Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಗೀತಕ್ಕನ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಹೇಗೆ ಗೊತ್ತ.? ದೊಡ್ಮನೆಯ ಇಂಟ್ರೆಸ್ಟಿಂಗ್ ಸ್ಟೋರಿ.!

Posted on January 7, 2024January 8, 2024 By Admin No Comments on ಗೀತಕ್ಕನ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಹೇಗೆ ಗೊತ್ತ.? ದೊಡ್ಮನೆಯ ಇಂಟ್ರೆಸ್ಟಿಂಗ್ ಸ್ಟೋರಿ.!

 

ರಾಘಣ್ಣ ದೊಡ್ಮನೆಯ ಎರಡನೇ ರಾಜಕುಮಾರ. ಸರಳತೆ, ಮಾತುಕತೆ ಎಲ್ಲದರಲ್ಲೂ ಕೂಡ ಅಣ್ಣಾವ್ರನ್ನೇ ಹೋಲುವ ಇವರು ಸಿನಿಮಾ ರಂಗ ದ ಬದಲು ಬೇರೆ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ರಾಜಕುಮಾರ್ ಅವರ ಆಸೆಯಾಗಿತ್ತು. ಹೀಗಾಗಿ ವೈದ್ಯರಾಗುವ ಕನಸು ಕಂಡಿದ್ದ ರಾಘವೇಂದ್ರ ರಾಜಕುಮಾರ್ ಅವರನ್ನು ಅದೃಷ್ಟ ಸಿನಿಮಾ ರಂಗದ ಕಡೆಗೆ ಎಳೆದು ತಂದಿತ್ತು.

ಶಿವಣ್ಣ ಪುನೀತ್ ಹಾದಿಯಾಗಿ ತಾವು ಚಿತ್ರರಂಗ ಪ್ರವೇಶಿಸಿದ ರಾಘಣ್ಣರವರಿಗೆ ಆರಂಭದಲ್ಲಿ ಅತ್ಯುತ್ತಮವಾದ ಸ್ವಾಗತ ಸಿಕ್ಕಿತು. ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಸ್ಪಸ್ತಿಕ್ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ದೊಡ್ಮನೆ ಖ್ಯಾತಿ ಬೆಳಗಿದರು.

ನಂತರ ಅವಕಾಶಗಳು ಕಡಿಮೆಯಾದ ಮೇಲೆ ದೊಡ್ಮನೆ ಪ್ರೊಡಕ್ಷನ್ ಹೌಸ್ ವಜ್ರೇಶ್ವರಿ ಕಂಬೈನ್ಡ್ಸ್ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡರು. ಇವರು ಬದುಕಿನಲ್ಲಿ ಉಳಿದ ಸಹೋದರರಿಗಿಂತ ಹೆಚ್ಚು ಏರುಪೇರು ಕಂಡವರು ಎಂದೇ ಹೇಳಬಹುದು. ಆದರೆ ಸಹೋದರರ ಪ್ರೀತಿ ವಾತ್ಸಲ್ಯ ಮಡದಿ ಆರೈಕೆ ರಾಘಣ್ಣನಿಗೆ ಮರು ಜೀವ ಕೊಟ್ಟಿದೆ.

ಸಿನಿಮಾ ಸೋಲು ಗೆಲುವು ಮಾತ್ರವಲ್ಲದೇ ಆರೋಗ್ಯದ ವಿಚಾರದಲ್ಲಿ ಕೂಡ ವೈಪರೀತ್ಯಗಳನ್ನು ಕಂಡಾಗ ಪ್ರತಿಯೊಬ್ಬರಿಗೂ ಕುಟುಂಬದ ಸಹಕಾರವೇ ಮುಖ್ಯವಾಗುತ್ತದೆ. ಹಾಗೆಯೇ ರಾಘಣ್ಣನಿಗೂ ಕೂಡ ಆ ಎಲ್ಲಾ ಸಮಯದಲ್ಲೂ ಧೈರ್ಯ ತುಂಬಿದ್ದು ಪತ್ನಿಯಂತೆ.

ಅಣ್ಣಾವ್ರ ಮೂರು ಜನ ಸೊಸೆಯರಲ್ಲಿ ಹಿರಿ ಸೊಸೆ ಗೀತಾ ಶಿವರಾಜಕುಮಾರ್ ಹಾಗೂ ಕಿರಿ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ ಆದರೆ ಮಂಗಳಮ್ಮ ರವರು ಹೆಚ್ಚಾಗಿ ಮಾಧ್ಯಮಗಳೆದುರು ಮಾತನಾಡುವುದಿಲ್ಲ ಕುಟುಂಬದ ಕಾರ್ಯಕ್ರಮ ಬಿಟ್ಟು ಬೇರೆ ಕಾರ್ಯಕ್ರಮಗಳ ಕಾಣಿಸಿಕೊಳ್ಳುವುದಿಲ್ಲ.

ಹೀಗಾಗಿ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಅಸಲಿಗೆ ಮಂಗಳಮ್ಮ ಬೇರೆ ಯಾರು ಇಲ್ಲ ಗೀತಾ ರವರ ತಂಗಿ ಮತ್ತು ಇವರದ್ದು ಕೂಡ ಲವ್ ಮ್ಯಾರೇಜ್ ಆಗಿದೆ. ಅಣ್ಣಾವ್ರು ಮಕ್ಕಳಿಗೆ ಹಲವು ಕಂಡೀಶನ್ ಹಾಕಿದ್ದರು ಅದರಲ್ಲಿ ಮದುವೆ ಆದ ನಂತರವೇ ಸಿನಿಮಾ ಎನ್ನುವುದಕ್ಕೂ ಕೂಡ ಒಂದಾಗಿತ್ತು.

ಅಂತೆಯೇ ಶಿವರಾಜ್ ಕುಮಾರ್ ಅವರು ಗೀತಾ ಅವರ ಕೈ ಹಿಡಿದ ಮೇಲೆ ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದರು. ರಾಘಣ್ಣ ಕೂಡ ಸಿನಿಮಾಗೆ ಬರುವುದು ಎಂದು ನಿರ್ಧಾರ ಮಾಡಿದ ಮೇಲೆ ಮದುವೆ ಆಗಲೇ ಬೇಕಿತ್ತು ಹೀಗಾಗಿ ತಮಗೆ ಹೊಂದಿಕೊಳ್ಳುವ ಹೆಣ್ಣಿಗಾಗಿ ಕಾಯುತ್ತಿದ್ದರು.

ಅದೇ ಸಂದರ್ಭದಲ್ಲಿ ಶಿವಣ್ಣನವರ ಮದುವೆಯಲ್ಲಿ ಮಂಗಳಮ್ಮ ಅವರು ಲವಲವಿಕೆಯಿಂದ ಓಡಾಡುತ್ತಿದ್ದನ್ನು ಕಂಡ ರಾಘಣ್ಣ ಅವರ ನಡೆ-ನುಡಿಗಳನ್ನು ಗಮನಿಸಿ ನನ್ನ ತಾಯಿಯ ಗುಣಗಳು ಇವರಲ್ಲೂ ಇದೆ ಹೀಗಾಗಿ ಈ ಹುಡುಗಿಯೇ ಪತ್ನಿ ಆಗಬೇಕು ಎಂದು ಬಯಸಿದರು. ಬಳಿಕ ಗೀತಾ ಅವರ ಅಮ್ಮನ ತಂಗಿ ಮಗಳೇ ಮಂಗಳಮ್ಮ ನವರು ಎನ್ನುವುದು ತಿಳಿದ ಬಳಿಕ ಇನ್ನಷ್ಟು ಧೈರ್ಯ ಬಂತು.

ಮಂಗಳಮ್ಮರವರಿಗೆ ಪ್ರೇಮ ನಿವೇದಿಸಿಕೊಂಡು ಎರಡು ಕುಟುಂಬದವರನ್ನು ಒಪ್ಪಿಸಿ ಕೈ ಹಿಡಿದರು. ಇಂದಿಗೂ ಕೂಡ ಇಷ್ಟು ವರ್ಷದ ದಾಂಪತ್ಯದ ಬಳಿಕ ನನ್ನ ಎರಡನೇ ತಾಯಿ ಮಂಗಳಮ್ಮ ನನ್ನ ತಾಯಿಯ ಗುಣಗಳು ಆಕೆಯಲ್ಲಿ ಹಚ್ಚೊತ್ತಿವೆ ಎಂದು ಹೇಳುತ್ತಾ ಮಡದಿಯಲ್ಲಿ ತಾಯಿಯನ್ನು ಕಾಣುತ್ತಾರೆ ರಾಘಣ್ಣ.

ರಾಘಣ್ಣ ಹಾಗೂ ಮಂಗಳಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು ಈಗಾಗಲೇ ಹಿರಿಯ ಮಗ ವಿನಯ್ ರಾಜಕುಮಾರ್ ಸಿದ್ದಾರ್ಥ ಸಿನಿಮಾ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ್ದಾರೆ ಅನಂತು v/s ನುಸ್ರತ್, ರನ್ ಆಂಟೋನಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಎರಡನೇ ಮಗ ಗುರು ರಾಘವೇಂದ್ರ ರಾಜಕುಮಾರ್ ಅಲಿಯಾಸ್ ಯುವ ಕೂಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ.

ಇವರು ಸಹ ಮದುವೆಯಾದ ಬಳಿಕವೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಪ್ಪು ಇಲ್ಲದ ನೋವನ್ನು ಅಭಿಮಾನಿಗಳು ಯುವನನ್ನು ಕಂಡು ಮರೆಯುತ್ತಿದ್ದಾರೆ. ಇವರ ಬಹು ನಿರೀಕ್ಷಿತ ಚಿತ್ರ ಯುವರಣಧೀರ ಕಂಠೀರವ ಸಿನಿಮಾಗೆ ಇಡೀ ಕರುನಾಡೇ ಕಾಯುತ್ತಿದೆ ನೀವು ಕೂಡ ಅದರಲ್ಲಿ ಒಬ್ಬರಾಗಿದ್ದರೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

cinema news

Post navigation

Previous Post: ನಟಿಯಾದ್ರೇನು? ತಾಯಾಗುವ ಆಸೆ ಎಲ್ಲಾ ಹೆಣ್ಣಿಗೂ ಒಂದೇ ಅಲ್ವೇ.? ಅಮ್ಮನಾಗುವ ಆಸೆಯಲ್ಲಿದ್ರೂ ಸಮಂತ, ಆದ್ರೆ ಡಿವೋರ್ಸ್ ನಿಂದ ಆ ಕನಸು ನುಚ್ಚುನೂರು.!
Next Post: ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme