ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಆದರೆ ಅದ್ಯಾಕೋ ಏನೋ ಸದಾ ವಿವಾದಗಳಿಗೂ ಕೂಡ ಇವರೇ ಇಷ್ಟ ಅನಿಸುತ್ತದೆ. ಹಾಗಾಗಿ ಒಂದಲ್ಲ ಒಂದು ವಿವಾದ ಇವರಿಗೆ ತಗಲು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಹೆಂಡತಿಗೆ ಹೊಡೆದಿದ್ದ ವಿಷಯ, ಮೈಸೂರಿನಲ್ಲಿ ರೆಸ್ಟೋರೆಂಟ್ ಅಲ್ಲಿ ಆದ ಗಲಾಟೆ, ನಿರ್ಮಾಪಕ ಉಮಾಪತಿ ಜೊತೆ ಮಾಡಿಕೊಂಡ ಜಗಳ ಹಾಗೂ ಇತ್ತೀಚೆಗೆ ಹೊಸಪೇಟೆಯಲ್ಲಿ ಆದ ಚಪ್ಪಲಿ ಎಸೆತ ಸೇರಿದಂತೆ ಸದಾ ಕಾಲ ಒಂದಲ್ಲ ಒಂದು ಸುದ್ದಿಗಳು ದರ್ಶನ್ ಅವರ ಸುತ್ತ ಸುತ್ತಿಕೊಳ್ಳುತ್ತವೆ.
ಈಗ ದರ್ಶನ್ ಮೇಲೆ ಮತ್ತೊಂದು ಕೇಸ್ ಆಗಿದ್ದು ಅದು ಅವರೇ ಇಷ್ಟಪಟ್ಟು ಸಾಕುತ್ತಿದ್ದ ಪ್ರಾಣಿಪಕ್ಷಿಗಳ ವಿಷಯವಾಗಿ ಕೇಸ್ ದಾಖಲಾಗಿದೆ ಎನ್ನುವುದೇ ಬಹಳ ಬೇಸರದ ವಿಷಯ ಆಗಿದೆ. ದರ್ಶನ್ ಅವರಿಗೆ ಮೈಸೂರಿನ(Mysore) ಕೆಂಪಯ್ಯನಹುಂಡಿ ಬಳಿ ಒಂದು ಫಾರ್ಮ್ ಹೌಸ್ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿನೀಶ್ ದರ್ಶನ್ ತೂಗುದೀಪ್ ಫಾರ್ಮ್ ಹೌಸ್ ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ಹಲವು ಎಕರೆಗಳಷ್ಟು ವಿಸ್ತಾರವಾದ ತೋಟ ಹೊಂದಿರುವ ಇವರು ಅಲ್ಲಿ ಅನೇಕ ರೀತಿಯ ಪ್ರಾಣಿಗಳನ್ನು ಹಾಗೂ ಪಕ್ಷಿಗಳನ್ನು ಸಾಕುತ್ತಿದ್ದಾರೆ.
ದರ್ಶನ್ ಅವರು ಪ್ರಾಣಿ ಪ್ರಿಯರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಕೊರೋನ ಸಮಯದಲ್ಲಿ ಮೃಗಾಲಯಗಳಲ್ಲಿ(Zoo) ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸರ್ಕಾರದ ಪರವಾಗಿ ದರ್ಶನ್ ಮನವಿ ಮಾಡಿದ್ದರು. ಸ್ವತಃ ದರ್ಶನ್ ಅವರು ಸಹ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಕುದುರೆ ಹಾಗೂ ಹಸುಗಳ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಪಕ್ಷಿಗಳ ವಿಚಾರದಲ್ಲೂ ಕೂಡ ಇಂಟರೆಸ್ಟ್ ಹೊಂದಿರುವ ಇವರು ತಮ್ಮ ಫಾರ್ಮ್ ಹೌಸ್ ಅಲ್ಲಿ ಹಲವು ಬಗೆಯ ಪಕ್ಷಿಗಳನ್ನು ಸಾಕಿದ್ದಾರೆ.
ಸದಾ ಪ್ರಕೃತಿ ಜೊತೆಗೆ ಕಾಲ ಕಳೆಯಲು ಇಷ್ಟಪಡುವ ಇವರು ತಮ್ಮ ಫಾರಂ ಹೌಸನ್ನು ಅದೇ ರೀತಿ ಸೃಷ್ಟಿಸಿಕೊಂಡಿದ್ದಾರೆ. ಹಿಂದೊಮ್ಮೆ ಸಂದರ್ಶನ ಒಂದರಲ್ಲಿ ನೀವೇನಾದರೂ ಸಿನಿಮಾ ಇಂಡಸ್ಟ್ರಿಗೆ ಬರದಿದ್ದರೆ ಏನು ಮಾಡುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಖಂಡಿತವಾಗಿ ನಾನು ಯಾವುದಾದರೂ ಮೃಗಾಲಯಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದೆ. ಅಲ್ಲಿ ಏನು ಕೆಲಸ ಕೊಟ್ಟರೂ ಪರವಾಗಿಲ್ಲ ಪ್ರಾಣಿ ಪಕ್ಷಿಗಳ ಜೊತೆ ಇರಬೇಕು ಎಂದಷ್ಟೇ ಆಸೆ ಇತ್ತು ಎಂದು ನೇರವಾಗಿ ಹೇಳಿಕೊಂಡಿದ್ದರು.
ಪ್ರಾಣಿ ಪಕ್ಷಿಗಳನ್ನು ಇಷ್ಟು ಪ್ರೀತಿಯಿಂದ ಕಾಣುವ ಡಿ ಬಾಸ್ ಮೇಲೆ ಅಕ್ರಮವಾಗಿ ಪಕ್ಷಿಗಳನ್ನು ಸಾಕುತ್ತಿದ್ದರೆ ಎನ್ನುವ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಮೈಸೂರು ಸಂಚಾರಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಿಭಿನ್ನ ಬಗೆಯ ಬಾತುಕೋಳಿಗಳನ್ನು ಅಕ್ರಮವಾಗಿ ಸಾಕುತ್ತಿದ್ದಾರೆ ಎನ್ನುವ ಆರೋಪ ಮಾಡಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪಕ್ಷಿಗಳು ಬೇರೆ ದೇಶದಿಂದ ವಲಸೆ ಬಂದಿವೆ. ಅವು ಬೇರೆ ಪ್ರಾಣಿಪಕ್ಷಿ ಗಳಿಗೆ ಕಾಯಿಲೆಗಳನ್ನು ಹಂಚಬಹುದು ಎನ್ನುವ ಕಾರಣವನ್ನು ಕೊಟ್ಟಿದ್ದಾರೆ. ಮತ್ತು ನಮ್ಮ ದೇಶದ ಕಾನೂನಿನ ಪ್ರಕಾರ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಈ ಪಕ್ಷಿಗಳನ್ನು ಯಾರೂ ಮನೆಯಲ್ಲಿ ಆಗಲಿ ಫಾರಂ ಹೌಸ್ ಗಳಲ್ಲಿ ಆಗಲಿ ಸಾಕುವುದು ನಿಷಿದ್ಧ. ಅದಕ್ಕಾಗಿ ಕೇಸ್ ಹಾಕಲಾಗಿದ್ದು ಕೋರ್ಟ್ ಮುಂದೆ ಪಕ್ಷಿಗಳನ್ನು ಹಾಜರಿ ಪಡಿಸಲಾಗಿದೆ.
ಇದೇ ಮಾದರಿಯ ಬಾತುಕೋಳಿಗಳು ಹೆಚ್ಚಾಗಿ ವಾಸಿಸುವ ಹದಿನಾರು ಕೆರೆ ಬಳಿ ಬಿಡಿ ಎಂದು ಕೋರ್ಟ್ ಆದೇಶ ನೀಡಿದೆ. ಅದೇನೇ ಇದ್ದರೂ ದರ್ಶನ್ ಅವರು ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆ ಪಕ್ಷಿಗಳನ್ನು ಅವರಿಂದ ದೂರ ಮಾಡಿರುವುದಕ್ಕೆ ದರ್ಶನ್ ಅವರಂತೆ ಅವರ ಅಭಿಮಾನಿಗಳು ಬಹಳ ಬೇಸರಪಟ್ಟು ಕೊಳ್ಳುತ್ತಿದ್ದಾರೆ.