ಕನ್ನಡ ಸಿನಿಮಾಗಳ ತಾಕತ್ತು ಏನು ಎನ್ನುವುದು ಕಳೆದ ವರ್ಷ ರಿಲೀಸಾದ ಹಲವು ಸಿನಿಮಾಗಳ ದಾಖಲೆಯಿಂದ ಗೊತ್ತಾಗಿದೆ. ಈಗ ಮತ್ತೊಮ್ಮೆ ವರ್ಷದ ಮೊದಲ ಸ್ಟಾರ್ ಸಿನಿಮವಾಗಿ ರಿಲೀಸ್ ಆಗುತ್ತಿರುವ ಕ್ರಾಂತಿ (Kranthi) ಸಿನಿಮಾದಿಂದ ಇದು ಇನ್ನಷ್ಟು ಹೆಚ್ಚಳಕ್ಕೆ ಹೋಗಲಿದೆ. ಕ್ರಾಂತಿ ಸಿನಿಮಾ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡದೆ ಪಕ್ಕ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challengingstar Darshan) ಅವರ ಸೆಲೆಬ್ರಿಟಿಗಳು ಬಹುದಿನಗಳಿಂದ ಕಾಯುವಿಕೆಗೆ ಈಗ ಸಮಯ ಕೂಡಿ ಬಂದಿದ್ದು ಸಿನಿಮಾ ನೋಡಿದ ಮೇಲೆ ಸಂತಸ ಸಂಭ್ರಮ ಎಲ್ಲೆಡೆ ಎದ್ದು ಕಾಣುತ್ತಿದೆ.
ಕ್ರಾಂತಿ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ, ಗೆಲ್ಲಿಸುತ್ತಿದ್ದಾರೆ ಎನ್ನುವ ಭರವಸೆ ಕ್ರಾಂತಿ ಸಿನಿಮಾದ ಕಲೆಕ್ಷನ್ (collection) ಮೂಲಕ ಸಾಬೀತಾಗುತ್ತಿದೆ. ಕ್ರಾಂತಿ ಸಿನಿಮಾ ಬಿಡುಗಡೆಯ ಒಂದು ದಿನ ಮುಂಚೆ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್ Patan) ಬಿಡುಗಡೆ ಆಗಿತ್ತು. ದೀಪಿಕಾ ಪಡುಕೋಣೆ (Deepika Padukone) ಮತ್ತು ಶಾರುಖ್ ಖಾನ್ (Sharukh khan) ಅವರು ನಟಿಸಿದ್ದ ದೊಡ್ಡ ಬಜೆಟ್ ನ ಸಿನಿಮಾ ಇದಾಗಿದ್ದು ಕನ್ನಡದಲ್ಲಿ ಸಹ ಪರಭಾಷೆ ಸಿನಿಮಾಗಳ ಹಾವಳಿ ಇರುವುದರಿಂದ ಕ್ರಾಂತಿ ಹಾವಳಿಗೆ ಅದು ಅಡ್ಡಿ ಆಗಲಿದೆಯಾ ಎನ್ನುವ ಅನುಮಾನವನ್ನು ತಂದಿತ್ತು.
ಆದರೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಬೆಂಗಳೂರು ಮೈಸೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ. ಬರೋಬ್ಬರಿ 837 ಶೋಗಳು ಮೊದಲ ದಿನವೇ ಕ್ರಾಂತಿ ಸಿನಿಮಾಗೆ ದೊರಕಿದ್ದು ನಂತರದ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈವರೆಗಿನ ಕನ್ನಡ ಸಿನಿಮಾಗಳು ಮಾಡಿದ ದೊಡ್ಡ ದಾಖಲೆಯನ್ನು ಮುರಿದಿರುವ ಕ್ರಾಂತಿ ಸಿನಿಮಾವು ಮೊದಲ ದಿನವೇ 3.30 ಕೋಟಿ ರೂಗಳನ್ನು ಅಡ್ವಾನ್ಸ್ ಬುಕಿಂಗ್ ಮೂಲಕ ಗಳಿಸಿದೆ ಎನ್ನುವ ಮಾಹಿತಿ ಇದೆ.
ಮೊದಲ ದಿನವೇ ಒಂದುವರೆ ಕೋಟಿ ಟಿಕೆಟ್ ಬುಕ್ ಆಗಿದೆ ಎಂದು ಸಹ ಮಾಹಿತಿ ಹರಿದಾಡುತ್ತಿದೆ. ಕ್ರಾಂತಿ ಸಿನಿಮಾವು ಕನ್ನಡದ ಶಾಲೆಗಳನ್ನು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ಸಂದೇಶ ಹೊತ್ತಿರುವ ಸಿನಿಮಾ ಆಗಿದೆ. ಎನ್ ಆರ್ ಐ ಆಗಿದ್ದ ದರ್ಶನವರು ಭಾರತಕ್ಕೆ ಮರಳಿ ಬಂದು ತನ್ನ ಶಾಲೆಯ ಸ್ಥಿತಿ ನೋಡಿ, ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯರಂಗದ ಕಳ್ಳಾಟವನ್ನೆಲ್ಲಾ ಬಯಲು ಮಾಡಿ ಅಕ್ಷರ ಕ್ರಾಂತಿಯನ್ನು ಸೃಷ್ಟಿ ಮಾಡುವ ಕಥಾಹಂದರದ ಈ ಸಿನಿಮಾ ಪ್ರತಿಯೊಬ್ಬರ ಕನ್ನಡಿಗನ ಹೆಮ್ಮೆಯ ಸಿನಿಮಾ ಎನ್ನುವುದು ಸಿನಿಮಾ ನೋಡಿದವರ ಮಾತಾಗಿದೆ.
ಜೊತೆಗೆ ಕ್ರಾಂತಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಹಲವು ವಿವಾದಗಳನ್ನು ಎದುರಿಸಿದೆ. ಇದಕ್ಕೆಲ್ಲ ಸೆಡ್ಡು ಹೊಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹಾಗಾಗಿ ದರ್ಶನ್ ಅವರ ಈ ಸಿನಿಮಾ ಮೂಲಕ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಅನಿಸುತ್ತಿದೆ. 25 ಕೋಟಿ ಕಡಿಮೆ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾ ಭಾನುವಾರ ಅಂತ್ಯಕ್ಕೆ 30 ರಿಂದ 35 ಕೋಟಿ ಹಣ ಗಳಿಸುತ್ತದೆ ಎಂದು ಲೆಕ್ಕಾಚಾರ ಕೂಡ ನಡೆದು ಹೋಗಿದೆ.
ಇಷ್ಟು ದಿನ ಕ್ರಾಂತಿ ತಂಡ ಹಾಗೂ ದರ್ಶನ್ ಪಟ್ಟಿದ್ದ ಕಷ್ಟಕ್ಕೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದ್ದೆ. ಎಲ್ಲಾ ಕಡೆ ಪ್ರಾಂತ್ಯ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಸಿನಿಮಾ ತಂಡಕ್ಕೆ ಇನ್ನಷ್ಟು ಶುಭವಾಗಲಿ ಎಂದು ನಾವು ಕೂಡ ಹರಸೋಣ ಕನ್ನಡದ ವಿಷಯ ಇಟ್ಟುಕೊಂಡು ಬಂದಿರುವ ಈ ಸಿನಿಮಾಗೆ ಜಯ ಸಿಗಲಿ ಎಂದು ಕೇಳಿಕೊಳ್ಳೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ ಒಂದು ವೇಳೆ ಕ್ರಾಂತಿ ಸಿನಿಮಾ ನೋಡಿದರೆ ಸಿನಿಮಾ ಹೇಗಿದೆ ಎಂಬುದನ್ನು ಕಮೆಂಟ್ ಮಾಡಿ.