ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj j bommai) ಅವರು ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ, ಸಿದ್ದರಾಮಯ್ಯರವರೇ ಪೂರ್ಣಾವಧಿಯ ಸಿಎಂ ಆಗಲಿದ್ದಾರಾ.
ಮತ್ತು ನೆನ್ನೆ ವಿ. ಸೋಮಣ್ಣರವರು ಮೈಸೂರಿನ ಕಾರ್ಯಕ್ರಮದಲ್ಲಿ BJP ಪಕ್ಷವೇ ನನ್ನ ಸೋಲಿಯ ಕಾರಣ ಎಂದಿದ್ದು ಹಾಗೆ ರಾಜ್ಯದ ಬರ ಸ್ಥಿತಿಗೆ ಕೇಂದ್ರ ಸರ್ಕಾರದಿಂದ ಹಣ ಮಂಜೂರು ಆಗಿರುವುದು, BJP ಪಕ್ಷದ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಕುರಿತ ಗೊಂದಲಕ್ಕೆ ತಿಲಾಂಜಲಿ ಮತ್ತು ಗೃಹಲಕ್ಷ್ಮಿ ಯೋಜನೆಯ ಸ್ಥಿತಿಯ ಗತಿಯ ಬಗ್ಗೆ ಕೂಡ ಅವರು ಮುಕ್ತವಾಗಿ ಮಾತನಾಡಿದರು ಅವರು ಹಂಚಿಕೊಂಡ ವಿಷಯಗಳ ಮುಖ್ಯಾಂಶಗಳು ಹೀಗಿತ್ತು.
ಕಾಂಗ್ರೆಸ್ ಸರ್ಕಾರದಲ್ಲಿ (Congress) ಸಿದ್ದರಾಮಯ್ಯರವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಾಗಲಿಂದಲೂ ಕೂಡ ಭಿನ್ನಾಭಿಪ್ರಾಯ ಇದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿ ಪದವಿಗಾಗಿ ಹಠ ಹಿಡಿದು ದೆಹಲಿಯಿಂದ ವಾಪಸ್ ಬರುತ್ತಿದ್ದರು. ಅವರಿಗೆ ಕಂಡೀಶನ್ ಹಾಕಿ ಆ ಸ್ಥಾನದಲ್ಲಿ ಕೂರಿಸಲಾಗಿದೆ.
ಉಪಮುಖ್ಯಮಂತ್ರಿ ಹೆಸರಿನಲ್ಲಿ ಮೂರು ಜನರು ಒಬ್ಬರ ಮೇಲೆ ಒಬ್ಬರು ದೋಷಾರೋಪ ಮಾಡಿಕೊಂಡೆ ಸಮಯ ಕಳೆಯುತ್ತಿದ್ದಾರೆ. ಸಿದ್ದರಾಮಯ್ಯರವರು ತಾವು ಐದು ವರ್ಷಗಳವರೆಗೆ ಆಳ್ವಿಕೆಯಲ್ಲಿ ಇರುತ್ತೇನೆ ಎಂದೂ ಬಹಿರಂಗವಾಗಿ ಹೇಳಿಕೆ ಕೊಟ್ಟಿಲ್ಲ, ಇದು ಪಕ್ಷದ ಒಳಗಾಗಿರುವ ಭಿನ್ನಾಭಿಪ್ರಾಯಗಳ ಬಗ್ಗೆ ತಿಳಿಸುತ್ತದೆ.
ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!
ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ, ಇದು ಪಕ್ಷದ ವಿಚಾರ ಅಲ್ಲಾ ರಾಜ್ಯದ ಜನತೆಗೆ ಇದರ ಬಗ್ಗೆ ಸ್ಪಷ್ಟತೆ ಬೇಕು. ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯ ಸ್ಪೋಟಿಸಲಿದೆ ಎಂದು ಹೇಳಿದ ಅವರು ವಿ ಸೋಮಣ್ಣ ಅವರು ನಿನ್ನೆ ಹೇಳಿದ ವಿಚಾರದಲ್ಲಿ ಸತ್ಯಾಂಶ ಇತ್ತು, ಇದೂ ಅವರ ಅನುಭವ ಹಾಗೂ ಸತ್ಯ. ಕ್ಷೆತ್ರ ಬದಲಾವಣೆ ವಿಷಯದಲ್ಲಿ ಎಡಬಟ್ಟು ಆಯ್ತು ಎಂದು ಒಪ್ಪಿಕೊಂಡರು.
ರಾಜ್ಯದಲ್ಲಿ ಸರ್ಕಾರ ಸ್ಥಾಪನೆಯಾಗಿ ಮೂರು ತಿಂಗಳಿಗಿಂತ ಹೆಚ್ಚಿನ ಸಮಯವಾದರೂ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಸೂಚಿಸದೆ ಇರುವುದರ ಕುರಿತು ಮಾತನಾಡಿದ ಅವರು ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಮಾಡಲು ವಿಳಂಬ ಆಗಿರುವುದು ನಿಜ ನಾನು ಕೇಂದ್ರ ನಾಯಕರೊಂದಿಗೆ ಮಾತನಾಡಿದ್ದೇನೆ.
ಐದು ರಾಜ್ಯಗಳ ಎಲೆಕ್ಷನ್ ಇರುವುದರಿಂದ ಟಿಕೆಟ್ ಫೈನಲ್ ಆದ ಬಳಿಕ ಈ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು ಮತ್ತು ರಾಜ್ಯ ಸರ್ಕಾರವು ಈಗಾಗಲೇ ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಮ. ಜಿಲ್ಲಾಧಿಕಾರಿಗಳ ಬಳಿ ಕೂಡ ಸರ್ಕಾರದ ಹಣ ಇದೆ ಆದರೆ ಇಚ್ಚಾಶಕ್ತಿ ಇಲ್ಲ. ಈಗಲೇ ಪರಿಹಾರ ಕೊಟ್ಟರೆ ಮುಂದೆಯೂ ಸಹ ಕೊಡಬೇಕಾಗುತ್ತದೆ ಎನ್ನುವ ದುರುದ್ದೇಶದಿಂದ ತಡ ಮಾಡುತ್ತಿದ್ದಾರೆ ಎಂದು ದೂರಿದರು.
ಗೃಹಲಕ್ಷ್ಮಿ ಯೋಜನೆ (Gruhalakshmi) ಬಗ್ಗೆ ಕೂಡ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಮೊದಲನೇ ಕಂತಿನ ಹಣ ಪಡೆದವರು ಎರಡನೇ ಕಂತಿನ ಹಣ ಪಡೆಯದೆ ಪರದಾಡುತ್ತಿದ್ದಾರೆ. ಸರಿಯಾಗಿ ಗ್ಯಾರಂಟಿ ಯೋಜನೆಗಳು ನಡೆದುಕೊಂಡು ಹೋಗುತ್ತಿಲ್ಲ ಇದು ಹೀಗೆ ಮುಂದುವರೆದರೆ ಗೃಹಲಕ್ಷ್ಮಿ ಮೂರೇ ತಿಂಗಳಿಗೆ ಮುಕ್ತಾಯ ಆಗುತ್ತದೆ. ಕಾಂಗ್ರೆಸ್ ಸರ್ಕಾರವು ಮತ ಬ್ಯಾಂಕ್ ಗಾಗಿ ಈ ರೀತಿ ಗ್ಯಾರಂಟಿ ಯೋಜನೆಗಳನ್ನು ಪೋಷಿಸಿತ್ತು ಈಗ ಅದೇ ಅವರಿಗೆ ತಿರುಗುಬಾಣವಾಗಲಿದೆ ಎಂದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj j bommai) ಅವರು ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ, ಸಿದ್ದರಾಮಯ್ಯರವರೇ ಪೂರ್ಣಾವಧಿಯ ಸಿಎಂ ಆಗಲಿದ್ದಾರಾ.
ಮತ್ತು ನೆನ್ನೆ ವಿ. ಸೋಮಣ್ಣರವರು ಮೈಸೂರಿನ ಕಾರ್ಯಕ್ರಮದಲ್ಲಿ BJP ಪಕ್ಷವೇ ನನ್ನ ಸೋಲಿಯ ಕಾರಣ ಎಂದಿದ್ದು ಹಾಗೆ ರಾಜ್ಯದ ಬರ ಸ್ಥಿತಿಗೆ ಕೇಂದ್ರ ಸರ್ಕಾರದಿಂದ ಹಣ ಮಂಜೂರು ಆಗಿರುವುದು, BJP ಪಕ್ಷದ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಕುರಿತ ಗೊಂದಲಕ್ಕೆ ತಿಲಾಂಜಲಿ ಮತ್ತು ಗೃಹಲಕ್ಷ್ಮಿ ಯೋಜನೆಯ ಸ್ಥಿತಿಯ ಗತಿಯ ಬಗ್ಗೆ ಕೂಡ ಅವರು ಮುಕ್ತವಾಗಿ ಮಾತನಾಡಿದರು ಅವರು ಹಂಚಿಕೊಂಡ ವಿಷಯಗಳ ಮುಖ್ಯಾಂಶಗಳು ಹೀಗಿತ್ತು.
ಕಾಂಗ್ರೆಸ್ ಸರ್ಕಾರದಲ್ಲಿ (Congress) ಸಿದ್ದರಾಮಯ್ಯರವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಾಗಲಿಂದಲೂ ಕೂಡ ಭಿನ್ನಾಭಿಪ್ರಾಯ ಇದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿ ಪದವಿಗಾಗಿ ಹಠ ಹಿಡಿದು ದೆಹಲಿಯಿಂದ ವಾಪಸ್ ಬರುತ್ತಿದ್ದರು. ಅವರಿಗೆ ಕಂಡೀಶನ್ ಹಾಕಿ ಆ ಸ್ಥಾನದಲ್ಲಿ ಕೂರಿಸಲಾಗಿದೆ. ಉಪಮುಖ್ಯಮಂತ್ರಿ ಹೆಸರಿನಲ್ಲಿ ಮೂರು ಜನರು ಒಬ್ಬರ ಮೇಲೆ ಒಬ್ಬರು ದೋಷಾರೋಪ ಮಾಡಿಕೊಂಡೆ ಸಮಯ ಕಳೆಯುತ್ತಿದ್ದಾರೆ.
ಸಿದ್ದರಾಮಯ್ಯರವರು ತಾವು ಐದು ವರ್ಷಗಳವರೆಗೆ ಆಳ್ವಿಕೆಯಲ್ಲಿ ಇರುತ್ತೇನೆ ಎಂದೂ ಬಹಿರಂಗವಾಗಿ ಹೇಳಿಕೆ ಕೊಡುತ್ತಿಲ್ಲ, ಇದು ಪಕ್ಷದ ಒಳಗಾಗಿರುವ ಭಿನ್ನಾಭಿಪ್ರಾಯಗಳ ಬಗ್ಗೆ ತಿಳಿಸುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ, ಇದು ಪಕ್ಷದ ವಿಚಾರವಲ್ಲ ರಾಜ್ಯದ ಜನತೆಗೆ ಇದರ ಬಗ್ಗೆ ಸ್ಪಷ್ಟತೆ ಬೇಕು.
ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯ ಶೀಘ್ರದಲ್ಲೇ ಸ್ಪೋಟಿಸಲಿದೆ ಎಂದು ಹೇಳಿದ ಅವರು ವಿ.ಸೋಮಣ್ಣ ಅವರು ನೆನ್ನೆ ಹೇಳಿದ ವಿಚಾರದಲ್ಲಿ ಸತ್ಯಾಂಶ ಇತ್ತು, ಇದೂ ಅವರ ಅನುಭವ ಹಾಗೂ ಸತ್ಯ. ಕ್ಷೇತ್ರ ಬದಲಾವಣೆ ವಿಷಯದಲ್ಲಿ ಎಡವಟ್ಟು ಆಯ್ತು ಎಂದು ಒಪ್ಪಿಕೊಂಡರು.
ರಾಜ್ಯದಲ್ಲಿ ಸರ್ಕಾರ ಸ್ಥಾಪನೆಯಾಗಿ ಮೂರು ತಿಂಗಳಿಗಿಂತ ಹೆಚ್ಚಿನ ಸಮಯವಾದರೂ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಸೂಚಿಸದೆ ಇರುವುದರ ಕುರಿತು ಮಾತನಾಡಿದ ಅವರು ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಮಾಡಲು ವಿಳಂಬ ಆಗಿರುವುದು ನಿಜ. ನಾನು ಕೇಂದ್ರ ನಾಯಕರೊಂದಿಗೆ ಮಾತನಾಡಿದ್ದೇನೆ.
ಐದು ರಾಜ್ಯಗಳ ಎಲೆಕ್ಷನ್ ಇರುವುದರಿಂದ ಟಿಕೆಟ್ ಫೈನಲ್ ಆದ ಬಳಿಕ ಈ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು ಮತ್ತು ಕೇಂದ್ರ ಸರ್ಕಾರವು ಈಗಾಗಲೇ ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ, ಜಿಲ್ಲಾಧಿಕಾರಿಗಳ ಬಳಿ ಕೂಡ ಹಣ ಇದೆ. ಸರ್ಕಾರಕ್ಕೇ ಇಚ್ಚಾಶಕ್ತಿ ಇಲ್ಲ. ಈಗಲೇ ಪರಿಹಾರ ಕೊಟ್ಟರೆ ಮುಂದೆಯೂ ಸಹ ಹಣ ಕೊಡಬೇಕಾಗುತ್ತದೆ ಎನ್ನುವ ದುರುದ್ದೇಶದಿಂದ ತಡ ಮಾಡುತ್ತಿದ್ದಾರೆ, ಬರಿ ಗ್ಯಾರೆಂಟಿ ಯೋಜನೆಗಳ ಕಡೆಗೆ ಗಮನ ಕೊಡುತ್ತಿದ್ದಾರೆ ಎಂದು ದೂರಿದರು.
ಗೃಹಲಕ್ಷ್ಮಿ ಯೋಜನೆ (Gruhalakshmi) ಬಗ್ಗೆ ಕೂಡ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಮೊದಲನೇ ಕಂತಿನ ಹಣ ಪಡೆದವರು ಎರಡನೇ ಕಂತಿನ ಹಣ ಪಡೆಯದೆ ಪರದಾಡುತ್ತಿದ್ದಾರೆ. ಸರಿಯಾಗಿ ಗ್ಯಾರಂಟಿ ಯೋಜನೆಗಳು ಕೂಡ ನಡೆದುಕೊಂಡು ಹೋಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಗೃಹಲಕ್ಷ್ಮಿ ಮೂರೇ ತಿಂಗಳಿಗೆ ಮುಕ್ತಾಯ ಆಗುತ್ತದೆ. ಕಾಂಗ್ರೆಸ್ ಸರ್ಕಾರವು ಮತ ಬ್ಯಾಂಕ್ ಗಾಗಿ ಈ ರೀತಿ ಗ್ಯಾರಂಟಿ ಯೋಜನೆಗಳನ್ನು ಪೋಷಿಸಿತ್ತು ಈಗ ಅದೇ ಅವರಿಗೆ ತಿರುಗುಬಾಣವಾಗಲಿದೆ ಎಂದರು.