ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಲಕ್ಷೀ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ ವಿಶೇಷವಾಗಿ ಶುಕ್ರವಾರ ಲಕ್ಷ್ಮಿಯನ್ನು ತಾಯಿಯ ಸ್ವರೂಪ ಎಂದು ಹೇಳಿ ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಂತೋಷವಾಗಿ ಇದ್ದರೆ ಅಂತಹ ಕುಟುಂಬದಲ್ಲಿ, ಅಂತಹ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಯಾರೆಲ್ಲ ತಾಯಿಯನ್ನು ಒಲಿಸಿಕೊಳ್ಳುತ್ತಾರೆ ಅಂತಹವರಿಗೆ ಸಂಪತ್ತು ಮತ್ತು ಸಮೃದ್ಧಿಯ ಎಲ್ಲಾ ಮಾರ್ಗಗಳು ತೆರೆದುಕೊಳ್ಳುತ್ತವೆ.
ಲಕ್ಷ್ಮಿ ದೇವಿಯನ್ನು ಶುಕ್ರವಾರ ಒಲಿಸಲು ಕೆಲವು ಪೂಜಾ ಕ್ರಮಗಳನ್ನು ತಿಳಿಸಲಾಗಿದೆ ಅವುಗಳನ್ನು ಅನುಸರಿಸಿದರೆ ನಿಮಗೆ ಭಾಗ್ಯ ಒಲಿದು ಬರುತ್ತದೆ. ಶುಕ್ರವಾರ ತಾಯಿ ಲಕ್ಷ್ಮಿ ಈ ರೀತಿ ಖುಷಿಪಡಿಸಿ ಮನೆಯಲ್ಲಿ ಮಹಾಲಕ್ಷ್ಮಿ ಶಂಕವನ್ನು ನಿರಂತರವಾಗಿ ಪೂಜಿಸಿದರೆ ಲಕ್ಷ್ಮಿ ದೇವಿಯು ಸಂತೋಷವಾಗಿ ಇರುತ್ತಾಳೆ. ಇದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ದಾರಿ ತೆರೆದುಕೊಳ್ಳುತ್ತದೆ.
ಹಾಗೆಯೇ ಹಳದಿ ಕವಡೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ತಾಯಿ ಲಕ್ಷ್ಮಿ ಸಂತೋಷವಾಗಿ ಧನ ವೃದ್ಧಿಯಾಗುತ್ತದೆ ಹಳದಿ ಕವಡೆ ಲಕ್ಷ್ಮಿಗೆ ಪ್ರಿಯವಾದಂತಹ ವಸ್ತು ಇದನ್ನು ನೀವು ಮನೆಯಲ್ಲಿ ತಂದು ಪೂಜೆ ಸಲ್ಲಿಸಿದರೆ ದಾ’ ರಿ’ ದ್ರ್ಯ ಎನ್ನುವಂತಹದ್ದು ದೂರವಾಗಿ ಸಮೃದ್ಧಿ ತುಂಬಿ ತುಳುಕುತ್ತದೆ.
ಸಾಮಾನ್ಯವಾಗಿ ಶುಕ್ರವಾರದ ದಿನವೊಂದು ನೀವು ಮನೆಯಲ್ಲಿ ಪೂಜೆ ಸಲ್ಲಿಸುತ್ತೀರಾ ಹಾಗೆಯೇ ಮಾತ ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಕಮಲದ ಹೂವುಗಳನ್ನು ಅರ್ಪಿಸುವುದರಿಂದ ತುಂಬಾ ಒಳ್ಳೆಯದು. ದೇವಿಗೆ ಪೂಜೆಯ ಸಲ್ಲಿಸಿದ ನಂತರ ಮಾತೆಗೆ ಕೇಸರಿಬಾತ್ ಅಥವಾ ಹಳದಿ ಮತ್ತು ಬಿಳಿ ಸಿಹಿ ತಿಂಡಿಗಳನ್ನು ಸಹ ನೀಡಲಾಗುತ್ತದೆ ಇದರಿಂದ ಲಕ್ಷ್ಮೀದೇವಿ ಸಂತೃಪ್ತಳಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ.
ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ದೇವಿಗೆ ತ್ರಿಫಲ ತುಂಬಾ ಇಷ್ಟ ತ್ರಿಫಲವನ್ನು ಅರ್ಪಿಸುವುದು ಶುಭ ಎನ್ನಲಾಗುತ್ತದೆ ಇದರ ಜೊತೆಗೆ ತಾಯಿಗೆ ಖೀರ್, ಸಿಹಿ ತಿಂಡಿ, ದಾಳಿಂಬೆ, ಪಾನ್ ಮತ್ತು ಪ್ರಸಾದ ಮಾಡಿ ಸಹ ಭೋಜನವನ್ನು ನೀಡಲಾಗುತ್ತದೆ ಇದರಿಂದ ತಾಯಿ ತುಂಬಾ ಸಂತೋಷವಾಗುತ್ತಾರೆ. ಕೆಲವೊಬ್ಬರಿಗೆ ಈ ವಿಷಯ ತಿಳಿದಿರುವುದಿಲ್ಲ ಮನೆಯಲ್ಲಿ ಸಂಪತ್ತು ಸಮೃದ್ಧಿಯನ್ನು ತರುವುದಕ್ಕಾಗಿ ಬಾಳೆ ಗಿಡವನ್ನು ಪೂಜಿಸಲಾಗುತ್ತದೆ ಇದರಿಂದ ನಿತ್ಯ ಲಕ್ಷ್ಮಿ ದೇವಿಯ ಕೃಪೆ ಭಕ್ತರ ಮೇಲೆ ಇರುತ್ತದೆ.
ಸಾಮಾನ್ಯವಾಗಿ ನಾವು ಹಳ್ಳಿಗಳ ಕಡೆಯಲ್ಲಿ ನೋಡಿರುತ್ತೇವೆ ತುಳಸಿ ಗಿಡ ಮತ್ತು ಸಾಲಿಗ್ರಾಮವನ್ನು ನಿರಂತರವಾಗಿ ಪೂಜಿಸುತ್ತಾರೆ. ತಾಯಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿದ ರೀತಿಯಲ್ಲಿಯೇ ಇದು. ಬೆಳಗಿನ ಜಾವ ಬೇಗ ಎದ್ದು ಮನೆಯ ಬಾಗಿಲಲ್ಲಿ ರಂಗೋಲಿಯನ್ನು ಹಾಕುವುದರಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹವು ಇರುತ್ತದೆ ಜೊತೆಗೆ ಲಕ್ಷ್ಮಿ ದೇವಿಯ ಪೂಜೆ ನಿರಂತರವಾಗಿ ಮಾಡುತ್ತಿರಬೇಕು.
ಲಕ್ಷ್ಮಿ ದೇವಿ ಪ್ರಸನ್ನಳಾಗಿ ನಮ್ಮ ಮನೆಗೆ ಬರಬೇಕು ಎಂದರೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು ಮನೆಯು ಸುಖ ಮತ್ತು ಸಮೃದ್ಧಿಯಿಂದ ಕೂಡಿರಬೇಕು ಎಂದರೆ ನಮ್ಮ ಮನೆಯೂ ಶುದ್ಧತೆಯಿಂದ ಇರಬೇಕು ಇದರಿಂದ ಬೆಳವಣಿಗೆಯ ಎಲ್ಲಾ ಮಾರ್ಗಗಳು ಸಹ ತೆರೆಯುತ್ತದೆ.
ಗುರುವಾರ ಮತ್ತು ಶುಕ್ರವಾರ ಹಳದಿ ಬಣ್ಣದ ನಿಲುವಂಗಿಗಳನ್ನು ಧರಿಸುತ್ತಿದ್ದರೆ ಲಕ್ಷ್ಮಿ ಮಾತಾ ಸಂತೋಷವಾಗಿರುತ್ತಾರೆ. ಮತ್ತೊಂದು ಮುಖ್ಯವಾದಂತಹ ವಿಚಾರ ಏನೆಂದರೆ ಮನೆಯಲ್ಲಿ ಯಾವುದೇ ಮಹಿಳೆಗೆ ಅವಮಾನ ಮಾಡಬಾರದು ಅವರ ಎಲ್ಲಾ ಆಸೆಗಳನ್ನು ಸಹ ಈಡೇರಿಸಬೇಕು ಇದರಿಂದ ಲಕ್ಷ್ಮಿ ದೇವಿ ಯಾವಾಗಲೂ ಸಂತೋಷವಾಗಿ ಇರುತ್ತಾರೆ ಈ ರೀತಿಯಾಗಿ ನೀವು ಲಕ್ಷ್ಮೀದೇವಿಗೆ ಪ್ರಿಯವಾದಂತಹ ವಸ್ತುಗಳನ್ನು ಪೂಜಿಸುತ್ತಾ ಬಂದರೆ ಲಕ್ಷ್ಮೀದೇವಿಯು ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ಸದಾ ಕಾಲ ನೆಲೆಸಿರುತ್ತಾರೆ.