Tuesday, October 3, 2023
Home News ಮಂಡ್ಯದ ಜಾಗ್ವಾರ್ ಎತ್ತು ಬರೋಬ್ಬರಿ 9.26 ಲಕ್ಷಕ್ಕೆ ಮಾರಾಟ. ಇಲ್ಲಿದೆ ಸಂಪೂರ್ಣ ವಿವರ.

ಮಂಡ್ಯದ ಜಾಗ್ವಾರ್ ಎತ್ತು ಬರೋಬ್ಬರಿ 9.26 ಲಕ್ಷಕ್ಕೆ ಮಾರಾಟ. ಇಲ್ಲಿದೆ ಸಂಪೂರ್ಣ ವಿವರ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಮಂಡ್ಯದ ಅಗ್ರಹಾರ ಗ್ರಾಮದ ನವೀನ್ ಎಂಬುವವರಿಗೆ ಸೇರಿದಂತಹ ಹಳ್ಳಿಕಾರ್ ತಳಿಯ ಒಂಟಿ ಎತ್ತು 9,26,000 ಮಾರಾಟವಾಗಿದ್ದು ಇದು ದಾಖಲೆಯನ್ನು ಸೃಷ್ಟಿ ಮಾಡಿದೆ ಹೌದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬುವರಿಗೆ ಸೇರಿದಂತಹ ಹಳ್ಳಿಕಾರ್ ತಳಿಯ ಒಂಟಿ ಎತ್ತು ಇದೀಗ 9.26 ಲಕ್ಷಕ್ಕೆ ಮಾರಾಟವಾಗಿದೆ.

ಇದು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು ತಮಿಳುನಾಡಿನ ಸಿರುವಯ್ ತಂಬಿ ಅವರು ಜಾಗ್ವಾರ್ ಹೆಸರಿನ ಈ ಎತ್ತನ್ನು ಖರೀದಿ ಮಾಡಿದ್ದಾರೆ. ಮಂಡ್ಯದ ನವೀನ್ ಅವರ ಸಾಧನೆಯನ್ನು ಮೆಚ್ಚಲೇ ಬೇಕಾದದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬುವವರು ಎರಡು ವರ್ಷದ ಹಳ್ಳಿಕಾರ್ ತಳಿಯ ಎತ್ತನ್ನು ಬುಧವಾರ 9.26 ಲಕ್ಷ ರೂಪಾಯಿಗೆ ದಾಖಲೆಯ ಬೆಲೆಗೆ ತಮಿಳುನಾಡು ಮೂಲದ ಸಿರಿವಾಯ್ ತಂಬಿ ಎನ್ನುವವರು ಖರೀದಿಸಿದ್ದಾರೆ

ಈಗಾಗಲೇ ರಾಜ್ಯ ಸೇರಿದಂತೆ ತಮಿಳುನಾಡಿನಲ್ಲಿ ಹಲವು ಪ್ರಶಸ್ತಿಗಳನ್ನು ಈ ಜಾಗ್ವಾರ್ ಹೆಸರಿನ ಎತ್ತು ಗೆದ್ದಿದೆ ತಮಿಳುನಾಡಿನಲ್ಲಿ ಹಳ್ಳಿಕಾರ್ ಎತ್ತು ಸಾಕಷ್ಟ ಹೆಸರು ಗಳಿಸಿದೆ ಹಾಗಾಗಿ ತಮಿಳುನಾಡಿನಲ್ಲಿ ನಡೆಯುವ ರೇಸ್ ನಲ್ಲಿ ಬಳಸಿಕೊಳ್ಳಲು ಜಾಗ್ವಾರ್ ಎತ್ತನ್ನು ಖರೀದಿ ಮಾಡಲಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ ಜಾಗ್ವಾರ್ ಎತ್ತು ಒಂದು ವಿಶೇಷವಾದಂತಹ ಅಪರೂಪದ ತಳಿ ಎರಡು ವರ್ಷ ವಯಸ್ಸಿನ ಎತ್ತನ್ನು ಒಂದು ವರ್ಷದ ಹಿಂದೆ 1 ಲಕ್ಷ ರೂಪಾಯಿ ಕೊಟ್ಟು ನವೀನ್ ಅವರು ಖರೀದಿ ಮಾಡಿದ್ದರು.

ಕರುವನ್ನು ಪಳಗಿಸಿ ಮನೆ ಮಗನಂತೆ ಪ್ರೀತಿಯಿಂದ ಬೆಳೆಸಿದ್ದರು. ಮೊದಲಿನಿಂದಲೂ ಎತ್ತಿನ ಗಾಡಿ ರೇಸ್ ನಲ್ಲಿ ಆಸಕ್ತಿ ಹೊಂದಿದಂತಹ ರೈತ ನವೀನ್ ಅವರು ತನ್ನ ಹಳ್ಳಿ ಕಾರ್ ತಳಿಯ ಕರುವನ್ನು ರೇಸ್ ಗೆ ಪಳಗಿಸಿ ಅದಕ್ಕೆ ಜಾಗ್ವಾರ್ ಎಂದು ತಾವೇ ನಾಮಕರಣ ಮಾಡಿದ್ದರು ನವೀನ್ ಅದೃಷ್ಟವೋ ಏನೋ ಎಂಬಂತೆ ಅದು ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿಯೂ ಸಹ ಬಹುಮಾನವನ್ನು ಗಳಿಸಿತ್ತು.

ರಾಜ್ಯದಲ್ಲಿ ಮಾತ್ರವಲ್ಲದೆ ತಮಿಳುನಾಡಿನ ರೇಸ್ ಗಳಲ್ಲಿಯೂ ಜಾಗ್ವಾರ್ ಭಾಗವಹಿಸಿ ಗೆದ್ದು ಹೆಸರನ್ನು ಪಡೆದುಕೊಂಡಿತು ಆ ಜಾಗ್ವಾರ್ ತಳಿಯ ಎತ್ತನ್ನು ನೋಡಿದಂತಹ ತಮಿಳುನಾಡಿನ ರೈತರೊಬ್ಬರು ಬರೋಬ್ಬರಿ 9,26,000 ರೂಪಾಯಿಗಳನ್ನು ನೀಡಿ ಇದೀಗ ಖರೀದಿ ಮಾಡಿದ್ದಾರೆ. ಹಳ್ಳಿಕಾರ್ ತಳಿಯ ಎತ್ತನ್ನು ಸಾಕುವ ಮೊದಲು ನವೀನ್ ಅವರು ಎರಡು ಎತ್ತುಗಳನ್ನು ಸಾಕಿದ್ದರು ಆ ಎರಡು ಎತ್ತುಗಳ ಪೈಕಿ ಒಂದನ್ನು ಮಾರಾಟ ಮಾಡಿದರೆ ಇನ್ನೊಂದು ಎತ್ತು ಅನಾರೋಗ್ಯಕ್ಕೆ ತುತ್ತಾಗಿ ಸಾ’ವಿ’ಗೀಡಾಗಿತ್ತು.

ಕಳೆದ ಹಲವು ವರ್ಷಗಳಿಂದಲೂ ಹಳ್ಳಿಕಾರ್ ತಳಿಯ ಎತ್ತನ್ನು ಸಾಕಿ ಎತ್ತಿನ ಗಾಡಿ ರೇಸ್ ಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿತ್ತು ಕಳೆದ ಒಂದು ವರ್ಷದ ಹಿಂದೆ ಮಂಡ್ಯದ ಇಂಡುವಾಳು ಗ್ರಾಮದ ರೈತರೊಬ್ಬರಿಂದ ಒಂದು 1,26,000 ಸಾವಿರ ರೂಪಾಯಿಗಳನ್ನು ನೀಡಿ ಹಳ್ಳಿಕಾರ್ ಎತ್ತನ್ನು ಖರೀದಿ ಮಾಡಿದ್ದರು. ನವೀನ್ ಅವರು ತಮ್ಮ ಮನೆಯ ಮಗುವಿನ ಹಾಗೆ ಕರುವನ್ನು ಪ್ರೀತಿಯಿಂದ ಆರೈಕೆ ಮಾಡಿ ಸಾಕಿದ್ದರು.

ಇದನ್ನು ಓದಿ:- ಮನೆಯ ಯಜಮಾನಿ ಮೃ’ತ’ ಪಟ್ಟಿದ್ದರೆ ಗೃಹಲಕ್ಷ್ಮಿಯ ಹಣ ಯಾರಿಗೆ ಹೋಗುತ್ತದೆ ಗೊತ್ತಾ. ಸರ್ಕಾರದ ಹೊಸ ನಿಯಮ.

ಎತ್ತಿನ ಗಾಡಿ ರೇಸ್ ಗೆ ಪಳಗಿಸಿದಂತಹ ಎತ್ತನ್ನು ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿದ್ದಂತಹ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಜಾಗ್ವಾರ್ ಹೆಸರಿನ ಈ ಎತ್ತು ನವೀನ್ ಮತ್ತು ಅವರ ಸ್ನೇಹಿತರ ಆಸಕ್ತಿಯಿಂದ ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ನಡೆಯುವ ಎತ್ತಿನಗಾಡಿ ರೇಸ್ ನಲ್ಲಿಯೂ ಭಾಗವಹಿಸಿ ಅಲ್ಲಿನ 200-300 ಎತ್ತಿನ ಗಾಡಿಗಳ ನಡುವೆ ಸತತ ಮೂರು ಬಾರಿ ಹ್ಯಾಟ್ರಿಕ್ ಜಯಗಳಿಸಿ ದಾಖಲೆ ಸೃಷ್ಟಿಸಿತ್ತು.

- Advertisment -