ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ಜೋಡೋ ಯಾತ್ರೆ ಬಳಿಕ ದೇಶದ ಪ್ರತಿಯೊಂದು ವರ್ಗವನ್ನು ಕೂಡ ಭೇಟಿಯಾಗಿ ಸಂವಾದ ನಡೆಸುತ್ತಿದ್ದಾರೆ. ರೈತರು, ಟ್ರಕ್ ಡ್ರೈವರ್ ಗಳು, ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಕೂಲಿಗಳು, ಮೆಕಾನಿಕ್ ಗಳು ಮತ್ತು ಇತ್ತೀಚೆಗೆ ಲಡಾಕ್ ನಲ್ಲಿ ಸಾಮಾಜಿಕ ಸಂಘಟನೆಗಳನ್ನೂ ಭೇಟಿಯಾಗಿದ್ದ ಅವರು ಜೈಪುರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯರಿಂದ ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ಎಲ್ಲದಕ್ಕೂ ಸಮಂಜಸ ಉತ್ತರ ನೀಡಿದ ರಾಗಾ, ಸ್ವಾತಂತ್ರ್ಯ ಹೋರಾಟ ಕಾಲದಿಂದ ಹಿಡಿದು ಇಲ್ಲಿಯವರೆಗೂ ದೇಶದಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದರ ಬಗ್ಗೆ ಮಾತನಾಡಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಕೂಡ ಅರಿವು ಮೂಡಿಸಿದ್ದಾರೆ.
ಕಾರ್ ಖರೀದಿಸಿ ಶೋ ರೂಮ್ನಲ್ಲೇ ಅ’ಪ’ಘಾ’ತ ಮಾಡಿಕೊಂಡ ವ್ಯಕ್ತಿ, ವೈರಲ್ ಆಯ್ತು ಜಖಂಗೊಂಡ ಕಾರಿನ ಫೋಟೋ.!
ಮಹಿಳೆಯರ ಪಾತ್ರ ಜೀವನದಲ್ಲಿ ಹಾಗೂ ದೇಶದ ಭವಿಷ್ಯದ ಉದ್ದೇಶದಲ್ಲಿ ಎಷ್ಟು ಮುಖ್ಯ ಅನ್ನುವುದು ಎಲ್ಲರೂ ಗೊತ್ತು, ಆದರೆ ಯಾಕೆ ಅವರು ಕಡಿಮೆ ಹಕ್ಕುಗಳನ್ನು ಹೊಂದಿರಬೇಕು ಎಂದು ಪ್ರಶ್ನಿಸಿದವರು ಅವರು ಅಲ್ಲಿ ನೆರೆದಿದ್ದ ಹೆಣ್ಣು ಮಕ್ಕಳಿಗೆ 20 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಆದರೂ ಕೂಡ ಹಣ ಹಾಗೂ ಅಧಿಕಾರದ ಬಗ್ಗೆ ನಿಮಗೆ ಯಾರು ಸೂಕ್ತ ವ್ಯಾಖ್ಯಾನ ನೀಡಿಲ್ಲ ಯಾಕೆ ಎಂದು ಕೇಳಿದ್ದಾರೆ.
ಅದಕ್ಕಲ್ಲಿದ್ದ ಒಬ್ಬ ವಿದ್ಯಾರ್ಥಿನಿ ನಮಗೆ ಅದರ ಬಗ್ಗೆ ಅರಿವು ಬಂದರೆ ನಾವು ಸ್ವತಂತ್ರರಾಗುತ್ತೇವೆ ಅದಕ್ಕಾಗಿ ಯಾರು ಈ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಿಳೆಗೆ ಉದ್ಯೋಗ ಇಲ್ಲದಿದ್ದರೂ ಹಣದ ಜ್ಞಾನ ಇರಬೇಕು, ಆಗ ಹೇಗೋ ನಡೆಯುತ್ತದೆ ಆದರೆ ಹಣ ಇದ್ದು ಅದರ ನಿರ್ವಹಣೆ ಅಥವಾ ಬೆಲೆ ಗೊತ್ತಿಲ್ಲ ಎಂದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅರ್ಥೈಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರು ರಾಹುಲ್ ಗಾಂಧಿಯವರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದರು. ಅವರಿಗೆ ಇಷ್ಟವಾದ ಊಟ ಯಾವುದು. ಇಷ್ಟವಾದ ತಾಣ ಯಾವುದು? ಇನ್ನು ಯಾಕೆ ಮದುವೆ ಆಗಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಎದುರಾದವು. ಅದಕ್ಕೆ ಉತ್ತರಿಸಿದ ಅವರು ನಾನು ಹೊಸ ಹೊಸ ಜಾಗಗಳನ್ನು ಭೇಟಿಯಾಗಲು ಇಷ್ಟ ಪಡುತ್ತೇನೆ.
ಹಾಗಾಗಿ ಇದುವರೆಗೆ ನಾನು ಭೇಟಿ ನೀಡದ ಯಾವುದೇ ಜಾಗವಿದ್ದರೂ ಅದು ನನಗೆ ಇಷ್ಟವಾಗುತ್ತದೆ ಎಂದಿದ್ದಾರೆ. ಮತ್ತು ಬಸಳೆ ಸೊಪ್ಪು, ಬಟಾಣಿ ಹಾಗೂ ಹಾಗಲಕಾಯಿ ಬಿಟ್ಟು ಯಾವುದೇ ಆಹಾರ ಪದಾರ್ಥ ಕೊಟ್ಟರು ನಾನು ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿನಿ ನೀವು ನೋಡುವುದಕ್ಕೆ ಎಷ್ಟು ಸುಂದರವಾಗಿದ್ದೀರಿ, ಅಷ್ಟೇ ಬುದ್ಧಿವಂತ ಕೂಡ ಆದರೂ ಯಾಕೆ ಇನ್ನು ಮದುವೆಯಾಗಿಲ್ಲ ಎಂದು ಪ್ರಶ್ನೆ ಕೇಳಿದಾಗ.
ಪ್ರಶ್ನೆ ಮುಗಿಯುವುದರೊಳಗೆ ಉತ್ತರಿಸಿದ ರಾಹುಲ್ ಗಾಂಧಿ ಅವರು ನಾನು ಸಂಪೂರ್ಣವಾಗಿ ನನ್ನ ಕೆಲಸ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಉತ್ತರಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಅವರು ಇಷ್ಟು ಹ್ಯಾಂಡ್ಸಮ್ ಆಗಿರುವುದರ ಸೀಕ್ರೆಟ್ ಏನು? ಯಾವ ಬ್ರಾಂಡ್ ಕ್ರೀಮ್ ಹಾಗೂ ಸೋಪ್ ಬಳಸುತ್ತೀರಾ ಎಂದು ಕೂಡ ಪ್ರಶ್ನೆಗಳು ಬಂದಿವೆ ನಾನು ನೀರಿನಿಂದ ಮುಖ ತೊಳೆಯುತ್ತೇನೆ ಅಷ್ಟೇ ಎಂದಿದ್ದಾರೆ.
ಒಂದು ವೇಳೆ ನೀವು ರಾಜಕಾರಣಿ ಆಗದಿದ್ದರೆ ಏನಾಗುತ್ತಿದ್ದೀರಿ ಎಂದ ಪ್ರಶ್ನೆಗೆ ನನ್ನಲ್ಲಿ ಹಲವಾರು ವಿಚಾರಗಳಿವೆ ನಾನು ಒಬ್ಬ ಶಿಕ್ಷಕ, ಯುಕರಿಗೆ ಬೋಧನೆ ಮಾಡುತ್ತೇನೆ, ನನಗೆ ಅಡುಗೆ ತುಂಬಾ ಚೆನ್ನಾಗಿ ಬರುತ್ತದೆ ಈ ವಿಚಾರವಾಗಿ ಗೊಂದಲವಿದೆ ಎಂದಿದ್ದಾರೆ.