ನಾಡಕಚೇರಿ ಹೊಸ ವೆಬ್ಸೈಟ್ ಆರಂಭ, ಇನ್ಮುಂದೆ ಜಾತಿ ಆದಾಯ ವಾಸಸ್ಥಳ ಯಾವುದೇ ಪ್ರಮಾಣ ಪತ್ರ ಬೇಕಾದ್ರು ನಿಮ್ಮ ಮೊಬೈಲ್ ಮೂಲಕವೇ ಉಚಿತವಾಗಿ ಅರ್ಜಿ ಸಲ್ಲಿಸಿ ನಾಡಕಛೇರಿಗೆ ಹೋಗಬೇಡಿ.

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎನ್ನುವ ಮಾತು ಸಾರ್ವಕಾಲಿಕವಾಗಿ ಅನ್ವಯವಾಗುತ್ತದೆ. ಯಾಕೆಂದರೆ ಇದನ್ನು ಪ್ರತಿಯೊಂದು ವಿಷಯಕ್ಕೂ ಕೂಡ ಅಪ್ಲೈ ಮಾಡಬಹುದು. ನಮ್ಮ ಮೊಬೈಲ್ ಗಳಲ್ಲಿರುವ ಆಪ್ ಗಳಾದರೂ ಕೂಡ ಅಪ್ಡೇಟ್ ಆಗುತ್ತಿದ್ದಂತೆ ಅದರ ಹೊಸ ಹೊಸ ಫೀಚರ್ ಗಳು ಸಿಗುತ್ತದೆ. ಹಾಗೆಯೇ ಎಲ್ಲಾ ತಂತ್ರಾಂಶಗಳಿಗೂ ಕೂಡ. ಈಗ ಡಿಜಟಲೀಕರಣದತ್ತ ಭಾರತ ಮುನ್ನುಗ್ಗುತಿದೆ ಮತ್ತು ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆಲ್ಲ ಕಾಗದ ರಹಿತ ಪತ್ರ ವ್ಯವಹಾರ ಅಂದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ಶುಲ್ಕ ಸಲ್ಲಿಕೆ ವ್ಯವಹಾರಗಳತ್ತ ಯುವಜನತೆ ಆಸಕ್ತಿ ತೋರುತ್ತಿದ್ದಾರೆ.

ಬ್ಯಾಂಕಿಂಗ್, ಕಂದಾಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳು ಕೂಡ ಈಗ ಡಿಜಿಟಲಿಕರಣಗೊಂಡಿವೆ. ಡಿಜಿಟಲೀಕರಣಗೊಂಡ ಮೇಲೆ ಅದು ಕಾಲಕಾಲಕ್ಕೆ ಅಪ್ಡೇಟ್ ಆಗುವುದು ಕೂಡ ಅಷ್ಟೇ ಮುಖ್ಯ, ಅದನ್ನು ತಿಳಿದುಕೊಂಡಿರಬೇಕಾದದ್ದು ಕೂಡ ಅಷ್ಟೇ ಮುಖ್ಯ. ಹೌದು ತಂತ್ರಾಂಶದ ಅಪ್ಡೇಟ್ ವರ್ಷನ್ ಅಲ್ಲಿ ನಾವು ಅದನ್ನು ಉಪಯೋಗಿಸಿದರೆ ತ್ವರಿತ ಗತಿಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಸುಲಭವಾಗಿ ಪೂರ್ತಿಗೊಳ್ಳುತ್ತದೆ.

ಹಾಗಾಗಿ ಜನರು ಲೇಟೆಸ್ಟ್ ವರ್ಷನ್ ಯಾವುದು ಎಂದು ತಿಳಿದುಕೊಂಡು ಅದರ ಪ್ರಕಾರ ಬಳಸಿಕೊಳ್ಳುತ್ತಾರೆ. ಕರ್ನಾಟಕ ಸರ್ಕಾರದ ಎಲ್ಲಾ ತಂತ್ರಾಂಶಗಳನ್ನು ಕೂಡ ಇನ್ನಷ್ಟು ಸರಳ ಗೊಳಿಸುವುದಾಗಿ ಹಾಗೂ ಅದನ್ನು ಅಪ್ಡೇಟ್ ವರ್ಷನ್ ಅಲ್ಲಿ ಸಿದ್ಧಪಡಿಸುವುದಾಗಿ ಹೇಳಿತ್ತು. ಅದರಂತೆ ಈಗ ಮೊದಲನೆಯದಾಗಿ ನಾಡಕಚೇರಿ ತಂತ್ರಾಂಶವು ಅಪ್ಡೇಟ್ ಆಗಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಈ ಹೊಸ ವರ್ಷನ್ ಲಭ್ಯವಿದೆ.

ಈ ಹಿಂದೆ ನಾಡಕಚೇರಿ ವೆಬ್ಸೈಟ್ ಅನ್ನು 4.5 ಆವೃತ್ತಿಯಲ್ಲಿ ಓಪನ್ ಮಾಡಿ ಸೇವೆಗಳನ್ನು ಪಡೆಯಲಾಗುತ್ತಿತ್ತು, ಇನ್ನು ಮುಂದೆ ಅದು ಸಹ ಇರುತ್ತದೆ ಹಾಗೂ ಅದರ ಜೊತೆಗೆ ಲೇಟೆಸ್ಟ್ ಆದ 5.0 ವರ್ಷನ್ ಅನ್ನು ಬಳಸಬಹುದು. ನಾಡಕಛೇರಿ ಲೇಟೆಸ್ಟ್ ವರ್ಷನ್ 5.0 ತಂತ್ರಾಂಶವನ್ನು ಹೇಗೆ ಓಪನ್ ಮಾಡಬಹುದು ಎನ್ನುವುದನ್ನು ಈ ಅಂಕಣದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ. www.nanadakacheri.karntaka.gov.in ಈ ವೆಬ್ಸೈಟ್ ಲಿಂಕ್ ಮಾಡಿದರೆ ಡೈರೆಕ್ಟ್ ಆಗಿ ನೀವು ನಾಡಕಚೇರಿಯ ಹೊಸ ಮುಖಪಟವನ್ನು ನೋಡುತ್ತೀರಿ.

ಇದರಲ್ಲೂ ಕೂಡ ಹಿಂದಿನಂತೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆದು ಮೇನ್ ಮೆನುವಿಗೆ ಹೋಗಬೇಕು. ನಾಡಕಚೇರಿಯನ್ನು ಅಟಲ್ ಜಿ ಜನಸಹಿ ಕೇಂದ್ರ ಎಂದು ಕೂಡ ಕರೆಯುತ್ತಾರೆ. ನಾಡಕಚೇರಿ ಗೆ ಹೋಗಿ ಪಡೆಯುವ ಎಲ್ಲಾ ಸೇವೆಗಳನ್ನು ಕೂಡ ನಾಡಕಚೇರಿಯ ಈ ವೆಬ್ ಸೈಟ್ ಗಳಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು.

ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನಸಂಖ್ಯೆ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ ಸೇರಿದಂತೆ ಜಾತಿ, ಆದಾಯ, ಜಮೀನು, ಕೃಷಿ ಮತ್ತು ಸಾಮಾಜಿಕ ಭದ್ರತೆಯ ಪಿಂಚಣಿಗಳು ಸೇರಿದಂತೆ 32 ಕ್ಕಿಂತ ಹೆಚ್ಚು ಸೇವೆಗಳನ್ನು ಪಡೆಯಲು ನಾಡಕಛೇರಿ ಗೆ ಹೋಗಲು ಸಾಧ್ಯವಾಗದಿದ್ದರೆ ನಾಡಕಚೇರಿ ವೆಬ್ಸೈಟ್ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಸಲ್ಲಿಸಲು ಅಥವಾ ಹಳೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಯಾವುದಾದರು ಶುಲ್ಕ ಬಾಕಿ ಇದ್ದರೆ ಅದನ್ನು ಪಾವತಿ ಮಾಡುವುದಿದ್ದರೆ ನಾಡಕಚೇರಿ ಈ ವೆಬ್ಸೈಟ್ ಮೂಲಕ ಪ್ರಕ್ರಿಯೆ ಪೂರ್ತಿಗೊಳಿಸಬಹುದು. ಸರ್ಕಾರದ ಈ ಹೊಸ ನಾಡಕಛೇರಿ ವರ್ಷನ್ ಹಿಂದಿನ ವರ್ಷನ್ ಗಿಂತ ಪರಿಣಾಮಕಾರಿಯಾಗಿ ನಿಮಗೆ ಸೇವೆಗಳನ್ನು ಒದಗಿಸಿಕೊಡುತ್ತದೆ.

Leave a Comment