Thursday, September 28, 2023
Home Viral News ನಾನು ಇರಬೇಕಾ.? ಬೇಡ್ವ.? ಹೇಳಿ ಎಂದು ಟ್ರೋಲಿಗರನ್ನು ಪ್ರಶ್ನಿಸುತ್ತಿರುವ ರಶ್ಮಿಕ ಮಂದಣ್ಣ.

ನಾನು ಇರಬೇಕಾ.? ಬೇಡ್ವ.? ಹೇಳಿ ಎಂದು ಟ್ರೋಲಿಗರನ್ನು ಪ್ರಶ್ನಿಸುತ್ತಿರುವ ರಶ್ಮಿಕ ಮಂದಣ್ಣ.

 

ರಶ್ಮಿಕ ಮಂದಣ್ಣ (Rashmika Mandanna) ಈಗ ನ್ಯಾಷನಲ್ ಕ್ರಶ್ (National crush) . ಕೊಡಗಿನ ಕುವರಿ ಇಂದು ದೇಶದಾದ್ಯಂತ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳದಿದ್ದಾರೆ, ಆದರೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ (troll) ಗೂ ಒಳಗಾಗುತ್ತಿದ್ದಾರೆ. ಈಕೆಯನ್ನೇ ವಿವಾದಗಳು ಹುಡುಕಿಕೊಂಡು ಬರುತ್ತವೋ ಅಥವಾ ಈಕೆ ಮಾಡುವುದೆಲ್ಲಾ ವಿವಾದದ ಕಂಟೆಂಟ್ ಆಗುತ್ತದೋ ಗೊತ್ತಿಲ್ಲ. ಇಡೀ ಭಾರತದಲ್ಲಿ ಅತಿ ಹೆಚ್ಚು ಟ್ರೋಲ್ ಆದ ನಟಿ ಎಂದು ಇವರಿಗೆ ಹೇಳಬಹುದು.

ರಶ್ಮಿಕ ಮಂದಣ್ಣ ಕೂಡ ಸಾಕಷ್ಟು ಬಾರಿ ಟ್ರೋಲ್ ಮಾಡುವವರಿಗೆ ತಿರುಗೇಟು ಕೊಟ್ಟಿದ್ದರು ಸಹ ಈಗ ರೋಸಿ ಹೋಗಿದ್ದಾರೆ ಎನ್ನಬಹುದು. ಇತ್ತೀಚೆಗಿನ ಅವರ ವಿವಾದಗಳನ್ನು ನೋಡುವುದಾದರೆ ರಿಷಭ್ ಶೆಟ್ಟಿ (Rishabh Shetty) ನಟನೆ ಮತ್ತು ನಿರ್ದೇಶನದ ಕಾಂತರಾ (Kanthara) ಸಿನಿಮಾವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದು ಮತ್ತು ದಕ್ಷಿಣ ಭಾರತದ ಸಿನಿಮಾಗಳ ಹಾಡುಗಳ ಬಗ್ಗೆ ಮಾತನಾಡಿದ್ದು ಹಾಗೆ ತನಗೆ ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಹೆಸರು ಹೇಳಲು ಹಿಂಜರಿಕೆ ಮಾಡಿಕೊಂಡು ಕೈಯನ್ನು ಸನ್ನೆ ಮಾಡಿ ತೋರಿಸಿದ್ದು ದೊಡ್ಡ ಮಟ್ಟಕ್ಕೆ ಸದ್ದಾಗಿತ್ತು.

ಈಕೆಯನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಮಟ್ಟಕ್ಕೆ ತಲುಪಿತ್ತು ಮತ್ತು ಇತ್ತೀಚೆಗೆ ಈಕೆಯಿಂದ 8 ವರ್ಷದ ತಂಗಿ ಕೂಡ ಟ್ರೋಲ್ ಮಾಡಿದ್ದರು. ಅದಕ್ಕೂ ಸಹ ರಶ್ಮಿಕ ಮಂದಣ್ಣ ನನ್ನ ಕಾರಣಕ್ಕೆ ಅವಳಿಗೆ ಶಿಕ್ಷೆ ಕೊಡಬೇಡಿ ಎಂದಿದ್ದರು. ಜೊತೆಗೆ ಸುದೀಪ್ (Sudeep) ಅವರು ಕೊಟ್ಟಿದ್ದ ಅಭಿಮಾನಿಗಳ ಹೂವನ್ನು ಕೊಡುತ್ತಾರೆ ಟೊಮೊಟೊ ಮೊಟ್ಟೆ ಮತ್ತು ಕಲ್ಲುಗಳು ಅದರ ಜೊತೆ ಬರುತ್ತವೆ ನಾವು ತೆಗೆದುಕೊಳ್ಳಬೇಕು ಎಂಬ ಹೇಳಿಕೆ ವಿರುದ್ಧ ಇವರು ಮಾತನಾಡಿದ ಹೊಡೆದ ಕಲ್ಲುಗಳಿಂದ ರಕ್ತ ಬರುತ್ತಿದ್ದರೆ ಏನು ಮಾಡಬೇಕು ಎನ್ನುವ ಮಾತು ಕೂಡ ಸಾಕಷ್ಟು ವಿವಾದ ಆಗಿತ್ತು.

ಸದ್ಯಕ್ಕೆ ರಶ್ಮಿಕ ವಾರಿಸು (Varissu) ಸಿನಿಮಾದ ಸಕ್ಸಸ್‌ನ ಸಂಭ್ರಮದಲ್ಲಿದ್ದರೂ ಕೂಡ ಟ್ರೋಲಿಗಳಿಂದ ಆಗುತ್ತಿರುವ ತೊಂದರೆಯಿಂದ ಅದನ್ನು ಅನುಭವಿಸಲಾಗದೆ ಬೇಸತ್ತು ಹೋಗಿದ್ದಾರೆ ಎಂಬುದು ಸತ್ಯ. ಇತ್ತೀಚಿನ ಸಂದರ್ಶನದಲ್ಲೂ ಸಹ ರಶ್ಮಿಕ ಮಂದಣ್ಣ ತನ್ನ ತಪ್ಪು ಸರಿ ಮಾಡಿಕೊಳ್ಳುವ ಪ್ರಯತ್ನ ಪಟ್ಟಿದ್ದರು. ರಿಷಭ್ (Rishabh) ಮತ್ತು ರಕ್ಷಿತ್ (Rakhshith) ಅವರೇ ನನಗೆ ಇಂಡಸ್ಟ್ರಿ ದಾರಿಯನ್ನು ತೋರಿಸಿದ್ದು ಎಂದು ಅವರ ಹೆಸರನ್ನು ಬಾಯಿಬಿಟ್ಟು ಹೇಳಿಕೊಂಡಿದ್ದರು.

ಹಾಗೂ ಮತ್ತೊಂದು ಸಂದರ್ಶನದಲ್ಲಿ ಮಾತನಾಡುವಾಗ ಇವರಿಗೆ ಪ್ರಶ್ನೆ ಒಂದು ಎದುರಾಗಿತ್ತು. ಇಷ್ಟು ಸಕ್ಸಸ್ ಅಲ್ಲಿ ಇದ್ದೀರಾ ಯಾವತ್ತಾದರೂ ಇಂಡಸ್ಟ್ರಿ ಬಿಟ್ಟು ಹೋಗೋ ಯೋಚನೆ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ಒಮ್ಮೊಮ್ಮೆ ಹಾಗನಿಸುತ್ತದೆ ಎಂದು ಟ್ರೋಲಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ನಾನು ಹೇಗಿದ್ದರೂ ಕೂಡ ಟ್ರೋಲ್ ಮಾಡುತ್ತಾರೆ ಜಾಸ್ತಿ ವರ್ಕೌಟ್ ಮಾಡಿದರೆ ಗಂಡಸು ತರ ಇದ್ದೀಯ ಅನ್ನುತ್ತಾರೆ, ಕಡಿಮೆ ವರ್ಕೌಟ್ ಮಾಡಿದರೆ ಡೆಡಿಕೇಶನ್ ಇಲ್ಲ ಎನ್ನುತ್ತಾರೆ, ಮಾತನಾಡಿದ್ದರೆ ತಪ್ಪು ಹುಡುಕುತ್ತಾರೆ, ಮಾತನಾಡದಿದ್ದರೆ ಆಟಿಟ್ಯೂಡ್ ಎನ್ನುತ್ತಾರೆ.

ನಾನು ಹೇಗೆ ಇರಬೇಕು ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ ಇಲ್ಲಿ ನಾನು ಉಸಿರಾಡಿದರೂ ಕಷ್ಟ ಉಸಿರಾಡದಿದ್ದರೂ ಕೂಡ ಕಷ್ಟ. ನಾನೇನಾದ್ರೂ ತಪ್ಪು ಮಾಡುತ್ತಿದ್ದೇನೆ ಎಂದರೆ ಅದನ್ನು ನೀವು ಹೇಳಿ ಸರಿ ಮಾಡಿ ನಾನು ಇಂಡಸ್ಟ್ರಿಯಲ್ಲಿ ಇರಬೇಕಾ ಬೇಡವಾ, ಅದಕ್ಕೂ ಕೂಡ ಸ್ಪಷ್ಟನೆ ಕೊಟ್ಟು ಹೇಳಿ ನೀವು ಏನು ಹೇಳಿದರೂ ನಾನು ಕೇಳಲು ತಯಾರಾಗಿದ್ದೇನ. ಆದರೆ ಯಾಕೆ ಎನ್ನುವ ಪ್ರಶ್ನೆಗೆ ಕ್ಲಾರಿಟಿ ಬೇಕು ಅದನ್ನು ಕೊಡದೆ ನೀವು ಮಾತನಾಡಿ ಹೋಗುತ್ತಿದ್ದಾರೆ ನಾನು ಏನು ತಿಳಿದುಕೊಳ್ಳಬೇಕು. ದಯವಿಟ್ಟು ಇನ್ನಾದರೂ ಕೆಟ್ಟದಾಗಿ ಮಾತನಾಡಬೇಡಿ, ನೀವು ಬಯಸುವ ವಾಕ್ಯಗಳು ಹಾಗೂ ಪದಗಳು ತುಂಬಾ ನನ್ನನ್ನು ನೋಯಿಸುತ್ತಿವೆ ಎಂದು ಟ್ರೋಲಿಗರನ್ನು ಕೇಳಿಕೊಂಡಿದ್ದಾರೆ.

- Advertisment -