ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಹಲವಾರು ಹೊಸ ನಿಯಮಗಳನ್ನು ಇದೀಗ ಜಾರಿಗೆ ತರಲಾಗುತ್ತಿದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ ಅರ್ಜಿ ಸಲ್ಲಿಸುವಾಗ ಮಹಿಳೆಯರಿಗೆ ಯಾವುದೇ ತೊಂದರೆಯಾಗಬಾರದು ಎಂದು ಗಮನದಲ್ಲಿ ಇಟ್ಟುಕೊಂಡು ಸಾಕಷ್ಟು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ ಕರ್ನಾಟಕ ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕ ಸರ್ಕಾರ ಕುಟುಂಬದ ಮುಖ್ಯಸ್ಥರನ್ನು ಬೆಂಬಲಿಸಲು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಗೆ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು ಯೋಜನೆಯ ಮೂಲಕ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಬಡತನವನ್ನು ಕಡಿಮೆ ಮಾಡಲು ಮತ್ತು ರಾಜ್ಯದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಂತಹ ಗುರಿಯಿಂದ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ
ಅಷ್ಟೇ ಅಲ್ಲದೆ ಮಹಿಳೆಯರ ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಕುಟುಂಬಗಳಿಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಮಾರ್ಗವನ್ನು ಒದಗಿಸಿಕೊಡಲಾಗುತ್ತದೆ. ಕಾಂಗ್ರೆಸ್ ಸರ್ಕಾರವು ತಮ್ಮ ಚುನಾವಣಾ ಸಮಯದಲ್ಲಿ ಕೊಟ್ಟಂತಹ ಭರವಸೆಗಳನ್ನು ಈಡೇರಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು 2023ರಲ್ಲಿ ಪರಿಚಯಿಸಿದ್ದು ಜುಲೈ 19 ರಿಂದ ಅರ್ಜಿಗೆ ಹಾಕಲು ಚಾಲನೆ ನೀಡಿದೆ
ಕುಟುಂಬದ ಮುಖ್ಯಸ್ಥರಾಗಿರುವಂತಹ ಮಹಿಳೆಗೆ ರೂ 2000 ಆರ್ಥಿಕ ನೆರವನ್ನು ನೀಡಲಾಗುತ್ತಿದೆ ಕುಟುಂಬದ ಮಹಿಳೆ ಮುಖ್ಯಸ್ಥರಿಗೆ ಮಾತ್ರ ನೀಡಲಾಗುತ್ತದೆ ಯೋಜನೆಯ ನೋಂದಣಿಯನ್ನು ಜುಲೈ 19ನೇ ತಾರೀಕು 2023 ರಿಂದ ಪ್ರಾರಂಭಿಸಲಾಗಿದೆ ಕರ್ನಾಟಕದ ಎಲ್ಲಾ ಅರ್ಹ ಮಹಿಳೆಯರಿಗೆ ತಮ್ಮ ರೇಷನ್ ಕಾರ್ಡ್ ನಂಬರ್ ಅನ್ನು 8147500500 ಈ ನಂಬರ್ಗೆ ಸಂದೇಶ ಕಳುಹಿಸುವ ಮೂಲಕ ತಾವು ನೋಂದಣಿ ಮಾಡಿಸಿಕೊಳ್ಳಬೇಕಾದ ಸ್ಥಳ ಮತ್ತು ದಿನಾಂಕವನ್ನು ತಿಳಿಯಬಹುದಾಗಿದೆ.
ಇದನ್ನು ಓದಿ:- ಈ 5 ವಸ್ತುಗಳನ್ನು ಯಾರಿಗೂ ಸಹ ಕೊಡಬೇಡಿ ಕೊಟ್ಟರೆ ನಿಮ್ಮ ಜೀವನದಲ್ಲಿ ಕ’ಷ್ಟ ತಪ್ಪಿದ್ದಲ್ಲ.
ಇದರ ಜೊತೆಯಲ್ಲಿ ಅಧಿಕೃತ ವೆಬ್ಸೈಟ್ ಕೂಡ ಇದ್ದು ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಸ್ಥಳ ಮತ್ತು ಸಮಯವನ್ನು ತಿಳಿದುಕೊಳ್ಳಬಹುದು. ಅರ್ಜಿ ನೊಂದಣಿಗಾಗಿ ನೀವು ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರಗಳಲ್ಲು ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ
ಯೋಜನೆಗೆ ಬೇಕಾದಂತಹ ಮುಖ್ಯ ದಾಖಲಾತಿಗಳು
-ಆಧಾರ್ ಕಾರ್ಡ್
-ಬ್ಯಾಂಕ್ ಪಾಸ್ ಬುಕ್
-ಮೊಬೈಲ್ ಸಂಖ್ಯೆ
-ರೇಷನ್ ಕಾರ್ಡ್
ಮನೆ ಯಜಮಾನಿ ಮ’ರ’ಣ ಹೊಂದಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಗೃಹಿಣಿಯರು ಯಾವುದೇ ರೀತಿಯ ಗೊಂದಲಕ್ಕೊಳಗಾಗಿ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ
ಒಂದು ವೇಳೆ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರು ಮ’ರ’ಣ ಹೊಂದಿದ್ದಲ್ಲಿ ಕುಟುಂಬವು ತಕ್ಷಣ ಅರ್ಹ ಇನ್ನೊಬ್ಬ ಸದಸ್ಯರ ಹೆಸರನ್ನು ನೋಂದಾಯಿಸಬೇಕು ಹಾಗೆ ಮಾಡಲು ವಿಫಲರಾದರೆ ಕುಟುಂಬವು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಕುಟುಂಬದ ಯಜಮಾನಿ ಮ’ರ’ಣ ಹೊಂದಿದ್ದರೆ ನೀವು ನಿಮ್ಮ ರೇಷನ್ ಅಂಗಡಿ ಗೆ ಹೋಗಿ ಅಲ್ಲಿ ನಿಮ್ಮ ಮನೆಯ ಮತ್ತೊಬ್ಬರು ಮುಖ್ಯ ಯಜಮಾನಿಯನ್ನು ಬದಲಾಯಿಸಿಕೊಳ್ಳಿ.
ಹೀಗಿ ಬದಲಾಯಿಸಿದರೆ ಮಾತ್ರ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ ಇದರ ಅಡಿಯಲ್ಲಿ ಪ್ರತಿಯೊಬ್ಬರು ಕೂಡ ನಡೆದುಕೊಳ್ಳಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಪುಸ್ತಕದಲ್ಲಿ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.