ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎನ್ನುವುದು ಒಂದು ಸರ್ವೇ ಸಾಮಾನ್ಯ ಸಮಸ್ಯೆ ಆಗಿದೆ. ಹಿಂದಿನ ಕಾಲದಲ್ಲೆಲ್ಲಾ ಇದನ್ನು ವಯೋಸಹಜ ಕಾಯಿಲೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಬದಲಾಗಿರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ದುಷ್ಪರಿಣಾಮವಾಗಿ ಮಹಿಳೆಯರಿಗೆ 35 ದಾಟುತ್ತಿದ್ದಂತೆ ಹಾಗೂ ಪುರುಷರಿಗೆ 40 ವರ್ಷ ದಾಟುತ್ತಿದಂತೆ ಮಂಡಿ ನೋವು, ಸೊಂಟ ನೋವು, ಕೀಲು ನೋವು, ಕೈಕಾಲು ನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದು ವಿಪರೀತವಾಗಿ ಅವರನ್ನು ಕಾಡಿ ಜೀವನವನ್ನು ಹಿಪ್ಪಿ ಹಿಂಡಿ ಮಾಡಿ ಬಿಡುತ್ತದೆ.
ಇಂತಹ ನೋವುಗಳನ್ನು ಸಹಿಸಲು ಅಸಾಧ್ಯ. ಇದಕ್ಕೆ ಹೋಮಿಯೋಪತಿ, ನ್ಯಾಚುರೋಪತಿ. ಹಾಲೋಪತಿ, ಆಯುರ್ವೇದಿಕ್ ಮುಂತಾದ ಎಲ್ಲಾ ಚಿಕಿತ್ಸಾ ಪದ್ದತಿಯಿಂದ ಪರಿಹಾರ ಇದ್ದೇ ಇದೆ. ಆದರೆ ಅದು ಬರಿ ನೋವು ನಿವಾರಕವಾಗಿರುತ್ತದೆ ಹೊರತು ಶಾಶ್ವತ ಪರಿಹಾರ ಎನಿಸುವುದಿಲ್ಲ. ಯಾಕೆಂದರೆ ಈ ರೀತಿ ದೇಹದಲ್ಲಿ ನೋವು ಕಾಣಿಸಿಕೊಳ್ಳಲು ಕಾರಣಗಳು ನಮ್ಮ ದೇಹದಲ್ಲಿಯೇ ಇರುತ್ತದೆ. ನಾವು ಸ್ಥೂಲಕಾಯಿಗಳಾಗಿದ್ದರೆ ನಮ್ಮ ದೇಹದ ತೂಕ ವಿಪರೀತವಾಗಿ ಹೆಚ್ಚಾಗುತ್ತಿದ್ದರೆ.
ಆ ದೇಹದ ಎಲ್ಲಾ ತೂಕವು ಕೂಡ ಒಮ್ಮೆಲೆ ಕಾಲಿನ ಮೇಲೆ ಬೀಳುವುದರಿಂದ ಖಂಡಿತವಾಗಿಯೂ ಕಾಲು ನೋವು, ಮಂಡಿ ನೋವು, ಸೊಂಟ ನೋವು ನಮ್ಮನ್ನು ಕಾಡುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗುವುದರಿಂದ ಕೂಡ ಇದು ಈ ರೀತಿ ನೋವು ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಮತ್ತು ವೈದ್ಯರ ಬಳಿ ಹೋದಾಗಲೂ ಕೂಡ ಅವರು ಕ್ಯಾಲ್ಸಿಯಂ ಕೊರತೆಯಾಗಿ ಅಥವಾ ವಯಸ್ಸಾದ ಕಾರಣ ದೇಹದಲ್ಲಿ ಮೂಳೆ ಸವಿದಿದೆ.
ಆ ಸವೆತದ ಕಾರಣವಾಗಿ ನೀವು ನೋವು ತಿನ್ನುತ್ತಿದ್ದೀರಾ ಎಂದು ಹೇಳಿ ಸದ್ಯದ ಪರಿಸ್ಥಿತಿಗೆ ಚಿಕಿತ್ಸೆ ಕೊಡುತ್ತಾರೆ. ಅವರು ಪೇನ್ ಕಿಲ್ಲರ್ ಟ್ಯಾಬ್ಲೆಟ್ ಕೊಟ್ಟರೆ 15-20 ಗಂಟೆಗಳ ಕಾಲ ನೀವು ನೋವಿಲ್ಲದೆ ಇರಬಹುದು, ಆದರೆ ಮತ್ತೆ ನೋವು ನಿಮ್ಮನ್ನು ಬಾಧಿಸುತ್ತದೆ. ಅದಕ್ಕಾಗಿ ಆದಷ್ಟು ಶಾಶ್ವತ ಪರಿಹಾರಗಳ ಕಡೆ ಮನಸು ಮಾಡಬೇಕು. ಕ್ಯಾಲ್ಸಿಯಂ ಕೊರತೆಯಿಂದ ಹೀಗಾಗುತ್ತಿದೆ.
ಕ್ಯಾಲ್ಸಿಯಂ ಕೊರತೆ ಸರಿದೂಗಿಸಲು ನೀವು ಕ್ಯಾಲ್ಸಿಯಂ ಮಾತ್ರೆಗಳ ಅಥವಾ ಔಷಧಿಗಳ ಮೊರೆ ಹೋಗುತ್ತೀರಾ ಇದು ತಪ್ಪು, ನ್ಯಾಚುರಲ್ ಆಗಿ ಕ್ಯಾಲ್ಸಿಯಂ ಅನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ಔಷಧಿ ತಯಾರಿಸಿ ಮೂರು ತಿಂಗಳು ತಪ್ಪದೆ ತೆಗೆದುಕೊಂಡಲ್ಲಿ ಕ್ಯಾಲ್ಸಿಯಂ ಕೊರತೆ ಸರಿದೂಗಿ ನೀವು ಶಾಶ್ವತವಾಗಿ ಈ ನೋವಿನ ಸಮಸ್ಯೆಯಿಂದ ಪರಿಹಾರ ಕಾಣಬಹುದು.
ಅದಕ್ಕಾಗಿ ಮಾಡಬೇಕಾಗಿರೋದು ಇಷ್ಟೇ. ಎಳ್ಳು, ಅಗಸೆ ಮತ್ತು ಮೆಂತ್ಯ ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಆದರೆ ಮೂರನ್ನು ಕೂಡ ಪ್ರತ್ಯೇಕವಾಗಿ ಬಿಸಿ ಮಾಡಿಕೊಳ್ಳಿ ಹಾಗೂ ಪ್ರತ್ಯೇಕವಾಗಿ ಪುಡಿ ಮಾಡಿಕೊಂಡು ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಏರ್ ಕಂಟೇನರ್ ಜಾರ್ ಅಲ್ಲಿ ಇಟ್ಟುಕೊಳ್ಳಿ ಪ್ರತಿದಿನ ಬೆಳಿಗ್ಗೆ ಉಪಹಾರ ಸೇವಿಸುವ ಮುನ್ನ ಒಂದು ಲೋಟ ಬೆಚ್ಚಗಿರ ನೀರಿಗೆ ಒಂದು ಪೂರ್ತಿ ಚಮಚ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.
ಒಂದು ದಿನವೂ ತಪ್ಪಿಸದೆ ಮೂರು ತಿಂಗಳುಗಳ ಕಾಲ ಇದನ್ನು ಪಾಲಿಸಿದರೆ ನಿಮ್ಮ ಮಂಡಿ ನೋವು 60 ಪರ್ಸೆಂಟ್ ಪರಿಹಾರ ಆಗಿರುತ್ತದೆ. ಮತ್ತು ಇದನ್ನು ಮುಂದುವರಿಸಿದರೆ ಶಾಶ್ವತವಾಗಿ ಈ ನೋವಿನಿಂದ ಪರಿಹಾರ ಕಾಣುತ್ತೀರಿ. ಇಂತಹ ಉಪಯುಕ್ತ ಪರಿಹಾರದ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ.