ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತವಾದಂತಹ ಬಸ್ ಪಾಸ್ ದೊರಕಬೇಕು ಅಂದರೆ ಬಸ್ಸಿನಲ್ಲಿ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಉಚಿತವಾದಂತಹ ಸೇವೆ ನೀಡಲು ಉಚಿತ ಬಸ್ ಪಾಸ್ ಅನ್ನು ನೀಡುವುದಾಗಿ ಕೇಂದ್ರ ಸರ್ಕಾರ ತೀರ್ಪು ನೀಡಿದೆ. ಬಿಜೆಪಿ ಸರ್ಕಾರವು ಈಗಾಗಲೇ ರಾಜ್ಯದ ಮಹಿಳೆಯರ ಯೋಗಕ್ಷೇಮ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ.
ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕು ಎಲ್ಲ ರಂಗದಲ್ಲಿಯೂ ಸಮಾನತೆಯಿಂದ ನೋಡಬೇಕೆಂಬ ದೃಷ್ಟಿಯಿಂದ ಮಹಿಳೆಯರಿಗಾಗಿ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಆರೋಗ್ಯ ದೃಷ್ಟಿಯಿಂದ ಪೋಷಕಾಂಶ ಯುಕ್ತ ಆಹಾರ ಪದಾರ್ಥಗಳನ್ನು ಒದಗಿಸುವುದು ಹಾಗೆಯೇ ವಿದ್ಯಾರ್ಥಿನಿಯರಿಗೆ ವಿಶೇಷವಾದ ಯೋಜನೆಗಳು ಸ್ಕಾಲರ್ಶಿಪ್ ಇನ್ನಿತರ ಸೇವೆಗಳನ್ನು ನೀಡಲಾಗಿದೆ ಗರ್ಭಿಣಿಯರಿಗೂ ಸಹ ಪೌಷ್ಟಿಕಾಂಶ ಯುಕ್ತ ಆಹಾರವನ್ನು ದೊರಕಬೇಕು ಎಂಬ ದೃಷ್ಟಿಯಿಂದ ಸರ್ಕಾರ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
2023- 24 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಮತ್ತೊಂದು ಮಹತ್ತರವಾದಂತಹ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಮಹಿಳೆಯರ ಹಿತದೃಷ್ಟಿಯಿಂದ ರಾಜ್ಯದ ಮಹಿಳೆಯರಿಗಾಗಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವತಿಯಿಂದ ಈ ಯೋಜನೆ ಜಾರಿಗೆ ಬಂದಿದ್ದು ಇದರ ಉದ್ದೇಶ ಏನೆಂದರೆ ಮಹಿಳೆಯರ ಹಿತಾಸಕ್ತಿಯನ್ನು ಕಾಪಾಡುವುದು ಮಹಿಳೆಯರನ್ನು ಪ್ರಗತಿಪರರನ್ನಾಗಿ ಮಾಡಿ ಅಭಿವೃದ್ಧಿಯತ್ತ ಕರೆದುಕೊಂಡು ಹೋಗುವುದು ಈ ಯೋಜನೆಯ ಉದ್ದೇಶವಾಗಿದೆ.
ಮಹಿಳಾ ಹಿತ ದೃಷ್ಟಿಯನ್ನು ಕಾಯ್ದುಕೊಳ್ಳಲು ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995 ರಲ್ಲಿ ಸ್ಥಾಪಿತವಾಗಿದೆ ಶಾಸನಬದ್ಧ ಆಯೋಗವಾಗಿ ರೂಪುಗೊಂಡು 6 /8 /1996 ರಿಂದ ಕೆಲಸ ಆರಂಭಿಸಿದೆ. ಇದೇ ಆಯೋಗದ ವತಿಯಿಂದ ಮಹಿಳೆಯರಿಗಾಗಿ ಜಾರಿಯಾಗಿರುವ ಯೋಜನೆಗಳ ಜೊತೆ ಈ ಹೊಸ ಯೋಜನೆಯು ಸಹ ಸೇರಿಕೊಳ್ಳುತ್ತಿದೆ. ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಸಂಘಟಿತ ವಲಯ ಎಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೂಲಿ ಕೆಲಸಕ್ಕಾಗಿ ಮನೆ ಕೆಲಸಕ್ಕಾಗಿ ಅಥವಾ ಇನ್ನಿತರ ಯಾವುದೇ ಕಾರ್ಖಾನೆ ಕಂಪನಿಗಳ ಕೆಲಸಕ್ಕಾಗಿ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಇವರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಬಜೆಟ್ ಮಂಡನೆಯಲ್ಲಿ ಉಚಿತವಾದಂತಹ ಬಸ್ ಪಾಸ್ ದೊರಕಬೇಕು ಎಂಬ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಯೋಜನೆಯನ್ನು ಸ್ವತಹ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರೇ ಘೋಷಣೆಯನ್ನು ಮಾಡಿ ರಾಜ್ಯದಲ್ಲಿ ಇರುವಂತಹ 30 ಲಕ್ಷ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಯೋಜನೆಯಿಂದ ಉಚಿತ ಬಸ್ ಪಾಸ್ ಕೊಡುವ ಮೂಲಕ ನೆರವು ನೀಡಲಾಗಿದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಮಹಿಳೆಯರಿಗೆ ಸಾರಿಗೆಗೆ ಖರ್ಚು ಆಗುತ್ತಿದ್ದಂತಹ ಹಣವು ಇನ್ನು ಮುಂದೆ ಉಳಿತಾಯ ಆಗಲಿದೆ. ಉಳಿತಾಯದ ಹಣವನ್ನು ಮಹಿಳೆಯರು ತಮ್ಮ ಕುಟುಂಬದ ಹಿತದೃಷ್ಟಿಯಿಂದ ಯಾವುದಾದರೂ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲು ನೆರವಾಗುತ್ತದೆ ರಾಜ್ಯದ ಲಕ್ಷಾಂತರ ಜನ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ.
ರಾಜ್ಯ ಸರ್ಕಾರ ಲೇಬರ್ ಕಾರ್ಡ್ ಹೊಂದಿರುವವರಿಗೆ ಮಾತ್ರ 45 ಕಿ.ಮೀ ವ್ಯಾಪ್ತಿ ಒಳಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿತ್ತು ಆದರೆ ಇದೀಗ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಕೈಗೊಂಡಿದೆ ಈ ಯೋಜನೆಯ ಅರ್ಜಿಯನ್ನು ಏಪ್ರಿಲ್ ಒಂದರ ನಂತರ ಆಹ್ವಾನಿಸಲಾಗಿದೆ. ಈ ಯೋಜನೆ ಏಪ್ರಿಲ್ ತಿಂಗಳಿನಲ್ಲಿ ಜಾರಿಗೆ ಬರುವಂತಹ ಎಲ್ಲಾ ಸಾಧ್ಯತೆಗಳು ಇದ್ದು ಈ ಯೋಜನೆಯ ಅಡಿಯಲ್ಲಿ ಫಲಾನುಭವಗಳು ಉಪಯೋಗ ಪಡೆದುಕೊಂಡು ಸರ್ಕಾರದ ಯೋಜನೆಯು ಮಹಿಳೆಯರಿಗೆ ನೆರವನ್ನು ಉಂಟು ಮಾಡಿದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದುಕೊಂಡು ತಮ್ಮ ಉಳಿತಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಸರ್ಕಾರ ಕೈಗೊಳ್ಳುವ ಎಲ್ಲಾ ಯೋಜನೆಗಳು ಜನರ ಹಿತದೃಷ್ಟಿಯಿಂದಲೇ ಆಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಹ ಯೋಜನೆಯ ಲಾಭಗಳನ್ನು ಪಡೆದುಕೊಳ್ಳುವುದು ಸರ್ಕಾರದ ಮೂಲ ಉದ್ದೇಶ.