Saturday, September 30, 2023
Home News ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಮನೆಯ ಮುಖ್ಯಸ್ಥರ ಹೆಸರನ್ನು ಬದಲಿಸುವ ವಿಧಾನ.

ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಮನೆಯ ಮುಖ್ಯಸ್ಥರ ಹೆಸರನ್ನು ಬದಲಿಸುವ ವಿಧಾನ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ತಲಾ ಒಬ್ಬರಿಗೆ 5 ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿಗೆ ಬದಲಾಗಿ ಹಣ ವರ್ಗಾವಣೆ ಮಾಡುವುದಾಗಿ ಇದೀಗ ಸರ್ಕಾರವು ಘೋಷಣೆ ಮಾಡಲಾಗಿದ್ದು ಅದರಂತೆಯೇ ಸಾಕಷ್ಟು ಜನರಿಗೆ ಹಣವು ಅವರ ಖಾತೆಗೆ ಬಂದು ತಲುಪಿದೆ ಆದರೆ ಕೆಲವೊಂದು ಕುಟುಂಬಗಳಿಗೆ ಈ ಯೋಜನೆಯ ಮೂಲಕ ಹಣವು ದೊರೆಯುತ್ತಿಲ್ಲ.

ಮನೆಯ ಮುಖ್ಯಸ್ಥರು ಮ’ ರ’ ಣ ಹೊಂದಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕದೇ ಇದ್ದಲ್ಲಿ ಅಂತಹವರ ರೇಷನ್ ಕಾರ್ಡ್ ಗಳಿಗೆ ಹಣವು ಜಮಾ ಆಗುವುದಿಲ್ಲ. ಇಂತಹವರು ಮನೆಯ ಮುಖ್ಯಸ್ಥರ ಹೆಸರನ್ನು ಹೇಗೆ ಬದಲಿಸುವುದು ಎಂದು ನೋಡುವುದಾದರೆ ನಾವು ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಲು ರೇಷನ್ ಪಡೆದುಕೊಳ್ಳುವಂತಹ ಶಾಪ್ ಗೆ ಹೋಗಿ ಅಲ್ಲಿ ನಿಮಗೆ ಆನ್ಲೈನ್ ನಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಿಕೊಡಲಾಗುತ್ತದೆ.

ರೇಷನ್ ಅಂಗಡಿಯಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಹೇಗೆ ಬದಲಿಸುತ್ತಾರೆ ಎಂದು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ರೇಷನ್ ಕಾರ್ಡ್ ಕರ್ನಾಟಕ ಎಂದು ಸರ್ಚ್ ಮಾಡಿ ಅಲ್ಲಿ ಈ ಸರ್ವಿಸ್ ಗೆ ಹೋಗಿ ನಂತರ ಶಾಪ್ ಓನರ್ ಮಾಡೆಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಡಿಸ್ಟಿಕ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮಗೆ ಒಂದು ಲಾಗಿನ್ ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಕೆಳಗೆ ಕಾಣುವ ಕ್ಯಾಪ್ಚ ಕೊಡನ್ನು ಹಾಕಿ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಒಂದು ಬಯೋಮೆಟ್ರಿಕ್ ಇಲ್ಲಿ ಕೇಳುತ್ತದೆ ಐ ಅಲೊಯಿಂಗದ ಫುಡ್ ಡಿಪಾರ್ಟ್ಮೆಂಟ್ ಎಂಬ ಪರ್ಮಿಷನ್ ಕೇಳುತ್ತದೆ ಅಲ್ಲಿ ಟಿಕ್ ಮಾರ್ಕನ್ನು ಹಾಕಿದ್ದ ನಂತರ ಫಿಂಗರ್ ಪ್ರಿಂಟ್ ಇಮೇಜ್ ಮತ್ತು ಕ್ಯಾಪ್ಚರ್ ಮೇಲೆ ಕ್ಲಿಕ್ ಮಾಡಿದರೆ ಬಯೋಮೆಟ್ರಿಕ್ ಇಲ್ಲಿ ಕ್ಯಾಪ್ಚರ್ ಆಗುತ್ತದೆ ನಂತರ ನಿಮ್ಮ ಪೇಜ್ ನಲ್ಲಿ ಪರಿಶೀಲಿಸಿ ಮೇಲೆ ಕ್ಲಿಕ್ ಮಾಡಿದರೆ ನಮ್ಮ ಒಂದು ರೇಷನ್ ಶಾಪ್ ಲಾಗಿನ್ ಆಗುತ್ತದೆ.

ನಂತರ ಎಡಭಾಗದಲ್ಲಿ ಮೈನ್ ಮೆನು ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಶಾಪ್ ಎ ಎಷ್ಟು ಅಕ್ಕಿ ಬಂದಿದೆ ಎಷ್ಟು ಹಂಚಿದ್ದಾರೆ ಎಂಬ ಒಂದು ಮಾಹಿತಿ ನಿಮಗೆ ದೊರೆಯುತ್ತದೆ. ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಲು ಮುಖ್ಯ ಮಾಹಿತಿ ಮೇಲೆ ಕ್ಲಿಕ್ ಮಾಡಿ e-KYC ಇಂದ ರೇಷನ್ ಕಾರ್ಡ್ ಸದಸ್ಯರ ವಿವರಗಳ ನವೀಕರಣ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಪಡಿತರ ಚೀಟಿ ಸದಸ್ಯರ ಪರಿಶೀಲನೆ ಎಂದು ಪೇಜ್ ಓಪನ್ ಆಗುತ್ತದೆ

ಅದರಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಶಾಪ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು ತದನಂತರ ಮುಂದೆ ಮೇಲೆ ಕ್ಲಿಕ್ ಮಾಡಿದರೆ ಸದಸ್ಯರ ಹೆಸರು ಸೇರಿಸಿ ಮುಂದೆ ಮೇಲೆ ಕ್ಲಿಕ್ ಮಾಡಿದರೆ ನಂತರ ಪರ್ಮಿಷನ್ ಎಸ್ ಮೇಲೆ ಕ್ಲಿಕ್ ಮಾಡಿ. ನಂತರ ಬಯೋಮೆಟ್ರಿಕ್ ಮೇಲೆ ಕ್ಲಿಕ್ ಮಾಡಿ ನೀವು ಯಾರ ಹೆಸರನ್ನು ಸೆಲೆಕ್ಟ್ ಮಾಡಿಕೊಂಡಿರುತ್ತೇವೆ ಅವರ ಬಯೋಮೆಟ್ರಿಕ್ ಅನ್ನು ತೆಗೆದುಕೊಂಡು ಕೆಳಗೆ ಪರಿಶೀಲಿಸು ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಫ್ಯಾಮಿಲಿ ಮುಖ್ಯಸ್ಥರ ಹೆಸರನ್ನು ಬದಲಾಯಿಸುವ ವಿವರಗಳು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಹೆಸರು ನಿಮಗೆ ಅಲ್ಲಿ ಕಾಣಿಸುತ್ತದೆ.

ಮನೆಯ ಮುಖ್ಯಸ್ಥರು ಮಹಿಳೆಯರು ಆಗಿರುತ್ತಾರೆ. ಮನೆಯಲ್ಲಿ ವಯಸ್ಸಾದಂತಹ ಮಹಿಳೆ ಮುಖ್ಯಸ್ಥೆಯಾಗುತ್ತಾಳೆ. ಆದ್ದರಿಂದ ಯಾರೆಲ್ಲ ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಬೇಕು ಅಂದುಕೊಂಡಿರುವವರು ರೇಷನ್ ಅಂಗಡಿಗೆ ಹೋಗಿ ತಪ್ಪದೇ ನೀವು ಮನೆಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -