Thursday, September 28, 2023
Home cinema news ಅಪ್ಪು ಹುಟ್ಟುಹಬ್ಬಕ್ಕೆ ಉಪ್ಪಿ & ಕಿಚ್ಚ ಅಭಿನಯದ 'ಕಜ್ಬ' ಸಿನಿಮಾ ಬಿಡುಗಡೆ ಮಾಡುವುದಾಗಿ ಆರ್.ಚಂದ್ರು ಘೋಷಣೆ.

ಅಪ್ಪು ಹುಟ್ಟುಹಬ್ಬಕ್ಕೆ ಉಪ್ಪಿ & ಕಿಚ್ಚ ಅಭಿನಯದ ‘ಕಜ್ಬ’ ಸಿನಿಮಾ ಬಿಡುಗಡೆ ಮಾಡುವುದಾಗಿ ಆರ್.ಚಂದ್ರು ಘೋಷಣೆ.

ಬಹುನಿರೀಕ್ಷಿತ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಕಬ್ಜಾ(Kabza) ರಿಲೀಸ್ ದಿನಾಂಕ ಘೋಷಣೆ, ಅಪ್ಪು ಹುಟ್ಟುಹಬ್ಬಕ್ಕೆ(Appu birthday) ಸಿನಿಮಾ ಅರ್ಪಣೆ. ಕಳೆದ ವರ್ಷ ಕನ್ನಡದಲ್ಲಿ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆ ಆಗಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿವೆ. ವರ್ಷಪೂರ್ತಿ ಕನ್ನಡ ಸಿನಿಮಾಗಳ ಅಬ್ಬರ ಜೋರಾಗಿಯೇ ನಡೆದಿದ್ದು ಕನ್ನಡಕ್ಕೆ ಹೆಸರು ತಂದಿವೆ. ಈ ವರ್ಷ ಅತಿ ಹೆಚ್ಚು ಗಳಿಕೆ ಪಡೆದ ಸಿನಿಮಾಗಳ ಪಟ್ಟಿಯಲ್ಲಿ ಸೇರಿರುವ ಕೆಜಿಎಫ್ 2(KGF2) ನಂತರ ಬಂದ ಚಾರ್ಲಿ 777(Charli777), ಜೇಮ್ಸ್(James), ವಿಕ್ರಾಂತ್ ರೋಣ(Vikranth Rona) ಹಾಗೂ ಕೊನೆಯಲ್ಲಿ ಬಂದ ಕಾಂತಾರ(Kantara) ಸಿನಿಮಾಗಳು ಮಾಡಿದ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಹಾಗಾಗಿ ಈಗ ಬಿಡುಗಡೆ ಆಗುವ ಕನ್ನಡದ ಬಹು ನಿರೀಕ್ಷಿತ ಚಿತ್ರಗಳ ಬಗ್ಗೆ ಇಡೀ ದೇಶದಾದ್ಯಂತ ನಿರೀಕ್ಷೆ ಹೆಚ್ಚಾಗುತ್ತಿದೆ. ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಷೆಯವರು ಸಹ ಈಗ ಕನ್ನಡದ ಸಿನಿಮಾ ರಿಲೀಸ್ ಆಗುವುದನ್ನು ಕಾಯುವಂತಾಗಿದೆ. 2023ರ ಐಎಂಬಿಡಿ(imbd) ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ರಿಯಲ್ ಸ್ಟಾರ್ ಉಪೇಂದ್ರ(Upendra) ಮತ್ತು ಕಿಚ್ಚ ಸುದೀಪ್(Kichcha Sudeep) ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ಕಬ್ಜಾ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೇ ಭಾರಿ ಕುತೂಹಲ ಹುಟ್ಟು ಹಾಕಿದೆ. ಅಲ್ಲದೆ ಬಹಳ ಸಮಯ ತೆಗೆದುಕೊಂಡು ಸಿನಿಮಾವನ್ನು ತಯಾರಿಸಲಾಗಿದೆ.

ಉಪೇಂದ್ರ ಅವರಂತೂ ಡೈರೆಕ್ಷನ್ ಮಾಡುವ ಅಥವಾ ಆಕ್ಟಿಂಗ್ ಮಾಡುವ ಎಲ್ಲಾ ಸಿನಿಮಗಳಿಗೂ ಒಂದು ಉದ್ದೇಶ ಇದ್ದೆ ಇರುತ್ತದೆ. ಹಾಗಾಗಿ ಪಾನ್ ಇಂಡಿಯಾ ಸಿನಿಮಾ ವಾಗಿ ಉಪೇಂದ್ರ ಅವರು ಕಬ್ಜಾವನ್ನು ತೆಗೆದುಕೊಂಡಿದ್ದಾರೆ ಎಂದರೆ, ಅದರ ಲೆವೆಲ್ ಬೇರೆ ಇರುತ್ತದೆ ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಉಪೇಂದ್ರ ಅವರ ಅಭಿಮಾನಿಗಳು ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತು ಕನ್ನಡ ಕಲಾ ರಸಿಕರು ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಎಲ್ಲರೂ ಇದರ ರಿಲೀಸ್ ಡೇಟ್ ಯಾವಾಗ ಎನ್ನುವ ಕುತೂಹಲದಿದ್ದಲ್ಲಿ ಇದ್ದಾರೆ.

ಆರ್ ಚಂದ್ರು(R.chandru) ಅವರು ಈ ಸಿನಿಮಾದ ನಿರ್ದೇಶಕರಾಗಿದ್ದು ಸಿನಿಮಾ ರಿಲೀಸ್ ದಿನಾಂಕವನ್ನು ಈಗ ಘೋಷಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನದಂದು ಅವರಿಗಾಗಿ ಈ ಸಿನಿಮಾ ಅರ್ಪಿಸುವುದಾಗಿ ಹೇಳಿದ್ದಾರೆ. ಯಾಕೆಂದರೆ ಸಿನಿಮಾದ ಕೆಲವು ತುಣುಕುಗಳನ್ನು ಪುನೀತ್ ಅವರಿಗೆ ತೋರಿಸಿದಾಗ ಬಹಳ ಖುಷಿಪಟ್ಟಿದ್ದರಂತೆ. ಅಲ್ಲದೇ ಈ ಸಿನಿಮಾ ಹಾಲಿವುಡ್(hollywood) ಸಿನಿಮಾ ರೇಂಜಿಗೆ ಇದೆ ಎಂದು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರಂತೆ.

ಇಡೀ ಕರ್ನಾಟಕವೇ ದೈವ ರೂಪವಾಗಿ ಕಾಣುತ್ತಿರುವ ಈ ದೇವರ ಹುಟ್ಟು ಹಬ್ಬಕ್ಕೆ ಮತ್ತು ಅದೇ ಸಮಯದಲ್ಲಿ ನಮ್ಮೆಲ್ಲರ ಹೊಸ ವರ್ಷವಾದ ಯುಗಾದಿ(Ugadi) ಹಬ್ಬದ ಸಮಯ ಕೂಡ ಇರುವುದರಿಂದ ಆ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಆರ್ ಚಂದ್ರು ಅವರು ಹೇಳಿದ್ದಾರೆ. ಕೆಲವು ಮೂಲಗಳ ಪ್ರಕಾರ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging stat Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ(Kranthi) ರಿಲೀಸ್ ಆಗುತ್ತಿದೆ. ರಾಬರ್ಟ್(Robert) ಆದ ಬಳಿಕ ಒಂದು ವರ್ಷದವರೆಗೆ ದರ್ಶನ್ ಅವರ ಯಾವ ಸಿನಿಮಾವು ರಿಲೀಸ್ ಆಗಿಲ್ಲ.

ಇಡೀ ಕರ್ನಾಟಕದಲ್ಲಿ ದರ್ಶನ್ ಅವರಿಗೆ ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುವುದು ಹಾಗಾಗಿ ಕ್ರಾಂತಿ ಸಿನಿಮಾ ರಿಲೀಸ್ ಗೂ ಮುನ್ನವೇ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ಇನ್ನೂ ರಿಲೀಸ್ ಆದ ಮೇಲೆ ಅದು ಬಾಕ್ಸ್ ಆಫೀಸ್ ಉಡೀಸ್ ಮಾಡುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಹಾಗಾಗಿ ಇದರ ಅಡ್ಡ ಯಾವುದೇ ಸಿನಿಮಾ ಬಂದರೂ ಬಿದ್ದು ಹೋಗಬಹುದು ಎನ್ನುವ ಅನುಮಾನ ಜತೆಗೆ ಎರಡು ಸ್ಟಾರ್ ಹೀರೋಗಳ ಸಿನಿಮಾ ಆಗಿರುವುದರಿಂದ ಎರಡಕ್ಕೂ ಫೈಟ್ ಬೇಡ ಎನ್ನುವ ಉದ್ದೇಶದಿಂದ ಜೊತೆಗೆ ಸ್ವಲ್ಪ ಪ್ರೀಪ್ರೊಡಕ್ಷನ್ ಕೆಲಸ ಬಾಕಿ ಇರುವುದರಿಂದ ಒಂದು ತಿಂಗಳ ಕಾಲ ಸಿನಿಮಾ ರಿಲೀಸ್ ಅನ್ನು ಮುಂದಕ್ಕೆ ಹಾಕಿದ್ದಾರೆ ಎನ್ನುವ ಮಾಹಿತಿಗಳು ಸಹ ಹರಿದಾಡುತ್ತಿವೆ.

ಈ ಹಿಂದೆಯೇ ಮುಕುಂದ ಮುರಾರಿ ಸಿನಿಮಾದಲ್ಲಿ(Mukunda Murari)ಸುದೀಪ್ ಉಪೇಂದ್ರ ಅವರ ಕಾಂಬಿನೇಷನ್ ಎಷ್ಟು ಚೆನ್ನಾಗಿ ವರ್ಕ್ ಆಗುತ್ತದೆ ಎನ್ನುವುದನ್ನು ನೋಡಿ ಕಣ್ತುಂಬಿ ಕೊಂಡಿದ್ದೇವೆ. ಅಲ್ಲದೆ ಕಬ್ಜಾ ಸಿನಿಮಾ ಶೂಟಿಂಗ್ ವೇಳೆ ಅನೇಕ ಬಾರಿ ಉಪೇಂದ್ರ ಅವರು ಸಹ ಲೈವ್ ಬಂದು ಚಿತ್ರೀಕರಣದ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಸಿನಿಮಾವನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಯುಗಾದಿ ಹಬ್ಬದ ವರೆಗೂ ಕಾಯಲೇಬೇಕಾಗಿದೆ. ಕ್ರಾಂತಿ ಹಾಗೂ ಕಬ್ಜಾ ಎರಡು ಸಿನಿಮಾ ಕೂಡ ಕನ್ನಡದ ಸಿನಿಮಾಗಳೇ ಆಗಿವೆ, ಎರಡಕ್ಕೂ ಶುಭವಾಗಲಿ ಎಂದು ಹಾರೈಸೋಣ.

- Advertisment -