ಹಲವು ವರ್ಷಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಒಂದಾದ ರವಿಚಂದ್ರನ್ ಮತ್ತು ಶಿಲ್ಪ ಶೆಟ್ಟಿ ಜೋಡಿ, ಮತ್ತೊಂದು ಪ್ರೀತ್ಸೋದ್ ತಪ್ಪ ಕನ್ನಡದಲ್ಲಿ ಬರುವುದು ಗ್ಯಾರಂಟಿ.
ಕ್ರೇಜಿಸ್ಟಾರ್ ರವಿಚಂದ್ರನ್ ಟೈಟಲ್ ಗೆ ತಕ್ಕಹಾಗೆ ಸಿನಿಮಾ ಬಗ್ಗೆ ವಿಪರೀತವಾದ ಕ್ರೇಜ್ ಇಟ್ಟುಕೊಂಡಿರುವ ನಟ. ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಅದೆಷ್ಟೋ ದಾಖಲೆಯ ಸೂಪರ್ ಹಿಟ್ ಹಾಡುಗಳು ಇವೆ ಎಂದರೆ ಅದು ಇವರ ಚಿತ್ರದ ಹಾಡುಗಳೇ ಆಗಿರುತ್ತವೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹಾಡುಗಳ ಮೂಲಕ ಸಂಗೀತದ ಮೂಲಕ ಮತ್ತು ಪ್ರಾಪರ್ಟಿಗಳ ಮೂಲಕ ಶ್ರೀಮಂತಿಕೆ ತುಂಬಿಸಿದ ಕನಸುಗಾರ. 80 ಮತ್ತು 90ರ ದಶಕದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಆಗುವಂಥ ಅದೃಷ್ಟ ಪಡೆದುಕೊಂಡಿದ್ದ ಚಿಕ್ಕಜೆಮಾನ. ಅದ್ಯಾಕೋ ಇತ್ತೀಚೆಗೆ ಒಂದೇ ಒಂದು ಸಕ್ಸಸ್…