ಕನ್ನಡದ ಕಾಂತಾರ ( Kantara) ಸಿನಿಮಾಗೆ ಈಗ ನೂರು ದಿನಗಳ (100 days) ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ಸಂಭ್ರಮವನ್ನು ಆಚರಿಸುತ್ತಿದ್ದಾರೆ ಹೊರತು ಶತ ದಿನಗಳ ಸಂಭ್ರಮ ಎನ್ನುವುದು ಮರೆತೇ ಹೋಗಿತ್ತು. ಆದರೆ ಕಾಂತರಾ ಸಿನಿಮಾದ ಕಾರಣದಿಂದ ಮತ್ತೆ ಆ ಗತಿ ವೈಭವ ನೆನಪಾಗಿದೆ. ಕನ್ನಡದ ಹೆಮ್ಮೆಯ ಕಾಂತರಾ ಸಿನಿಮಾ ಯಶಸ್ವಿಯಾಗಿ ನೂರು ದಿನಗಳ ಪ್ರದರ್ಶನ ಕಂಡ ಕಾರಣ ಚಿತ್ರ ತಂಡವು ಈ ಸಕ್ಸಸ್ ಗೆ ಕಾರಣಕರ್ತರಾದ ಎಲ್ಲಾ ಕಲಾವಿದರು ಹಾಗೂ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ತಂತ್ರಜ್ಞನಿಗೂ ಸಹಾ ಕರೆದು ಸ್ಮರಣಿಕೆ ಕೊಟ್ಟು ಗೌರವಿಸಿದೆ.
ಬೆಂಗಳೂರಿನ ವಿಜಯನಗರದ ಬಂಟರ ಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಜೊತೆಗೆ ಇಡೀ ಭವನವೇ ತುಳು ನಾಡಿನ ಸಂಪ್ರದಾಯದಲ್ಲಿ ಕಂಗೊಳಿಸುತ್ತಿತ್ತು. ವೇದಿಕೆ ಪೂರ್ತಿ ಕಾಂತರಾ ಸೆಟ್ ರೀತಿ ಶೃಂಗರಿಸಲಾಗಿತ್ತು. ಕಾಂತರಾ ಸಿನಿಮಾ ಮುಗಿದ ಬಳಿಕ ಅದರ ಪ್ರಚಾರಕ್ಕಿಳಿದ ದಿನದಿಂದಲೂ ಕೂಡ ರಿಷಬ್ ಶೆಟ್ಟಿ (Rishabh Shetty) ಅವರು ಸಿನಿಮಾ ಬಗ್ಗೆ ಬಹಳ ಮಾತನಾಡಿದ್ದಾರೆ.
ಅದರಲ್ಲೂ ಸಿನಿಮಾ ಸಕ್ಸಸ್ ಆದ ಮೇಲೆ ನಮ್ಮ ಭಾಷೆ ಜೊತೆ ಪರಭಾಷೆಯ ಹಲವು ಸಂದರ್ಶನಗಳಲ್ಲೂ ಪಾಲ್ಗೊಂಡಿದ್ದಾರೆ. ಆದರೂ ಕೂಡ ಅವರು ಎಷ್ಟೇ ಬಾರಿ ವೇದಿಕೆ ಮೇಲೆ ಬಂದು ಕಾಂತರಾ ಬಗ್ಗೆ ಮಾತನಾಡಿದರು ಅಭಿಮಾನಿಗಳಲ್ಲಿ ಅದರ ಕುರಿತು ಕೇಳುವ ಕುತೂಹಲ ಕೊಂಚವೂ ಕಡಿಮೆ ಆಗಿಲ್ಲ. ಈ ಬಾರಿ ಕೂಡ ಕಾಂತರಾ ನಿರ್ದೇಶಕರಾದ ಮತ್ತು ನಟರು ಆದ ರಿಷಭ್ ಶೆಟ್ಟಿ ಅವರು ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೊತೆಗೆ ಕಾಂತರಾ ಸಿನಿಮಾದ ಮುಂದಿನ ಭಾಗದ ಬಗ್ಗೆ ಅಪ್ಡೇಟ್ ಕೂಡ ಕೊಟ್ಟಿದ್ದಾರೆ.
ಸದ್ಯದಲ್ಲಿ ಕಾಂತರಾ ಸಿನಿಮಾ ಮುಂದಿನ ಭಾಗದ ಚಿತ್ರೀಕರಣ ಶುರು ಆಗಲಿದೆ ಎಂದು ಹೇಳಿ ರಿಷಭ್ ಅವರು ಅದರಲ್ಲೊಂದು ಟ್ವಿಸ್ಟ್ ಕೂಡ ಇಟ್ಟಿದ್ದಾರೆ. ಈಗ ಎಲ್ಲರೂ ಕಾಂತರಾ ಸಿನಿಮಾದ ಪಾರ್ಟ್ 2 ಬಗ್ಗೆ ಕೇಳುತ್ತಿದ್ದೀರಾ ಆದರೆ ನಿಮಗೆಲ್ಲ ಒಂದು ಕೇಳಲು ಇಷ್ಟಪಡುತ್ತಿದ್ದೇನೆ ಹಾಗೂ ಹಿಂದೆ ಕೂಡ ಇದೆ ವಿಷಯ ಎಷ್ಟೋ ಸಲ ಹೇಳಿದ್ದೇನೆ. ನೀವು ನೋಡಿರುವುದೇ ಕಾಂತರಾ 2 ಈಗ ಮುಂದೆ ಬರುವ ಸಿನಿಮಾ ಕಾಂತರ 1 ಆಗಿರುತ್ತದೆ.
ಯಾಕೆಂದರೆ ಅದು ಈಗ ನೀವು ನೋಡಿದ ಸಿನಿಮಾದ ಕಾಲಘಟ್ಟಕ್ಕಿಂತ ಹಿಂದಿನ ಕಥೆಯನ್ನು ಅದು ಹೇಳುತ್ತಿರುತ್ತದೆ ಎಂದು ಹೇಳಿ ಕಾಂತರಾ ಸಿನಿಮಾ ದ ಸೀಕ್ವೆಲ್ ಅದರ ಹಿಂದಿನ ಕಥೆ ಬಗ್ಗೆ ಹೇಳುತ್ತದೆ ಎನ್ನುವುದರ ಸುಳಿವು ಕೊಟ್ಟಿದ್ದಾರೆ. ಜೊತೆಗೆ ತುಳುನಾಡಿನ ಕೆರಡಿ ಗ್ರಾಮದಲ್ಲಿ ಚಿತ್ರೀಕರಣವಾದ ಒಂದು ಸಿನಿಮಾ ಇಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಸುದ್ದಿ ಆಗುತ್ತಿದೆ ಎಂದರೆ ಅದು ಹೊಂಬಾಳೆ ಫಿಲಂಸ್ (Hombale films) ಬ್ಯಾನರ್ ಅಡಿ ತಯಾರಾಗಿದ್ದಕ್ಕೆ ಕಾರಣ ಆಯ್ತು.
ಸಿನಿಮಾ ಒಂದು ಚಿತ್ರ ಸಕ್ಸಸ್ ಆಗೋದಕ್ಕೆ ಬಜೆಟ್ ಮುಖ್ಯವಲ್ಲ, ಕಂಟೆಂಟ್ ಮುಖ್ಯ ಎನ್ನುವುದನ್ನು ನಮ್ಮ ಸಿನಿಮಾ ಸಾಬೀತು ಮಾಡಿತ್ತು ಎಂದಿದ್ದಾರೆ. ನೆಟ್ಲಿಫಿಕ್ಸ್ (Netlifix) ಅವರು ಇಂಗ್ಲಿಷ್ (English) ಅಲ್ಲಿ ಟಬ್ ಮಾಡಿ ರಿಲೀಸ್ ಮಾಡಲು ರೆಡಿ ಆಗಿದ್ದಾರೆ. ಅದು ಸಾಧ್ಯವಾದರೆ ಒಟ್ಟು ನಮ್ಮ ಸಿನಿಮಾ ಏಳು ಭಾಷೆಗಳಲ್ಲಿ ತೆರೆಕಂಡಂತಾಗುತ್ತದೆ ಎಂದು ಸಿನೆಮಾ ಬಗ್ಗೆ ತಾವು ಕಂಡ ಕನಸು ಸಾಕಾರ ಆಗಿದ್ದರ ಬಗ್ಗೆ ಹೆಮ್ಮೆಯಾಗಿ ಮಾತನಾಡಿದ್ದಾರೆ. ಜೊತೆಗೆ ತಮ್ಮ ಈ ಶ್ರಮಕ್ಕೆ ಫಲ ಸಿಗಲು ದುಡಿದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸುವುದನ್ನು ಮರೆತಿಲ್ಲ.