Saturday, September 30, 2023
Home News ಈ ಒಂದು ಕೆಲಸ ಮಾಡದೆ ಇದ್ದರೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ನಿಮ್ಮ...

ಈ ಒಂದು ಕೆಲಸ ಮಾಡದೆ ಇದ್ದರೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗುವುದಿಲ್ಲ.

ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವಂತಹ ವಿಷಯ ಈಗ ಎಲ್ಲೆಡೆ ಹರಿದಾಡುತ್ತಿದೆ. ಕೆಲವೊಬ್ಬ ರೈತರಿಗೆ ಈ 14ನೇ ಕಂತಿನ ಹಣ ಜಮೆಯಾಗುವುದಿಲ್ಲ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಹಣಕ್ಕಾಗಿ ರೈತರು ಕಾತುರದಿಂದ ಕಾಯುತ್ತ ಕುಳಿತಿದ್ದಾರೆ.

ಭಾರತ ಸರ್ಕಾರವು ಫೆಬ್ರವರಿ 27 2023 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿತ್ತು ಅದೇ ಸಮಯದಲ್ಲಿ ಭಾರತ ಸರ್ಕಾರದ 14ನೇ ಕಂತಿನ ಹಣವನ್ನು ವರ್ಗಾವಣೆ ಮಾಡುವುದರ ಬಗ್ಗೆ ದೊಡ್ಡ ಘೋಷಣೆಯನ್ನು ಸಹ ನೀಡಿತ್ತು. ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತನ್ನು ಜುಲೈ 27 2023 ರಂದು ವರ್ಗಾವಣೆ ಮಾಡುವ ಕುರಿತು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಘೋಷಣೆ ಮಾಡಲಾಗಿದೆ.

ಈ ಹಿಂದೆ ಜೂನ್ ತಿಂಗಳಿನಲ್ಲಿ 14ನೇ ಕಂತಿನ ಹಣವನ್ನು ಸರ್ಕಾರ ವರ್ಗಾಯಿಸಬಹುದು ಎಂದು ಹಲವು ಮಾಧ್ಯಮಗಳು ವರದಿಯನ್ನು ನೀಡಿತ್ತು ಆದರೆ ಇದು ಸಾಧ್ಯವಾಗಲಿಲ್ಲ 14ನೇ ಕಂತಿನ ಹಣವನ್ನು ಸರ್ಕಾರವು ಇದೇ ತಿಂಗಳ 27 ನೇ ತಾರೀಕು ವರ್ಗಾವಣೆ ಮಾಡಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷವೂ ಕೂಡ 6000 ರೂಪಾಯಿಗಳನ್ನು ನೀಡಲಾಗುತ್ತದೆ.

ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಆನ್ಲೈನ್ ಮುಖಾಂತರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಇದಕ್ಕೆ ಶೇಖಡ ನೂರರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ನೋಡಿಕೊಳ್ಳುತ್ತಿದೆ ರೈತರನ್ನು ಆರ್ಥಿಕ ಸ್ಥಿತಿಯಲ್ಲಿ ಸುಧಾರಿಸುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭ ಮಾಡಿದೆ ದೇಶದಲ್ಲಿ 10 ಕೋಟಿಗು ಹೆಚ್ಚು ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ಕೆಲವು ರೈತರು ಈ ಯೋಜನೆಗೆ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ e-KYC ಮಾಡದೆ ಇರುವಂತಹ ರೈತರಿಗೆ ಪಿಎಮ್ ಕಿಸನ್ ಆರ್ಥಿಕ ನೆರವನ್ನು ನೀಡಲು ಸ್ಥಗಿತಗೊಳಿಸುತ್ತಿದೆ ಈ ಯೋಜನೆಯಲ್ಲಿ ಆರ್ಥಿಕ ನೆರವು ಪಡೆಯಲ್ಉ e-KYC ಮಾಡುವುದು ಕಡ್ಡಾಯವಾಗಿದೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 53,95,428 ಫಲಾನುಭವಿ ರೈತರಿದ್ದು ಇನ್ನೂ ದೊಡ್ಡ ಸಂಖ್ಯೆಯಲ್ಲಿ e-KYC ಮಾಡದೇ ಇರುವ ರೈತರು ಇದ್ದಾರೆ.

ಉಳಿದಿರುವ ಅರ್ಹ ರೈತರು ಈ ಆರ್ಥಿಕ ನೆರವನ್ನು ಪಡೆಯಲು e-KYC ಮಾಡಿಕೊಳ್ಳಬೇಕಾಗುತ್ತದೆ, ಮಾಡಿಸದೇ ಇದ್ದಲ್ಲಿ 14ನೇ ಕಂತಿನ ಹಣ ಸ್ಥಗಿತವಾಗುತ್ತದೆ ನೀವು ನಿಮ್ಮ ತಾಲೂಕಿನ ನಾಗರಿಕ ಸೇವ ಕೇಂದ್ರ ಅಥವಾ ಗ್ರಾಮ ಒನ್ ಸೇವ ಕೇಂದ್ರಗಳಲ್ಲಿ ನೀವು e-KYC ಗೆ ಸಂಬಂಧಪಟ್ಟಂತಹ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಮಾಡಿಸುವುದು ಕಡ್ಡಾಯವಾಗಿದೆ.

ಆದ್ದರಿಂದ ಪ್ರತಿಯೊಬ್ಬ ರೈತರು ಸಹ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಕೂಡಲೇ e-KYC ಯನ್ನು ಮಾಡಿಸಿ 14ನೇ ಕಂತಿನ ಹಣವನ್ನು ತಪ್ಪದೆ ಪಡೆದುಕೊಳ್ಳಿ ಇದು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಮಾಡಿರುವಂತಹ ಯೋಜನೆಯಾಗಿದ್ದು ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಸಹ ಪಡೆದುಕೊಳ್ಳಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -