ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದಿಂದ ಇಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
ಈ ಲೇಖನದಲ್ಲಿ ಸೂಚಿಸಿರುವ ವಿದ್ಯಾರ್ಹತೆ, ವಯೋಮಿತಿ ,ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
* ಇಲಾಖೆ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)
* ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
* ಒಟ್ಟು ಹುದ್ದೆಗಳು : 670
* ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ಸರಕಾರದ ಈ ಕೆಳಗಿನ 5 ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
* ಕಲ್ಯಾಣ ಅಧಿಕಾರಿ : 12
* ಕ್ಷೇತ್ರ ನಿರೀಕ್ಷಕರು : 60
* ಪ್ರಥಮ ದರ್ಜೆ ಸಹಾಯಕ (FDA) : 12
* ದ್ವಿತೀಯ ದರ್ಜೆ ಸಹಾಯಕ (SDA) : 100
* ಸಹಾಯಕ ವ್ಯವಸ್ಥಾಪಕರು : 33
* ಖಾಸಗಿ ಸಲಹೆಗಾರ : 2
* ಗುಣಮಟ್ಟದ ಪರಿವೀಕ್ಷಕರು : 23
* ಹಿರಿಯ ಸಹಾಯಕ (ಖಾತೆಗಳು) : 33
* ಹಿರಿಯ ಸಹಾಯಕ : 57
* ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) – ಗುಂಪು-ಬಿ : 4
* ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) – ಗುಂಪು-ಬಿ : 2
* ಖಾಸಗಿ ಕಾರ್ಯದರ್ಶಿ – ಗುಂಪು-ಸಿ : 1
* ಕಿರಿಯ ಸಹಾಯಕ : 263
* ಹಿರಿಯ ಸಹಾಯಕ (ತಾಂತ್ರಿಕ) -ಗ್ರೂಪ್ -ಸಿ : 4
* ಹಿರಿಯ ಸಹಾಯಕ (ತಾಂತ್ರಿಕೇತರ) – ಗ್ರೂಪ್ -C : 3
* ಸಹಾಯಕ (ತಾಂತ್ರಿಕ) – ಗ್ರೂಪ್ -ಸಿ : 6
* ಸಹಾಯಕ (ತಾಂತ್ರಿಕವಲ್ಲದ) – ಗ್ರೂಪ್ -ಸಿ: 6
* ಮಾರಾಟ ಮೇಲ್ವಿಚಾರಕರು : 19
* ಸೇಲ್ಸ್ ಇಂಜಿನಿಯರ್ : 4
* ಅಕೌಂಟ್ಸ್ ಕ್ಲರ್ಕ್ : 6
* ಗುಮಾಸ್ತ : 14
* ಮಾರಾಟ ಪ್ರತಿನಿಧಿ : 6
ವಿದ್ಯಾರ್ಹತೆ ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್ಸೆಸೆಲ್ಸಿ / ಪಿಯುಸಿ / ಪದವಿ / ಬಿಇ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ಮಾಸಿಕ ವೇತನ?
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 52,650 /- ರೂ ಗಳಿಂದ 97,100/- ರೂಗಳ ವರೆಗೆ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 23-06-2023 ಮಧ್ಯಾಹ್ನ 2.00 ರಿಂದ
* ಅರ್ಜಿ ಶುಲ್ಕ ಪಾವತಿ ಮಾಡಲು ಪ್ರಾರಂಭಿಕ ದಿನಾಂಕ : 26-06-2023 ಬೆಳ್ಳಿಗೆ 11.00 ರಿಂದ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-07-2023 ಸಂಜೆ 5.30 ರ ವರೆಗೆ
* ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 25-07-2023 ರ ವರೆಗೆ
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23 ಜೂನ್ 2023
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಜುಲೈ 2023
ಜಿಲ್ಲಾವಾರು ಉದ್ಯೋಗಗಳು
ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ,
ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಲಬುರಗಿ,
ಕಾರವಾರ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ.