ನಾವು ದೈನಂದಿನವಾಗಿ ಬಳಸುವ ಈ ಹಣ್ಣುಗಳನ್ನು ತಿಂದರೆ 50 ವರ್ಷ ಆದರೂ ಕೂಡ 30 ವರ್ಷದವರಂತೆ ಕಾಣುತ್ತೀರ.

ಪ್ರತಿಯೊಬ್ಬರಿಗೂ ಕೂಡ ತಮ್ಮ ತ್ವಚೆ ಕಾಂತಿಯುತವಾಗಿ ಆರೋಗ್ಯಕರವಾಗಿ ಇರಬೇಕು ಎಂಬ ಕನಸು ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಮಹಿಳೆಯರಿಗೆ ತಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಮಾರ್ಕೆಟ್ ನಲ್ಲಿ ಸಿಗುವಂತಹ ಕೆಲವು ಪ್ರಾಡಕ್ಟ್ ಗಳನ್ನು ಉಪಯೋಗಿಸಿ ತಮ್ಮ ತ್ವಚೆ ಚೆನ್ನಾಗಿರಬೇಕು ಎಂದು ಕೇರ್ ಮಾಡುತ್ತಾರೆ

ಆದರೆ ಕೆಲವು ಉತ್ಪನ್ನಗಳನ್ನು ಬಳಕೆ ಮಾಡುವ ಮೊದಲು ಕೆಲವೊಂದು ಆಹಾರದಿಂದಲೂ ಕಾಂತಿಯುತವಾದ ತ್ವಚೆಯನ್ನು ಪಡೆದುಕೊಳ್ಳಬಹುದು ಇದಕ್ಕಾಗಿ ನೀವು ಆಹಾರ ಕ್ರಮದಲ್ಲಿ ಕೆಲವು ಹಣ್ಣುಗಳು ಹಾಗೂ ತರಕಾರಿಗಳು ಬಳಸಬೇಕು ಇದನ್ನು ಸೇವಿಸಿ ನೀವು ಪ್ರತಿನಿತ್ಯ ಬಳಸುವಂತಹ ಪ್ರಾಡಕ್ಟ್ ಗಳನ್ನ ಬಳಕೆ ಮಾಡಬಹುದು ಈ ಹಣ್ಣುಗಳನ್ನು ಸೇವಿಸುವುದರಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ ಅದರಲ್ಲಿಯೂ ತ್ವಚೆಗೆ ಕಾಂತಿ ಹಾಗೂ ಆರೋಗ್ಯ ನೀಡುವಂತಹ ಕೆಲವೊಂದು ಹಣ್ಣುಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಸೇಬು:- ಸೇಬಿನಲ್ಲಿ ಹಲವು ರೀತಿಯ ಆರೋಗ್ಯಕರ ಅಂಶಗಳು ಇದೆ ಎಂದು ಎಲ್ಲರಿಗೂ ಚೆನ್ನಾಗಿ ಗೊತ್ತು ಹಾಗಾಗಿ ದಿನಕ್ಕೆ ಒಂದು ಸೇಬು ತಿಂದರೆ ಆರೋಗ್ಯವಾಗಿರಬಹುದು ಹಾಗೆಯೇ ಸೇಬು ತಿನ್ನುವುದರಿಂದ ಮುಖದಲ್ಲಿ ಬರುವಂತಹ ನೆರಿಗೆಯಿಂದಲೂ ದೂರವಿರಬಹುದು ಸೇಬಿನಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ವಿಟಮಿನ್ ಸಿ ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು ಇದು ಚರ್ಮದಲ್ಲಿ ಬರುವಂತಹ ಸುಕ್ಕು ನೆರಿಗೆಗಳನ್ನು ದೂರವಿಡುತ್ತದೆ.

ಕಿವಿ ಹಣ್ಣು:- ನಿಂಬೆ ಮತ್ತು ಕಿತ್ತಲೆಯಲ್ಲಿ ವಿಟಮಿನ್ ಸಿ ಅಧಿಕವಾಗಿ ಇದೆ ಎಂದು ಎಲ್ಲರಿಗೂ ಗೊತ್ತು ಆದರೆ 100 ಗ್ರಾಂ ಕಿವಿ ಹಣ್ಣಿನಲ್ಲಿ ಶೇಕಡ 154 ರಷ್ಟು ವಿಟಮಿನ್ ಸಿ ಇದೆ ಎಂದು ಕೆಲವರಿಗೆ ಗೊತ್ತಿಲ್ಲ ವಿಟಮಿನ್ ಇ ಜೊತೆಗೆ ವಿಟಮಿನ್ ಸಿ ಸೇವನೆ ಮಾಡಿದ್ದರೆ ಇದು ತುಂಬಾನೇ ಪರಿಣಾಮಕಾರಿಯಾಗಿರುತ್ತದೆ ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಕೂಡ ಇದೆ ಈ ಎರಡು ವಿಟಮಿನ್ ಗಳು ಆರೋಗ್ಯವನ್ನು ಕಾಪಾಡಲು ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ.

ಅವಕಾಡೊ (ಬೆಣ್ಣೆ ಹಣ್ಣು):- ಈ ಹಣ್ಣಿನಲ್ಲಿ ವಿಟಮಿನ್ ಸಿ ವಿಟಮಿನ್ ಎ ವಿಟಮಿನ್ ಬಿ6, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಇತರೆ ಕೆಲವೊಂದು ಆಂಟಿ ಆಕ್ಸಿಡೆಂಟ್ ಗಳು ಇವೆ ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಅದರಿಂದ ಚರ್ಮಕ್ಕೆ ಮಾಯಿಶ್ಚರೈಸ್ ಆಗುತ್ತದೆ ಮತ್ತು ಪೋಷಣೆ ಕೂಡ ಸಿಗುತ್ತದೆ ಚರ್ಮವು ನಯವಾಗಿ ಇರಲು ವಾರಕ್ಕೆ ಒಂದು ಸಲ ಮಾಸ್ಕ ಹಾಕಿಕೊಳ್ಳಿ ಇದರಿಂದ ಚರ್ಮವು ಕಾಂತಿಯುತವಾಗಿ ಆಗುತ್ತದೆ.

ಪಪ್ಪಾಯ:- ಚರ್ಮದ ಆರೋಗ್ಯಕ್ಕೆ ಪಪ್ಪಾಯ ಅತ್ಯುತ್ತಮವಾದ ಹಣ್ಣಾಗಿದೆ ಇದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸೌಂದರ್ಯ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತಿದೆ ಈ ಹಣ್ಣಿನಲ್ಲಿ ಇರುವಂತಹ ಅಂಶವು ಚರ್ಮದಲ್ಲಿನ ಸತ್ವ ಕೋಶವನ್ನು ತೆಗೆಯುವುದು ಹಾಗೂ ಮುಖದಲ್ಲಿ ಅನಗತ್ಯ ಕೂದಲು ಬೆಳೆಯದಂತೆ ಮಾಡುತ್ತದೆ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ ಈ ಹಣ್ಣು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ಪಪ್ಪಾಯ ಹಣ್ಣನ್ನು ಸೇವಿಸುವುದು ತುಂಬಾ ಒಳ್ಳೆಯದು.

ದಾಳಿಂಬೆ ಹಣ್ಣು:- ಈ ಹಣ್ಣು ತುಂಬಾ ರುಚಿಕರ ಮತ್ತು ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಹಣ್ಣಾಗಿದ್ದು ಇದನ್ನು ಸೌಂದರ್ಯ ವೃದ್ಧಿಸಲು ಸಹಾಯಕಾರಿ ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು.

ಅನಾನಸ್:- ಚರ್ಮಕ್ಕೆ ಕಾಂತಿ ನೀಡುಲು ಅನಾನಸ್ ಹಣ್ಣನ್ನು ತಿನ್ನಬಹುದು ವಿಟಮಿನ್ ಸಿ ಇರುವಂತಹ ಈ ಹಣ್ಣು, ವಿಟಮಿನ್ ಸಿ ಮೊಡವೆ ಮೂಡದಂತೆ ತಡೆಗಟ್ಟುತ್ತದೆ ಈ ಹಣ್ಣನ್ನು ತಿಂದರೆ ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಎ ಪೊಟ್ಯಾಶಿಯಂ ಈ ಹಣ್ಣಿನಲ್ಲಿ ಇದ್ದು ನಮ್ಮ ಚರ್ಮಕ್ಕೆ ಇದು ತುಂಬಾ ಒಳ್ಳೆಯದು.

Leave a Comment