Wednesday, September 27, 2023
Home Useful Information ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್, 2023-24 ನೇ ಸಾಲಿನ ಕಾಲೇಜ್ ಫೀಸ್ ಇರಲ್ಲ.! ಸರ್ಕಾರದ ಅಧಿಕೃತ ಘೋಷಣೆ,...

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್, 2023-24 ನೇ ಸಾಲಿನ ಕಾಲೇಜ್ ಫೀಸ್ ಇರಲ್ಲ.! ಸರ್ಕಾರದ ಅಧಿಕೃತ ಘೋಷಣೆ, ಇದು ಯಾರಿಗೆ ಅನ್ವಯ ಆಗುತ್ತೆ ನೋಡಿ.!

 

ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಬಯಸಿದಂತಹ ಕೋರ್ಸ್‌ನಲ್ಲಿ ಶಿಕ್ಷಣ ಪೂರೈಸುವುದು ಆರ್ಥಿಕ ದೃಷ್ಟಿಯಿಂದ ಕಷ್ಟವೇ. ಶಿಕ್ಷಣವು ಯಶಸ್ವಿ ಜೀವನಕ್ಕೆ ಕೀಲಿಕೈ. ಇದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಅಂತಾರೆ. ಆದರೆ, ಅತ್ಯಂತ ದುಬಾರಿಯಾಗಿರುವ ಇಂತಹ ಶಿಕ್ಷಣವು ವಿದ್ಯಾಕಾಂಕ್ಷಿಗಳಿಗೆ ಕೈಗೆಟುಕುವುದು ಬಹಳ ಕಷ್ಟವಾಗಿದೆ.

ಅದನ್ನು ಎಟುಕಿಸಿಕೊಳ್ಳುಲು ಶಿಕ್ಷಣ ಸಾಲವು ಬಹು ಸಹಕಾರಿಯಾಗಿದೆ. ಆದರೆ, ಸಾಲ ತೆಗೆದುಕೊಳ್ಳುವುದರಿಂದ ಹಿಡಿದು ಮರುಪಾವತಿ ಮಾಡುವ ತನಕ ಎಲ್ಲೂ ಏನೂ ಅಡ್ಡಿ ಆತಂಕಗಳು ಬರದಂತೆ ಎಚ್ಚರಿಕೆವಹಿಸುವುದು ಬಹಳ ಮುಖ್ಯ ಇಂದಿನ ಹೆಜ್ಜೆ ಸರಿಯಾಗಿಟ್ಟರೆ ನಾಳೆಯು ಸುಗಮವಾಗಿರುತ್ತದೆ. ಇನ್ನು ಭಾರತದಲ್ಲಿ ಅಧ್ಯಯನಕ್ಕೆ ಹಲವಾರು ಆಯ್ಕೆಗಳಿವೆ.

ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಅಭಿವೃದ್ಧಿ ಹೊಂದಿದ ಶೈಕ್ಷಣಿಕ ಕೇಂದ್ರಗಳಲ್ಲಿ ಭಾರತವೂ ಪ್ರಮುಖ ಸ್ಥಾನ ಹೊಂದಿದೆ. ಒಂದು ಅಧ್ಯಯನದ ಪ್ರಕಾರ, ಭಾರತದ ಉನ್ನತ ಶಿಕ್ಷಣದ ಸರಾಸರಿ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇಕಡಾ 15ರಷ್ಟು ಹೆಚ್ಚುತ್ತಿದೆ. ಈ ವೆಚ್ಚವನ್ನು ಸರಿದೂಗಿಸಲು ಪಾಲಕರು ಮ್ಯೂಚುವಲ್ ಫಂಡ್, ಆವರ್ತಕ ನಿಧಿಗಳು, ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆಗಳು ಹಾಗೂ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ.

ಆದರೆ, ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆರ್ಥಿಕವಾಗಿ ಸದೃಢರಾಗಿಲ್ಲದ ಕಾರಣ, ಅವರ ಉನ್ನತ ಶಿಕ್ಷಣದ ಕನಸು ಸಾಕಾರಗೊಳ್ಳುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸೇರಲು ಬಯಸುತ್ತಾರೆ ಈಗಿನ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯಲು ಹಣದ ಅವಶ್ಯಕತೆ ತುಂಬಾನೇ ಇದೆ. ಅದರಲ್ಲು ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ದುಬಾರಿಯಾಗಿದೆ.

ಎಲ್‌ಕೆಜಿ ಯಿಂದ ಹಿಡಿದು ಮಾಸ್ಟರ್‌ ಡಿಗ್ರಿಯವರಗೆ ಶಿಕ್ಷಣದ ಖರ್ಚು ದಿನದಿಂದ ದಿನಕ್ಕೆ ದುಬಾರಿಯಾಗುತ್ತಲೇ ಇದೆ. ಪೋಷಕರಿಗೆ ಇದು ಹೊರೆಯಾದರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹಂಬಲ ಮಾತ್ರ ಕುಗ್ಗಿಲ್ಲ. ಅದಕ್ಕಾಗಿಯೇ ಹಲವು ಹಣಕಾಸಿನ ತೊಂದರೆಗಳನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.

ಆದ್ರೆ, ಇದೀಗ ರಾಜ್ಯ ಸರ್ಕಾರದಿಂದ ಅಂದರೆ, ಈಗ ಬಂದಿರುವ ಕಾಂಗ್ರೆಸ್ ಸರಕಾರವು ಈಗಾಗಲೇ ಹಲವಾರು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಲೇ ಇದೆ‌. ಹಾಗಾಗಿ ಅಭಿವೃದ್ಧಿಯ ಪರ್ವಕಾಲ ಎಂದೇ ಹೇಳಲಾಗುತ್ತಿದೆ. ಈ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ ಇನ್ನು ಆರಂಭಿಕ ಹಂತದಲ್ಲಿದ್ದು, ಈಗಾಗಲೇ ನಾಲ್ಕು ಯೋಜನೆಗೆ ಒಂದೊಂದಾಗೆ ಮಾನ್ಯತೆ ಸಿಗುತ್ತಿದೆ.

ಹಾಗಾಗಿ, ಸರ್ಕಾರ ಮಹಿಳಾ ಪರ, ರೈತರ ಪರ ಮತ್ತು ವಿದ್ಯಾರ್ಥಿಗಳ ಪರವಾಗೇ ತನ್ನ ಯೋಜನೆ ರೂಪಿಸಿದೆ ಎಂದರೂ ತಪ್ಪಲ್ಲ. ಇಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಗತ್ಯ ಪೂರೈಕೆ ಫೀಸ್ ಬರಿಸಲು ಶೂನ್ಯ ಬಡ್ಡಿದರದಲ್ಲಿ ಸಾಲ‌ ನೀಡುವ ಬಗ್ಗೆ ನಮಗೆ ತಿಳಿದಿದೆ. ಆದರೆ, ಈ ಒಂದು ಯೋಜನೆಗೆ ಅರ್ಹ ಆದ ವಿದ್ಯಾರ್ಥಿನಿಯರಿಗೆ ಫೀಸ್ ಕಟ್ಟಲೇ ಬೇಕಿಲ್ಲ. ಆ ಆಯೋಜನೆ ಯಾವುದು? ಯಾರಿಗಾಗಿ ಇದೆ? ಇತ್ಯಾದಿ ಮಾಹಿತಿ ಈ ಲೇಖನದಲ್ಲಿದೆ ನೋಡೋಣ ಬನ್ನಿ….

ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್

ನಿರ್ವಹಣೆಯ ವೆಚ್ಚ ಹೊರತಾಗಿ ಕುಟುಂಬದ ವಾರ್ಷಿಕ ಆದಾಯ 2.50ಲಕ್ಷ ದಾಟಿರದ ಅದರ ಒಳಗೆ ಆದಾಯ ಮಿತಿ ಹೊಂದಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಈಗೊಂದು ಸುವರ್ಣ ಅವಕಾಶ ಸಿಕ್ಕಿದೆ. ಮೆಟ್ರಿಕ್ ಅನಂತರದ ಕೋರ್ಸುಗಳ ಅಂದರೆ ಹತ್ತನೇ ಕ್ಲಾಸ್ ಬಳಿಕ ಪಿಯು ಪದವಿ ಇತರೆ ಕೋರ್ಸಿಗೆ ಕಾಲೇಜು ಪ್ರವೇಶಕ್ಕೆ ಕಾಲೇಜು ಅಥವಾ ವಿಶ್ವವಿದ್ಯಾಲಯಗಳು ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ.

ಇನ್ನು ಕೆಲವೊಂದು ಕೌನ್ಸಿಲಿಂಗ್ ಸೀಟುಗಳಿಗೆ ಸೇರಿದಂತೆ ಸರಕಾರಿ ಸ್ವಾಮ್ಯದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಂದಲೂ ಶುಲ್ಕ ವಸೂಲಿ ಮಾಡುವಂತೆ ಇಲ್ಲ ಎಂದು ಸರಕಾರದಿಂದಲೇ ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಕೊಂಚ ಮಟ್ಟಿಗೆ ಈ ಯೋಜನೆ ಬಿಗ್ ರಿಲೀಫ್ ಆಗಲಿದೆ.

ಯೋಜನೆ ಮುಖ್ಯ ಉದ್ದೇಶ

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಅದರಲ್ಲೂ ಅರ್ಹರು ಆರ್ಥಿಕ ವೆಚ್ಚ ಬರಿಸಲಾಗದೇ ಇದ್ದು, ಶಿಕ್ಷಣ ನಿಲ್ಲಿಸಬಾರದು ಎಂಬ ಕಾರಣಕ್ಕೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸರಕಾರದಿಂದ ಈ ಯೋಜನೆಗೆ ಅನುದಾನ ಸಿಗಲಿದ್ದು, ಅವರಿಂದ ಫೀಸ್ ಪಡೆಯುವಂತಿಲ್ಲ ಎಂದು ಆದೇಶ ಬಂದಿದೆ. ಇದರಿಂದ ಓದಬೇಕೆಂಬ ಈ ವರ್ಗದ ಮಕ್ಕಳಿಗೆ ಪ್ರೋತ್ಸಾಹ ದೊರೆಯುವುದರಲ್ಲಿ ಅನುಮಾನ ಇಲ್ಲ.

- Advertisment -