Tuesday, October 3, 2023
Home Viral News ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ...

ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತೀರಾ.

ಚಂದನವನದ ಸ್ಟೈಲಿಶ್ ತಾರೆ ಕಿಚ್ಚ ಸುದೀಪ್ ಅವರು ಬಹಳ ಫ್ಯಾಶನ್ ಇಷ್ಟಪಡುವ ವ್ಯಕ್ತಿ. ವೈಯಕ್ತಿಕವಾಗಿ ಮತ್ತು ಸಿನಿಮಾದಲ್ಲಿ ಕೂಡ ಇವರು ಮಾಡುವ ಫ್ಯಾಷನ್ ಟ್ರೆಂಡ್ ಆಗಿಬಿಡುತ್ತದೆ. ಸುದೀಪ್ ಅವರನ್ನು ನೋಡಿದರೆ ಗೊತ್ತಾಗುತ್ತದೆ ಅವರು ಒಬ್ಬ ಮಾಡೆಲ್ ಗಿಂತ ಯಾವುದರಲ್ಲೂ ಕೂಡ ಕಡಿಮೆ ಇಲ್ಲ ಎನ್ನುವ ಚಾರ್ಮ್ ಹೊಂದಿದ್ದಾರೆ ಎಂದು. ಸುದೀಪ್ ಅವರ ಹೇರ್ ಸ್ಟೈಲ್, ವಾಕಿಂಗ್ ಸ್ಟೈಲ್ ಅವರ ಮಾತನಾಡುವ ಸ್ಟೈಲ್ ಹೀಗೆ ಎಲ್ಲವೂ ಕೂಡ ಫ್ಯಾಷನ್ ಆಗಿಯೇ ಇರುತ್ತದೆ ಫ್ಯಾಷನ್ ಪ್ರಿಯ ಸುದೀಪ್ ಅವರಿಗೆ ಯಾವ ಬಟ್ಟೆ ಹಾಕಿದರೆ ಕೂಡ ಆ ಬಟ್ಟೆಗೆ ಒಂದು ಕಳೆ ಬರುತ್ತದೆ ಎನ್ನಬಹುದು.

ಇಷ್ಟರ ಮಟ್ಟಿಗೆ ಎಲ್ಲ ಶೈಲಿಗಳಿಗೂ ಹೊಂದಿಕೊಳ್ಳುತ್ತಾರೆ ಈ ಸ್ಯಾಂಡಲ್ ವುಡ್ ಬಾದ್ ಶಾ. ಫ್ಯಾಷನ್ ಕಾರಣಕ್ಕಾಗಿ ಅವರನ್ನು ಪಾಲಿಸುವ ಅತಿ ದೊಡ್ಡ ಅಭಿಮಾನಿ ವಲಯವೇ ಇದೆ, ಅದರಲ್ಲಿ ಎಂಗೆಳೆಯರೇ ಹೆಚ್ಚು. ಸುದೀಪ್ ಅವರು ಸಿನಿಮಾ ಮೇಲೆ ಯಾವ ರೀತಿ ಸ್ಟೈಲ್ ಮಾಡಿದ್ದರೋ ಅವರ ಫಾಲೋವರ್ಸ್ ಅದನ್ನೇ ಫಾಲೋ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಕೆಲವು ಉದಾಹರಣೆ ಹೇಳಬಹುದೇ ಎಂದರೆ ಕೆಂಪೇಗೌಡ ಸಿನಿಮಾದಲ್ಲಿ ಅವರು ಮೀಸೆ ಬಿಟ್ಟಿದ್ದ ಸ್ಟೈಲ್ ಬಹಳ ಟ್ರೆಂಡ್ ಆಗಿತ್ತು. ಪೊಲೀಸ್ ಸಿಬ್ಬಂದಿ ಸೇರಿದಂತೆ ಬಹುತೇಕ ಮಂದಿ ಆ ಸ್ಟೈಲ್ ಅನ್ನು ಫಾಲೋ ಮಾಡಿದ್ದರು.

ನಂತರ ಬಂದ ಹೆಬ್ಬುಲಿ ಸಿನಿಮಾದ ಹೇರ್ ಸ್ಟೈಲ್ ಅಂತೂ ಇಂದಿಗೂ ಕೂಡ ಕಾಲೇಜು ಹುಡುಗರ ಫೇವರೆಟ್ ಅಲ್ಲಿ ಒಂದು. ಸದಾ ತಮ್ಮ ಬಗ್ಗೆ ತಾವು ಪ್ರಯೋಗ ಮಾಡಿಕೊಳ್ಳುವ ಕಿಚ್ಚ ಸುದೀಪ್ ಅವರ ಬಳಿ ಈ ರೀತಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದಕ್ಕೆ ಅನೇಕ ವಸ್ತುಗಳಿವೆ. ಅದರಲ್ಲಿ ಅವರ ಧರಿಸುವ ವಾಚುಗಳು ಹೆಚ್ಚಿನ ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ ಎಲ್ಲಾ ಹೀರೋಗಳಿಗೂ ಕೂಡ ಒಂದೊಂದು ಕ್ರೇಝ್ ಇರುತ್ತದೆ.

ದರ್ಶನ್ ಅವರಿಗೆ ಕಾರು ಖರೀದಿ ಮತ್ತು ಪ್ರಾಣಿ ಪಕ್ಷಿಗಳ ಆಸಕ್ತಿ ಇದ್ದರೆ, ಯಶ್ ಅವರಿಗೆ ಕೃಷಿ ಮಾಡುವುದರಲ್ಲಿ ಆಸಕ್ತಿ ಇದೆ ಈ ರೀತಿ ಹೇಳುವುದಾದರೆ ಸುದೀಪ್ ಅವರಿಗೆ ಸಿನಿಮಾ ಜೊತೆ ಅಡುಗೆ ಮಾಡುವುದು ಮತ್ತು ಕ್ರಿಕೆಟ್ ಆಡುವುದರಲ್ಲಿ ಫ್ಯಾಷನ್ ಇದೇ ಎನ್ನಬಹುದು. ಅದನ್ನು ಹೊರತುಪಡಿಸಿ ಅವರಿಗೆ ವಾಚುಗಳನ್ನು ಖರೀದಿಸುವ ಬಗ್ಗೆ ಬಹುದೊಡ್ಡ ಫ್ಯಾಷನ್ ಇದೆ ಸುದೀಪ್ ಅವರನ್ನು ಯಾವುದೇ ವೇದಿಕೆಗಳಲ್ಲಿ ಗಮನಿಸಿದರು ಕೂಡ ಅವರು ಪ್ರತಿಬಾರಿ ಒಂದೊಂದು ಹೊಸ ಮಾದರಿಯ ವಾಚ್ ಅನ್ನು ಧರಿಸಿ ಬಂದಿರುತ್ತಾರೆ.

ಜೊತೆಗೆ ಒಂದು ಬಾರಿ ಧರಿಸಿದ ವಾಚನ್ನು ಮತ್ತೊಂದು ಬಾರಿ ಧರಿಸಿರುವುದಿಲ್ಲ. ಪ್ರತಿ ಬಾರಿ ಕೂಡ ಡಿಸೈನ್ ಇಂದ ಆಗಲಿ ಅಥವಾ ಕಲರ್ ಇಂದ ಅಥವಾ ಬ್ರಾಂಡ್ ಇಂದ ಅದು ಬೇರೆ ರೀತಿ ಆಗಿರುತ್ತದೆ. ಇತ್ತೀಚೆಗೆ ಅವರು ಸಿನಿಮಾ ಜೊತೆ ಸಿಸಿಎಲ್ ಮತ್ತು ಕೆಸಿಸಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಡಿಯಲ್ಲಿ ಸುದೀಪ್ ಅವರಂತೆ ಮುಂದಾಳತ್ವ. ಕನ್ನಡ ಚಲನಚಿತ್ರ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಬೇಕು ಎನ್ನುವ ಮೂಲ ಉದ್ದೇಶದಿಂದ ಈ ರೀತಿ ಪಂದ್ಯಾವಳಿಗಳನ್ನು ಏರ್ಪಡಿಸಿರುವ ಕಿಚ್ಚ ಸುದೀಪ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಆ ಸಂದರ್ಶನದಲ್ಲಿ ಅವರು ಆಡಿರುವ ಮಾತುಗಳ ಜೊತೆ ಅವರ ಕೈಯಲ್ಲಿದ್ದ ವಾಚು ಕೂಡ ಎಲ್ಲರೂ ಗಮನ ಸೆಳೆದಿದೆ. ಕೆಂಪು ಬಣ್ಣದ ಶರ್ಟ್ ಧರಿಸಿದ್ದ ಇವರು ಕೆಂಪು ಬಣ್ಣದ್ದೇ ವಾಚ್ ಧರಿಸಿದ್ದರು. ರಿಚರ್ಡ್ ಮೀಲ್ಲೇ ಬ್ರಾಂಡ್ ಎನ್ನುವ ವಿದೇಶಿ ಬ್ಯಾಂಡ್ ವಾಚ್ ಇದಾಗಿದೆ ಈಗ ಎಲ್ಲರಿಗೂ ಈ ವಾಚನ ಬೆಲೆ ಎಷ್ಟು ತನ್ನ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತಿದೆ. ನಿಖರ ಮಾಹಿತಿಯ ಪ್ರಕಾರ ಇದು ದುಬಾರಿ ಬೆಲೆಯದಾಗಿದ್ದು, ಇದರ ಆರಂಭದ ಬೆಲೆ ಒಂದು ಕೋಟಿಯಿಂದ ಶುರು ಆಗುತ್ತದೆ ಮತ್ತು ಒಂದು ಕೋಟಿ ಯಿಂದ 10 ಕೋಟಿ ಮೌಲ್ಯದವರೆಗೂ ಈ ಬ್ರಾಂಡ್ ನ ವಾಚ್ ದೊರೆಯುತ್ತದೆ.

ರಿಚರ್ಡ್ ಮಿಲ್ಲೇ ಬ್ರಾಂಡ್ ನ ವಾಚ್ ಎಂದರೆ ಸುದೀಪ್ ಅವರಿಗೆ ಬಹಳ ಇಷ್ಟ ಎನಿಸುತ್ತದೆ. ಯಾಕೆಂದರೆ ಇದೇ ಬ್ರಾಂಡಿನ ಇನ್ನು ಅನೇಕ ಬಣ್ಣದ, ಡಿಸೈನಿನ ವಾಚುಗಳ ದೊಡ್ಡ ಕಲೆಕ್ಷನ್ ಇವರ ಬಳಿ ಇದೆ. ಈ ವಿಷಯ ತಿಳಿದ ಮೇಲೆ ಇನ್ನು ಮುಂದೆ ಎಲ್ಲರ ದೃಷ್ಟಿ ಕೂಡ ಸುದೀಪ್ ಅವರ ವಾಚ್ ಮೇಲೆ ಕೇಂದ್ರಿತವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

- Advertisment -