ಮಾಸ್ಟರ್ ಆನಂದ್ (Master Anand) ಕಳೆದ 30 ವರ್ಷಗಳಿಗಿಂತ ಹೆಚ್ಚಿನ ಸಮಯದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲ ನಟನಾಗಿ, ಸಹನಟನಾಗಿ, ಕಾಮಿಡಿ ಕಲಾವಿದನಾಗಿ ನಿರೂಪಕನಾಗಿ, ಧಾರಾವಾಹಿಗಳ ಡೈರೆಕ್ಟರ್ ಆಗಿ ಸಕ್ರಿಯರಾಗಿರುವ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ (Vamshika) ಕೂಡ ಕರ್ನಾಟಕದಾದ್ಯಂತ ಫೇಮಸ್.
ಮನೆ ಮನೆಗಳಲ್ಲಿ ಕೂಡ ವಂಶಿಕ ಆನಂದ್ ಮಗಳು ಎಂದು ಗೊತ್ತು, ಯಾಕೆಂದರೆ ವಂಶಿಕ ಸೋಶಿಯಲ್ ಮೀಡಿಯಾದಲ್ಲಿ ಅಷ್ಟು ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ ಕನ್ನಡ ಕಿರುತೆರೆಗಳಲ್ಲೂ ಕೂಡ ಅನೇಕ ರಿಯಾಲಿಟಿ ಶೋಗಳಲ್ಲಿ (reality shows) ಭಾಗವಹಿಸಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಈಗ ಮಾಸ್ಟರ್ ಆನಂದ್ ಅವರಿಗೆ ಮಗಳ ಟ್ಯಾಲೆಂಟ್ ಹೊಗಳಿಕೆ ಜೊತೆಗೆ ಕೆಲ ನೆ’ಗೆ’ಟಿ’ವ್ ಕಮೆಂಟ್ ಕೂಡ ಬರುತ್ತಿದೆ. ಮಾಸ್ಟರ್ ಆನಂದ್ ಮಗಳನ್ನು ಶಾಲೆಗೆ ಕಳಿಸುವ ಬದಲು ದುಡಿಯಲು ಕಳುಹಿಸುತ್ತಿದ್ದಾರೆ ಎನ್ನುವಂತಹ ಮಾತು ಕೂಡ ಇದೆ, ಬಹಳ ಸಮಯದಿಂದ ಇದನ್ನೆಲ್ಲ ಕೇಳಿ ಸಾಕಾಗಿದ್ದ ಮಾಸ್ಟರ್ ಆನಂದ್ ಸತ್ಯಾಂಶದ ಬಗ್ಗೆ ಹೇಳಿ ಟ್ರೋಲ್ ಮಾಡುವವರಿಗೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ.
ಇದಕ್ಕೆಲ್ಲ ಅವರು ಏನೆನ್ನುತ್ತಾರೆ ಎಂದರೆ ನಾನು ಬಾಲ ನಟನಾಗಿ ಬಂದಾಗ ನನಗೂ ನನ್ನ ತಂದೆಗೂ ಇಂತಹದೆ ಮಾತಿತ್ತು. ಇವರ ತಂದೆಯ ಶಾಲೆಗೆ ಕಳುಹಿಸದೇ ಶೂಟಿಂಗ್ ಗೆ ಕಳುಹಿಸಿ ಇವನನ್ನು ಹಾಳು ಮಾಡುತ್ತಿದ್ದಾರೆ ಇವನು ಈ ವಯಸ್ಸಿಗೆ ಹೀಗೆ ಉದ್ದಾರ ಆಗಲ್ಲ ಎಂದೆಲ್ಲ ಹೇಳುತ್ತಿದ್ದರು.
ಆದರೆ ನಾವೇನು ಹಾಳಾಗಿ ಹೋಗಲಿಲ್ಲ, ಒಂದು ಮಟ್ಟಕ್ಕೆ ಇವತ್ತಿಗೂ ಜನ ಗುರುತಿಸುತ್ತಾರೆ. ನಿಮ್ಮಿಂದ ನಮ್ಮ ಬಾಲ್ಯ ಚೆನ್ನಾಗಿತ್ತು ಎಂದು ನೆನೆಸಿಕೊಳ್ಳುತ್ತಾರೆ, ಇವತ್ತಿಗೂ ಅದೇ ಕಾರಣಕ್ಕೆ ನನಗೆ ದುಡಿಮೆ ಇದೆ. ನನ್ನ ಮಗಳಿಗೂ ದೈವಾನುಗ್ರಹದಿಂದ ಅಭಿನಯ ಬಂದಿದೆ ಮತ್ತು ಅವಕಾಶ ಸಿಗುತ್ತಿದೆ. ಎಲ್ಲರಿಗೂ ಇದು ಸಿಗುವುದಿಲ್ಲ ಉಪಯೋಗಿಸಿಕೊಳ್ಳದೆ ಇದ್ದಾಗ ಅದು ಕೂಡ ತಪ್ಪಾಗುತ್ತದೆ.
ನಾನು ಇಷ್ಟು ವರ್ಷದಲ್ಲಿ ಒಂದೇ ಒಂದು ಜಾಹೀರಾತಿನಲ್ಲಿ ಭಾಗವಹಿಸಲು ಆಗಿರಲಿಲ್ಲ ನನ್ನ ಮಗಳಿಂದ ಅದು ಆಯ್ತು ಹಾಗೆಂದ ಮಾತ್ರಕ್ಕೆ ಅವಳು ತುಂಬಾ ಫೇಮಸ್ ಆಗಿಬಿಟ್ಟಿದ್ದಾಳೆ. ದೊಡ್ಡ ದೊಡ್ಡ ಪ್ರೊಡಕ್ಷನ್ ಇಂದ ಅವಳಿಗೆ ಸಿನಿಮಾ ಬರುತ್ತಿದೆ, ದೊಡ್ಡ ದೊಡ್ಡ ಸ್ಟಾರ್ ಗಳು ಕರೆ ಮಾಡುತ್ತಾರೆ ಎಂದು ಅರ್ಥವಲ್ಲ, ಇದುವರೆಗೆ ಆ ರೀತಿ ಯಾರಿಂದಲೂ ಒಂದು ಕರೆಯು ಬಂದಿಲ್ಲ.
ಅವಳ ವಯಸ್ಸಿಗೆ ಅವಳು ಒಂದು ಮಟ್ಟಕ್ಕೆ ಸಾಧಿಸಿದ್ದಾಳೆ ಅವಳಿಗೆ ನಾವು ಅದಕ್ಕೆ ಪ್ರೋತ್ಸಾಹಿಸುತ್ತಿದ್ದೇವೆ ಅಷ್ಟೇ ಆದರೆ ಇದು ಕೂಡ ಸುಲಭ ಅಲ್ಲ. ಶಾಲೆ ಮತ್ತು ಶೂಟಿಂಗ್ ಎರಡು ಇರುವಾಗ ಟೈಮಿಂಗ್ ಮೈನ್ಟೈನ್ ಮಾಡಬೇಕು ಅದು ತುಂಬಾ ಕಷ್ಟ. ಶಾಲೆಯ ಪಾಠಗಳ ಜೊತೆಗೆ ಅವಳಿಗೆ ಆಕ್ಟಿಂಗ್ ರಿಹರ್ಸಲ್ ಗೆ ಕರೆದುಕೊಂಡು ಹೋಗಬೇಕು, ಶೂಟಿಂಗ್ ಗೆ ಕರೆದುಕೊಂಡು ಹೋಗಬೇಕು ಹೀಗಾಗಿ ಶಾಲೆ ಸ್ವಲ್ಪ ಕಡಿಮೆ ಆಗುತ್ತಿರಬಹುದು ಆದರೂ ಅವಳಿನ್ನು ಈಗ LKG.
ಅವಳು ಎಲ್ಲಿ ಕೆಲಸ ಮಾಡುತ್ತಾಳೆ ಆ ತಂಡ ಕೂಡ ಅವಳನ್ನು ಅಷ್ಟು ಚೆನ್ನಾಗಿ ಟ್ರೀಟ್ ಮಾಡುತ್ತದೆ. ಬೇಸಿಕ್ ಎಜುಕೇಶನ್ ಎಲ್ಲರಿಗೂ ಬೇಕು ನೂರು ಮಕ್ಕಳಲ್ಲಿ ಎರಡು ಮಕ್ಕಳು ಮಾತ್ರ ತಂದೆ ತಾಯಿಗೆ ಏನು ತೊಂದರೆ ಕೊಡದೆ ಚೆನ್ನಾಗಿ ಓದಿ ಬರುತ್ತಾರೆ, ಇನ್ನು 98 ಮಕ್ಕಳಿಗೆ ಮನೆಯಲ್ಲೂ ಕೂಡ ಟೀಚರ್ಸ್ ನಷ್ಟೇ ಪೇರೆಂಟ್ಸ್ ಗೂ ಎಫರ್ಟ್ ಇರುತ್ತದೆ.
ಶಾಲೆಗೆ ಕಳುಹಿಸುವುದು ವಿದ್ಯೆ ಕಳಿಸುವುದು ಎಜುಕೇಶನ್ ಜೊತೆಗೆ ಅಲ್ಲಿ ಎಲ್ಲರೊಂದಿಗೆ ಬೆರೆಯುವುದು ಕಲಿಯುತ್ತಾರೆ. ಶಿಕ್ಷಕರ ಭಯ ಇರುತ್ತದೆ, ಡಿಸಿಪ್ಲಿನ್ ಬರುತ್ತದೆ. ಆದರೆ ನೇಚರ್ ಗುಣ ಒಂದು ಬೇಕು ಎಂದರೆ ಮತ್ತೊಂದು ಕಳೆದುಕೊಳ್ಳಬೇಕು. ಅವಳು ಈಗ ಶೂಟಿಂಗ್ನಲ್ಲೂ ಅದನ್ನೆಲ್ಲ ಕಲಿಯುತ್ತಿದ್ದಾಳೆ ಒಂದು ವೇಳೆ ಅವಳು ಮಿತಿ ಮೀರಿದರೆ ನೇಚರ್ ಅವಳಿಗೆ ವಾಪಸ್ ಬುದ್ಧಿ ಕಲಿಸುತ್ತದೆ ಎಂದು ಆನಂದ್ ಹೇಳುತ್ತಾರೆ.
ಯಾವ ಮಕ್ಕಳಿಗೂ ಅವರ ಅಂಕದಿಂದ ಆಗಲಿ ಅಥವಾ ಸಾಧನೆಯಿಂದಾಗಲಿ ಕಂಪೇರ್ ಮಾಡುವುದು ತಪ್ಪು, ವಿದ್ಯೆ ಒಂದೇ ಸಾಕಾಗಿದ್ದರೆ ಉಳಿದ ಕ್ಷೇತ್ರಗಳು ಯಾಕೆ ಇವೆ? ಎಲ್ಲಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಮುಖ್ಯ ಅದಕ್ಕೆ ಬೇಸ್ ಶಿಕ್ಷಣ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ.