಸ್ಟ್ರಿಯಲ್ಲಿ ನಮ್ಮ ನಮ್ಮವರ ನಡುವೆ ಇರುವ ಸಣ್ಣಪುಟ್ಟ ಬಿರುಕುಗಳು ಹಾಗೂ ಮನಸ್ತಾಪಗಳು ದೂರವಾಗಿ ಎಲ್ಲರೂ ಮತ್ತೊಮ್ಮೆ ಒಗ್ಗಟ್ಟಾಗಿ ಇಂಟರ್ನ್ಯಾಷನಲ್ ಮಟ್ಟದಲ್ಲಿ ಸ್ಯಾಂಡಲ್ವುಡ್ ಮಿಂಚುವುದಕ್ಕೆ ಕಾರಣವಾಗಲಿ ಎನ್ನುವುದಷ್ಟೇ ಕನ್ನಡ ಕುಲ ಕೋಟಿ ಅಭಿಮಾನಿಗಳ ಆಶಯ. ಇನ್ನು ರಿಷಬ್ ಶೆಟ್ಟಿ ಮಗಳಿಗೆ ನಟ ದರ್ಶನ್ ಚಿನ್ನದ ಸರ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

- Advertisment -