ಹೈನಿಗಾರಿಕೆ ಮಾಡುವಂತಹ ರೈತಾಪಿ ವರ್ಗದವರಿಗೆ ಇದೀಗ ಗುಡ್ ನ್ಯೂಸ್ ಎಂದೇ ಹೇಳಬಹುದು ಯಾರೆಲ್ಲಾ ಹೈನುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೋ ಅಂತಹವರಿಗೆ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಪ್ರಾರಂಭದಿಂದಲೂ ಕೂಡ ಸರ್ಕಾರವು ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡುತ್ತದೆ ಅದಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ ಹೈನುಗಾರಿಕೆಗೆ ಬೇಕಾದಂತಹ ಸಾಲ ಸೌಲಭ್ಯಗಳು ಸಬ್ಸಿಡಿ ಅಂತಹ ಸೌಲಭ್ಯಗಳನ್ನು ಸರ್ಕಾರವು ಕಲ್ಪಿಸಿಕೊಟ್ಟಿದೆ ಅಷ್ಟೇ ಅಲ್ಲದೆ ವಿವಿಧ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಲು ಪ್ರೋತ್ಸಾಹ ನೀಡಿದೆ.
ಈ ಸುದ್ದಿ ನೋಡ:- ಈ ಒಂದು ಕೆಲಸ ಮಾಡಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.
2019-20 ನೇ ಸಾಲಿನಲ್ಲಿ ಪಶುಸಂಗೋಪನೆಗೂ ಕಿಶಾನ್ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ಯೋಜನೆಯನ್ನು ವಿಸ್ತರಿಸಲಾಗಿದೆ ಹೌದು ಪಶು ಸಂಗೋಪನೆಯನ್ನು ಕೃಷಿಗೆ ಪೂರಕ ಕ್ಷೇತ್ರಗಳು ಎಂದು ಘೋಷಿಸಿ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೂ ಕೂಡ ಕಿಶಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸಿ ಕೊಡಲಾಗಿದೆ.
ಸಾಕಷ್ಟು ಜನರಿಗೆ ಕಿಶಾನ್ ಕ್ರೆಡಿಟ್ ಕಾರ್ಡ್ ನ ಬಗ್ಗೆ ಗೊತ್ತಿರುವುದಿಲ್ಲ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಈ ಯೋಜನೆಯ ಅಡಿಯಲ್ಲಿ ಹಸು ಮತ್ತು ಎಮ್ಮೆ ಪಾಲನೆ ಮತ್ತು ಪೋಷಣೆ ಮಾಡುವಂತಹ ರೈತರಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ ಈ ಕಾರ್ಡ್ ಹೊಂದಿರುವಂತಹ ರೈತರು ಯಾವುದೇ ಗ್ಯಾರೆಂಟಿ ಇಲ್ಲದೆ ಪಶು ಪಾಲನೆ ಮಾಡಲು ಸರ್ಕಾರದಿಂದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:– ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವಂತಹ ಜನರಿಗೆ ಕೃಷಿಗೆ ಪೂರಕವಾದ ಉಪ ಕಸುಬುಗಳಿಗೆ 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಪಶು ಕಿಶಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಇಂದಿಗೂ ಅಸ್ತಿತ್ವದಲ್ಲಿದೆ.
ಪಸು ಕಿಶಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲಾತಿಗಳು
* ಭೂ ದಾಖಲೆಗಳು*
ಪ್ರಾಣಿಗಳ ಆರೋಗ್ಯ ಪ್ರಮಾಣ ಪತ್ರ
* ಪಾಸ್ಪೋರ್ಟ್ ಅಲತೆಯ ಭಾವಚಿತ್ರಗಳು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಮತದಾರರ ಗುರುತಿನ ಚೀಟಿ
* ಬ್ಯಾಂಕ್ ಖಾತೆ ವಿವರ
ಸರ್ಕಾರವು ಯಾವುದಕ್ಕೆ ಎಷ್ಟು ಸಾಲ ನೀಡುತ್ತದೆ ಎಂದು ನೋಡುವುದಾದರೆ ಈ ಯೋಜನೆಯಲ್ಲಿ ಪ್ರತಿ ಎಮ್ಮೆಗೆ 60,240 ಪ್ರತಿ ಹಸುವಿಗೆ 40,783 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ 1.6 ಲಕ್ಷ ವರೆಗೆ ಸಾಲಗಳಿಗೆ ಯಾವುದೇ ಗ್ಯಾರಂಟಿಯ ಅಗತ್ಯ ಇರುವುದಿಲ್ಲ ಹಣಕಾಸು ಸಂಸ್ಥೆಗಳು ಬ್ಯಾಂಕ್ ಗಳು 7% ಬಡ್ಡಿ ದರದಲ್ಲಿ ಸಾಲವನ್ನು ನೀಡಿದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಜಾನುವಾರು ಮಾಲೀಕರು 4% ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಇನ್ನು ಯಾವೆಲ್ಲಾ ಬ್ಯಾಂಕ್ ಗಳು ಹೈನುಗಾರಿಕೆಗೆ ಸಾಲವನ್ನು ನೀಡುತ್ತದೆ ಎಂದು ನೋಡುವುದಾದರೆ ಪಶು ಸಂಗೋಪನೆ ರೈತರು ಜಾನುವಾರು ಮಾಲೀಕರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಉನ್ನತ ಬ್ಯಾಂಕುಗಳು ಕಿಶಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತದೆ.
ಪಶು ಕಿಶಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಮೊದಲು ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ನಮೂನೆಯನ್ನು ಕೆಲವು ದಾಖಲೆಗಳೊಂದಿಗೆ ಸಲ್ಲಿಸಬೇಕು ನೀವು ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ನಿಮಗೆ ಸವಿಸ್ತಾರವಾಗಿ ತಿಳಿಸುತ್ತಾರೆ ಯೋಜನೆ ಅಥವಾ ಕೆಲಸದ ಆರ್ಥಿಕ ಪ್ರಮಾಣ ದರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಹೈನುಗಾರಿಕೆಯನ್ನು ತಮ್ಮ ವೃತ್ತಿಯನ್ನಾಗಿಸಬೇಕು ಎಂದುಕೊಂಡಿರುವಂತಹ ರೈತರು ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಭೇಟಿ ನೀಡಿ ಅಗತ್ಯವಾಗಿರುವ ದಾಖಲೆಗಳನ್ನು ಸಲ್ಲಿಸಿ ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರವು ಪಡೆಯಬಹುದಾಗಿದೆ.