ಗಡಿಯಾರವನ್ನು ಸರಿಯಾದ ದಿಕ್ಕಿಗೆ ಹಾಕಿದರೆ ಜೀವನದಲ್ಲಿ ನಮ್ಮ ಟೈಮ್ ಚೆನ್ನಾಗಿರುತ್ತದೆ ಗಡಿಯಾರ ಹಾಕುವ ದಿಕ್ಕು ಕೂಡ ವಾಸ್ತುಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಲ್ಲವಾದರೆ ಅದು ನಿಮ್ಮ ಮನೆಯಲ್ಲಿ ವಾಸ್ತು ದೋ.ಷಗಳನ್ನ ಉಂಟು ಮಾಡಬಹುದು ಇದು ನಿಮ್ಮ ಕುಟುಂಬ ಮತ್ತು ಮನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು
ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವ ಮೂಲಕ ವಾಸ್ತು ದೋ.ಷವನ್ನು ಹೇಗೆ ತಪ್ಪಿಸಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಮನೆಯಲ್ಲಿ ಕೆಲಸ ಮಾಡದೇ ಇರುವಂತಹ ಕೆಟ್ಟು ಹೋದ ಗಡಿಯಾರವನ್ನು ಎಂದಿಗೂ ಇಟ್ಟುಕೊಳ್ಳಬಾರದು.
ಅಂತಹ ಗಡಿಯಾರಗಳು ಅದೆಷ್ಟೇ ಬೆಲೆ ಬಾಳುವುದಾಗಿದ್ದರು ಮೊದಲು ಅವುಗಳನ್ನು ಮನೆಯಿಂದ ಹೊರಗಡೆ ಹಾಕಿ ಇಂತಹ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದು ನಿಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ನಿಂತುಹೋದ ಗಡಿಯಾರವನ್ನು ಮನೆಯಲ್ಲಿ ಇಡುವುದರಿಂದ ಅದು ನೆ.ಗೆ.ಟಿವ್ ಎನರ್ಜಿಯನ್ನು ಎಳೆಯುತ್ತದೆ ಇದರಿಂದ ಮನೆಯಲ್ಲಿ ಆಗಾಗ ಜ.ಗ.ಳ ಕಿರಿಕಿರಿ ಉಂಟಾಗುತ್ತದೆ ಅಲ್ಲದೆ ಮಾಡುವ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಒಡೆದ ಗಡಿಯಾರವನ್ನು ಇಡಬಾರದು ಇದು ಮನೆಗೆ ಒಳ್ಳೆಯ ಲಕ್ಷಣ ಅಲ್ಲ ಇದರಿಂದ ಮನೆಯಲ್ಲಿ ವಾಸ್ತು ದೋ.ಷದ ಸಮಸ್ಯೆ ತಲೆದೂರುತ್ತದೆ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮುರಿದ ಗಡಿಯಾರವನ್ನು ದು.ರಾ.ದೃ.ಷ್ಟದ ಸೂಚಕ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಮುರಿದ ಗಡಿಯಾರವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಡಿ.
ಮನೆಯಲ್ಲಿ ಗಡಿಯಾರವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಟ್ಟಿದ್ದರೆ ನೀವು ಜಾಗರೂಕರಾಗಿರಬೇಕು ಯಾಕೆಂದರೆ ಗಡಿಯಾರಗಳನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಇದನ್ನು ಒಳ್ಳೆಯ ಸಂಕೇತ ಎಂದು ಪರಿಗಣಿಸಲು ಆಗುವುದಿಲ್ಲ, ನೀವು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿದ್ದರೆ ನಿಮ್ಮ ಮನೆಯಲ್ಲಿ ನ.ಕಾ.ರಾ.ತ್ಮಕ ಶಕ್ತಿ ನೆಲೆಸುತ್ತದೆ
ಇದು ನಿಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಗಂಡ ಹೆಂಡತಿ ನಡುವೆ ಜಗಳ ಭಿನ್ನಾಭಿಪ್ರಾಯ ದುಡಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಈ ರೀತಿಯ ಸಮಸ್ಯೆಗಳು ತಲೆದೂರುತ್ತದೆ. ವಾಸ್ತುಶಾಸ್ತ್ರದಲ್ಲಿ ಗಡಿಯಾರದ ಬಣ್ಣವೂ ಕೂಡ ಬಹಳ ಮುಖ್ಯ ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಹೊಂದಿರುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.
ಅತ್ಯಂತ ಮುಖ್ಯವಾದ ವಿಶೇಷ ಏನೆಂದರೆ, ಗಾಢ ಬಣ್ಣದ ಗಡಿಯಾರ ಹಾಕುವುದರಿಂದ ನ.ಕಾ.ರಾ.ತ್ಮಕ ಶಕ್ತಿ ನೆಲೆಸುತ್ತದೆ ಅಲ್ಲದೆ ಈ ಬಣ್ಣವೂ ಮನೆಯ ಸದಸ್ಯರ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮನೆಯಲ್ಲಿ ಕಪ್ಪು ನೀಲಿ ಮತ್ತು ಕೆಂಪು ಬಣ್ಣದ ಗಡಿಯಾರ ಇರಬಾರದು. ಕಂದು ಮತ್ತು ಹಳದಿ ಬಣ್ಣದ ತಿಳಿ ಗಡಿಯಾರಗಳನ್ನು ಇಡಬೇಕು ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರಗಳನ್ನು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇಡುವುದು ತುಂಬಾ ಮಂಗಳಕರ ಅಥವಾ ನೀವು ಗಡಿಯಾರವನ್ನು ನಿಮ್ಮ ಮನೆಯ ಪೂರ್ವ ವಾಯುವ್ಯ ದಿಕ್ಕಿನ ಗೋಡೆಯ ಮೇಲೆ ಇಡಬೇಕು ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡುತ್ತದೆ.
ಈ ದಿಕ್ಕುಗಳಲ್ಲಿ ಗಡಿಯಾರವನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯು ನೆಲೆಸುತ್ತದೆ ಅಷ್ಟೇ ಅಲ್ಲದೆ ನಿಮ್ಮ ಎಲ್ಲಾ ಕೆಲಸಗಳಲ್ಲೂ ಸಹ ಸಮಯಕ್ಕೆ ಸರಿಯಾಗಿ ಮುಗಿಸುತ್ತೀರಿ ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ಬಂದು ನೆಲೆಸುತ್ತಾಳೆ. ಇದು ನಿಮ್ಮ ಮನೆಯಲ್ಲಿ ಎಂದಿಗೂ ಸಹ ಆರ್ಥಿಕ ಸಮಸ್ಯೆಯನ್ನು ಉಂಟುಮಾಡುವುದಿಲ್ಲ.