ರಾಮ್ ಕುಮಾರ್ 80 ಹಾಗೂ 90 ರ ದಶಕದ ಚಾಕಲೇಟ್ ಹೀರೋ ಸುಮಾರು ಎರಡು ದಶಕಗಳಲ್ಲಿ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಆ ಸಮಯದ ಸ್ಟಾರ್ ಹೀರೋ ಆಗಿ ಮೆರೆದಿದ್ದವರು. ನೋಡುವುದಕ್ಕೆ ಸುರದ್ರೂಪಿ ಚೆಲುವು, ಚೆಲುವಿಗೆ ತಕ್ಕ ಹಾಗೆ ಟ್ಯಾಲೆಂಟ್ ಒಬ್ಬ ನಟನಾಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದ ಇವರು ಆರಂಭದ ದಿನಗಳಲ್ಲಿ ಸಣ್ಣಪುಟ್ಟ ಪಾತ್ರವನ್ನು ಮಾಡುತ್ತಿದ್ದರು. ಗೆಜ್ಜೆನಾದ(Gejjenada) ಸಿನಿಮಾದ ಮೂಲಕ ಸ್ವತಂತ್ರ ಹೀರೋ ಆಗಿ ಕಾಣಿಸಿಕೊಂಡ ಇವರು ಹಲವು ವರ್ಷಗಳವರೆಗೆ ಹಿಂತಿರುಗಿ ನೋಡಿದ್ದೇ ಇಲ್ಲ.
ಒಂದಾದ ಮೇಲೆ ಒಂದರಂತೆ ಗೆಜ್ಜೆನಾದ, ಕಾವ್ಯ, ಕೊಡಗಿನ ಕಾವೇರಿ, ತವರಿನ ತೊಟ್ಟಿಲು, ಸ್ನೇಹಲೋಕ ಇನ್ನು ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬಹಳ ಬೇಡಿಕೆಯ ನಟ ಆಗಿದ್ದರು. ಅದರಲ್ಲೂ ಶ್ರುತಿ(Shruthi) ಅವರಿಗೆ ಅತ್ಯುತ್ತಮ ಪೇರ್ ಆಗಿದ್ದ ಇವರು ಆ ಸಮಯದ ಯಶಸ್ವಿ ಜೋಡಿಗಳು ಎಂದು ಕರೆಸಿಕೊಂಡಿದ್ದರು. ಶ್ರುತಿ ಹಾಗೂ ರಾಮ್ ಕುಮಾರ್ ಅವರ ಜೋಡಿಯಲ್ಲಿ ಅನೇಕ ಸಿನಿಮಾಗಳು ಮೂಡಿಬಂದಿದ್ದು ಹೆಚ್ಚಿನ ಸಿನಿಮಾಗಳು ಸಾಂಸಾರಿಕ ಕಥೆಯನ್ನು ಕುರಿತು ಇರುತ್ತಿದ್ದವು.
ಹಾಗಾಗಿ ಹೆಚ್ಚಾಗಿ ಹೆಣ್ಣು ಮಕ್ಕಳೇ ಇವರ ಫ್ಯಾನ್ ಆಗಿ ಇರುತ್ತಿದ್ದರು ಹೆಂಗಳೆಯರ ಫೇವರೆಟ್ ಹೀರೋ ಆಗಿ, ಆ ಸಮಯದ ಕಾಲೇಜು ಹುಡುಗಿಯರ ಡ್ರೀಮ್ ಬಾಯ್ ಆಗಿ ಎಲ್ಲರ ಮನ ಗೆದ್ದಿದ್ದ ರಾಮ್ ಕುಮಾರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಳ್ಳೆ ಸ್ಥಾನದಲ್ಲಿದ್ದಾಗಲೇ ರಾಜಕುಮಾರ್ ಅವರ ಅಳಿಯನಾಗುವ ಅದೃಷ್ಟ ಪಡೆದುಕೊಂಡರು. ರಾಜ್ ಕುಮಾರ್ ಅವರ ಪುತ್ರಿ ಪೂರ್ಣಿಮಾ(Poornima) ಅವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನವನ್ನು ಶುರು ಮಾಡಿದರು ಪೂರ್ಣಿಮಾ ಮತ್ತು ರಾಮ್ ಕುಮಾರ್ ಅವರದ್ದು ಒಂದು ರೀತಿ ಲವ್ ಮ್ಯಾರೇಜ್ ಅಂತಲೇ ಹೇಳಬಹುದು.
ಯಾಕೆಂದರೆ ಪಾರ್ವತಮ್ಮ(Parvathamma) ಅವರ ಪ್ರೊಡಕ್ಷನ್ ಹೌಸ್ ಆದ ವಜ್ರೇಶ್ವರಿ ಕಂಬೈನ್ಸ್(Vajreshwari combines) ನ ಹಲವು ಸಿನಿಮಾಗಳಲ್ಲಿ ರಾಮ್ ಕುಮಾರ್ ಅವರು ನಟಿಸಿದ್ದಾರೆ. ಹೀಗಾಗಿ ಸೆಟ್ಟಿಗೆ ಪಾರ್ವತಮ್ಮ ಅವರು ಬರುವ ಸಮಯದಲ್ಲಿ ಪೂರ್ಣಿಮಾ ಅವರು ಕೂಡ ಬರುತ್ತಿದ್ದರಂತೆ. ಆಗಾಗ ರಾಮ್ ಕುಮಾರ್ ಅವರನ್ನು ಶೂಟಿಂಗ್ ಸೆಟ್ಗಳಲ್ಲಿ ನೋಡಿದ್ದ ಪೂರ್ಣಿಮಾ ಅವರು ಅವರ ಗುಣಕ್ಕೆ ಮನಸೋತ್ತಿದ್ದರಂತೆ ಹಾಗಾಗಿ ಪೂರ್ಣಿಮಾ ಅವರೇ ರಾಮ್ ಕುಮಾರ್ ಅವರನ್ನು ಮೊದಲು ಇಷ್ಟಪಟ್ಟರಂತೆ.
ನಂತರ ರಾಮ್ ಕುಮಾರ್ ಅವರು ಸಹ ಪೂರ್ಣಿಮಾ ಅವರನ್ನು ಮೆಚ್ಚಿಕೊಂಡು ಮನೆಯಲ್ಲಿ ಹಿರಿಯರಿಗೆ ತಿಳಿಸಿ ಮದುವೆ ಮಾತುಕತೆ ನಡೆಸಿದರಂತೆ. ಈ ವಿಷಯ ಅಣ್ಣಾವ್ರಿಗೆ ಗೊತ್ತಾಗುತ್ತಿದ್ದಂತೆ ಅಣ್ಣಾವ್ರು ಸಹ ರಾಮ್ ಕುಮಾರ್ ಅವರು ತಮ್ಮ ಅಳಿಯನಾಗಲು ಯಾವುದೇ ಅಕ್ಷೇಪವನ್ನು ಸಹ ವ್ಯಕ್ತಪಡಿಸಲಿಲ್ಲವಂತೆ. ಖುಷಿ ಖುಷಿಯಿಂದಾಗಿ ಪೂರ್ಣಿಮಾ ಅವರನ್ನು ರಾಮ್ ಕುಮಾರ್ ಅವರಿಗೆ ಪಾರ್ವತಮ್ಮ ಹಾಗೂ ರಾಜ್ ಕುಮಾರ್ ಅವರು ಧಾರೆ ಎರೆದು ಕೊಟ್ಟರು.
ಇದಾದ ಬಳಿಕವೂ ಕೂಡ ಹಲವು ಸಿನಿಮಾಗಳಲ್ಲಿ ರಾಮ್ ಕುಮಾರ್ ಅವರು ಅಭಿನಯ ಮಾಡಿದರು. ಪಾಂಡವರು, ಹಬ್ಬ ಮುಂತಾದ ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಅಂಬರೀಶ್, ದೇವರಾಜ್, ಶಶಿಕುಮಾರ್ ಅಂತಹ ದಿಗ್ಗಜರುಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಕ್ರಮೇಣವಾಗಿ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ ಇವರು ಸಾಂಸಾರಿಕ ಜೀವನದ ಕಡೆ ಹೆಚ್ಚು ಗಮನಕೊಟ್ಟರು ಮತ್ತು ಇದುವರೆಗೆ ಒಂದು ಸಣ್ಣ ವಿವಾದ ಇಲ್ಲದಂತೆ ಕೂಡ ಬದುಕನ್ನು ನಡೆಸಿರುವ ರಾಮ್ ಕುಮಾರ್ ಅವರಿಗೆ ಹೀರೋ ಮತ್ತು ಹೀರೋಯಿನ್ ಆಗುವ ಎತ್ತರಕ್ಕೆ ಬೆಳೆದಿರುವ ಮಕ್ಕಳಿದ್ದಾರೆ ಎನ್ನುವುದೇ ಆಶ್ಚರ್ಯ ಮೂಡಿಸುತ್ತದೆ.
ಪೂರ್ಣಿಮ ಹಾಗೂ ರಾಮ್ ಕುಮಾರ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಮಗ ಧೀರನ್(Dheeran) ಹಾಗೂ ಮಗಳು ಧನ್ಯ ರಾಮ್ ಕುಮಾರ್(Dhanya Ram kumar) ಇಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಮಗ ಧೀರನ್ ಅವರು ಈಗಾಗಲೇ ಶಿವ 143(Shivax143) ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನೆಯ ಜಾದು ತೋರಿದ್ದಾರೆ ಮಗಳು ಧನ್ಯ ಲಾಂಚ್ ಆಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಸದ್ಯದಲ್ಲೇ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಾಮ್ ಕುಮಾರ್ ಅವರಿಗೆ ಈಗಲೂ ಸಹ ಪೋಷಕ ನಟರಾಗಿ ಅವಕಾಶಗಳು ಬರುತ್ತಿದ್ದರೂ ಕೂಡ ಅವರೇ ಅವರ ಇಚ್ಛೆಯಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ ಮತ್ತು ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಸೇರಲು ಸಹಾಯ ಮಾಡುತ್ತಿದ್ದಾರೆ. ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರ ಅಳಿಯನಾದರೂ ಕೂಡ ಎಲ್ಲೂ ಸಹ ಅವರ ಹೆಸರಿಗೆ ಕಿಂಚಿತ್ತು ಆಗೌರವ ಬರದಂತೆ ಎಂದೂ ಕೂಡ ತನ್ನ ಅವಶ್ಯಕತೆಗಾಗಿ ಅವರ ಹೆಸರನ್ನು ಬಳಸಿಕೊಳ್ಳದಂತೆ ಸಾರ್ಥಕ ರೀತಿಯಲ್ಲಿ ತಮ್ಮ ಬದುಕನ್ನು ನಡೆಸುತ್ತಿದ್ದಾರೆ.