ಕಟ್ಟಡ ಕಾರ್ಮಿಕರಿಗೆ ಇದೀಗ ಒಂದು ಹೊಸ ನಿಯಮ ಜಾರಿಗೆ ಬಂದಿದ್ದು ಈ ನಿಯಮದ ಅಡಿಯಲ್ಲಿ ಕಟ್ಟಡ ಕಾರ್ಮಿಕ ಕಾರ್ಡನ್ನು ನವೀಕರಣ ಮಾಡಿಸುವಂತಹ ಸಂದರ್ಭದಲ್ಲಿ ಕೆಲವೊಂದು ಹೊಸ ದಾಖಲೆಗಳನ್ನು ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ
ಜೂನ್ 7 ರಂದು ಕಟ್ಟಡ ಕಾರ್ಮಿಕರಿಗೆ ಹೊಸ ಆದೇಶವನ್ನು ಹೊರಡಿಸಿದಂತಹ ರಾಜ್ಯ ಸರ್ಕಾರವು ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದೆ ಕಟ್ಟಡ ಕಾರ್ಮಿಕರು ತಮ್ಮ ಕಾರ್ಮಿಕ ಕಾರ್ಡನ್ನು ನವೀಕರಣಗೊಳಿಸುವಂತಹ ಸಂದರ್ಭದಲ್ಲಿ ಕೆಲವೊಂದು ದಾಖಲಾತಿಗಳನ್ನು ನೀಡಬೇಕು ಎಂದು ತಿಳಿಸಿದೆ.
ಕಾರ್ಮಿಕ ಕಾರ್ಡ್ ನವೀಕರಣ ಸಂದರ್ಭದಲ್ಲಿ ಕಳೆದ 12 ತಿಂಗಳಲ್ಲಿ ಕೆಲ್ಲಿಷ್ಠ 90 ದಿನಗಳ ಕಾಲ ವೇತನ ಪಡೆದಿರುವ ಬಗ್ಗೆ ವೇತನ ಚೀಟಿಯನ್ನು ಕಟ್ಟಡ ಮಾಲೀಕ ಅಥವಾ ಮೇಸ್ತ್ರಿಯಿಂದ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ ಅಲ್ಲದೆ ವೇತನ ಚೀಟಿ ನವೀಕರಣ ಸಂದರ್ಭದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಇದರೊಂದಿಗೆ ಹಾಜರಾತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ಮಾಲೀಕ ಪಡೆದ ಅನುಮತಿ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ
ಇದಕ್ಕೆ ಅಸಂಘಟಿತ ಕಾರ್ಮಿಕ ವಲಯ ಅಸಮಾಧಾನ ವ್ಯಕ್ತಪಡಿಸಿದ್ದು ಆದೇಶ ರದ್ದು ಮಾಡುವಂತೆ ಆಗ್ರಹಿಸುತ್ತಿದೆ ರಾಜ್ಯದಲ್ಲಿ 44.84 ಲಕ್ಷ ಕಾರ್ಮಿಕರಿದ್ದು ಕಾರ್ಮಿಕರು ಇಲಾಖೆ ಕಚೇರಿಗೆ ಭೇಟಿ ನೀಡುತ್ತಿದ್ದಾರೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಕಾರ್ಮಿಕರಿಗೆ ತಿಳಿಸಿ ಅದರಂತೆ ಕಟ್ಟಡ ಕಾರ್ಮಿಕರು ನಡೆದುಕೊಳ್ಳಬೇಕಿದೆ.
ಕಟ್ಟಡ ಮಾಲೀಕರಿಂದ ಮತ್ತು ಮೇಸ್ತ್ರಿಗಳಿಂದ ಮೂರು ತಿಂಗಳ ವೇತನ ಚೀಟಿ ಮತ್ತು ಹಾಜರಾತಿ ದಾಖಲಾತಿ ಪಡೆಯುವುದು ಅಸಾಧ್ಯವಾಗಿದೆ ಮಹಿಳಾ ಕಾರ್ಮಿಕರಿಗೆ ಸಂಕಟ ಬಂದಿದೆ ಮಹಿಳಾ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನಿಂದ ಲಭಿಸಬೇಕಿದ್ದ ಹೆರಿಗೆ ಸಹಾಯಧನ, ಪಿಂಚಣಿ ಹಣ, ಸಾಮಾನ್ಯ ವೈದ್ಯಕೀಯ ಮತ್ತು ಪ್ರಮುಖ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗುವ ಅವಕಾಶ ಇದೆ.
ಮಹಿಳಾ ಕಾರ್ಮಿಕರಿಗೆ 60,000 ವರೆಗೆ ಸಹಾಯಧನ ಎರಡು ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಸಹಾಯಧನ ಮತ್ತು ಕಾರ್ಮಿಕ ಮಕ್ಕಳಿಗೆ 50,000 ವರೆಗೆ ಲಭ್ಯವಿದ್ದ ವಿದ್ಯಾರ್ಥಿ ವೇತನ ಹಾಗೆ ಹೆಣ್ಣು ಮಕ್ಕಳ ಮದುವೆ ಸಿಗುತ್ತಿದ್ದ ಸಾವಿರಾರು ಸಹಾಯ ಧನ ಸ್ಥಗಿತಗೊಳ್ಳುತ್ತದೆ. ರಾಜ್ಯ ಕಾರ್ಮಿಕ ಮಂಡಳಿ ಆದೇಶವಾಗಿದ್ದು ಜಿಲ್ಲಾಮಟ್ಟದಲ್ಲಿ ಮಾರ್ಪಾಡು ಅಸಾಧ್ಯ ಹಲವು ಸಂಘಟನೆಗಳು ಸುತ್ತೋಲೆ ತಿದ್ದುಪಡಿ ಮಾಡುವ ಮನವಿ ಮಾಡಿದೆ ಈ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.
ಇದನ್ನು ಓದಿ:- ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗಲ್ಲ, ಅಪ್ಪಿತಪ್ಪಿಯು ಈ ದಿಕ್ಕಿಗೆ ಗಡಿಯಾರ ಹಾಕಬೇಡಿ.
ಕಟ್ಟಡ ಕಾರ್ಮಿಕರು ಇದೀಗ ಸರ್ಕಾರವು ತಿಳಿಸಿದಂತಹ ದಾಖಲಾತಿಗಳನ್ನು ತಮ್ಮ ಕಟ್ಟಡ ಕಾರ್ಮಿಕ ಕಾರ್ಡನ್ನು ನವೀಕರಣದಲ್ಲಿ ನೀಡುವುದು ಕಡ್ಡಾಯವಾಗಿದ್ದು ಎಲ್ಲ ದಾಖಲಾತಿಗಳನ್ನು ಸಲ್ಲಿಸಿ ಕಾರ್ಮಿಕ ಕಾರ್ಡ್ ನಿಂದ ಸಿಗುತ್ತಿದ್ದಂತಹ ಸೌಲಭ್ಯಗಳನ್ನು ಮರಳಿ ಪಡೆದುಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗು ಶೇರ್ ಮಾಡಿ.