ಶಕ್ತಿ ಯೋಜನೆಯಡಿ ಉಚಿತವಾಗಿ ಓಡಾಡುವ ಮಹಿಳೆಯರೇ ಎಚ್ಚರ, ನಿಮ್ಮ ತಪ್ಪಿನಿಂದಾಗಿ ನಿರ್ವಾಹಕನ ಕುಟುಂಬ ಬೀದಿಗೆ ಬರುತ್ತಿದೆ. ಸರ್ಕಾರವು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದಾದ್ಯಂತ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಉಚಿತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಟ್ಟಿದೆ (Free travel for Womens because of Shakthi Yojane).
ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು ಸಂಬಂಧಿಕರ ಮನೆಗೆ, ಪ್ರೇಕ್ಷಣೀಯ ಸ್ಥಳಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ, ಸಭೆ ಸಮಾರಂಭಗಳಿಗೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೆ 70,73,05,946 ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಶೂನ್ಯದರ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ.
ಈ ಟಿಕೆಟ್ ಮೌಲ್ಯವು 1648,51,39,030 ರಷ್ಟಿದೆ. ಯೋಜನೆಯಿಂದ ನಿಗಮದ (transport Corporation) ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತಾದರೂ ಸರ್ಕಾರದ ನೆರವಿನಿಂದಾಗಿ ಯಾವುದೇ ಸಮಸ್ಯೆ ಇಲ್ಲದೆ ಯೋಜನೆ ಯಶಸ್ವಿಯಾಗಿದೆ.
ಸರ್ಕಾರಕ್ಕೆ ತನ್ನ ಗ್ಯಾರಂಟಿ ಯೋಜನೆ ಜಾರಿ ಮಾಡಿದ ನುಡಿದಂತೆ ನಡೆದ ಸಮಾಧಾನ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಸಂತೋಷ, ಸಾರಿಗೆ ನಿಗಮಗಳಿಗೆ ಆದಾಯವಾಗುತ್ತಿರುವ ಸಂಭ್ರಮ, ಆದರೆ ನಿರ್ವಾಹಕನಾಗಿ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರ (Conductor) ಗೋ’ಳು ಹೇಳತೀರದಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಲಿಂದಲೂ ತಿಂಗಳಿಗೆ ನೂರಕ್ಕೂ ಹೆಚ್ಚು ನಿರ್ವಾಹಕರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ (Suspension) ಎಂದು ಹೇಳುತ್ತಿವೆ ಮೂಲಗಳು. ಇದಕ್ಕೆ ಕಾರಣ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರ ಬೇಜವಬ್ದಾರಿ ಹಾಗೂ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರಿಗೆ ಅವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಕಟ್ಟುನಿಟ್ಟಾದ ಆದೇಶ ಹೊರಡಿಸದೆ.
ಈ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನೂ ತಿಳಿಸಿದ ಸರ್ಕಾರಕ್ಕೆ (fault of Government) ಆಗಿದೆ ಎಂದು ಹೇಳಬಹುದು. ತಮ್ಮ ಈ ರೀತಿಯ ಸಣ್ಣ ತಪ್ಪಿನಿಂದಾಗಿ ಒಬ್ಬ ನಿರ್ವಾಹಕನಿಗೆ ಇಷ್ಟು ದೊಡ್ಡ ಮಟ್ಟದ ಪೆಟ್ಟು ಬೀಳುತ್ತದೆ ಎನ್ನುವ ಅರಿವೇ ಬಹಳಷ್ಟು ಮಹಿಳೆಯರಿಗೆ ಇಲ್ಲದಿರುವುದೇ ದೊಡ್ಡ ವಿ’ಪ’ರ್ಯಾ’ಸವಾಗಿದೆ.
ಸಮಸ್ಯೆಯಾಗುತ್ತಿರುವುದು ಏನೆಂದರೆ, ನಿದರ್ಶನವೊಂದರ ಉದಾಹರಣೆಯೊಂದಿಗೆ ಹೇಳುವುದಾದರೆ ಮಹಿಳೆಯೊಬ್ಬರು ಬೆಂಗಳೂರಿನಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣಿಸುತ್ತಿರುತ್ತಾರೆ. ಮಾರ್ಗ ಮಧ್ಯದಲ್ಲಿ ಮಳವಳ್ಳಿ ಅಥವಾ ಕೊಳ್ಳೇಗಾಲದಲ್ಲಿ ಬೇರೆ ಕೆಲಸದ ನಿಮಿತ್ತ ಬಸ್ ನಿಂದ ಕೆಳಗೆ ಇಳಿಯುವ ಮಹಿಳೆ ಆ ಬಸ್ ಬಿಟ್ಟು ಬೇರೆ ಯಾವುದೋ ಬಸ್ ನಲ್ಲಿ ಪ್ರಯಾಣ ಮಾಡುತ್ತಾರೆ.
ಆದರೆ ಈಗಾಗಲೇ ಬೆಂಗಳೂರಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಟಿಕೆಟ್ ಪಡೆದಿದ್ದ ಕಾರಣ ತನಿಖಾಧಿಕಾರಿಗಳು (for Checking) ಬಂದಾಗ ನಿರ್ವಾಹಕ ಪೇಚಿಗೆ ಸಿಲುಕುತ್ತಾನೆ. ಮಹಿಳೆಯು ಬಸ್ ನಲ್ಲಿ ಇರದ ಕಾರಣ ಹೆಚ್ಚಿಗೆ ಟಿಕೆಟ್ ಹರಿದಿದ್ದಾರೆ ಎನ್ನುವ ಆರೋಪ ನಿರ್ವಾಹಕನ ಮೇಲೆ ಬೀಳುತ್ತದೆ, ಇದಕ್ಕಾಗಿ ಅಧಿಕಾರಿಗಳು ಮೆಮೋ (Memo) ಕೊಡುತ್ತಾರೆ 2-3 ದಿನವಾದ ಬಳಿಕ ನೀವು ಕೊಟ್ಟ ಕಾರಣ ಸಮರ್ಪಕವಾಗಿಲ್ಲ ಎಂದು ಅವರನ್ನು ಅ’ಮಾ’ನ’ತುಗೊಳಿಸುತ್ತಾರೆ.
ದೂರದ ಪ್ರಯಾಣ ಮಾತ್ರವಲ್ಲದೆ BMTC ಯಲ್ಲಿ ಪ್ರಯಾಣಿಸುವ ಮಹಿಳೆಯರು ಕೂಡ ಹೆಚ್ಚು ಟ್ರಾಫಿಕ್ ಇದ್ದ ಸಮಯದಲ್ಲಿ ಅಥವಾ ಮಧ್ಯ ಯಾವುದೋ ಕಾರಣದಿಂದ ತಾವು ಟಿಕೆಟ್ ಪಡೆದ ಸ್ಟಾಫ್ ಗಿಂತ ಹಿಂದಿನ, ಮುಂದಿನ ನಿಲ್ದಾಣಗಳಲ್ಲಿ ಇಳಿದು ಬಿಡುತ್ತಾರೆ. ಇದರ ನಡುವೆ ತನಿಖಾಧಿಕಾರಿಗಳು ತಪಾಸಣೆಗೆ ಬಂದರೆ ನಿರ್ವಾಹಕ ದಂ’ಡ ತೆರಬೇಕಾಗುತ್ತದೆ ಅಥವಾ ಶಿ’ಕ್ಷೆ ಅನುಭವಿಸಬೇಕಾಗುತ್ತದೆ.
ಇನ್ನು ಕೆಲವು ಕಡೆ ನಿರ್ವಾಹಕರೇ ಇನ್ಸೆಟಿವ್ ಆಸೆಗೆ ಬಿದ್ದು ಸು’ಳ್ಳು ಟಿಕೆಟ್ ಹರಿಯುತ್ತಿದ್ದಾರಾ ಎನ್ನುವ ಅನುಮಾನಗಳಿದ್ದರೂ ಇದುವರೆಗೆ ಅಂತಹ ಒಂದು ಪ್ರಕರಣವೂ ಸಾಬೀತಾಗಿಲ್ಲ. ಈ ನಡೆ ಬಗ್ಗೆ ಗಮನಹರಿಸಿದ ಸರ್ಕಾರ ಸಾರಿಗೆ ಇಲಾಖೆ ಮಂಡಳಿಗೆ ಒಂದು ತಿಂಗಳ ಹಿಂದೆಯೇ ಶಕ್ತಿ ಯೋಜನೆಯಡಿ ಸು’ಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದು ನೋಟಿಸ್ (Government give notice to KSRTC) ನೀಡಿದೆ.
ಆದರಲ್ಲಿ ಅನೇಕ ನಿರ್ವಾಹಕರು ತಮ್ಮ ತ’ಪ್ಪೇ ಇಲ್ಲದೆ ಶಿ’ಕ್ಷೆಗೆ ಒಳಪಡುತ್ತಿದ್ದಾರೆ. ಈ ವಿಚಾರ ರಾಜ್ಯದ ಎಲ್ಲಾ ಮಹಿಳೆಯರಿಗೂ ತಲುಪಲಿ ಇನ್ನಾದರೂ ಮಹಿಳೆಯರು ತಮ್ಮ ಜವಾಬ್ದಾರಿ ಮೆರೆಯಲಿ ಎನ್ನುವುದಷ್ಟೇ ನಮ್ಮ ಈ ಅಂಕಣದ ಆಶಯ. ಆದ್ದರಿಂದ ಎಲ್ಲ ಮಹಿಳೆಯರಿಗೂ ಈ ಮಾಹಿತಿ ತಲುಪುವಂತೆ ಶೇರ್ ಮಾಡಿ.