ರಾಧಿಕಾ ಕುಮಾರಸ್ವಾಮಿ ಅವರು 9ನೇ ತರಗತಿ ಓದುವಾಗಲೇ ಬೆಳ್ಳಿ ಪರದೆ ಮೇಲೆ ನಾಯಕ ನಟಿಯಾಗಿ ಅಭಿನಯಿಸಿ ಗೆದ್ದವರು. ಬಹಳ ಚಿಕ್ಕ ವಯಸ್ಸಿಗೆ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ಬಹಳಷ್ಟು ವರ್ಷಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಆ ಸಮಯಕ್ಕೆ ಇವರಿಗೆ 2002ರಲ್ಲೇ ಬಾಲ್ಯ ವಿವಾಹ ನಡೆದು ಹೋಗುತ್ತದೆ. ರತನ್ ಕುಮಾರ್ ಅವರೊಂದಿಗೆ ಆದ ಇವರ ಮದುವೆ ಕೆಲವೇ ವರ್ಷಗಳಲ್ಲಿ ಅಂತ್ಯಗೊಳ್ಳುತ್ತದೆ.
ಯಾಕೆಂದರೆ ಹೃ.ದ.ಯ.ಘಾ.ತದಿಂದ ರತನ್ ಕುಮಾರ್ ಅವರು ಮೃತಪಟ್ಟಿರುತ್ತಾರೆ. ಕನ್ನಡದ ಜೊತೆ ಪರಭಾಷೆಗಳಲ್ಲೂ ಕೂಡ ಹೆಸರು ಮಾಡಿರುವ ರಾಧಿಕಾ ಕುಮಾರಸ್ವಾಮಿ ಅವರ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಹಿಟ್ ಆಗಿವೆ. ಅದರಲ್ಲೂ ಇವರು ಭಾವನಾತ್ಮಕ ಪಾತ್ರಗಳಿಗೆ ಜೀವತುಂಬಿ ನಟಿಸುತ್ತಿದ್ದರಿಂದ ಶೃತಿ ಅವರನ್ನು ಬಿಟ್ಟರೆ ಕೌಟುಂಬಿಕ ಚಿತ್ರಗಳಲ್ಲಿ ಜೀವ ತುಂಬ ಮತ್ತೋರ್ವ ನಟಿ ಎನ್ನುವ ಖ್ಯಾತಿಗೂ ಗುರಿ ಆಗಿದ್ದಾರೆ.
ಹೆಚ್ಚಾಗಿ ಸೆಂಟಿ ಮೆಂಟಲ್ ಪಾತ್ರಗಳಲ್ಲಿ ಅಭಿನಯಿಸಿ, ಜೊತೆಗೆ ಲವ್ ಸ್ಟೋರಿ ಸಿನಿಮಾಗಳಲ್ಲೂ ಹಿರೋಯಿನ್ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರ ಯಶಸ್ವಿ ಸಿನಿಮಾಗಳ ಪಟ್ಟಿ ಹೀಗಿದೆ. ಮಣಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ರಿಷಿ, ಪ್ರೇಮಖೈದಿ, ನಿನಗಾಗಿ, ರೋಮಿಯೋ ಜೂಲಿಯೆಟ್, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ಅನಾಥರು, ಮಂಡ್ಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ ರಾಧಿಕಾ ಕುಮಾರಸ್ವಾಮಿ ಅವರು ಕೆರಿಯರ್ ಅಲ್ಲಿ ಉತ್ತುಂಗದಲ್ಲಿ ಇದ್ದಾಗಲೇ ಮತ್ತೊಂದು ಮದುವೆ ಆಗುತ್ತಾರೆ.
ಆ ಮದುವೆ ಸಾಕಷ್ಟು ವಿವಾದವು ಕೂಡ ಆಗುತ್ತದೆ. ಯಾಕೆಂದರೆ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಇವರ ಎರಡನೇ ಮದುವೆ ನಡೆಯುತ್ತದೆ. ಮಗಳು ಶಮಿಕ ಹುಟ್ಟುವವರೆಗೂ ಕೂಡ ಗುಟ್ಟಾಗಿದ್ದ ಈ ಸಂಬಂಧ ನಂತರ ಎಲ್ಲರಿಗೂ ತಿಳಿದು ದೊಡ್ಡ ವಿವಾದವೇ ಆಗುತ್ತದೆ. ಆದರೆ ಎಲ್ಲಿಯೂ ಕುಮಾರಸ್ವಾಮಿ ಅವರ ಮೊದಲ ಪತ್ನಿ ಅನಿತಾ ಕುಮಾರಸ್ವಾಮಿ ಅವರೇ ಆಗಲೇ ಅಥವಾ ಅವರ ಕುಟುಂಬದ ಇತರೆ ಸದಸ್ಯರೇ ಆಗಲಿ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.
ಆದರೆ ಕೋರ್ಟ್ ಮೆಟ್ಟಿಲೇರಿದ್ದ ಈ ವಿವಾದದಲ್ಲಿ ಎರಡನೇ ಮದುವೆಯನ್ನು ಅಸಿಂಧು ಎಂದು ಕೋರ್ಟ್ ಘೋಷಿಸಿಬಿಡುತ್ತದೆ. ನಂತರ ಕೂಡ ಇವರಿಬ್ಬರ ಸಂಬಂಧ ಚೆನ್ನಾಗಿಯೇ ಇದೆ ಎನ್ನುವ ಅನುಮಾನಗಳು ಹಲವರಲ್ಲಿ ಇದೆ. ಅದಕ್ಕೆ ಸಾಕ್ಷಿ ಆಗುವಂತೆ ಅವರ ನಡವಳಿಕೆಗಳು ಕೂಡ ಇದೆ. ಯಾಕೆಂದರೆ ರಾಧಿಕ ಕುಮಾರಸ್ವಾಮಿ ಅವರಿಗೆ ಇತ್ತೀಚಿನ ಒಂದು ಸಂದರ್ಶನದಲ್ಲಿ ಕುಮಾರಸ್ವಾಮಿ ಅವರನ್ನು ಕುರಿತು ಪ್ರಶ್ನೆಯನ್ನು ಕೇಳಲಾಗಿತ್ತು.
ಕುಮಾರಸ್ವಾಮಿ ಅವರನ್ನು ನೀವು ಮನೆಯಲ್ಲಿ ಏನೆಂದು ಕರೆಯುತ್ತೀರಿ ಹಾಗೂ ಅವರು ನಿಮ್ಮನ್ನು ಏನೆಂದು ಕರೆಯುತ್ತಾರೆ ಎಂದು ಕೇಳಿದರು ಅದಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ನಾನು ಅವರನ್ನು ರೀ ಎಂದು ಕರೆಯುತ್ತೇನೆ. ಆದರೆ ಅವರು ನನ್ನನ್ನು ಏನೆಂದು ಕರೆಯುತ್ತಾರೆ ಎಂದು ಹೇಳಲೇ ಬೇಕಾ ಎಂದು ಪ್ರಶ್ನಿಸಿದ್ದಾರೆ ಮತ್ತು ಒತ್ತಾಯದ ಮೇರೆಗೆ ಅವರು ನನ್ನನ್ನು ಪ್ರೀತಿಯಿಂದ ಚಿನ್ನು ಎಂದು ಕರೆಯುತ್ತಾರೆ ಎಂದು ನಾಚಿಕೆಯಿಂದ ಹೇಳಿಕೊಂಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರ ಈ ನಡವಳಿಕೆಯಿಂದ ಅವರ ಬಾಂಧವ್ಯ ಇನ್ನೂ ಸಹ ಹಾಗೆ ಇದೆ ಇಂದು ಸ್ಪಷ್ಟವಾಗುತ್ತದೆ ಜೊತೆಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕುಮಾರಸ್ವಾಮಿ ಅವರು ಮಗಳು ಶಮಿಕ ಹುಟ್ಟು ಹಬ್ಬಕ್ಕೆ ಕುಮಾರಸ್ವಾಮಿ ಅವರು ಹೋಗಿರುವುದು ಅಥವಾ ರಾಧಿಕಾ ಕುಮಾರಸ್ವಾಮಿ ಅವರ ಕುಟುಂಬದ ಮತ್ತಿತರ ಕಾರ್ಯಕ್ರಮಗಳಲ್ಲಿ ಪೂಜೆಗಳಲ್ಲಿ ಹಬ್ಬಗಳಲ್ಲಿ ಒಟ್ಟಾಗಿ ದಂಪತಿಗಳು ಪಾಲ್ಗೊಂಡಿರುವ ಫೋಟೋಗಳು ವೈರಲ್ ಆಗುವುದರಿಂದ ಇವರಿಬ್ಬರು ಚೆನ್ನಾಗೆ ಇದ್ದಾರೆ ಎನ್ನುವುದಕ್ಕೆ ಸ್ಪಷ್ಟನೆ ಸಿಗುತ್ತದೆ.
ಆದರೆ ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಅವರು ಸಹ ಹೆಸರು ಮಾಡುತ್ತಿರುವುದರಿಂದ ಅವರು ಬೆಳೆಯುತ್ತಿರುವುದರಿಂದ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಬರುತ್ತಿದೆಯಂತೆ. ಆದಷ್ಟು ಬೇಗ ಈ ಸಂಬಂಧ ಸಂಪೂರ್ಣವಾಗಿ ಕಡಿದು ಹೋಗಬೇಕು ಎನ್ನುವ ಇಚ್ಛೆ ಗೌಡರ ಕುಟಂಬಕ್ಕಿದೆ ಎನ್ನುವ ಗಾಳಿ ಮಾತುಗಳು ಕೂಡ ಇವೆ ಈಗೀಗ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಸಿನಿಮಾ ಇಂಡಸ್ಟ್ರಿ ಗೆ ಮತ್ತೆ ಕಮ್ ಬ್ಯಾಕ್ ಮಾಡುವ ಯೋಚನೆಯಲ್ಲಿ ಇದ್ದು ಸ್ವೀಟಿ ನನ್ನ ಜೋಡಿ ಸಿನಿಮಾದಲ್ಲಿ ಮತ್ತೆ ಹಿರೋಯಿನ್ ಆಗಿ ನಟಿಸಿದ್ದರು.
ಅದಾದ ನಂತರ ರುದ್ರತಾಂಡವ, ಧಮಯಂತಿ ಮುಂತಾದ ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಮೊದಲಿನಂತೆ ಈಗ ಆ ಚಿತ್ರಗಳು ಹಿಟ್ ಆಗುತ್ತಿಲ್ಲ. ಜೊತೆಗೆ ನಿರ್ಮಾಪಕಿ ಆಗಿ ಕೂಡ ಲಕ್ಕಿ ಸಿನಿಮಾದ ಮೂಲಕ ನಿರ್ಮಾಣ ಸಂಸ್ಥೆ ಆರಂಭಿಸಿರುವ ಇವರು ಶಮಿಕಾ ಎಂಟರ್ಪ್ರೈಸಸ್ ಮುನ್ನಡೆಸಿಕೊಂಡು ಹೋಗಲಿಚ್ಛಿಸಿದ್ದಾರೆ, ಜೊತೆಗೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಅವರನ್ನು ಹೀರೋಯಿನ್ ಆಗಿ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿ ಎಂದು ಬಯಸೋಣ.