ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಒಬ್ಬ ಕನಸುಗಾರ, ಸಿನಿಮಾವನ್ನು ಉಸಿರಾಗಿಸಿಕೊಂಡ ಕಲೆಗಾರ. ಸಿನಿಮಾವನ್ನು ಅತಿ ಹೆಚ್ಚು ಪ್ರೀತಿಸುವ ಕ್ರೇಜಿಸ್ಟಾರ್ ತನ್ನ ಕ್ರೇಜಿನೆಸ್ ಇಂದ ಸಿನಿಮಾವನ್ನು ವೈಭವೀಕರಿಸುವ ರಸಿಕ. ತೆರೆ ಮೇಲೆ ತನ್ನಷ್ಟ ಹೀರೋಯಿನ್ಗಳಿಗೂ ಕೂಡ ಸ್ಕ್ರೀನ್ ಬಿಟ್ಟುಕೊಟ್ಟು ಅವರ ಅಂದವನ್ನು ಚಂದವಾಗಿ ತೋರಿಸುವ ರೋಮ್ಯಾಂಟಿಕ್ ಹೀರೋ. ಪ್ರೇಮಲೋಕ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿ ಇಡಿ ಇಂಡಸ್ಟ್ರಿಯನ್ನೇ ಬೇರೆ ಮಟ್ಟಕ್ಕೆ ಕೊಂಡು ಹೋದ ಸಿನಿಮಾ ಪ್ರೇಮಿ.
ಪ್ರೇಮಲೋಕ ಸಿನಿಮಾವನ್ನು ಕಂಡ ನಂತರ ಜನ ಸಿನಿಮಾ ವನ್ನು ನೋಡುವ ರೀತಿಯೇ ಬದಲಾಗಿ ಹೋಯಿತು. ಲವ್ ಸ್ಟೋರಿಗಳಿಗೆ ಹೆಸರುವಾಸಿ ಆಗಿರುವ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಸಿನಿಮಾ ಕಥೆ ಜೊತೆ ಹಾಡುಗಳು ಕೂಡ ಸೂಪರ್ ಹಿಟ್. ಯುದ್ಧ ಕಾಂಡ, ಯುಗಪುರುಷ, ಬಣ್ಣದ ಗೆಜ್ಜೆ, ಶಾಂತಿ ಕ್ರಾಂತಿ, ಕಿಂದರಿಜೋಗಿ, ಅಣ್ಣಯ್ಯ, ಪುಟ್ನಂಜ, ರಸಿಕ, ಕಲಾವಿದ, ಚೋರ ಚಿತ್ತ ಚೋರ, ಪ್ರೀತ್ಸೋದ್ ತಪ್ಪಾ, ಮಾಂಗಲ್ಯಂ ತಂತುನಾನೇನ, ಹಳ್ಳಿ ಮೇಷ್ಟ್ರು ಇನ್ನು ಮುಂತಾದ ನೂರಾರು ಸಿನಿಮಾ ಹೆಸರುಗಳನ್ನು ಇದಕ್ಕೆ ಸಾಕ್ಷಿಯಾಗಿ ಹೇಳಬಹುದು.
ಈ ಎಲ್ಲಾ ಸಿನಿಮಾಗಳಲ್ಲೂ ಸಿನಿಮಾ ಕಥೆ ಹಾಗೂ ರವಿಚಂದ್ರನ್ ಅವರ ನಟನೆ ಜೊತೆ ಹಾಡುಗಳು ಕೂಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದು. ರವಿಚಂದ್ರನ್ ಅವರು ಇಂಡಸ್ಟ್ರಿಯಲಿ ಒಬ್ಬ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಹಾಡು ಬರಹಗಾರನಾಗಿ, ರೈಟರ್ ಆಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ಜೊತೆ ಇವರ ಮತ್ತೊಂದು ವಿಶೇಷತೆ ಏನು ಎಂದರೆ ಮೊದಲ ಬಾರಿಗೆ ಪರಭಾಷೆಗಳಿಂದ ಕನ್ನಡ ಸಿನಿಮಾ ಗೆ ಹೀರೋಯಿನ್ ಗಳನ್ನು ತಂದ ಖ್ಯಾತಿ ಇವರಿಗೆ ಸಲ್ಲುತ್ತದೆ.
ರವಿಚಂದ್ರನ್ ಅವರ ಸಿನಿಮಾ ಎಂದರೆ ಯಾವ ನಟಿಯರು ಸಹ ಅಭಿನಯಿಸಲು ರೆಡಿ. ಒಂದೇ ಒಂದು ಸಿನಿಮಾ ಅವಕಾಶ ರವಿಚಂದ್ರನ್ ಅವರ ಜೊತೆ ಅಥವಾ ಅವರ ಡೈರೆಕ್ಷನ್ ಅಲ್ಲಿ ನಟಿಸಲು ಸಿಕ್ಕರೆ ಸಾಕು ಎಂದು ಎಲ್ಲಾ ನಟಿಮಣಿಯರು ಕೂಡ ಆಸೆ ಪಡುತ್ತಾರೆ. ಯಾಕೆಂದರೆ ಅವರ ಸೌಂದರ್ಯವನ್ನು ಅಷ್ಟು ಚೆನ್ನಾಗಿ ರವಿಚಂದ್ರನ್ ಅವರು ತೆರೆ ಮೇಲೆ ತೋರಿಸುತ್ತಾರೆ. ರವಿಚಂದ್ರನ್ ಅವರು ಸಿನಿಮಾಗಳಲ್ಲಿ ಪ್ರಾಪರ್ಟಿಯನ್ನು ಹೆಚ್ಚಾಗಿ ಬಳಸುತ್ತಾರೆ ಅವರ ಸಿನಿಮಾ ಗಳಲ್ಲಿ ಹಾಗೂ ಹಾಡುಗಳಲ್ಲಿ ಪ್ರಾಪರ್ಟಿಗಳಿಗೆ ಕೆಲಸ.
ನಟಿಮಣಿಯರನ್ನು ಮಣ್ಣಿನ ಮೇಲೆ ಬೆಳೆಸುವುದು, ಮಳೆಯಲ್ಲಿ ನೆನೆಸುವುದು, ಅವರ ಮೇಲೆ ಹಣ್ಣುಗಳನ್ನು ಚೆಲ್ಲುವುದು, ನವಿಲು ಕೋಳಿ ಹೂವು ಚೆಂಡು ಇದೆಲ್ಲವನ್ನು ಕೂಡ ಸಿನಿಮಾ ಸೀನಿನ ಮೇಲೆ ತರುವುದು ರವಿಚಂದ್ರನ್ ಅವರು ಮಾತ್ರ. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿದವರು ಅವರ ರೋಮ್ಯಾಂಟಿಕ್ ನೆಸ್ ಗಮನಿಸದೇ ಇರುವುದಿಲ್ಲ ಸಿನಿಮಾ ಆರಂಭದಿಂದ ಕೊನೆ ತನಕ ನಟಿಮಣಿಯರಿಗೆ ಅಂಟಿಕೊಂಡೇ ಇರುವ ಇವರ ಆ ಸೀನ್ ಗಳನ್ನು ನೋಡಿ ಜನ ಇವರನ್ನು ರವಿಮಾಮ ಎಂದು ಕರೆಯುತ್ತಾರೆ.
ಆದರೆ ಇಷ್ಟೊಂದು ತೆರೆ ಮೇಲೆ ಎಕ್ಸ್ಪೋಸ್ ಆಗಿ ಕಾಣುವ ರವಿಚಂದ್ರನ್ ಅವರ ಮೇಲೆ ಹೆಂಡತಿಗೆ ಕೋಪ ಬಂದಿಲ್ಲವಾ ಎನ್ನುವ ಅನುಮಾನ ಜನರಿಗೆ. ಇದಕ್ಕೆ ತ್ರಿ ವಿಕ್ರಮ ಸಿನಿಮಾ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ಉತ್ತರ ನೀಡಿದ್ದಾರೆ. ರವಿಚಂದ್ರನ್ ಅವರ ಮಗನ ಸಿನಿಮಾ ಆಟ ತ್ರಿ ವಿಕ್ರಮ ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ರವಿ ಸರ್ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಅವರು ರವಿಚಂದ್ರನ್ ಎಂದರೆ ರೋಮ್ಯಾಂಟಿಕ್, ಕಿಸ್ಸಿಂಗ್ ಸೀನ್ ಗಳು ಎಂದು ಬಿಡುತ್ತೀರಾ ನಾನು ನನಗಾಗಿ ಮಾಡಿದ್ದಲ್ಲ ನಿಮ್ಮನ್ನು ರಂಜಿಸುವುದಕ್ಕಾಗಿ ಮಾಡಿದ್ದು.
ನನ್ನ ಹೆಂಡತಿಯು ಕೂಡ ಒಮ್ಮೆ ನನ್ನನ್ನು ಪ್ರಶ್ನಿಸಿದಳು ನಿನಗೆ ನಟಿಯರ ಮೈಮುಟ್ಟದೆ ಸಿನಿಮಾ ಮಾಡಲು ಆಗುವುದಿಲ್ಲ ಎಂದು ಅದಕ್ಕಾಗಿ ಒಂದು ಸಿನಿಮಾ ಮಾಡಿದೆ ಏಕಾಂಗಿ. ಆ ಸಿನಿಮಾ ನೋಡಿದ ಮೇಲೆ ಎಲ್ಲರೂ ಪ್ರಶ್ನೆ ಮಾಡಲು ಶುರು ಮಾಡಿದರು. ಯಾಕೆ ನೀವು ಈ ಸಿನಿಮಾದಲ್ಲಿ ಸ್ವಲ್ಪ ಬೋರಾಗಿ ಕಾಣಿಸಿಕೊಂಡಿದ್ದೀರಾ ಎಂದು. ನಂತರ ನನ್ನ ಹೆಂಡತಿಯೇ ಬಂದು ಹೇಳಿದಳು ನಿನಗೆ ಇದೆಲ್ಲಾ ಸೂಟ್ ಆಗುವುದಿಲ್ಲ ಸಿನಿಮಾಕ್ಕಾಗಿ ನೀನು ಹೇಗೆ ಬೇಕಾದರೂ ಇರು ಎಂದು. ನನಗೆ ಸೂಟ್ ಆಗುವುದು ಅದೇ ರೀತಿ ಪಾತ್ರಗಳು ಹಾಗಾಗಿ ನಾನು ತೆರೆಮೇಲೆ ಮಾತ್ರ ಆ ರೀತಿ ಕಾಣಿಸಿಕೊಳ್ಳುತ್ತಿದ್ದೆ. ಅದು ನನಗಾಗಿ ಅಲ್ಲ, ನಿಮ್ಮನ್ನು ರಂಚಿಸುವುದಕ್ಕಾಗಿ ಎಂದು ಮತ್ತೊಮ್ಮೆ ರವಿಚಂದ್ರನ್ ಅವರು ಹೇಳಿಕೊಂಡಿದ್ದಾರೆ.