ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಗ್ಯಾಸ್ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಾರೆ ನಮ್ಮ ಮನೆಗಳಲ್ಲಿ ಪ್ರತಿಯೊಂದು ಅಡಿಗೆಗೂ ಸಹ ಸಿಲಿಂಡರ್ ನ ಅವಶ್ಯಕತೆ ಹೆಚ್ಚಾಗಿರುತ್ತದೆ ಆದರೆ ಸಿಲಿಂಡರ್ ಬೇಗ ಖಾಲಿಯಾಗುತ್ತದೆ ಎನ್ನುವಂತಹ ತೊಂದರೆ ಪ್ರತಿಯೊಬ್ಬರೂ ಸಹ ಅನುಭವಿಸುತ್ತಾ ಇರುತ್ತಾರೆ ನಾವಿಲ್ಲಿ ತಿಳಿಸುವಂತಹ ಟಿಪ್ಸ್ ಗಳನ್ನು ನೀವು ಉಪಯೋಗ ಮಾಡಿಕೊಂಡರೆ ನಿಮ್ಮ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುವುದಿಲ್ಲ.
ನಾವು ಉಪಯೋಗ ಮಾಡುವಂತಹ ಗ್ಯಾಸ್ ಸ್ಟವ್ ಬ್ಲೂ ಕಲರ್ ನಲ್ಲಿ ಉರಿಯಬೇಕು ರೆಡ್ ಮತ್ತು ಆರೆಂಜ್ ಕಲರ್ ನಲ್ಲಿ ಉರಿಯಬಾರದು ಈ ರೀತಿಯ ಉರಿದರೆ ಕಸ ಬ್ಲಾಕ್ ಆಗಿದೆ ಎಂದು ಅರ್ಥ, ಬ್ಲೂ ಕಲರ್ ನಲ್ಲಿ ಉರಿಬಂದರೆ ಯಾವುದೇ ಪ್ರಾಬ್ಲಮ್ ಇಲ್ಲ ಎಂದು ಅರ್ಥ ಬೇರೆ ಕಲರ್ ನಲ್ಲಿ ಉರಿ ಬರುತ್ತಿದ್ದರೆ ನೀವು ಬರ್ನರ್ ಅನ್ನು ಚೇಂಜ್ ಮಾಡಿಕೊಳ್ಳಬೇಕು.
ನಾವು ಎಷ್ಟೇ ಜಾಗೃತಿಯಿಂದ ಅಡುಗೆ ಮಾಡಿದರು ಕೂಡ ಹಾಲು ಉಕ್ಕುವುದು ಅನ್ನ ಮಾಡುವಾಗ ನೀರು ಸುರಿಯುವುದು, ಬೇಳೆ ಬೇಯಿಸುವಾಗ ನೀರು ಬಿದ್ದು ಸ್ಟವ್ ಹಾಳಾಗುತ್ತದೆ. ನಾವು ಅಂತಹ ಸಮಯದಲ್ಲಿ ಬರ್ನರ್ ತೆಗೆದು ಚೆನ್ನಾಗಿ ಬ್ಲಾಕ್ ಕ್ಲೀನ್ ಮಾಡಬೇಕು ಬರ್ನರ್ ಕ್ಲೀನ್ ಮಾಡಿಕೊಳ್ಳಲು ನಾವು ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಡಿಶ್ ವಾಸ್ ಲಿಕ್ವಿಡ್ ಅಂದರೆ ಪಾತ್ರೆ ತೊಳೆಯುವ ಯಾವುದೇ ಲಿಕ್ವಿಡ್ ಒಂದು ಟೇಬಲ್ ಸ್ಪೂನ್ ನಂತರ ಕೋಲ್ಗೇಟ್ ಟೂತ್ ಪೇಸ್ಟ್ ಸ್ವಲ್ಪ, ಅರ್ಧ ನಿಂಬೆಹಣ್ಣಿನ ರಸ ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ವಾರದಲ್ಲಿ ಒಂದು ಬಾರಿ ಬರ್ನರ್ ಅನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಬರ್ನರ್ ಅನ್ನು ಅದಕ್ಕೆ ಹಾಕಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಬೇಕು. ನಂತರ ಇದನ್ನು ಹಳೆಯ ಟೂತ್ ಬ್ರಷ್ ನಿಂದ ಉಜ್ಜಿ ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ ಬರ್ನರ್ ನಲ್ಲಿರುವ ಹೋಲ್ಸ್ ಗಳನ್ನು ಚೆನ್ನಾಗಿ ಬ್ರಷ್ ನಿಂದ ತೊಳೆದು ಕ್ಲೀನ್ ಮಾಡಬೇಕು.
ನಾವೆಲ್ಲರೂ ಕುಕ್ಕರ್ ನಲ್ಲಿ ಮೊಟ್ಟೆ ಬೇಯಿಸುತ್ತೇವೆ ಅದೇ ಸಮಯದಲ್ಲಿ ನಾವು ಆಲೂಗಡ್ಡೆಯನ್ನು ಬೇಯಿಸಬೇಕಾದರೆ ಎರಡನ್ನು ಒಟ್ಟಿಗೆ ಹಾಕಿ ಬೇಯಿಸಿಕೊಳ್ಳುವುದರಿಂದ ನೀವು ಗ್ಯಾಸ್ ಉಳಿಸಬಹುದು. ನಾವು ಅಡುಗೆ ಮಾಡುವ ಮೊದಲು ಪಾತ್ರೆಯಲ್ಲಿ ನೀರಿದ್ದರೆ ಒಲೆಯನ್ನು ಹಚ್ಚಿ ಕಾಯಿಸುತ್ತೇವೆ ಆದರೆ ನೀವು ಒಂದು ಶುದ್ಧವಾದಂತಹ ಬಟ್ಟೆಯನ್ನು ಇಟ್ಟುಕೊಂಡು ಒರೆಸಿ ನಂತರ ಒಲೆಯ ಮೇಲೆ ಇಟ್ಟರೆ ಗ್ಯಾಸ್ ವೇಸ್ಟ್ ಆಗೋದಿಲ್ಲ.
ನಾವು ನೀರನ್ನು ಕಾಯಿಸಲು ಗ್ಯಾಸ್ ಸ್ಟವ್ ಮೇಲೆ ಇಟ್ಟು ಕಾಯಿಸುವಂತಹ ಅವಶ್ಯಕತೆ ಇಲ್ಲ ಈಗ ಎಲೆಕ್ಟ್ರಿಕಲ್ ವಾಟರ್ ಹೀಟರ್ ಬಂದಿದೆ ಇದನ್ನು ಬಳಸಿಕೊಂಡು ನಾವು ನೀರನ್ನು ಕಾಯಿಸಬಹುದು ನಾವು ಟೀ ಮಾಡುವಂತಹ ಸಂದರ್ಭದಲ್ಲಿ ಉಪ್ಪಿಟ್ಟು ಇನ್ನಿತರ ನೀರನ್ನು ಹಾಕಿ ಮಾಡಿಸುವಂತಹ ಅಡುಗೆಗಳಲ್ಲಿ ನೀರನ್ನು ಕಾಯಿಸಿಕೊಂಡು ನಂತರ ಅದಕ್ಕೆ ಹಾಕುವುದರಿಂದ ನಮ್ಮ ಗ್ಯಾಸ್ ಉಳಿತಾಯ ಆಗುತ್ತದೆ.
ಇದನ್ನು ಓದಿ:ಮಂಡ್ಯದ ಜಾಗ್ವಾರ್ ಎತ್ತು ಬರೋಬ್ಬರಿ 9.26 ಲಕ್ಷಕ್ಕೆ ಮಾರಾಟ. ಇಲ್ಲಿದೆ ಸಂಪೂರ್ಣ ವಿವರ.
ಎರಡು ನಿಮಿಷದಲ್ಲಿ ಎಲೆಕ್ಟ್ರಿಕ್ ಹೀಟರ್ ನಿಂದ ನೀರು ಕಾಯುತ್ತದೆ ಇದಕ್ಕೆ ಹೆಚ್ಚಿನ ವಿದ್ಯುತ್ ಸಹ ಬೇಕಾಗಿಲ್ಲ. ನಾವು ಫ್ರಿಡ್ಜ್ ನಲ್ಲಿ ಇಟ್ಟಿರುವಂತಹ ದೋಸೆ ಹಿಟ್ಟು, ಇಡ್ಲಿ ಹಿಟ್ಟು ಹಾಲು ಇದೆಲ್ಲವನ್ನು ಉಪಯೋಗಿಸುವ ಮೊದಲು ಒಂದು ಗಂಟೆಯ ಮುಂಚೆ ಫ್ರಿಡ್ಜ್ ಇಂದ ಹೊರಗೆ ಇಟ್ಟರೆ ಇದರಿಂದ ಸ್ವಲ್ಪ ನಮಗೆ ಗ್ಯಾಸ ಉಳಿತಾಯ ಮಾಡಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.