ಪ್ರತಿಯೊಬ್ಬರೂ ಕೂಡ ಭವಿಷ್ಯಕ್ಕಾಗಿ ಒಂದಷ್ಟು ಹಣವನ್ನು ಹೂಡಿಕೆ ಮಾಡಿ ಇಡುವುದು ನಾವು ನೋಡಿದ್ದೇವೆ. ತಾವು ದುಡಿಯುತ್ತಿರುವಂತಹ ಹಣವನ್ನು ಕೂಡಿಡುವುದು ತುಂಬಾನೇ ಒಳ್ಳೆಯದು. ಹಿರಿಯ ನಾಗರಿಕರು ನಿವೃತ್ತಿಯ ನಂತರ FD ಇಡುವುದರ ಮೂಲಕ ಹಣವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಾರೆ. ಈಗಂತೂ ಸಾಕಷ್ಟು ಕಡೆಗಳಲ್ಲಿ ಹೆಚ್ಚುವರಿ ಬಡ್ಡಿ ದರವನ್ನು ನೀಡಿ ಹಣವನ್ನು ಹೆಚ್ಚು ಮಾಡಿಕೊಡಲಾಗುತ್ತದೆ.
ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳು ಉಳಿತಾಯ ಯೋಜನೆಗಳ ಮೂಲಕ ಹೆಚ್ಚುವರಿ ಬಡ್ಡಿ ದರವನ್ನು ಕೂಡ ನೀಡುತ್ತಿದೆ ಹಾಗಾಗಿ ನೀವು ಎಫ್ ಡಿ ಮೇಲೆ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು. ನಮ್ಮ ದೇಶದ ಅತಿ ದೊಡ್ಡ ಸಾಲದಾತ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ ಎಫ್ ಡಿ ಯೋಜನೆಗಳನ್ನು ಜಾರಿಗೆ ತಂದಿದೆ ಗ್ರಾಹಕರಿಗೆ ಉತ್ತಮ ಆದಾಯ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದೆ.
ಅದರಲ್ಲಿಯೂ ಹಿರಿಯ ನಾಗರಿಕರಿಗೆ ವಿಶೇಷವಾದಂತಹ ಎಫ್ ಡಿ ದರವನ್ನು SBI ನಿಗದಿಪಡಿಸಿದ್ದು ಒಮ್ಮೆ ಎಫ್ ಡಿ ಇಟ್ಟರೆ ಅವಧಿ ಮುಗಿಯುವಷ್ಟರಲ್ಲಿ ನಿಮ್ಮ ಕೈಗೆ ಬಹುದೊಡ್ಡ ಮಟ್ಟದ ಹಣ ಬಂದು ಸೇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿ ಕೇರ್ ಎಫ್ ಡಿ ಎಂಬ ಉಳಿತಾಯ ಯೋಜನೆಯನ್ನು ಆರಂಭಿಸಿದ್ದು ಇದೀಗ ಹಿರಿಯ ನಾಗರಿಕರಿಗೆ ವಿ ಕ ಎನ್ನುವ ಉಳಿತಾಯ ಯೋಜನೆಯನ್ನು ಪ್ರಾರಂಭ ಮಾಡಿದೆ.
ಭವಿಷ್ಯದಲ್ಲಿ ಹಿರಿಯ ನಾಗರಿಕರಿಗೆ ತೊಂದರೆ ಆಗಬಾರದು ಎನ್ನುವಂತಹ ಉದ್ದೇಶದಿಂದ ಈ ಎಫ್ ಡಿ ಅನ್ನು ಪ್ರಾರಂಭ ಮಾಡಲಾಗಿತ್ತು. ಇದರಲ್ಲಿ ನೀವು ಹಣವನ್ನು ಇಟ್ಟರೆ ದುಪ್ಪಟ್ಟಾಗಿಸಿಕೊಳ್ಳಬಹುದು ಹಾಗೆಯೇ ಹೆಚ್ಚಿನ ಬಡ್ಡಿ ದರವನ್ನು ಈ ಯೋಜನೆಯಲ್ಲಿ ನಿಗದಿಪಡಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿ ಕೇರ್ ಎಫ್ ಡಿ ಯೋಜನೆಯ ಬಹಳಷ್ಟು ಪ್ರಯೋಜನಗಳನ್ನು ತಂದುಕೊಡುತ್ತದೆ
ಇದರಲ್ಲಿ ನೀವು ಹೂಡಿಕೆ ಮಾಡಿದರೆ 10 ವರ್ಷಗಳ ನಂತರ ಹಣ ದುಪ್ಪಟ್ಟಾಗುತ್ತದೆ 2020ರಲ್ಲಿ 10 ವರ್ಷಗಳವರೆಗೆ ಈ ಯೋಜನೆಯ ಅಡಿಯಲ್ಲಿ ನೀವು 5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ 6.5% ನಷ್ಟು ಬಡ್ಡಿ ಸಿಗುತ್ತದೆ ಅಂದರೆ 5 ಲಕ್ಷ ರೂಪಾಯಿಗಳನ್ನು ಇಟ್ಟರೆ 10 ವರ್ಷಗಳಲ್ಲಿ ಅದು ಹತ್ತು ಲಕ್ಷವಾಗಿರುತ್ತದೆ. ನೀವು ಎಸ್ಬಿಐ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಯೋಜನೆಗಳನ್ನು ಹೂಡಿಕೆ ಮಾಡಿದರೆ 5 ರಿಂದ 10 ವರ್ಷಕ್ಕೆ ಎಫ್ಡಿ ಇಟ್ಟರೆ 7.50 ಪರ್ಸೆಂಟ್ ಬಡ್ಡಿ ಸಿಗುತ್ತದೆ.
ಅದರಲ್ಲಿಯೂ ಕೂಡ ಹಿರಿಯ ನಾಗರಿಕರಿಗೆ 0.50% ನಷ್ಟು ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದು ಮೂರು ತಿಂಗಳಿಗೆ ಹಾಗೂ ಆರು ತಿಂಗಳ ನಂತರ ವಾರ್ಷಿಕವಾಗಿ TDS ಅನ್ನು ಈ ಯೋಜನೆಯಲ್ಲಿ ಕಡಿತಗೊಳಿಸಲಾಗುತ್ತದೆ. ಎಸ್ಬಿಐ ನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೆ ಇಡುವ FD ಗೆ ಶೇಕಡ 30.50 ರಿಂದ ಶೇಕಡ 7.50 ವರೆಗೆ ಬಡ್ಡಿ ಸಿಗುತ್ತದೆ ಈ ಯೋಜನೆಯಲ್ಲಿ ಸುಲಭವಾಗಿ ಎಫ್ ಡಿ ಆರಂಭಿಸಬಹುದು ಅದಕ್ಕಾಗಿ ಬ್ಯಾಂಕಿಗೆ ಹೋಗುವ ಅಗತ್ಯವೂ ಇಲ್ಲ ಮನೆಯಲ್ಲಿಯೇ ಕುಳಿತು ನೆಟ್ ಬ್ಯಾಂಕಿಂಗ್ ಅಥವಾ ಯೋನೋ ಅಪ್ಲಿಕೇಶನ್ ಮೂಲಕ ಎಫ್ ಡಿ ಖಾತೆಯನ್ನು ಆರಂಭಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಎಫ್ ಡಿ ಪ್ರಯೋಜನಗಳೆಂದರೆ ನೀವು ಇತರ ಬ್ಯಾಂಕುಗಳ ಎಫ್ ಡಿ ಗೆ ಹೋಲಿಕೆ ಮಾಡಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಎಫ್ ಡಿ ಹೆಚ್ಚು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದಕ್ಕೆ ಸಿಗುವ ಬಡ್ಡಿ ದರ ಉತ್ಯುತ್ತಮವಾಗಿ ಇರುತ್ತದೆ. ಹಾಗಾಗಿ ನೀವು ಇದರಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುವುದರಲ್ಲಿ ಎರಡು ಮಾತಿಲ್ಲ. ಈ ಉಳಿತಾಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.