ಯಾವುದೇ ಬ್ಯಾಂಕ್ ಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಇಟ್ಟಿರುವಂತಹ ಪ್ರತಿಯೊಬ್ಬರು ಈ ಮಾಹಿತಿಯನ್ನು ತಿಳಿದುಕೊಳ್ಳಿ ರಿಸರ್ವ್ ಬ್ಯಾಂಕ್ ನ ನಿಯಮದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವೆಲ್ಲರೂ ಗಮನಿಸಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ಯಾಂಕ್ ಗಳು ಮುಳುಗಡೆ ಆಗುತ್ತಿರುವ ಹಾಗೂ ನಷ್ಟಕ್ಕೆ ಸಿಲುಕಿತ್ತಿರುವ ಬಗ್ಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೆ ಸುದ್ದಿ ಮಾಧ್ಯಮಗಳಲ್ಲಿ ನೋಡಿರುತ್ತೇವೆ.
ಈ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಹಣ ಇಟ್ಟವವರು ಏನು ಮಾಡಬೇಕು ಎನ್ನುವುದಾಗಿ ಕೂಡ ಚಿಂತನೆ ಮಾಡುತ್ತೇವೆ ಈ ಸಂದರ್ಭದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯುವುದಾದರೆ ಒಂದು ವೇಳೆ ಬ್ಯಾಂಕ್ ನಷ್ಟವಾಗಿ ಮುಳುಗಡೆಯಾದರೆ ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿಮ್ಮ ಸಹಾಯಕ್ಕೆ ಬರುತ್ತದೆ ಎಂಬುದಾಗಿ ತಿಳಿದು ಬಂದಿದೆ.
5 ಲಕ್ಷಗಳವರೆಗೆ ಠೇವಣಿ ಇಟ್ಟಿರುವಂತಹ ಪ್ರತಿಯೊಬ್ಬರಿಗೂ ಕೂಡ ಪರಿಹಾರವನ್ನು ನೀಡಲಾಗುತ್ತದೆ ಎನ್ನುವುದಾಗಿ ಸಂಪುಟ ಸಭೆಯಲ್ಲಿ ನಿರ್ಧಾರವಾಗಿದೆ. DCGC ನಿಯಮಗಳ ಪ್ರಕಾರ 90 ದಿನಗಳ ಒಳಗಾಗಿ ಬ್ಯಾಂಕುಗಳು ಈ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ನಿರ್ಧಾರವಾಗಿದೆ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಕೇಂದ್ರ ಸಚಿವರಾದಂತಹ ಅನುರಾಧ್ ಠಾಕೂರ್ ಇದರ ಬಗ್ಗೆ ಮಾತನಾಡುತ್ತಾ RBI ಮೂಲಕ ನಿಷ್ಕ್ರಿಯಗೊಳ್ಳುವಂತಹ ಬ್ಯಾಂಕುಗಳ ಖಾತೆಗಳಲ್ಲಿ ಹಣವನ್ನು ಠೇವಣಿ ಇಟ್ಟಿರುವವರಿಗೆ 90 ದಿನಗಳ ಒಳಗಾಗಿ ನಿಬಂಧನೆಗಳ ಪ್ರಕಾರ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಹಾಗೆಯೇ ಸಚಿವೆ ನಿರ್ಮಲಾ ಸೀತಾರಾಮ್ ಕೂಡ ಈ ನಿಯಮದ ಪ್ರಕಾರ 98.3 ಪ್ರತಿಶತ ಸುರಕ್ಷತೆಯನ್ನು ನೀವು ಠೇವಣಿ ಇಡುವಂತಹ ಬ್ಯಾಂಕುಗಳ ಹಣದ ಮೇಲೆ ನಾವು ನೀಡಬಹುದಾಗಿದೆ ಎಂಬುದಾಗಿ ಕೂಡ ಹೇಳಿದ್ದಾರೆ ಈ ನಿಯಮದ ಪ್ರಕಾರ ನೀವು ನಿಮ್ಮ ಬ್ಯಾಂಕಿನ ಅಕೌಂಟ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಹಣ ಇದ್ದರೂ ಕೂಡ ನಿಮಗೆ ಗರಿಷ್ಟ ಪಕ್ಷದಲ್ಲಿ ಐದು ಲಕ್ಷಗಳ ವರೆಗೆ ಪರಿಹಾರವನ್ನು ನೀಡುವುದಾಗಿ ತಿಳಿಸಲಾಗಿದೆ.
ನೀವು ಬ್ಯಾಂಕಗಳಲ್ಲಿ ಎಷ್ಟೇ ಮೊತ್ತದ ಹಣ ಇಟ್ಟಿದ್ದರು ಸಹ ಕೊನೆಯ ಪಕ್ಷದಲ್ಲಿ 5 ಲಕ್ಷದ ವರೆಗೆ ಆದರೂ ನಿಮಗೆ ಪರಿಹಾರ ಸಿಗುತ್ತದೆ ನೀವು ಬ್ಯಾಂಕ್ ನಲ್ಲಿ ಠೇವಣಿ ಇಡುವ ಮುಂಚೆ ಈ ರೀತಿಯ ನಿಯಮಗಳನ್ನು ಮನಸ್ಸಿನಲ್ಲಿ ಯೋಚಿಸಬೇಕಾಗುತ್ತದೆ. 5 ಲಕ್ಷ ರೂಪಾಯಿಗಳಷ್ಟು ಅಥವಾ 5 ಲಕ್ಷದ ಒಳಗೆ ಹಣವನ್ನು ಠೇವಣಿ ಮಾಡಿರುವುದು ಉತ್ತಮ ಆಯ್ಕೆಯಾಗಿದೆ.
DGCGC ನಿಯಮಗಳ ಪ್ರಕಾರ RBI ನಿಂದ ಲಾಸ್ ಅಥವಾ ಹ.ಗ.ರ.ಣಗಳ ಕಾರಣಗಳಿಂದಾಗಿ ನಿರ್ಬಂಧನೆಗೆ ಒಳಗಾಗಿರುವಂತಹ ಬ್ಯಾಂಕುಗಳಲ್ಲಿ ಹಣವನ್ನು ಇಟ್ಟಿರುವಂತಹ ಜನರಿಗೆ ಕನಿಷ್ಠಪಕ್ಷ ಐದು ಲಕ್ಷ ರೂಪಾಯಿಗಳವರೆಗೆ ಕೂಡ ಪರಿಹಾರ ಸಿಗುತ್ತದೆ ಈ ನಿಯಮಗಳನ್ನು ಭಾರತದಲ್ಲಿ ಇರುವಂತಹ ಎಲ್ಲಾ ಪ್ರಕಾರದ ಬ್ಯಾಂಕುಗಳು ಹಾಗೂ ಭಾರತದಲ್ಲಿರುವಂತಹ ಫಾರಿನ್ ಬ್ಯಾಂಕುಗಳಿಗೂ ಕೂಡ ಅನ್ವಯಿಸುತ್ತದೆ.
ಇದನ್ನು ಓದಿ:- ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಮಗಳು, ಕಲಿಯುಗದಲ್ಲಿ ನಡೆಯಬಾರದು ನಡೆಯುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.
ಆದರೆ ಕೆಲವೊಂದು ನಿರ್ದಿಷ್ಟ ಠೇವಣಿ ಖಾತೆಗಳು ಇದರಿಂದ ಹೊರಗೆ ಇರುತ್ತದೆ ಸಾಕಷ್ಟು ಬಾರಿ ಈ ರೀತಿ ಆದಾಗ ಅಲ್ಲಿ ಹಣವನ್ನು ಇಟ್ಟಿರುವಂತಹ ಜನರಿಗೆ ಹಣ ಸಿಕ್ಕಿರುವುದಿಲ್ಲ ಹೀಗಾಗಿ ಈ ನಿಯಮಗಳು ಖಂಡಿತವಾಗಿ ಸಹಾಯಮಾಡುತ್ತದೆ. ನೀವು ಸಹ ಬ್ಯಾಂಕಿನಲ್ಲಿ ಹಣವನ್ನು ಇಡುವುದಾದರೆ 5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಹಣವನ್ನು ಇಟ್ಟರೆ ಬ್ಯಾಂಕ್ ಲಾಸ್ ಆದಂತಹ ಸಂದರ್ಭದಲ್ಲಿ ಅಥವಾ ದಿವಾಳಿಯಾದಂತಹ ಸಂದರ್ಭದಲ್ಲಿ ನಿಮ್ಮ ಹಣವನ್ನು ಸರ್ಕಾರವೇ ಭರಿಸಿಕೊಡುತ್ತದೆ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |