ಟಾಲಿವುಡ್ ಕಂಡ ಸ್ಟಾರ್ ಜೋಡಿಗಳಲ್ಲಿ ಸ್ಯಾಮ್ ಹಾಗೂ ಚೈ ಜೋಡಿ ಕೂಡ ಒಂದಾಗಿತ್ತು. ತೆಲುಗು ಚಿತ್ರರಂಗದ ಕ್ಯೂಟೆಸ್ಟ್ ಜೋಡಿ ಎಂದು ಕರೆಸಿಕೊಂಡಿದ್ದ ಸಮಂತ ಹಾಗೂ ನಾಗಚೈತನ್ಯ (Samatha and NagaChaithanya) ಜೋಡಿ ಮೇಲೆ ಯಾರ ದೃಷ್ಟಿ ಬಿತ್ತೋ ಏನೋ ಮದುವೆ ಆದ ಕೆಲವೇ ವರ್ಷಗಳಲ್ಲಿ ವಿ’ಚ್ಛೇ’ದ’ನ ಪಡೆದುಕೊಂಡಿದ್ದಾರೆ.
ಇವರ ವಿ’ಚ್ಛೇ’ದ’ನ’ದ ವಿಷಯವೂ ಅದೆಷ್ಟೋ ಮನಸ್ಸುಗಳನ್ನು ಕಾಡಿದೆ ಯಾಕೆಂದರೆ ಯಾರು ಕೂಡ ಇವರಿಬ್ಬರ ನಡುವೆ ಈ ರೀತಿಯೆಲ್ಲಾ ಆಗುತ್ತದೆ ಎಂದೂ ಎಂದು ಊಹಿಸಿಯೂ ಇರಲಿಲ್ಲ. ಮನ ಚಿತ್ರ ನೋಡಿದ ಬಳಿಕ ಪ್ರತಿಯೊಬ್ಬರೂ ಕೂಡ ಅಕ್ಕಿನೇನಿ ಮನೆಗೆ ಸಮಂತ ತಕ್ಕ ಸೊಸೆ ಎಂದೇ ಅಭಿಪ್ರಾಯ ಪಟ್ಟಿದ್ದರು, ಮಜಲಿ ನೋಡಿದ ಮೇಲಂತೂ ಇವರಿಬ್ಬರು ರಿಯಲ್ ಲೈಫ್ ಕಪಲ್ ಳಾದರೆ ಚೆನ್ನಾಗಿರುತ್ತಾರೆ ಎಂದೇ ಸಿನಿ ರಸಿಕರು ಮಾತನಾಡಿಕೊಂಡರು.
KGF ದಾಖಲೆ ಮುರಿದ ಧ್ರುವ ಸರ್ಜಾ ಮಾರ್ಟಿನ್ ಆಡಿಯೋ ರೈಟ್ಸ್.! ಎಷ್ಟು ಕೋಟಿಗೆ ಸೇಲ್ ಆಗಿದೆ ಗೊತ್ತ.?
ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿ ಆಗಬಾರದ್ದು ಆಗಿಯೇ ಹೋಗಿದೆ. ಕಾರಣ ಏನು ಎಂದು ಇಬ್ಬರೂ ನೇರವಾಗಿ ಎಲ್ಲೂ ಹೇಳಿಲ್ಲ, ಸಾಲದಕ್ಕೆ ನಟಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿ ಮಲೇಶಿಯಾದಲ್ಲಿ ಚಿಕಿತ್ಸೆ ಪಡುತ್ತಿದ್ದಾಗ ಸ್ವತಃ ನಾಗಾರ್ಜುನ್ ಅವರೇ ಹೋಗಿ ಮಾಜಿ ಸೊಸೆ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ ಇವರಿಬ್ಬರ ಕೈ ಮೇಲೆ ಹಾಕಿಸಿಕೊಂಡಿದ್ದ ಪ್ರೀತಿಯ ಕುರುಹಿನ ಹಚ್ಚೆಗಳು ಇನ್ನೂ ತೆಗೆಸಿಲ್ಲ.
ಇಷ್ಟು ಪ್ರೀತಿ ಇದ್ದಮೇಲೆ ಬೇರೆ ಆಗಿದ್ಯಾಕೋ ಗೊತ್ತಿಲ್ಲ. ಯಾವ ಸಂದರ್ಶನದಲ್ಲಾಗಲಿ ಅಥವಾ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಆಗಲಿ ಒಬ್ಬರೊಬ್ಬರು ದೂಷಿಸಿದ್ದು, ವಿ’ಚ್ಛೇ’ದ’ನಕ್ಕೆ ಇನ್ನೊಬ್ಬರನ್ನು ಆರೋಪ ಮಾಡಿದ್ದು ಕಾಣಲೂ ಇಲ್ಲ. ಮದುವೆ ಮುರಿದು ಬಿದ್ದ ಮೇಲು ಇಷ್ಟು ಸಭ್ಯತೆ ಇರುವ ಈ ಬಾಂಡಿಂಗ್ ಅದ್ಯಾವ ಕಾರಣಕ್ಕಾಗಿ ಕಡಿಯಿತು ಗೊತ್ತೇ ಆಗುತ್ತಿಲ್ಲ.
ದರ್ಶನ್ ಕಾಟೇರ ಸಿನಿಮಾದಲ್ಲಿ ಧರಿಸಿದ ಶರ್ಟ್ ನಿಂದ ಲಕ್ಷ ಲಕ್ಷ ಹಣ ದುಡಿಯುತ್ತಿರುವ ಹುಡುಗ.!
ಎರಡು ಕುಟುಂಬಗಳು ಒಪ್ಪಿಯೇ ಮದುವೆ ಮಾಡಿಸಿದರು. ಜೋಡಿ ಮದುವೆಗೂ ಮುನ್ನ 4 ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಯಶಸ್ವಿ ಜೋಡಿ ಎಂದು ಕರೆಸಿಕೊಂಡಿದ್ದರು. ಈ ರೀತಿ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ವರ್ಕ್ ಆಗಿದ್ದೆ ಬಂತು ನಿಜ ಜೀವನದಲ್ಲಿ ಆಗಿದ್ದು ಮಾತ್ರ ನಿ’ರಾ’ಸೆ. ಮದುವೆಯಾದ ಹೊಸತರಲ್ಲಿ ಸಮಂತಾ ಮತ್ತು ನಾಗಚೈತನ್ಯ ಪಾಲ್ಗೊಳ್ಳುತ್ತಿದ್ದ ಸಂದರ್ಶನಗಳಲ್ಲಿ ತಮ್ಮ ಪ್ರೀತಿಯ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಸಂತೋಷವಾಗಿ ಮಾತನಾಡುತ್ತಿದ್ದರು.
ಸಂದರ್ಶನ ಒಂದರಲ್ಲಿ ಸಮಂತ ತಾವು ತಾಯಿ ಆಗುವುದಕ್ಕೆ ಕಾಯುತ್ತಿರುವ ಬಗ್ಗೆಯೂ ಕೂಡ ಹೇಳಿಕೊಂಡಿದ್ದರು. ಆಕೆ ಸ್ಟಾರ್ ನಟಿಯಾಗಿ ಬೆಳೆದಿದ್ದರೂ ಕೂಡ ಎಲ್ಲಾ ಹೆಣ್ಣು ಮಕ್ಕಳಂತೆ ಮದುವೆಯಾದ ತಕ್ಷಣ ಆಕೆಗೂ ತಾಯಿಯಾಗುವ ಹೃದಯ ಅಂತರಾಳದ ಬಯಕೆ ಆಕೆ ಕಣ್ಣುಗಳಲ್ಲಿ ಕಂಡಿತ್ತು. ಆದರೀಗ ಅದು ನುಚ್ಚುನೂರಾಗಿ ಕ’ಣ್ಣೀ’ರು ಹಾಕಿ ಹರಿಯುವಂತಾಗಿದೆ.
ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!
ಡಿ’ವೋ’ರ್ಸ್ ಬಳಿಕ ಸಿನಿಮಾ ಕೆಲಸಗಳಲ್ಲಿ ಬಹಳ ಬ್ಯುಸಿ ಆಗಿರುವ ಸಮಂತ ಅವರು ಮತ್ತೊಂದು ಮದುವೆ ಬಗ್ಗೆ ಯೋಚಿಸುತ್ತಿರುವ ಬಗ್ಗೆ ಸುಳಿವು ಕೂಡ ಸಿಕ್ಕಿಲ್ಲ, ಹಾಗಾಗಿ ನಟಿ ಸಿಂಗಲ್ ಆಗಿ ಉಳಿಯಲು ಡಿಸೈಡ್ ಮಾಡಿದ್ದಾರೋ ಏನೋ ಎನಿಸುತ್ತಿದೆ. ಒಂದು ವೇಳೆ ಈ ರೀತಿ ಆದಲ್ಲಿ ನಟಿ ತಾಯಿ ಆಗುವ ಕನಸು ನುಚ್ಚು ನೂರಾದಂತೆಯೇ ಸರಿ. ನಾಗಚೈತನ್ಯ ಕೂಡ ತಮ್ಮದೇ ಆದ ಸಿನಿಮಾ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾರೆ.
ಇಬ್ಬರು ಕೂಡ ಇನ್ನು ಸಿಂಗಲ್ ಆಗಿರುವುದು ಮತ್ತೆ ಇವರಿಬ್ಬರು ಒಂದಾಗುತ್ತಾರೆ ಎನ್ನುವ ಹುಸಿ ಆಸೆಯನ್ನು ಮತ್ತೊಮ್ಮೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿಸಿದೆ. ನಿಮಗೂ ಜೋಡಿ ಒಂದಾದರೆ ಒಳ್ಳೆಯದು ಎನಿಸಿದರೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.