ರಾಮ್ ಕುಮಾರ್ ಕನ್ನಡದ ಸ್ಫುರದ್ರೂಪಿ ಚೆಲುವ, ಅದರಲ್ಲೂ 90ರ ದಶಕದಲ್ಲಿ ಎಲ್ಲಾ ಕಾಲೇಜು ಹುಡುಗಿಯರ ಡ್ರೀಮ್ ಬಾಯ್. ಗೆಜ್ಜೆನಾದ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಟನಾಗಿ ಬೆಳ್ಳಿ ತೆರೆಯಲಿ ಕಾಣಿಸಿಕೊಂಡ ಇವರು ಅದಕ್ಕೂ ಮುಂಚೆ ಆವೇಶ, ಮುತ್ತಿನ ಹಾರ ಮುಂತಾದ ಸಿನಿಮಾಗಳಲ್ಲಿ ಚಿಕ್ಕ ರೋಲ್ ಗಳನ್ನು ಕೂಡ ನಿರ್ವಹಿಸುತ್ತಿದ್ದರು.
ಗೆಜ್ಜೆನಾದ ಸಿನಿಮಾ ತಂದು ಕೊಟ್ಟ ದೊಡ್ಡ ಯಶಸ್ಸು ಆನಂತರ ರಾಮ್ ಕುಮಾರ್ ಅವರು ವರ್ಷಕ್ಕೆ ಹತ್ತಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಡುವಂತೆ ಮಾಡಿತು. ಇಂದಿಗೂ ಕೂಡ ಅವರ ಲವ್ ಸ್ಟೋರಿ ಸಿನಿಮಾಗಳು, ಕೌಟುಂಬಿಕ ಕಥೆಗಳು ಟಿವಿ ಪರದೆ ಮೇಲೆ ಬಂದರೂ 3 ಗಂಟೆಗಳು ಅವರನ್ನೇ ನೋಡುತ್ತಾ ಕೂತು ಬಿಡೋಣ ಎನಿಸುತ್ತದೆ.
ಅಷ್ಟು ಅಮೋಜ್ಞವಾಗಿ ನಟಿಸುತ್ತಿದ್ದ ಕಲಾವಿದ ಇದ್ದಕ್ಕಿದ್ದಂತೆ ಒಂದು ಸಮಯ ಆದ ಬಳಿಕ ಅದರಲ್ಲೂ 2005 ರಿಂದ ಈಚೆಗೆ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಾರೆ. ಕೆಲ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ನಾಯಕನಟನಾಗಿ ಮೊದಲಿನಂತೆ ತೆರೆ ಮೇಲೆ ಕಾಣುತ್ತಿಲ್ಲ ಮತ್ತು ಯಾವುದೇ ಸಿನಿಮಾ ಸಂಬಂಧಿತಕಾರ್ಯಕ್ರಮಗಳಲ್ಲಿ ಕೂಡ ರಾಮ್ ಕುಮಾರ್ ಅವರು ಕಾಣಿಸಿಕೊಳ್ಳವುದಿಲ್ಲ.
ಹೀಗಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ ಎನಿಸುತ್ತದೆ ಮತ್ತು ಒಂದು ಬಳಗವು ಇದಕ್ಕೆಲ್ಲ ನೇರವಾಗಿ ದೊಡ್ಮನೆಯನ್ನೇ ಹೊಣೆ ಮಾಡುತ್ತದೆ. ಯಾಕೆಂದರೆ ರಾಮ್ ಕುಮಾರ್ ಅವರು ಮದುವೆ ಆಗಿರುವುದು ರಾಜ್ ಕುಮಾರ್ ಅವರ ಕಿರಿಯ ಪುತ್ರಿ ಪೂರ್ಣಿಮಾ ಅವರನ್ನು ಪೂರ್ಣಿಮಾ ಅವರು ರಾಮ್ ಕುಮಾರ್ ಅವರನ್ನು ಪ್ರೀತಿಸಿ ಮದುವೆ ಆಗುತ್ತಾರೆ.
ಹೀಗಾಗಿ ಅವರ ಕುಟುಂಬಕ್ಕೆ ಇದು ಇಷ್ಟ ಇಲ್ಲದೆ ರಾಮ್ ಕುಮಾರ ಅವರನ್ನು ಬೆಳೆಯಲು ಬಿಟ್ಟಿಲ್ಲ ಎಂದು ರಾಜವಂಶದ ಮೇಲೆ ಅಪವಾದ ಹೊರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಷಯಗಳು ಮತ್ತು ಜನರು ಮಾಡುವ ಆಧಾರವಿಲ್ಲದ ಕಾಮೆಂಟ್ಗಳಲ್ಲಿ ರಾಮ್ ಕುಮಾರ್ ಅವರು ರಾಜಕುಮಾರ್ ಮನೆಯಲ್ಲಿ ಕೆಲಸಕ್ಕೆ ಇದ್ದರೂ ಅವರನ್ನು ಪೂರ್ಣಿಮಾ ಪ್ರೀತಿಸಿದ್ದು ರಾಜ್ ಕುಮಾರ್ ಮತ್ತು ಪಾರ್ವತಮ್ಮರವರಿಗೆ ಇಷ್ಟವಾಗಲಿಲ್ಲ ಎಂದೆಲ್ಲ ಕಾಣುತ್ತದೆ.
ಆದರೆ ಇದೆಲ್ಲವೂ ಕೂಡ ಅಕ್ಷರಶಃ ಸುಳ್ಳು. ಯಾಕೆಂದರೆ ರಾಮ್ ಕುಮಾರ್ ಕೂಡ ಸಿನಿಮಾ ಇಂಡಸ್ಟ್ರಿ ಸಂಬಂಧಿತ ಕುಟುಂಬದಲ್ಲಿ ಬಂದವರು ಪುಷ್ಪಕ ವಿಮಾನ ಎನ್ನುವ ಕನ್ನಡದ ವಿಶೇಷ ಚಿತ್ರದ ನಿರ್ಮಾಪಕರಾಗಿರುವ ಶೃಂಗಾರ್ ನಾಗರಾಜ್ ಅವರ ಪುತ್ರನೇ ರಾಮ್ ಕುಮಾರ್ ಹೀಗಾಗಿ ಅವರು ಎಲ್ಲೂ ಕೆಲಸಕ್ಕೆ ಇರುವ ಅವಶ್ಯಕತೆ ಇರಲಿಲ್.
ಬಾಲ್ಯದಿಂದಲೇ ಸಿನಿಮಾ ಬಗ್ಗೆ ಆಸೆ ಕಟ್ಟಿಕೊಂಡು ಅದಕ್ಕಾಗಿ ತಯಾರಾಗಿ ಸಿನಿಮಾ ಇಂಡಸ್ಟ್ರಿಗೆ ಬಂದವರು. ಪೂರ್ಣಿಮಾ ಅವರ ಪರಿಚಯ ಹೇಗಾಯಿತು ಎಂದು ನೋಡುವುದಾದರೆ ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದ ಸಿನಿಮಾಗಳಲ್ಲಿ ರಾಮ್ ಕುಮಾರ್ ನಾಯಕನಟನಾಗಿದ್ದರು, ಹೀಗಾಗಿ ಪೂರ್ಣಿಮಾ ಅವರ ಜೊತೆ ಸ್ನೇಹವಾಗಿ ಬಳಿಕ ಪ್ರೀತಿ ಆಯ್ತು
ಮದುವೆ ಹಂತಕ್ಕೆ ಬಂದಾಗ 2 ಕುಟುಂಬದ ಒಪ್ಪಿಗೆ ಪಡೆದು ಗುರು ಹಿರಿಯ ಸಮ್ಮುಖದಲ್ಲಿಯೇ ಅವರು ವಿವಾಹವಾದರರು ಅವರನ್ನು ಬೆಳೆಯಲು ಪಾರ್ವತಮ್ಮ ಅವರು ಬಿಡಲಿಲ್ಲ ಎಂದು ಹೇಳುವ ಮಾತು ಪ್ರತಿ ಕನ್ನಡಿಗನ ಎದೆಗೂ ಚುಚ್ಚಿದಂತೆ ಆಗುತ್ತದೆ ಯಾಕೆಂದರೆ ವೈಜೇಶ್ವರಿ ಕಂಬೈನ್ಸ್ ಮೂಲಕ ಸಾವಿರಾರು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ.
ಅಪರಿಚಿತರಿಗೆ ಅಸಹಾಯಕರಿಗೆ ಅನ್ನ ಕೊಟ್ಟ ದೊಡ್ಮನೆ ಸ್ವಂತ ಅಳಿಯನನ್ನು ಬೆಳೆಸುವುದಿಲ್ಲ ಎನ್ನುವುದು ಸತ್ಯಕ್ಕೆ ದೂರ, ಇದನ್ನೆಲ್ಲ ಅಪಪ್ರಚಾರ ಎಂದೇ ಹೇಳಬಹುದು. ಅವರಿಗೆ ಅವಕಾಶ ಕಡಿಮೆ ಆಗಿದ್ದು ಟ್ರೆಂಡ್ ಚೇಂಜ್ ಆದ್ದರಿಂದ ಹಾಗೆ ನೋಡುವುದಾದರೆ ಆ ಸಮಯದಲ್ಲಿ ಇವರ ಸರಿಸಮನಾಗಿ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದ ಅನೇಕ ನಟರು ಕೂಡ ನಾಯಕ ನಟರಾಗಿ ಅವಕಾಶ ಕಳೆದುಕೊಂಡಿದ್ದಾರೆ.
ಬಹುತೇಕರು ಧಾರವಾಹಿಗಳು ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರ ಒಪ್ಪಿಕೊಂಡರು. ಆದರೆ ರಾಮ್ ಕುಮಾರ್ ಅವರಿಗೆ ಪೋಷಕ ಪಾತ್ರದಲ್ಲಿ ನಟಿಸುವುದು ಇಷ್ಟವಿಲ್ಲದೆ ಅವರು ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ. ಅವರದೇ ಪೂರ್ಣಿಮಾ ಎಂಟರ್ಪ್ರೈಸಸ್ ಎನ್ನುವ ಪ್ರೊಡಕ್ಷನ್ ಸಂಸ್ಥೆ ಕೂಡ ಇದೆ ಇದಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ನೋಡಿಕೊಳ್ಳುವುದರಲ್ಲಿ ಅವರು ಬಿಸಿಯಾಗಿದ್ದಾರೆ.
ಅವರ ಪುತ್ರ ಧೀರನ್ ರಾಮ್ ಕುಮಾರ್ ಹಾಗೂ ಮಗಳು ಧನ್ಯ ರಾಮ್ ಕುಮಾರ್ ಕೂಡ ಸಿನಿಮಾ ಇಂಡಸ್ಟ್ರಗೆ ಬಂದಿರುವುದರಿಂದ ಅವರನ್ನು ಬೆಳೆಸುವುದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದರಲ್ಲಿ ರಾಮ್ ಕುಮಾರ್ ಅವರು ಸಕ್ರಿಯರಾಗಿದ್ದಾರೆ. ಈಗಲೂ ದೊಡ್ಮನೆ ಹಾಗೂ ರಾಮ್ ಕುಮಾರ್ ಅವರ ಸಂಬಂಧ ಅನ್ಯೋನ್ಯವಾಗಿದೆ. ಇನ್ನು ಮುಂದಾದರು ರಾಮ್ ಕುಮಾರ್ ವಿಷಯವಾಗಿ ದೊಡ್ಮನೆ ದೂರವುದನ್ನು ಅತೃಪ್ತ ಆತ್ಮಗಳು ಬಿಡಲಿ ಎನ್ನುವುದಷ್ಟೇ ಈ ಅಂಕಣದ ಆಶಯ.!