Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರಾಜ್ಯದ ಎಲ್ಲಾ ಶಿಕ್ಷಕ ವೃತ್ತಿ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, 13,352 ಶಿಕ್ಷಕರ ನೇಮಕಾತಿಗೆ ಅಸ್ತು.!

Posted on October 14, 2023 By Admin No Comments on ರಾಜ್ಯದ ಎಲ್ಲಾ ಶಿಕ್ಷಕ ವೃತ್ತಿ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ, 13,352 ಶಿಕ್ಷಕರ ನೇಮಕಾತಿಗೆ ಅಸ್ತು.!

 

2022ನೇ ನಲ್ಲಿ ಅಧಿಸೂಚಿಸಲಾಗಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (GPSTR) ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು (High Court) ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ವಿವಾದವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಈ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆಯ್ಕೆ ಪಟ್ಟಿಯನ್ನು ಮರು ರೂಪಿಸುವಂತೆ ಸೂಚನೆ ನೀಡಿತ್ತು.

ಆದರೀಗ ಮರು ವಿಚಾರಣೆಯಲ್ಲಿ ವಿಭಾಗಿಯ ಪೀಠವು ಆ ಆದೇಶವನ್ನು ರದ್ದುಪಡಿಸಿ ಸಮಸ್ಯೆ ಬಗೆಹರಿಸಿ ನೇಮಕಾತಿಗೆ ಅಸ್ತು ಎಂದಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿರುವವರ ಆಯ್ಕೆ ಅಂತಿಮಗೊಳಿಸಲು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಬರುವವರೆಗೆ ಮುಂದೂಡುವಂತೆ ಸೂಚಿಸಿದೆ.

ನೊಂದ ಅಭ್ಯರ್ಥಿಗಳು KSAT ಯಲ್ಲಿ ದಾವೆ ಹೂಡಲು ಅವಕಾಶ ನೀಡಲಾಗಿದೆ. ಆದರೆ ಆ ದಾವೆ ಇತ್ಯರ್ಥವಾಗುವವರೆಗೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದುವರಿಸುವಂತೆ ಹೈ ಕೋರ್ಟ್ ಸೂಚನೆ ನೀಡಿದೆ. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ ಕೊರತೆ ಇದೆ, 6 ರಿಂದ 8ನೇ ತರಗತಿಗಳಿಗೆ ಬೋಧಕರ ಕೊರತೆ ಇರುವುದರಿಂದ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಲ್ಲಿ ಇದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ.

ಇದನ್ನು ಮನಗಂಡು ಹೈ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. ಮೊದಲ ಆಯ್ಕೆ ಪಟ್ಟಿಯಲ್ಲದ್ದ 451 ಅಭ್ಯರ್ಥಿಗಳನ್ನು ಜೂನ್ 8, 2023 ರ ಆಯ್ಕೆಪಟ್ಟಿಯಲ್ಲಿ ಬದಲಾವಣೆ ಮಾಡಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠವು ನೀಡಿದ್ದ ಆದೇಶದ ಪ್ರಕಾರ ರೂಪಿಸಿದ ಹೊಸ ನಿಯಮದಡಿ 451 ಅಭ್ಯರ್ಥಿಗಳು ಬದಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈಗ ನೇಮಕದಿಂದ ಹೊರಗುಳಿದಿರುವ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 451 ಅಭ್ಯರ್ಥಿಗಳ ಭವಿಷ್ಯವು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಆದೇಶದ ನಂತರ ನಿರ್ಧಾರವಾಗಲಿದೆ.

ಈ ಪ್ರಕರಣದ ವಿವರವನ್ನು ನೋಡುವುದಾದರೆ ರಾಜ್ಯದ ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ಆದರೆ ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ಆಧರಿಸಲು ಸೂಚನೆ ಕೊಟ್ಟಿತ್ತು.

ಇದೀಗ ಏಕಸದಸ್ಯ ಪೀಠದದ ಈ ಆದೇಶ ರದ್ದುಪಡಿಸಿದ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್‌ ಕಮಲ್‌ರಿದ್ದ ವಿಭಾಗೀಯ ಪೀಠವು
ಹೈಕೋರ್ಟ್‌, 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಗ್ರೀನ್‌ ಸಿಗ್ನಲ್ ನೀಡಿದೆ.

ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಿಯೋಜನೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಆಯ್ಕೆಯಾಗಿದ್ದರು ನೇಮಕಾತಿ ವಿಳಂಬವಾಗಿರುವುದಕ್ಕೆ ಗೊಂದಲಕ್ಕೊಳಗಾಗಿದ್ದರು ಇದೀಗ ಆಯ್ಕೆಯಾಗಿದ್ದ ಇತರ ಶಿಕ್ಷಕರಿಗೆ ಬಿಗ್‌ ರಿಲೀಫ್ ಸಿಕ್ಕಿದೆ. ಪ್ರಸ್ತುತವಾಗಿ ರಾಜ್ಯದಲ್ಲಿರುವ ಶಿಕ್ಷಕರ ಕೊರತೆ ನೀಗಿಸಿ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಆಜ್ಞಾಪಿಸಿದೆ. ಈ ಪ್ರಕರಣ ಇತ್ಯರ್ಥವಾಗಲು ಡಿಸೆಂಬರ್ ತನಕ ಕಾಲಾವಕಾಶ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಎರಡು ತಿಂಗಳು ಮುಂಚೆಯೇ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಿರುವುದು ಆಕಾಂಕ್ಷಿಗಳ ಸಂತಸ ಇಮ್ಮಡಿ ಮಾಡಿದೆ. ಮೊದಲ ಪಟ್ಟಿಯಲ್ಲಿ ಆಯ್ಕೆಗೊಂಡು ವಿವಾದದ ಕಾರಣದಿಂದಾಗಿ ಪಟ್ಟಿಯಿಂದ ಹೊರಗುಳಿದಿರುವ ಇತರ 451 ಶಿಕ್ಷಕರ ಭವಿಷ್ಯವು ಕೂಡ ಹಸನಾಗಲಿ ಶೀಘ್ರವಾಗಿ ಅವರ ಸಮಸ್ಯೆಗೂ ಪರಿಹಾರ ಸಿಗಲಿ ಎಂದು ನಾವು ಈ ಮೂಲಕ ಬಯಸುತ್ತೇವೆ.

Viral News

Post navigation

Previous Post: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ, ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ.!
Next Post: ಭೂಮಾಲೀಕರಿಗೆ ನಕ್ಷೆಸಹಿತ ಪಹಣಿ ವಿತರಣೆ,ಡ್ರೋನ್ ನೆರವಿನಿಂದ ಮರುಭೂಮಾಪನ,150 ವರ್ಷಗಳ ಹಳೇ ದಾಖಲೆಗಳ ಗಣಕೀಕರಣ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme